RR ತವರಲ್ಲಿ RCBಗಿದ್ಯಾ ಅದೃಷ್ಟ? – ರೆಡ್ ಆರ್ಮಿಗೆ ದ್ರಾವಿಡ್ ಚಾಲೆಂಜ್
ಜೈಪುರ ಪಿಚ್ ಪ್ಲಸ್ & ಮೈನಸ್ ಏನು?

ಈ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿತ್ತು. ಕೆಕೆಆರ್ ಮತ್ತು ಸಿಎಸ್ಕೆ ವಿರುದ್ಧ ಬ್ಯಾಕ್ ಟು ಬ್ಯಾಕ್ 2 ಮ್ಯಾಚ್ಗಳನ್ನ ಗೆದ್ದಿದ್ರು. ಬಟ್ ಆಮೇಲೆ ಗುಜರಾತ್ ವಿರುದ್ಧ ತವರಲ್ಲೇ ಸೋತ್ರೂ ಮುಂದಿನ ಪಂದ್ಯದಲ್ಲೇ ಮುಂಬೈ ತಂಡವನ್ನ ಸೋಲಿಸಿ ಫಾರ್ಮ್ಗೆ ಬಂದಿದ್ರು. ಆದ್ರೆ ನೆಕ್ಸ್ಟ್ ಮ್ಯಾಚ್ನಲ್ಲೇ ಮುಗ್ಗಿರಿಸಿದ್ರು. ಅದೂ ಕೂಡ ತವರಿನ ಮತ್ತೊಂದು ಪಂದ್ಯದಲ್ಲೇ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚಿನ್ನಸ್ವಾಮಿ ಮೈದಾನದಲ್ಲಿ ಸೋತಿರುವ ಆರ್‌ಸಿಬಿ ಈಗ ಕಮ್ ಬ್ಯಾಕ್ ಮಾಡ್ಲೇಬೇಕಿದೆ. ಗೆಲುವಿನ ಟ್ರ್ಯಾಕ್ಗೆ ಕಮ್ ಬ್ಯಾಕ್ ಮಾಡ್ಬೇಕು ಅಂದ್ರೆ ರಾಜಸ್ಥಾನದ ವಿರುದ್ಧ ಗೆಲ್ಲಲೇಬೇಕಿದೆ.
ಇದನ್ನೂ ಓದಿ : 3ನೇ ಸ್ಲಾಟ್.. 5 ಪಂದ್ಯಗಳಿಂದ 78 ರನ್ – RCBಗೆ ಭಾರವಾದ್ರಾ ದೇವದತ್ ಪಡಿಕ್ಕಲ್?
ಒಂದೊಂದು ಗೆಲುವು ತಂಡಗಳಿಗೆ ಎಷ್ಟು ಇಂಪಾರ್ಟೆಂಟ್ ಆಗುತ್ತೆ ಅನ್ನೋದಕ್ಕೆ ಸಾಕ್ಷಿ ಸದ್ಯದ ಪಾಯಿಂಟ್ಸ್ ಟೇಬಲ್. ಡಿಸಿ ವಿರುದ್ಧ ಸೋತ ಬಳಿಕವೂ ಮೂರನೇ ಸ್ಥಾನದಲ್ಲಿ ಆರ್ ಸಿಬಿ ಇದೀಗ 4ನೇ ಸ್ಥಾನಕ್ಕೆ ಜಾರಿದೆ. ಸಿಎಸ್ ಕೆ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಕೆಕೆಆರ್ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತಿಯೊಂದು ಮ್ಯಾಚ್ ಕೂಡ ಇಂಪಾರ್ಟೆಂಟ್ ಆಗಲಿದೆ. ಸದ್ಯ ಆಡಿರುವ 5 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 2 ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ರಾಜಸ್ಥಾನ ವಿರುದ್ಧ ಆರ್ ಸಿಬಿ ಮುಂದಿನ ಪಂದ್ಯ ಗೆದ್ದರೆ ಪ್ಲೇಆಫ್ ಲೆಕ್ಕಾಚಾರ ಸುಲಭವಾಗಲಿದೆ. ತವರಿನಲ್ಲಿ ಸೋಲು ಕಾಣುತ್ತಿದ್ದು ಹೊರಗಿನ ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದರೆ ಮಾತ್ರವೇ ಪ್ಲೇಆಫ್ ಲೆಕ್ಕಾಚಾರ ಮಾಡಬಹುದು.. ಏಪ್ರಿಲ್ 13ರಂದು ಅಂದ್ರೆ ನಾಳೆ ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದೆ. ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ರಾಜಸ್ಥಾನ ರಾಯಲ್ಸ್ ಕೂಡ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕಂಡಿದ್ದು ಗೆಲುವಿನ ಟ್ರ್ಯಾಕ್ ಗೆ ಮರಳೋಕೆ ರಣತಂತ್ರ ರೂಪಿಸಿದೆ.
