ಗೃಹಲಕ್ಷ್ಮೀಯರಿಗೆ ಗುಡ್‌ ನ್ಯೂಸ್‌ – ಯೋಜನೆಯ ಪ್ರತ್ಯೇಕ ಆ್ಯಪ್‍ಗೆ ಗ್ರೀನ್‌ ಸಿಗ್ನಲ್‌!

ಗೃಹಲಕ್ಷ್ಮೀಯರಿಗೆ ಗುಡ್‌ ನ್ಯೂಸ್‌ – ಯೋಜನೆಯ ಪ್ರತ್ಯೇಕ ಆ್ಯಪ್‍ಗೆ ಗ್ರೀನ್‌ ಸಿಗ್ನಲ್‌!

ಬೆಂಗಳೂರು: ಕಾಂಗ್ರೆಸ್​​ ಸರ್ಕಾರದ 5 ಗ್ಯಾರಂಟಿಯಲ್ಲಿ ಒಂದಾಗಿರುವ ಶಕ್ತಿ ಯೋಜನೆಯಡಿ ಫ್ರೀ ಆಗಿ ಬಸ್ ಪ್ರಯಾಣ ಮಾಡುತ್ತಿರೋ ಮಹಿಳೆಯರು ಇದೀಗ ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ರೂಪಾಯಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಇದೀಗ ಗೃಹಲಕ್ಷ್ಮೀ ಯೋಜನೆಯ ಪ್ರತ್ಯೇಕ ಆ್ಯಪ್‍ಗೆ ಸಚಿವ ಸಂಪುಟ ಗ್ರೀನ್‌ ಸಿಗ್ನಲ್‌ ನೀಡಿದ್ದು, ಆಗಸ್ಟ್ ನಲ್ಲಿ ಗೃಹಿಣಿಯರ ಅಕೌಂಟ್ 2 ಸಾವಿರ ಫಿಕ್ಸ್ ಆದಂತಿದೆ ಕಾಣುತ್ತಿದೆ.

ಇದನ್ನೂ ಓದಿ: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ಪ್ಲಾಜಾ – ಜುಲೈ 1ರಿಂದಲೇ ಟೋಲ್ ಸಂಗ್ರಹ

ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಗೃಹಲಕ್ಷ್ಮೀ ಯೋಜನೆಗೆ ಜುಲೈ 15ರಂದೇ ಅರ್ಜಿ ಆಹ್ವಾನಕ್ಕೆ ಅವಕಾಶ ನೀಡಬೇಕಿತ್ತು. ಆದ್ರೆ, ಗೃಹಜ್ಯೋತಿ ಗೊಂದಲ, ಗದ್ದಲ, ಸರ್ವರ್ ಡೌನ್‌ನಿಂದ ಸಮಸ್ಯೆಯಿಂದ ಮುಕ್ತಿ ನೀಡಲು ಸರ್ಕಾರ ಪ್ಲ್ಯಾನ್ ಮಾಡಿದ್ದು, ಹೀಗಾಗಿ ಸರ್ಕಾರ ಪ್ರತ್ಯೇಕ ಆ್ಯಪ್‍ಗೆ ಗ್ರೀನ್‌ ಸಿಗ್ನಲ್‌ ನೀಡಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹಲಕ್ಷ್ಮೀ ಆಪ್ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕುರಿತು ಸರ್ಕಾರದ ನಿರ್ಧಾರ ತೆಗೆದುಕೊಂಡಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿಎಂ ಸಿದ್ದರಾಮಯ್ಯಗೆ ಆಪ್ ಬಗ್ಗೆ ವಿವರಣೆ ನೀಡಿದ್ದಾರೆ. ಬಳಿಕ ಆಪ್ ಬಗ್ಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಅರ್ಜಿ ಸಲ್ಲಿಕೆ ಯಾವ ದಿನಾಂಕದಿಂದ ಆರಂಭವಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಈ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಕಲ ಸಿದ್ಧತೆ ನಡೆಸಿದೆ.

ಹೆಚ್ಚೆಚ್ಚು ಅರ್ಜಿ ಸಲ್ಲಿಕೆ ಆದರು ಸರ್ವರ್ ಬ್ಯುಸಿ ಆಗದಂತೆ ಪ್ಲಾನ್ ಮಾಡಲಾಗುತ್ತಿದೆ. ಬಾಪೂಜಿ ಸೇವಾ ಕೇಂದ್ರದ ಮೂಲಕವು ಅರ್ಜಿ ಸ್ವೀಕಾರ ಮಾಡುವ ಸಾಧ್ಯತೆಗಳಿವೆ. ಮಾಹಿತಿ ಸಂಗ್ರಹ, ನೋಂದಣಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಕೆ ಮಾಡಬಹುದು. ಗ್ರಾಮಗಳಲ್ಲಿ ಪ್ರಜಾ ಪ್ರತಿನಿಧಿಗಳ ನೇಮಕದ ಮೂಲಕ ಅರಳವಾಗಿ ಅರ್ಜಿ ಸಲ್ಲಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ. ಮೊಬೈಲ್‍ನಲ್ಲೇ ಆನ್‍ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಒನ್, ಗ್ರಾಮ ಒನ್, ಹಾಗೂ ಸೇವಾ ಕೇಂದ್ರಗಳಲ್ಲು ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬಹುದು. ಖಾಸಗಿ ಸೈಬರ್ ಗಳಲ್ಲೂ ನೋಂದಣಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.

suddiyaana