ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದ ‘ಆರ್‌ಆರ್‌ಆರ್’ – ಪ್ರತಿಷ್ಠಿತ ಪ್ರಶಸ್ತಿ ಪಡೆದ ತಂಡಕ್ಕೆ ಮೋದಿ ಅಭಿನಂದನೆ
ಜನವರಿ 11. ಭಾರತೀಯ ಚಿತ್ರರಂಗದ ಪಾಲಿಗೆ ನಿಜಕ್ಕೂ ಅವಿಸ್ಮರಣೀಯ ದಿನ. ತೆಲುಗು ಸಿನಿಮಾ ಹೊಸ ಮೈಲಿಗಲ್ಲುನ್ನೇ ನೆಟ್ಟ ದಿನ. ಯಾಕಂದ್ರೆ, ಸಿನಿಮಾ ಕ್ಷೇತ್ರಕ್ಕೆ ಜಾಗತಿಕ ಮಟ್ಟದಲ್ಲಿ ನೀಡಲಾಗೋ ಅತ್ಯಂತ ಪ್ರತಿಷ್ಠೆಯ ಪ್ರಶಸ್ತಿಗಳಲ್ಲೊಂದಾಗಿರೋ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಆರ್‌ಆರ್‌ಆರ್ ಚಿತ್ರದ ನಾಟ್ಟು ನಾಟ್ಟು ಹಾಡಿಗೆ ಒಲಿದಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನ ಗೆದ್ದುಕೊಂಡಿದೆ.
ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದಲ್ಲಿ ನಾಟ್ಟು ನಾಟ್ಟು ಅನ್ನೋ ಹಾಡಿದೆ. ಇದೇ ಹಾಡಿಗೆ ಅತ್ಯುತ್ತಮ ಹಾಡು ಕೆಟಗರಿಯಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿದೆ. ಅಮೆರಿಕದ ಲಾಸ್ ಏಂಜಲಿಸ್ನಲ್ಲಿ ನಡೆದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆರ್‌ಆರ್‌ಆರ್ ಸಿನಿಮಾದ ನಾಟ್ಟು ನಾಟ್ಟು ಹಾಡು ವಿನ್ನರ್ ಅಂತಾ ಘೋಷಿಸಲಾಯ್ತು. ಇನ್ನು ನಾಟ್ಟು ನಾಟ್ಟು ಹಾಡಿನ ನಿರ್ದೇಶಕ ಎಮ್.ಎಮ್. ಕೀರವಾಣಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನ ಸ್ವೀಕರಿಸಿದ್ರು. ಇದೇ ವೇಳೆ ಚಿತ್ರದ ನಿರ್ದೇಶಕ ರಾಜಮೌಳಿ, ಈ ಹಾಡಿಗೆ ಅದ್ಭುತವಾಗಿ ನೃತ್ಯ ಮಾಡಿದ್ದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಕೂಡ ಸ್ಥಳದಲ್ಲಿ ಉಪಸ್ಥಿತರಿದ್ರು. ಆರ್‌ಆರ್‌ಆರ್ ಚಿತ್ರದ ಹಾಡಿಗೆ ಪ್ರಶಸ್ತಿ ಘೋಷಣೆಯಾಗ್ತಿದ್ದಂತೆ ಎಲ್ಲರೂ ಸಂಭ್ರಮಿಸಿದ್ರು. ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಕೋಮರಮ್ ಭೀಮ್ ಮತ್ತು ಅಲ್ಲೂರಿ ಸೀತಾರಾಮರಾಜು ಕಥೆಯನ್ನ ಆಧರಿಸಿ ಆರ್‌ಆರ್‌ಆರ್ ಸಿನಿಮಾ ಮಾಡಲಾಗಿತ್ತು. ಜಗತ್ತಿನಾದ್ಯಂತ ಬಾಕ್ಸಾಫೀಸ್ನಲ್ಲಿ ಬರೋಬ್ಬರಿ 1,200 ಕೋಟಿ ರೂಪಾಯಿ ಗಳಿಸಿತ್ತು.
ಇದನ್ನೂ ಓದಿ: ‘ಆಸ್ಕರ್ ಪ್ರಶಸ್ತಿ ನನಗೆ ಮುಟ್ಟಲು ಬಿಡಿ ಪ್ಲೀಸ್’ – ರಾಮ್‌ಚರಣ್‌ಗೆ ಶಾರುಖ್ ಪ್ರೀತಿಯ ಸಂದೇಶ
ಇನ್ನು RRR ಸಿನಿಮಾದ ನಾಟ್ಟು ನಾಟ್ಟು ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಗುತ್ತಲೇ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ. ಇದು ಅತ್ಯಂತ ವಿಶೇಷ ಸಾಧನೆ ಅಂತಾ ಪ್ರಧಾನಿ ಮೋದಿ ಬಣ್ಣಿಸಿದ್ದು, ಚಿತ್ರತಂಡವನ್ನ ಅಭಿನಂದಿಸಿದ್ದಾರೆ. ಇನ್ನು ಅಮಿತಾಬ್ ಬಚ್ಚನ್, ಶಾರುಕ್ ಖಾನ್ ಸೇರಿದಂತೆ ಚಿತ್ರರಂಗದ ಸ್ಟಾರ್ಗಳು RRR ಸಿನಿಮಾ ಹಾಡಿಗೆ ಅತ್ಯುನ್ನತ ಪ್ರಶಸ್ತಿ ಸಿಕ್ಕಿರೋದನ್ನ ಸಂಭ್ರಮಿಸಿದ್ದಾರೆ. ಈ ನಡುವೆ, ನಿರ್ದೇಶಕ ರಾಜಮೌಳಿಯಂತೂ ನನಗೆ ಮಾತೇ ಹೊರಡುತ್ತಿಲ್ಲ. ಸಂಗೀತಕ್ಕೆ ಯಾವುದೇ ಗಡಿ ಇಲ್ಲ. ನಮ್ಮನ್ನ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.