ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಹಳಿ ತಪ್ಪಿದ್ದ ಆರ್‌ಆರ್‌ವಿ ವಾಹನ ತೆರವು –ಸಂಚಾರ ಮತ್ತೆ ಆರಂಭ!

ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಹಳಿ ತಪ್ಪಿದ್ದ ಆರ್‌ಆರ್‌ವಿ ವಾಹನ ತೆರವು –ಸಂಚಾರ ಮತ್ತೆ ಆರಂಭ!

ಬೆಂಗಳೂರು:  ‘ನಮ್ಮ ಮೆಟ್ರೊ’ದ ಹಸಿರು ಮಾರ್ಗದಲ್ಲಿ ಹಳಿತಪ್ಪಿದ್ದ ರಸ್ತೆ ರೈಲು ವಾಹನ (ಆರ್‌ಆರ್‌ವಿ)ವನ್ನು ಮಂಗಳವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತೆರವು ಮಾಡಲಾಯಿತು. ಇದೀಗ ಸ್ಥಗಿತಗೊಂಡಿದ್ದ ಮೆಟ್ರೋ ಸಂಚಾರ ಮತ್ತೆ ಆರಂಭವಾಗಿದೆ.

ಇದನ್ನೂ ಓದಿ: ನೀರು ಕುಡಿದ ನಂತರ ಯಾರ ಸಹಾಯವೂ ಇಲ್ಲದೇ ನಲ್ಲಿ ಬಂದ್‌ ಮಾಡುತ್ತೆ ಈ ಶ್ವಾನ!

ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆಯಾದಾಗ ಸರಿಪಡಿಸಲು ಬಳಸುವ ರೀ ರೈಲ್ ಸೋಮವಾರ ಮಧ್ಯರಾತ್ರಿ ರಾಜಾಜಿನಗರ ನಿಲ್ದಾಣದ ತಿರುವಿನಲ್ಲಿ ಹಳಿ ತಪ್ಪಿತ್ತು. ಇದರಿಂದಾಗಿ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನಮ್ಮ ಮೆಟ್ರೊ ಪ್ರಯಾಣಿಕರು ಪರದಾಡಿದ್ದರು. ಯಶವಂತಪುರದಿಂದ ಮಂತ್ರಿ ಸ್ಟೋರ್ ವರೆಗೆ ಒಂದು ಮಾರ್ಗದಲ್ಲಿ ಮಾತ್ರ ಅರ್ಧ ಗಂಟೆಗೆ ಒಮ್ಮೆ ಮೆಟ್ರೊ ಸಂಚಾರವಿತ್ತು. ಇದರಿಂದ ನಿಗದಿತ ಸಮಯಕ್ಕೆ ಪ್ರಯಾಣಿಕರು ಕೆಲಸಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದರು. ಯಶವಂತಪುರ ರೈಲ್ವೆ ನಿಲ್ದಾಣ ಸಮೀಪದಿಂದ ಬಿಎಂಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿತ್ತು. ಇದೀಗ  ಆರ್‌ಆರ್‌ವಿ ವಾಹನವನ್ನು ತೆರವುಗೊಳಿಸಲಾಗಿದ್ದು, ಸಂಚಾರ ಆರಂಭವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Shwetha M