ರಾಜಸ್ಥಾನ & ಗುಜರಾತ್ ನಡುವೆ ಇಂದು ಹೈವೋಲ್ಟೇಜ್ ಫೈಟ್ – ಜೈಪುರದಲ್ಲಿ ಗೆದ್ದವರಿಗೆ ಟಾಪ್-2 ಸ್ಥಾನ ಫಿಕ್ಸ್!

ಐಪಿಎಲ್ ಈಗ ರಣರೋಚಕ ಘಟ್ಟದಲ್ಲಿದ್ದು ಪ್ಲೇ ಆಫ್ ಲೆಕ್ಕಾಚಾರ ಭರ್ಜರಿಯಾಗಿದೆ. ಅದರಲ್ಲೂ ಇವತ್ತಿನ ಪಂದ್ಯದಲ್ಲಿ ಗೆದ್ದವರಿಗೆ ಬಂಪರ್ ಅವಕಾಶ ಇದೆ. 19ನೇ ಆವೃತ್ತಿಯ ಐಪಿಎಲ್ ನ 52ನೇ ಪಂದ್ಯದಲ್ಲಿಂದು ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಜೈಪುರದ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ಮ್ಯಾಚ್ ಶೆಡ್ಯೂರ್ ಆಗಿದೆ. ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು ಪ್ಲೇಆಫ್ಗೆ ಹತ್ತಿರವಾಗಿವೆ. ಇವತ್ತಿನ ಪಂದ್ಯ ಗೆದ್ದವರು ಟಾಪ್-2ನಲ್ಲಿ ಕಾಣಿಸಿಕೊಳ್ತಾರೆ.
ಇದನ್ನೂ ಓದಿ : ಅಲೆನ್ ಶತಕದ ಆರ್ಭಟ.. ಸತತ ನಾಲ್ಕನೇ ಪಂದ್ಯ ಗೆದ್ದ ಕೊಲ್ಕತ್ತಾ – ಡೆಲ್ಲಿ ಪ್ಲೇ ಆಫ್ ಕನಸು ನುಚ್ಚು ನೂರು
ಪ್ರಸ್ತುತ ಸೀಸನ್ ನಲ್ಲಿ ಗುಜರಾತ್ ತಂಡ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 6 ರಲ್ಲಿ ಗೆದ್ದು 4ರಲ್ಲಿ ಸೋಲನುಭವಿಸಿದೆ. ಪ್ರಸ್ತುತ 12 ಅಂಕಗಳನ್ನು ಪಡೆದುಕೊಂಡಿದ್ದು ನಿವ್ವಳ ರನ್ ರೇಟ್ -0.147 ಆಗಿದೆ. ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. ರಾಜಸ್ಥಾನ್ ರಾಯಲ್ಸ್ ತಂಡ ಸಹ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇದು ಸಹ 6 ಪಂದ್ಯಗಳ ಗೆಲುವಿನೊಂದಿಗೆ 12 ಅಂಕಗಳನ್ನು ಹೊಂದಿದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಎರಡನೇ ಅಥವಾ ಮೊದಲ ಸ್ಥಾನಕ್ಕೆ ತಲುಪುವ ಅವಕಾಶ ಹೊಂದಿವೆ. ಈ ಸೀಸನ್ನಲ್ಲಿ ಉಭಯ ತಂಡಗಳ ನಡುವಿನ ಎರಡನೇ ಪಂದ್ಯ ಇದಾಗಿದೆ, ರಾಜಸ್ಥಾನ ತಂಡವು ಹಿಂದಿನ ಪಂದ್ಯವನ್ನು 6 ರನ್ಗಳಿಂದ ಗೆದ್ದುಕೊಂಡಿತ್ತು. ಹೀಗಾಗಿ, ಗುಜರಾತ್ ಟೈಟಾನ್ಸ್ ಈ ಪಂದ್ಯವನ್ನು ಗೆಲ್ಲುವ ಮೂಲಕ ತಮ್ಮ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗುತ್ತಿದೆ. ಎರಡೂ ತಂಡಗಳು ಉತ್ತಮ ಲಯದಲ್ಲಿ ಇರೋದ್ರಿಂದ ಇವತ್ತಿನ ಪಂದ್ಯ ಹೈವೋಲ್ಟೇಜ್ ನಿಂದ ಕೂಡಿರಲಿದೆ.
