ಅಬ್ಬಬಾ.. ಪ್ರೀ ಸ್ಕೂಲ್ ಫೀಸ್ 2.5 ಲಕ್ಷ! – ಶಿಕ್ಷಣದ ಹೆಸರಲ್ಲಿ ಸುಲಿಗೆ ಮಾಡಲಾಗ್ತಿದ್ಯಾ?

ಇದು ದುಬಾರಿ ದುನಿಯಾ.. ಮುಟ್ಟಿದ್ದೆಲ್ಲಾ ಫುಲ್ ಕಾಸ್ಟ್ಲಿ ಅನ್ನೋತರ ಆಗಿದೆ.. ಉಡೋ ಬಟ್ಟೆ.. ತಿನ್ನೋ ಆಹಾರ ಪದಾರ್ಥ ಎಲ್ಲವೂ ದುಬಾರಿಯಾಗಿದೆ.. ಇದೀಗ ವಿದ್ಯೆಯೂ ಫುಲ್ ಕಾಸ್ಟ್ಲಿಯಾಗಿದೆ. ಕಾಲೇಜು ಫೀಸ್ಗಿಂತ ಈಗ ನರ್ಸರಿ ಮಕ್ಕಳ ಫೀಸ್ ಕೇಳಿದ್ರೆ ತಲೆ ತಿರುಗುವಂತೆ ಆಗಿದೆ. ಇದೀಗ ಇಲ್ಲೊಂದು ಪ್ರೀ ಸ್ಕೂಲ್ ಫೀಸ್ ನೋಡಿ ಫೋಷಕರಿಗೆ ಶಾಕ್ ಆಗಿದೆ..
ಇದನ್ನೂ ಓದಿ: ಕೆಎಲ್, ಕೃಷ್ಣ, ಕರುಣ್ ಬ್ರೋ ಮ್ಯಾನ್ಸ್ – ಕನ್ನಡ ಡಿಂಡಿಮ.. ಕೆಣಕಿದ್ರೆ ಖಲ್ಲಾಸ್
ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗ್ಬೇಕು ಅನ್ನೋದು ಪೋಷಕರ ಆಸೆ.. ಹೀಗಾಗಿ ಬೆಸ್ಟ್ ಸ್ಕೂಲ್ ಯಾವುದು ಅಂತ ನೋಡಿ ಮಕ್ಕಳನ್ನ ಅದೇ ಶಾಲೆಗೆ ಸೇರಿಸುತ್ತಾರೆ. ಇದನ್ನೇ ಖಾಸಗಿ ಶಾಲೆಗಳು ಬಂಡವಾಳ ಮಾಡಿಕೊಂಡಿವೆ. ಮನಸ್ಸಿಗೆ ಬಂದಂತೆ ಶುಲ್ಕ ವಿಧಿಸುತ್ತಿವೆ. ವರ್ಷದಿಂದ ವರ್ಷಕ್ಕೆ ಖಾಸಗಿ ಶಾಲೆಗಳ ಶುಲ್ಕಗಳು ಹೆಚ್ಚಾಗುತ್ತಲೇ ಹೋಗುತ್ತಿದೆ. ಇದೀಗ ಇಂತಹದ್ದೇ ಪೋಸ್ಟ್ ವೈರಲ್ ಆಗಿದೆ. ಇದ್ರಲ್ಲಿ ನರ್ಸರಿ ಶಾಲಾ ಶುಲ್ಕ ಬರೋಬ್ಬರಿ 2.5 ಲಕ್ಷ ರೂ.!
ಹೈದರಾಬಾದ್ನ ನರ್ಸರಿ ಶಾಲೆಯೊಂದು ಮಗುವಿಗೆ ವಾರ್ಷಿಕ ಶುಲ್ಕ 2.5 ಲಕ್ಷ ರೂ ವಿಧಿಸಿದೆ. ಇದ್ರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. @talk2anuradha ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ಪೋಸ್ಟಿನ ಶೀರ್ಷಿಕೆಯಲ್ಲಿ ನರ್ಸರಿ ಶಾಲಾ ಮಕ್ಕಳ ಶುಲ್ಕದ ಬಗ್ಗೆ ಬರೆಯಲಾಗಿದೆ. 2025-26ರ ಶೈಕ್ಷಣಿಕ ಸಾಲಿನ ನರ್ಸರಿ ಮಕ್ಕಳ ಶಾಲಾ ವಾರ್ಷಿಕ ಶುಲ್ಕ 2.5 ಲಕ್ಷ ರೂಪಾಯಿಯಂತೆ. ಎಬಿಸಿಡಿ ಕಲಿಯಲು ತಿಂಗಳಿಗೆ 21000 ರೂ ಕಟ್ಟಬೇಕು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪೋಸ್ಟ್ ನಲ್ಲಿ ಶಾಲಾ ಶುಲ್ಕವನ್ನು ವಿವರವಾಗಿ ಉಲ್ಲೇಖಿಸಲಾಗಿದೆ. ಜಾಹೀರಾತು ಬೋಧನಾ ಶುಲ್ಕ: 47,750 ರೂ, ಪ್ರವೇಶ ಶುಲ್ಕ: 5,000 ರೂ, ಆರಂಭಿಕ ಶುಲ್ಕ: 12,500 ರೂ, ಮರುಪಾವತಿಸಬಹುದಾದ ಠೇವಣಿ: 10,000 ರೂ ಎಂದು ಬರೆದಿರುವುದನ್ನು ಕಾಣಬಹುದು.
ಹೀಗಾಗಿ ನರ್ಸರಿ ಮಕ್ಕಳನ್ನು ಸೇರಿರುತ್ತೀರಿಯಾದ್ರೆ ನಾಲ್ಕು ಕಂತುಗಳಲ್ಲಿ ಒಟ್ಟು 2,51,000 ರೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇನ್ನು ಉಳಿದಂತೆ ಪೂರ್ವ ಪ್ರಾಥಮಿಕ II : 2,72,400 ರೂ, ವರ್ಗಗಳು I ರಿಂದ II : 2,91,460 ರೂ ಹಾಗೂ ವರ್ಗಗಳು III ರಿಂದ V: 3,22,350 ರೂ ಶುಲ್ಕವನ್ನು ವಿವರವಾಗಿ ತಿಳಿಸಲಾಗಿದೆ. ಇದೀಗ ಈ ಪೋಸ್ಟ್ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿವೆ. ಈ ಸ್ಕೂಲ್ ವಿರುದ್ಧ ಕ್ರಮ ಕೈಗೊಳ್ಳಬೇಕು.. ಹಗಲು ದರೋಡೆಗೆ ಬ್ರೇಕ್ ಹಾಕಬೇಕು ಎಂದು ಕಮೆಂಟ್ ಹಾಕಿದ್ದಾರೆ.

ನೋಡಿರಿ

