RR ವಿರುದ್ಧ ಗೆಲ್ಲಲೇಬೇಕು RCB – ಲಿಯಾಮ್, DDP ಔಟ್.. ಯಾರಿಗೆ ಚಾನ್ಸ್?

ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಉದ್ಘಾಟನಾ ಪಂದ್ಯದಲ್ಲೇ ಗೆಲುವು. ಚೆನ್ನೈನ ಚೆಪಾಕ್ ಮೈದಾನದಲ್ಲಿ 17 ವರ್ಷಗಳ ಬಳಿಕ ಸಿಎಸ್ಕೆ ವಿರುದ್ಧ ಜಯಭೇರಿ. ಮುಂಬೈನ ವಾಂಖೆಡೆಯಲ್ಲಿ 10 ವರ್ಷಗಳ ಬಳಿಕ ವಿಕ್ಟರಿ. ಹೀಗೆ ಹೊರಗೆ ಆಡಿದ್ದ ಮೂರು ಪಂದ್ಯಗಳನ್ನೂ ಬೆಂಗಳೂರು ಟೀಂ ಗೆದ್ದಿತ್ತು. ಬಟ್ ಚಿನ್ನಸ್ವಾಮಿ ಮೈದಾನದಲ್ಲಿ ಗುಜರಾತ್ ವಿರುದ್ಧ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಈಸಿಯಾಗಿ ಸೋಲೊಪ್ಪಿಕೊಂಡಿತ್ತು. ಇದೀಗ ರಾಜಸ್ಥಾನದ ವಿರುದ್ಧ ತಮ್ಮ ಆರನೇ ಪಂದ್ಯ ಆಡೋಕೆ ರೆಡಿಯಾಗಿದ್ದಾರೆ. ಈ ಮ್ಯಾಚ್ ಗೆಲ್ಲಲೇಬೇಕಾದ ಅನಿವಾರ್ಯವೂ ಇದೆ. ಈ ಗೆಲುವಿನ ಮೂಲಕ ಕಳೆದ ವರ್ಷದ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಬೇಕಿದೆ.
ಇದನ್ನೂ ಓದಿ : 3ನೇ ಸ್ಲಾಟ್.. 5 ಪಂದ್ಯಗಳಿಂದ 78 ರನ್ – RCBಗೆ ಭಾರವಾದ್ರಾ ದೇವದತ್ ಪಡಿಕ್ಕಲ್?
2024ರ ಕ್ವಾಲಿಫೈಯರ್ ಮ್ಯಾಚ್ನಲ್ಲಿ ಸಿಎಸ್ಕೆ ತಂಡವನ್ನ ಆರ್‌ಸಿಬಿ ಸೋಲಿಸಿದ್ದು ಯಾವ ಫೈನಲ್ ಮ್ಯಾಚ್ಗೂ ಕಡಿಮೆ ಇರಲಿಲ್ಲ. ಅಲ್ದೇ ಆವತ್ತು ಆರ್‌ಸಿಬಿ ಬರೀ ಗೆದ್ರೆ ಸಾಕಾಗ್ತಾ ಇರಲಿಲ್ಲ. 18.1 ಓವರ್ಗಳ ಒಳಗೆ ಅಥವಾ 18 ರನ್ಗ ಅಂತರದಲ್ಲಿ ಸೋಲಿಸ್ಬೇಕಿತ್ತು. ಫಸ್ಟ್ ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ 20 ಓವರ್ಗಳಲ್ಲಿ 218 ರನ್ ಗಳಿಸಿತ್ತು. ಟಾರ್ಗೆಟ್ ಬೆನ್ನತ್ತಿದ್ದ ಸಿಎಸ್ಕೆ 27 ರನ್ಗಳಿಂದ ಸೋಲೊಪ್ಪಿಕೊಂಡಿತ್ತು. ಹೀಗೆ ರಾಯಲ್ ಆಗೇ ಫ್ಲೇಆಫ್ಗೆ ಎಂಟ್ರಿ ಕೊಟ್ಟಿದ್ದ ಆರ್ಸಿಬಿಗೆ ಸೋಲಿನ ಶಾಕ್ ಕೊಟ್ಟಿದ್ದೇ ರಾಜಸ್ಥಾನ ರಾಯಲ್ಸ್. 