IPLನ ಕೋಟಿವೀರ ಸೂರ್ಯವಂಶಿ – 13 ವರ್ಷ.. ₹1.1 ಕೋಟಿ.. ದ್ರಾವಿಡ್ ಗೇಮ್
RCB ಮಿಸ್ ಮಾಡಿಕೊಂಡ ಆರ್ಯ ಯಾರು?
ಭಾರತದ ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ ಶುರವಾಗಿದ್ದು, ಐಪಿಎಲ್ ಬಿಡ್ಡಿಂಗ್ ಕೂಡ ಮುಗಿದಿದೆ. ಈ ಬಾರಿಯ ಐಪಿಎಲ್ ಬಿಡ್ಡಿಂಗ್ ಸಖತ್ ಕ್ರೇಜ್ ಹುಟ್ಟು ಹಾಕಿದ್ದು, ಯಾರು ಅಂದುಕೊಳ್ಳದ ರೀತಿಯಲ್ಲಿ ಪ್ಲೇಯರ್ಸ್ ಸೋಲ್ಡ್ ಆಗಿದ್ದಾರೆ.. ಅದ್ರಲ್ಲೂ 2025ರ ಮೆಗಾ ಹರಾಜಿನಲ್ಲಿ ಅತೀ ಕಿರಿಯ ಕ್ರಿಕೆರ್ಟಸ್ ಬಿಡ್ ಆಗಿದ್ದಾರೆ. ಹಾಗಿದ್ರೆ ಈ ಬಾರಿಯ ಅತೀ ಕಿರಿಯ ಕ್ರಿಕೆಟರ್ ಯಾರು? ಯಾವ ಟೀಂ ಪಾಲಾಗಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: RCBಯಲ್ಲಿ 3+19 = 22 ಸೂತ್ರ – ಕನ್ನಡಿಗರು ಬೆಂಚ್ ಗೋ.. ಮೈದಾನಕ್ಕೋ?
IPLನಲ್ಲಿ ಮೋಡಿ ಮಾಡಿದ 13ರ ಪೋರ
ಐಪಿಎಲ್ ಹರಾಜು 2025 ರಲ್ಲಿ ಮಾರಾಟವಾಗದ ದೊಡ್ಡ ದೇಶೀಯ ಹಾಗೂ ವಿದೇಶಿ ಸ್ಟಾರ್ ಆಟಗಾರರ ಪಟ್ಟಿಯೇ ಇದೆ. ಈ ನಡುವೆ 13 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ ಹರಾಜಿನಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ವೈಭವ್ ಸೂರ್ಯವಂಶಿ 1.1 ಕೋಟಿ ರೂಪಾಯಿಗೆ ರಾಹುಲ್ ದ್ರಾವಿಡ್ ಕೋಚ್ ಆಗಿರುವ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ. ಆ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ -ಐಪಿಎಲ್ ಇತಿಹಾಸದಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಈ ಆಟಗಾರರನ್ನು ಖರೀದಿಸಲು ಕಠಿಣ ಪೈಪೋಟಿ ನಡೆಸಿದವು. 13 ವರ್ಷದ ಆಟಗಾರನಿಗೆ ಈ ಬಿಡ್ಡಿಂಗ್ ಸಂಪೂರ್ಣ ಯುದ್ಧವಾಗಿ ಮಾರ್ಪಟ್ಟಿತ್ತು. ಕೊನೆಯಲ್ಲಿ ಆರ್ ಆರ್ ಬಿಡ್ ಮಾಡ್ತು.
