1 ರೂಪಾಯಿಗೆ ಚಿಕನ್‌ ಬಿರಿಯಾನಿ!‌ – ಹೋಟೆಲ್‌ ಮಾಲೀಕನ ಪ್ಲಾನ್ ಪ್ಲಾಪ್ , ತಿನ್ನಲು ಬಂದವರಿಗೆ ₹250 ಫೈನ್‌!

1 ರೂಪಾಯಿಗೆ ಚಿಕನ್‌ ಬಿರಿಯಾನಿ!‌ – ಹೋಟೆಲ್‌ ಮಾಲೀಕನ ಪ್ಲಾನ್ ಪ್ಲಾಪ್ , ತಿನ್ನಲು ಬಂದವರಿಗೆ ₹250 ಫೈನ್‌!

ಹೋಟೆಲ್‌, ರೆಸ್ಟೋರೆಂಟ್‌ ಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಆಫರ್‌ ಗಳನ್ನು ನೀಡುತ್ತಾರೆ. ಕೋಂಬೊ ಆಫರ್‌, ಒಂದು ಕೊಂಡರೆ ಒಂದು ಉಚಿತ.. ಊಟದ ಜೊತೆಗೆ ಜೂಸ್‌ ಫ್ರೀ.. ಹೀಗೇ ಗ್ರಾಹಕರನ್ನು ಸೆಳೆಯಲಿ ಏನಾದರೊಂದು ಆಫರ್‌ ನೀಡುತ್ತಿರುತ್ತಾರೆ. ತಮಗೆ ಇಷ್ಟ ಬಂದಂತೆ ಆಫರ್ ಗಳನ್ನು ನೀಡಿ ತಮ್ಮ ಮಾರ್ಕೆಟ್​ ಹೆಚ್ಚಿಸಿಕೊಳ್ಳುತ್ತಾರೆ. ಇಲ್ಲೊಂದು ಹೋಟೆಲ್‌ ನಲ್ಲಿ ಮಾಲೀಕರು 1 ರೂಪಾಯಿಗೆ ಬಿರಿಯಾನಿ ನೀಡುವುದಾಗಿ ಘೋಷಿಸಿ ಪೇಚಿಗೆ ಸಿಲುಕಿದ್ದಾರೆ. ಬಿರಿಯಾನಿ ಖರೀಸಲು ಬಂದ ಗ್ರಾಹಕರಿಗೂ ಶಾಕ್‌ ಆಗಿದೆ!

ಇದನ್ನೂ ಓದಿ: ಚಾಕೋಲೆಟ್ ಗೆ ದುಡ್ಡು ಕೊಡದೆ ಗದರಿದ ಅಪ್ಪ – ಸಿಟ್ಟಿನಲ್ಲಿ ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ಹೋದ ಬಾಲಕಿಯರು

ಯಾವುದಾದರೊಂದು ಆಫರ್‌ ಇದೆ ಎಂದು ಗೊತ್ತಾದಾಗ ಅಲ್ಲಿ ಜನರು ಮುಗಿಬೀಳುತ್ತಾರೆ. ಗಂಟೆಗಟ್ಟಲೆ ಸಾಲುಗಟ್ಟಿ ನಿಂತು ಆಫರ್‌ನ ಅಡಿಯಲ್ಲಿ ಸರಕು ಮತ್ತು ಆಹಾರ ವಸ್ತುಗಳನ್ನು ಖರೀದಿಸುತ್ತಾರೆ. ಕೆಲವು ಉದ್ಯಮಿಗಳು ಬಹಳ ಜಾಣತನದಿಂದ ಷರತ್ತುಗಳೊಂದಿಗೆ ಆಫರ್‌ಗಳನ್ನು ನೀಡುತ್ತಾರೆ. ಕೆಲವೊಮ್ಮೆ ಅದು ಕೆಲಸ ಮಾಡುತ್ತದೆ, ಕೆಲವೊಮ್ಮೆ ಅದು ಉಲ್ಟಾ ಆಗುತ್ತದೆ. ಇತ್ತೀಚಿಗೆ ತೆಲಂಗಾಣದ ಕರೀಂನಗರದ ರೆಸ್ಟೊರೆಂಟ್ ಮಾಲೀಕರೊಬ್ಬರಿಗೂ ಇದೇ ರೀತಿಯ ಅನುಭವವಾಗಿದೆ. ಹೊಸ ರೆಸ್ಟೋರೆಂಟ್ ತೆರೆದಿರುವ ವ್ಯಕ್ತಿಯೊಬ್ಬರು ಆರಂಭಿಕ ಆಫರ್ ಅಡಿಯಲ್ಲಿ 1 ರೂಪಾಯಿಗೆ ಚಿಕನ್ ಬಿರಿಯಾನಿ ಮಾರಲಾಗುವುದು ಎಂದು ಆಫರ್ ನೀಡಿದ್ದಾರೆ. ಹಾಗೆ 1 ರೂಪಾಯಿ ಬಿರಿಯಾನಿಗೆ ಷರತ್ತನ್ನು ವಿಧಿಸಿದ್ದಾರೆ. 1 ರೂಪಾಯಿ ಬಿರಿಯಾನಿ ಸಿಗುತ್ತೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಹೋಟೆಲ್‌ ಮುಂದೆ ನೂರಾರು ಜನ ಜಮಾಯಿಸಿದ್ದಾರೆ.