ಈ ಮ್ಯಾಚ್ ನ ಇನ್ನೊಂದು ಸ್ಪೆಷಾಲಿಟಿ ಅಂದ್ರೆ ರೆಡ್ ಆರ್ಮಿ ಬಾಯ್ಸ್ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ. 2011 ರಿಂದ ಐಪಿಎಲ್ನಲ್ಲಿ ಗೋ ಗ್ರೀನ್ ಅಭಿಯಾನ ಅರಂಭಿಸಿರುವ ಆರ್‌ಸಿಬಿ ಪ್ರತಿ ಸೀಸನ್ನ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಾ ಬಂದಿದೆ. ಇದರ ಮೂಲ ಉದ್ದೇಶ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದು. ಅದರಲ್ಲೂ ಮರಗಳನ್ನು ಉಳಿಸಿ-ಬೆಳೆಸಿ ಎಂಬ ಸಂದೇಶ ಸಾರಲು ಆರ್‌ಸಿಬಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದೆ. ಇದೀಗ ಗೋ ಗ್ರೀನ್ ಅಭಿಯಾನದಡಿಯಲ್ಲಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಅದು ಸಹ ರಾಜಸ್ಥಾನ್ ರಾಯಲ್ ವಿರುದ್ಧ, ಪಿಂಕ್ ಸಿಟಿ ಜೈಪುರ್ನಲ್ಲಿ ಎಂಬುದು ವಿಶೇಷ.
ಇನ್ನು ರಾಜಸ್ಥಾನಕ್ಕೆ ಜೈಪುರದಲ್ಲಿ ನಡೆಯಲಿರೋ ಭಾನುವಾರದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಸೀಸನ್ನಲ್ಲಿ ಜೈಪುರ ಮೂಲದ ಆರ್ ಆರ್ ತಂಡವು ಐದು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಜಯ ಸಾಧಿಸಿದೆ. ಪಾಯಿಂಟ್ಸ್ ಟೇಬಲ್ ನಲ್ಲಿ 7ನೇ ಸ್ಥಾನದಲ್ಲಿದೆ. ಗುಜರಾತ್ ವಿರುದ್ಧದ ತಮ್ಮ ಕೊನೆಯ ಪಂದ್ಯದಲ್ಲಿ ಸೋಲನ್ನು ಕಂಡಿದ್ದು ಕಮ್ ಬ್ಯಾಕ್ ಮಾಡೋಕೆ ಕಾಯ್ತಿದ್ದಾರೆ. ಪಂದ್ಯ ನಡೆಯಲಿರುವ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ವೇಗಿಗಳಿಗೆ ಹೆಚ್ಚಿನ ಕಂಟ್ರೋಲ್ ಪಡೆಯಬಹುದು. ಬ್ಯಾಟರ್ಸ್ ರನ್ ಗಳಿಸೋಕೆ ಸ್ವಲ್ಪ ಹೆಣಗಾಡ್ತಾರೆ. 2008 ರ ಉದ್ಘಾಟನಾ ಸೀಸನ್ನಿಂದ ಹಿಡಿದು ಈವರೆಗೂ ಈ ಮೈದಾನದಲ್ಲಿ ಕೇವಲ ಮೂರು ಬಾರಿ ಮಾತ್ರ 200 ಕ್ಕೂ ಹೆಚ್ಚು ಸ್ಕೋರ್ ಮಾಡೋಕೆ ಸಾಧ್ಯವಾಗಿದೆ. ಈ ಪಿಚ್ನಲ್ಲಿ ಚೇಸಿಂಗ್ ತಂಡಗಳು ಈ ಹಿಂದೆ ಶೇ. 54 ರಷ್ಟು ಗೆಲುವಿನ ದಾಖಲೆಯನ್ನು ಹೊಂದಿದ್ದು, ಟಾಸ್ ಗೆದ್ದವ್ರು ಬೌಲಿಂಗ್ ಆಯ್ಕೆ ಮಾಡಿಕೊಳ್ತಾರೆ. ಮಧ್ಯಾಹ್ನ 3.30ಕ್ಕೆ ಮ್ಯಾಚ್ ಶುರುವಾಗಲಿದೆ. ಸೋ ಫಸ್ಟ್ ಬ್ಯಾಟಿಂಗ್ ಮಾಡಿದವ್ರು 180+ ರನ್ ಸ್ಕೋರ್ ಮಾಡಿದ್ರೆ ಡಿಫೆನ್ಸ್ ಮಾಡಿಕೊಳ್ಳುವ ಸಾಧ್ಯತೆ ಇದೆ.
