ಶೀಘ್ರದಲ್ಲೇ ಸೆಟ್ಟೇರಲಿದ್ಯಾ “ಆರ್ ಆರ್ ಆರ್ 2”-ರಾಜಮೌಳಿ ಹೇಳಿದ್ದೇನು?

ಶೀಘ್ರದಲ್ಲೇ ಸೆಟ್ಟೇರಲಿದ್ಯಾ “ಆರ್ ಆರ್ ಆರ್ 2”-ರಾಜಮೌಳಿ ಹೇಳಿದ್ದೇನು?

ರಾಮ್ ಚರಣ್ ಮತ್ತು ಜೂ. ಎನ್‌ಟಿಆರ್ ಕಾಂಬಿನೇಷನ್‌ನಲ್ಲಿ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಸಿನಿಮಾ ಐದಕ್ಕೂ ಅಧಿಕ ಭಾಷೆಗಳಲ್ಲಿ ತೆರೆಕಂಡಿತ್ತು. ಬಾಕ್ಸ್ ಆಫೀಸ್‌ನಲ್ಲಿಯೂ ದೊಡ್ಡ ಮಟ್ಟದ ದಾಖಲೆ ಸೃಷ್ಟಿಸಿತ್ತು. ಇಂತಹ ಮೆಗಾ ಬ್ಲಾಕ್‌ ಬಸ್ಟರ್ ಸಿನಿಮಾದ ಬಗ್ಗೆ ರಾಜಮೌಳಿ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು, ‘ಆರ್‌ಆರ್‌ಆರ್‌ 2’ ಮಾಡುವ ಕುರಿತು ರಾಜಮೌಳಿ ಸಣ್ಣ ಸುಳಿವೊಂದನ್ನು ನೀಡಿದ್ದಾರೆ.

ಇದನ್ನೂ ಓದಿ: ಸಿನಿಮಾದಲ್ಲಿ ನಟಿಸ್ತಾರಾ ಕ್ಯಾಪ್ಟನ್ ಕೂಲ್ ಧೋನಿ?

ಇತ್ತೀಚೆಗೆ ರಾಜಮೌಳಿ ಸಂದರ್ಶನವೊಂದರಲ್ಲಿ ಮಾತನಾಡುತ್ತ, ‘ಆರ್‌ಆರ್‌ಆರ್‌ 2’ ಬಗ್ಗೆ ಸುಳಿವು ನೀಡಿದ್ದಾರೆ. ‘ನನ್ನ ತಂದೆಯೇ ನನ್ನ ಎಲ್ಲ ಸಿನಿಮಾಗಳಿಗೂ ಕಥೆ ಬರೆದಿರುವುದು. ನಾವಿಬ್ಬರು ‘ಆರ್‌ಆರ್‌ಆರ್‌ 2′ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಅವರು ಕಥೆಯ ಕುರಿತು ಕೆಲಸ ಮಾಡುತ್ತಿದ್ದಾರೆ…’ ಎಂದು ಹೇಳಿದ್ದು,. ಇದು ಅಭಿಮಾನಿಗಳಲ್ಲಿ ದೊಡ್ಡ ಸಂಚಲವನ್ನೇ ಮೂಡಿಸಿದೆ.

ಈ ಸಿನಿಮಾವು ಪ್ರಯಾಣದ ಕಥೆಯನ್ನು ಒಳಗೊಂಡಿದ್ದು, ಭರ್ಜರಿ ಸಾಹಸಭರಿತ ಜರ್ನಿಯಾಗಿ ಇರುತ್ತದೆ. ಈ ಸಿನಿಮಾಗೆ ಅದ್ದೂರಿ ಸೆಟ್‌ ಜೊತೆಗೆ ಜಗತ್ತಿನ ಹಲವು ಪ್ರಮುಖ ಸ್ಥಳಗಳಲ್ಲಿ ಶೂಟಿಂಗ್ ಮಾಡುವ ಸಾಧ್ಯತೆ ಇದೆ. ಸದ್ಯ ಪ್ರಿ-ಪ್ರೊಡಕ್ಷನ್ಸ್ ಕೆಲಸಗಳಲ್ಲಿ ರಾಜಮೌಳಿ ಬ್ಯುಸಿ ಇದ್ದಾರೆ. ಸ್ಕ್ರಿಪ್ಟ್‌ಗೆ ಸಾಕಷ್ಟು ವರ್ಕ್ ಮಾಡುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಈ ಸಿನಿಮಾದ ಶೂಟಿಂಗ್ 2023ರ ಮೇ ನಂತರ ಶುರುವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕೆ.ಎಲ್‌. ನಾರಾಯಣ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಇದು ಪ್ಯಾನ್ ಇಂಡಿಯಾ ಸಿನಿಮಾ ಮಾತ್ರವಲ್ಲ, ಪ್ಯಾನ್ ವರ್ಲ್ಡ್ ಮಾದರಿಯಲ್ಲಿ ತೆರೆಕಾಣಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ದೊಡ್ಡಮಟ್ಟದಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸುವ ಉದ್ದೇಶ ರಾಜಮೌಳಿ ಅವರಿಗೆ ಇದೆ ಎನ್ನಲಾಗಿದೆ.

suddiyaana