ಇನ್ನು ಐಪಿಎಲ್ ನಲ್ಲಿ ಇದುವರೆಗೆ ಈ ಎರಡು ತಂಡಗಳ ಮುಖಾಮುಖಿಯೂ ಕುತೂಹಲಕಾರಿಯಾಗಿದೆ. ಐಪಿಎಲ್ನಲ್ಲಿ ಇದುವರೆಗೆ ಎರಡೂ ತಂಡಗಳ ನಡುವೆ ಒಟ್ಟು 9 ಪಂದ್ಯಗಳು ನಡೆದಿದ್ದು, ರಾಜಸ್ಥಾನ್ ರಾಯಲ್ಸ್ ಕೇವಲ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಗುಜರಾತ್ ಟೈಟಾನ್ಸ್ 6 ಪಂದ್ಯಗಳನ್ನು ಗೆದ್ದುಕೊಂಡಿದೆ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಎರಡೂ ತಂಡಗಳ ನಡುವೆ ಒಟ್ಟು ಮೂರು ಪಂದ್ಯಗಳು ನಡೆದಿದ್ದು, ರಾಜಸ್ಥಾನ್ ರಾಯಲ್ಸ್ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದ್ದರೆ, ಗುಜರಾತ್ ಟೈಟಾನ್ಸ್ ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಈ ಪಂದ್ಯದಲ್ಲೂ ಗುಜರಾತ್ ಗೆಲ್ಲುತ್ತಾ ಅನ್ನೋ ಕುತೂಹಲ ಇದೆ. ಹಾಗೇ ಪಂದ್ಯ ನಡೆಯಲಿರುವ ಸವಾಯಿ ಮಾನ್ಸಿಂಗ್ ಪಿಚ್ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿರಲಿದೆ. ಹೊಸ ಚೆಂಡಿನೊಂದಿಗೆ ವೇಗದ ಬೌಲರ್ಗಳು ಲಾಭ ಪಡೆಯಲಿದ್ದಾರೆ. ಒಮ್ಮೆ ಬ್ಯಾಟರ್ಗಳು ಸೆಟ್ ಆದರೇ ನಂತರ ಸುಲಭವಾಗಿ ರನ್ಗಳನ್ನು ಕಲೆಹಾಕುತ್ತಾರೆ. ಐಪಿಎಲ್ನಲ್ಲಿ ಈ ಮೈದಾನದಲ್ಲಿನ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 166 ಆಗಿದ್ದರೆ, ಎರಡನೇ ಇನ್ನಿಂಗ್ಸ್ 150 ಮತ್ತು 160 ರ ನಡುವೆ ಇರಲಿದೆ. ಆದಾಗ್ಯೂ, ಈ ವರ್ಷ ಆಡಿದ ಕೊನೆಯ ಎರಡು ಪಂದ್ಯಗಳು ಹೆಚ್ಚಿನ ಸ್ಕೋರಿಂಗ್ ದಾಖಲಾಗಿದ್ದು, 220 ಕ್ಕಿಂತ ಹೆಚ್ಚಿನ ಸ್ಕೋರ್ಗಳನ್ನು ಸುಲಭವಾಗಿ ಬೆನ್ನಟ್ಟಲಾಗಿದೆ. ಇಂದಿನ ಪಂದ್ಯದಲ್ಲಿ ಎರಡೂ ಕಡೆಯಿಂದಲೂ ಬಿಗ್ ಸ್ಕೋರ್ ನಿರೀಕ್ಷೆ ಮಾಡಬಹುದು.

ನೋಡಿರಿ