1 ರೂಪಾಯಿಗೆ ಬಿರಿಯಾನಿಗೆ ಹೋಟೆಲ್‌ ಮಾಲೀಕ ಗ್ರಾಹಕರಿಗೆ ಒಂದು ಷರತ್ತು ಹಾಕಿದ್ದಾರೆ. ಒಂದು ರೂಪಾಯಿ ನಾಣ್ಯದ ಬದಲು ಹಳೆ ನೋಟು ತಂದರೆ ಆಫರ್ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವೇ ಕೆಲವು ಜನರು ರೂಪಾಯಿ ನೋಟುಗಳನ್ನು ಇಟ್ಟಕೊಂಡಿರುತ್ತಾರೆ ಎಂದು ಭಾವಿಸಿದ ಮಾಲೀಕರು ಈ ಕೊಡುಗೆಯನ್ನು ಘೋಷಿಸಿದ್ದರು. ಆದರೆ ಮಾಲೀಕನ ಊಹೆ ತಪ್ಪಾಗಿತ್ತು. ಒಂದು ರೂಪಾಯಿಗೆ ಬಿರಿಯಾನಿ ಸಿಗುತ್ತೆ ಎಂದು ಗೊತ್ತಾದ ಕೂಡಲೇ ಎಲ್ಲೋ ಬಚ್ಚಿಟ್ಟ ಹಳೆಯ ರೂಪಾಯಿ ನೋಟನ್ನು ಹುಡುಕಿ ರೆಸ್ಟೊರೆಂಟ್ ಮುಂದೆ  ಜನ ಸಾಲಾಗಿ ನಿಂತಿದ್ದಾರೆ. ಗ್ರಾಹಕರ ನೂಕು ನುಗ್ಗಲು ಕಂಡು ರೆಸ್ಟೋರೆಂಟ್ ಮಾಲೀಕರು ಆತಂಕಗೊಂಡಿದ್ದಾರೆ.

ಇಷ್ಟು ಜನ ಒಮ್ಮೆಲೇ ಬಂದಿದ್ದರಿಂದ ಬೆಚ್ಚಿಬಿದ್ದ ರೆಸ್ಟೋರೆಂಟ್‌ ಸಿಬ್ಬಂದಿ ಶಟರ್ ಮುಚ್ಚಿದ್ದಾರೆ. ಆದರೂ ಗ್ರಾಹಕರ ಕಾಳಜಿಯಿಂದ ವಿಶೇಷ ಕೌಂಟರ್ ತೆರೆದು ಒಂದು ರೂಪಾಯಿ ನೋಟು ತಂದವರಿಗೆ ಬಿರಿಯಾನಿ ಪಾರ್ಸೆಲ್ ಕೊಡಲಾಗಿದೆ.  ಬಿರಿಯಾನಿ ಖಾಲಿಯಾಗುತ್ತಿದ್ದಂತೆ ರೆಸ್ಟೋರೆಂಟ್ ಮಾಲೀಕರು ಬಿರಿಯಾನಿ ಖಾಲಿ ಆಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಕೆಲ ಗ್ರಾಹಕರು ಬರಿಗೈಯಲ್ಲಿ ಮನೆಗೆ ತೆರಳಿದರೂ ಬಿರಿಯಾನಿ ಪಡೆದವರು ಸಂತಸದಿಂದ ತೆರಳಿದ್ದಾರೆ.

ಒಂದು ರೂಪಾಯಿ ಬಿರಿಯಾನಿ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಹೋಟೆಲ್‌ ಬಳಿ ಟ್ರಾಫಿಕ್‌ ಸಮಸ್ಯೆ ಉಂಟಾಗಿತ್ತು. ಜನರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ದರು. ಈ ವಿಷಯ ಸಂಚಾರ ಪೊಲೀಸರಿಗೆ ತಲುಪಿದ್ದು, ಬಿರಿಯಾನಿ ತಿನ್ನಲು ಬಂದು ರಸ್ತೆಯಲ್ಲಿ ವಾಹನ ನಿಲ್ಲಿಸಿದವರಿಗೆ ಪೊಲೀಸರು 200 ರಿಂದ 250 ರೂಪಾಯಿ ದಂಡ ಕಟ್ಟಿಸಿದ್ದಾರೆ. ಒಂದು ರೂಪಾಯಿ ಬಿರಿಯಾನಿಗಾಗಿ ಬಂದ ಗ್ರಾಹಕರು 250 ರೂಪಾಯಿ ದಂಡ ಕಟ್ಟಿ ಪೆಚ್ಚುಮೊರೆ ಹಾಕಿ ಹೋಗಿದ್ದಾರೆ.

suddiyaana