2,000 ಮುಖಬೆಲೆಯ ನೋಟು ರದ್ದು – 1 ವಾರದಲ್ಲಿ ಠೇವಣಿ, ವಿನಿಮಯ ಆಗಿದ್ದೆಷ್ಟು ಗೊತ್ತಾ?
ನವದೆಹಲಿ: 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಆರ್ ಬಿಐ ಆದೇಶಿತ್ತು.ನೋಟುಗಳನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳಲು ಮೇ 23 ರಿಂದ ಅನುಮತಿ ನೀಡಲಾಗಿದೆ. ಕೇವಲ ಒಂದು ವಾರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SBI) ಇದುವರೆಗೆ ಅಂದಾಜು 17,000 ಕೋಟಿ ರೂ. ಮೌಲ್ಯದ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಠೇವಣಿ ಹಾಗೂ ವಿನಿಮಯ ಮಾಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಇದನ್ನೂ ಓದಿ: 2,000 ಮುಖಬೆಲೆಯ ನೋಟು ಸ್ಥಗಿತ – ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರಿಗೆ ನೋಟು ವಿನಿಮಯ ಸಂಕಷ್ಟ!
ಮೇ 19 ಆರ್‌ಬಿಐ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿತ್ತು. ಮೇ 23 ರಿಂದ ಸೆಪ್ಟೆಂಬರ್ 30 ರವರೆಗೆ ಸಾರ್ವಜನಿಕರಿಗೆ ನೋಟುಗಳನ್ನು ಬದಲಾವಣೆ ಹಾಗೂ ಠೇವಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿತ್ತು. ನೋಟುಗಳನ್ನು ಬದಲಿಸಿಕೊಳ್ಳಲು ಅನುಮತಿ ನೀಡಿದ ವಾರದ ಬಳಿಕ ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ನೋಟುಗಳ ಠೇವಣಿ ಹಾಗೂ ಮಿನಿಮಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಮೇ 23 ರಿಂದ ಇಲ್ಲಿವರೆಗೆ ಎಸ್‌ಬಿಐ ಬ್ಯಾಂಕ್ ನಲ್ಲಿ ಬರೋಬ್ಬರಿ 14,000 ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳನ್ನು ಠೇವಣಿಯಾಗಿ ಸ್ವೀಕರಿಸಲಾಗಿದೆ. ಸುಮಾರು 3,000 ಕೋಟಿ ರೂ. ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಳ್ಳಲಾಗಿದೆ. ಇದು ಮಾರುಕಟ್ಟೆಯಲ್ಲಿರುವ ಸುಮಾರು 20% ದಷ್ಟು ನೋಟುಗಳು ಈಗ ನಮ್ಮಲ್ಲಿದೆ ಎಂದು ದಿನೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ನೋಟು ಬದಲಾವಣೆ ಹಾಗೂ ಠೇವಣಿ ಇಡುವ ಬಗ್ಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾತನಾಡಿದ್ದಾರೆ. 2,000 ರೂ. ನೋಟುಗಳನ್ನು ಬದಲಾವಣೆ ಮಾಡುವ ವಿಚಾರದಲ್ಲಿ ಯಾವುದೇ ರೀತಿಯ ಆತಂಕ ಬೇಡ. ಈ ನೋಟುಗಳು ಕಾನೂನಾತ್ಮಕವಾಗಿ ಮುಂದುವರಿಯಲಿದೆ. ನಾವು ಒಟ್ಟು ಎಷ್ಟು ನೋಟುಗಳು ವಾಪಸಾಗುತ್ತವೆ ಎಂಬುದನ್ನು ಕಾದು ನೋಡಲಿದ್ದೇವೆ. ಸೆಪ್ಟೆಂಬರ್ 30ರ ವರೆಗೆ ಏನಾಗುತ್ತದೆ ಎಂಬುದನ್ನು ಈಗಲೇ ಊಹೆ ಮಾಡಲು ಸಾಧ್ಯವಿಲ್ಲ ಎಂದು ದಾಸ್ ತಿಳಿಸಿದ್ದಾರೆ.