ಹಿಂದಿನ ಸೀಸನ್ಗಳಲ್ಲಿ ಎರಡೂ ತಂಡಗಳ ಪೈಪೋಟಿ ನೋಡಿದ್ರೆ ಆಲ್ಮೋಸ್ಟ್ ಈಕ್ವಲ್ ಆಗಿವೆ. ಈವರೆಗೂ ಎರಡೂ ತಂಡಗಳ ನಡುವೆ 29 ಪಂದ್ಯಗಳು ನಡೆದಿವೆ. ಈ ಪೈಕಿ ರಾಜಸ್ಥಾನ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಆರ್‌ಸಿಬಿ 15 ಪಂದ್ಯಗಳಲ್ಲಿ ಜಯ ಸಾಧಿಸಿ ಸ್ವಲ್ಪ ಮುನ್ನಡೆಯಲ್ಲಿದೆ. ಜೈಪುರದಲ್ಲಿ ಆರ್ ಸಿಬಿ ಮತ್ತು ಆರ್ ಆರ್ ನಡುವೆ ಒಟ್ಟಾರೆಯಾಗಿ 9 ಪಂದ್ಯಗಳು ನಡೆದಿವೆ. ಈ ವೇಳೆ ಮೆನ್ ಇನ್ ಪಿಂಕ್ ತಂಡವು ಆರ್‌ಸಿಬಿ ವಿರುದ್ಧ ಐದು ಗೆಲುವುಗಳು ಮತ್ತು ನಾಲ್ಕು ಸೋಲುಗಳನ್ನು ಹೊಂದಿದೆ. ಕಳೆದ 5 ಪಂದ್ಯಗಳ ರಿಸಲ್ಟ್ ನೋಡಿದ್ರೆ ಆರ್‌ಸಿಬಿ 3 ಮ್ಯಾಚ್ ಗೆದ್ದಿದೆ. ಆರ್ ಆರ್ 2 ಸಲ ಗೆಲುವು ಸಾಧಿಸಿದೆ. ಈ ಸೀಸನ್ನಲ್ಲಿ ಆರಂಭದ ಮೂರು ಪಂದ್ಯಗಳಲ್ಲಿ ರಿಯಾನ್ ಪರಾಗ್ ನಾಯಕತ್ವದಲ್ಲಿ RR ಗೆ ಗೆ ಹೆಚ್ಚಿನ ಸಕ್ಸಸ್ ಸಿಕ್ಕಿರಲಿಲ್ಲ. ತಮ್ಮ ಮೊದಲ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರವೇ ಗೆಲುವು ಕಂಡಿದ್ರು. ಬಟ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಕಂಡಿದ್ದಾರೆ. ಸಂಜು ಸ್ಯಾಮ್ಸನ್ ನಾಯಕನಾಗಿ ಮರಳಿರುವುದು ಪ್ಲಸ್ ಆಗಬಹುದು. ಬಟ್ ಸಂಜು ನಾಯಕತ್ವದಲ್ಲೂ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 58 ರನ್‌ಗಳ ಸೋಲು ಅನುಭವಿಸಿದ್ದಾರೆ.