ವೈಭವ್ ಸೂರ್ಯವಂಶಿ 2011ರ ಮಾರ್ಚ್ 27 ರಂದು ಬಿಹಾರದಲ್ಲಿ ಜನಿಸಿದರು. 4ನೇ ವಯಸ್ಸಿಗೆ ಈತ ತನ್ನ ಕ್ರಿಕೆಟ್ ಪ್ರತಿಭೆಯನ್ನು ತೋರಿಸಲು ಪ್ರಾರಂಭಿಸಿದ. ವೈಭವ್ ಅವರ ತಂದೆ ಸಂಜೀವ್ ಅವರು ಈತನ ಕ್ರಿಕೆಟ್ ಉತ್ಸಾಹವನ್ನು ಗಮನಿಸಿ ಮನೆಯ ಬಳಿಯೇ ಸಣ್ಣದಾಗಿ ಆಟದ ಸ್ಥಳ ರೆಡಿಮಾಡಿದ್ರು. ವೈಭವ್ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಐಪಿಎಲ್ ವರೆಗೆ ಬಂದಿದ್ದಾರೆ ಕಳೆದ ತಿಂಗಳು ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಭಾರತ ಅಂಡರ್ 19 ಪಂದ್ಯದ ಭಾಗವಾಗಿದ್ದರು, ಅಲ್ಲಿ ಅವರು 58 ಎಸೆತಗಳಲ್ಲಿ ಶತಕ ಬಾರಿಸಿ ಗಮನ ಸೆಳೆದರು. ಅಲ್ಲಗೇ ರಾಜಸ್ಥಾನ್ ರಾಯಲ್ಸ್ ತನ್ನ ಪೇಜ್ನಲ್ಲಿ 13 ವರ್ಷದಲ್ಲಿ ಏವೇನು ಮಾಡ್ತಾ ಇದ್ರಿ ಅಂತ ವೈಭವ್ ಸೂರ್ಯವಂಶಿ ಹೆಸರನ್ನ ಹಾಕಿದೆ.. ಇದ್ಕೆ ಸಾಕಷ್ಟು ಜನ ಕಮೆಂಟ್ ಮಾಡುತ್ತಿದ್ದಾರೆ. ಅಲ್ಲದೇ ಈ ಹುಡುಗನ ಅಸಲಿ ವಯಸ್ಸು 13 ಅಲ್ಲ, ಬದಲಿಗೆ 15 ವರ್ಷ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈತನ ತಂದೆ ಸ್ಪಷ್ಟನೆಯನ್ನು ನೀಡಿದ್ದಾರೆ. ” ನನ್ನ ಮಗ 8.5 ವರ್ಷ ಇದ್ದಾಗಲೇ ಬಿಸಿಸಿಐನ ಬೋನ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿದ್ದ. ಭಾರತದ ಪರವಾಗಿ ಅಂಡರ್ 19 ಈಗಾಗಲೇ ಆಡಿದ್ದಾನೆ. ಇನ್ನೊಮ್ಮೆ, ವಯಸ್ಸಿನ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾನೆ” ಎಂದು ಸೂರ್ಯವಂಶಿಯ ತಂದೆ ಹೇಳಿದ್ದಾರೆ.
ಪಂಜಾಬ್ ಬಿಡ್ ಮಾಡಿದ ಪ್ರಿಯಾಂಶ್ ಆರ್ಯ ಯಾರು?
ಪಂಜಾಬ್ ಪ್ರಿಯಾಂಶ್ ಆರ್ಯ ಅವರನ್ನು ಖರೀದಿಸಿದಾಗ ಎಲ್ಲರ ಮನದಲ್ಲೂ ಒಂದೇ ಒಂದು ಪ್ರಶ್ನೆ ಮೂಡಿದೆ. ಯಾರು ಈ ಪ್ರಿಯಾಂಶ್ ಆರ್ಯ? ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಪಂಜಾಬ್ ಬಿಡ್ ಮಾಡಿದ್ದೇಕೆ? ಅನ್ನೋದು. ಡೆಲ್ಲಿ ಟಿ20 ಲೀಗ್ನಲ್ಲಿ ಶತಕ ಬಾರಿಸಿ ಸಂಚಲನ ಮೂಡಿಸಿದಾಗ 23 ವರ್ಷದ ಪ್ರಿಯಾಂಶ್ ಆರ್ಯ ಹೆಸರು ಬೆಳಕಿಗೆ ಬಂದಿತ್ತು. ಈ ಆಟಗಾರ ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ವಿರುದ್ಧ ಕೇವಲ 40 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಹೀಗಾಗಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳೂ ಪ್ರಿಯಾಂಶ್ ಆರ್ಯ ಮೇಲೆ ಬಿಡ್ ಮಾಡಲು ಪೈಪೋಟಿ ನಡೆಸಿದವು. ಮೂರು ತಂಡಗಳ ನಡುವಿನ ಸ್ಪರ್ಧೆಯು ಆರ್ಯ 3. 80 ಕೋಟಿಗೆ ಪಾಂಜಾಬ್ ಪಲಾದ್ರು. ಈ ಇಬ್ಬರು ಆಟಗಾರರು ಅತೀ ಚಿಕ್ಕ ವಯಸ್ಸಿನಲ್ಲಿ ಪ್ರಾಂಚೈಸಿಗಳ ಗಮನೆ ಸೆಳೆದಿದ್ದು, ಕೋಟಿ ಕೋಟಿ ಗಳಿಸಿದ್ದಾರೆ.