2024ರ ಮೇ 22ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಮ್ಯಾಚ್ ನಡೆದಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ಮೊದಲು ಬ್ಯಾಟಿಂಗ್ ನಡೆಸಿ 172 ರನ್ ಕಲೆ ಹಾಕಿತ್ತು. 173 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ರಾಜಸ್ತಾನ 19 ಓವರ್ ಗಳಲ್ಲೇ ಗೆದ್ದು ಬೀಗಿತ್ತು. 2ನೇ ಕ್ವಾಲಿಫೈಯರ್ ಗೆ ಪ್ರವೇಶ ಪಡೆಯಿತು. ರಾಜಸ್ಥಾನದ ಎದುರು ಸೋತು ಬೆಂಗಳೂರು ಟೀಂ ಇಡೀ ಟೂರ್ನಿಯಿಂದಲೇ ಹೊರ ಬಿದ್ದಿತ್ತು. ಇನ್ನು ಉಭಯ ತಂಡಗಳು ಇದುವರೆಗೆ ಒಟ್ಟಾರೆ 32 ಪಂದ್ಯಗಳನ್ನ ಆಡಿವೆ. ಆರ್‌ಆರ್ vs ಆರ್‌ಸಿಬಿ ಮುಖಾಮುಖಿ ದಾಖಲೆಯಲ್ಲಿ , ರಾಜಸ್ಥಾನ ರಾಯಲ್ಸ್ 14 ಪಂದ್ಯಗಳನ್ನು ಗೆದ್ದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 15 ಪಂದ್ಯಗಳನ್ನು ಗೆದ್ದಿದೆ, ಮೂರು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿವೆ.
ಇನ್ನು ಆರನೇ ಪಂದ್ಯವನ್ನ ಗೆಲ್ಲಬೇಕು ಅಂದ್ರೆ ಟೀಮ್ನಲ್ಲಿ ಒಂದಷ್ಟು ಬದಲಾವಣೆಗಳನ್ನ ಮಾಡ್ಬೋದು. ಅದ್ರಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಮತ್ತು ಆಕ್ ರೌಂಡರ್ ಲಿಯಾಮ್ ಲಿವಿಂಗ್ಸ್ಟನ್ರನ್ನ ಕೈಬಿಡೋ ಸಾಧ್ಯತೆ ಇದೆ. ಯಾಕಂದ್ರೆ ಇವ್ರಿಬ್ಬರಿಂದ ಕಳೆದ ಐದು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ. ಲಿವಿಂಗ್ಸ್ಟನ್ ಕಳೆದ 5 ಪಂದ್ಯಗಳ ಪರ್ಪಾಮೆನ್ಸ್ ನೋಡೋದಾದ್ರೆ..
ಅಬ್ಬರಿಸಿಲ್ಲ ಲಿಯಾಮ್!
ಎದುರಾಳಿ ರನ್ ವಿಕೆಟ್
KKR 15(5) 2 ಓವರ್ 14 ರನ್, ವಿಕೆಟ್ ಇಲ್ಲ
CSK 10(9) 4 ಓವರ್, 28 ರನ್, 2 ವಿಕೆಟ್
GT 54 (40) 1 ಓವರ್ 12 ರನ್ , ನೋ ವಿಕೆಟ್
MI 0 (2) ಬೌಲಿಂಗ್ ಕೊಟ್ಟಿಲ್ಲ
DC 4 (6) 1 ಓವರ್ 14 ರನ್
ಪಡಿಕ್ಕಲ್ ಡಲ್!
KKR 10(10)
CSK 27(14)
GT 3 (4)
MI 37 (22)
DC 1 (8)