KKRಗೆ ನೀರು ಕುಡಿಸ್ತಾರಾ ಸಾಲ್ಟ್ – ಮಸ್ಟ್ ವಿನ್ ಬ್ಯಾಟಲ್ ಗೆಲ್ಲುತ್ತಾ RCB?
ಪ್ಲೇಯಿಂಗ್ 11ನಲ್ಲಿ ಶೆಫರ್ಡ್ ಬೇಕಾ?

ಮುಂಬೈ ಇಂಡಿಯನ್ಸ್ ವಿರುದ್ಧ ಲಾಸ್ಟ್ ಬಾಲ್ ಥ್ರಿಲ್ಲರ್ ಗೆದ್ದಿದ್ದ ಆರ್ಸಿಬಿಗೆ ನೆಕ್ಸ್ಟ್ ಚಾಲೆಂಜ್ ಕೆಕೆಆರ್. ಫಸ್ಟ್ ಆಫ್ನಲ್ಲಿ ಕೊಲ್ಕತ್ತಾ ಬ್ಯಾಕ್ ಟು ಬ್ಯಾಕ್ 6 ಪಂದ್ಯ ಸೋತ್ರೂ ಆ ನಂತ್ರದಲ್ಲಿ ಸತತ ನಾಲ್ಕು ಮ್ಯಾಚ್ ಗೆದ್ದು ಒಳ್ಳೆ ರಿದಮ್ನಲ್ಲಿದ್ದಾರೆ. ಸೋ ಆ ರಿದಮ್ನ ಬ್ರೇಕ್ ಮಾಡಬೇಕಿರೋ ಚಾಲೆಂಜ್ ಆರ್ಸಿಬಿಗೆ ಇದೆ. ಹಾಗೇ ಮುಂಬೈ ವಿರುದ್ಧದ ಪಂದ್ಯದಲ್ಲಿ ಆಗಿರೋ ಮಿಸ್ಟೇಕ್ಸ್ನ ಸರಿ ಮಾಡಿಕೊಳ್ಬೇಕು.
ಇದನ್ನೂ ಓದಿ : ತಂಡಕ್ಕಾಗಿ ಆಡಲ್ವಾ ಸೂರ್ಯವಂಶಿ? – 2 ಸೀಸನ್ಗೇ ವಂಡರ್ ಕಿಡ್ ಸೈಡ್ಲೈನ್?
ಆರ್ಸಿಬಿಯ ಸೆಕೆಂಡ್ ಹೋಂ ಗ್ರೌಂಡ್ ಆಗಿರುವಂಥ ರಾಯ್ಪುರದಲ್ಲಿ ಕೆಕೆಆರ್ ವಿರುದ್ಧ 2ನೇ ಪಂದ್ಯ ಶೆಡ್ಯೂಲ್ ಆಗಿದೆ. ಮುಂಬೈ ವಿರುದ್ಧವೇ ಸಾಕಷ್ಟು ಸ್ಟ್ರಗಲ್ ಮಾಡಿ ಗೆದ್ದಿರೋ ಬೆಂಗಳೂರಿಗೆ ಈ ಪಂದ್ಯ ಮಸ್ಟ್ ವಿನ್ ಗೇಮ್. ಪ್ರಸ್ತುತ 11 ಪಂದ್ಯಗಳನ್ನ ಆಡಿ 7ರಲ್ಲಿ ಗೆದ್ದು ಟಾಪ್ನಲ್ಲೇನೋ ಇದ್ದಾರೆ. ಬಟ್ ಟಾಪ್-2 ಟಾರ್ಗೆಟ್ ಇರೋದ್ರಿಂದ ಕೊಲ್ಕತ್ತಾ ವಿರುದ್ಧ ಗೆಲ್ಲೋದು ತುಂಬಾನೇ ಮುಖ್ಯ ಆಗುತ್ತೆ. ಅತ್ತ ಕೊಲ್ಕತ್ತಾ ಕೂಡ 9 ಅಂಕಗಳನ್ನ ಪಡೆದು ಪ್ಲೇ ಆಫ್ ರೇಸ್ನ ಟಫ್ ಕಂಟೆಂಡರ್ ಆಗಿದೆ. ಇನ್ನೂ ನಾಲ್ಕು ಪಂದ್ಯ ಇರೋದ್ರಿಂದ ಎಲ್ಲಾ ಮ್ಯಾಚ್ ಗೆದ್ದು ಟಾಪ್-4 ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಌಂಡ್ ಆರ್ಸಿಬಿಗೆ ಈ ಪಂದ್ಯಕ್ಕೂ ಮುನ್ನ ಒಂದು ಗುಡ್ ನ್ಯೂಸ್ ಅಂತೂ ಇದೆ.
ಭಾರತಕ್ಕೆ ಮರಳಿದ ಫಿಲ್ ಸಾಲ್ಟ್ ಕೆಕೆಆರ್ ವಿರುದ್ಧ ಆಡ್ತಾರಾ?
ಕಳೆದ ಐದು ಪಂದ್ಯಗಳಿಂದ ಆರ್ಸಿಬಿಯ ಓಪನಿಂಗ್ ಸ್ಲಾಟ್ನಲ್ಲಿ ಫಿಲ್ ಸಾಲ್ಟ್ನಲ್ಲಿ ಆರ್ಸಿಬಿ ಮಿಸ್ ಮಾಡಿಕೊಳ್ತಿದೆ. ಅವ್ರ ಅಗ್ರೆಸ್ಸಿವ್ ಬ್ಯಾಟಿಂಗ್, ಪವರ್ ಪ್ಲೇ ಸ್ಟ್ರೋಕ್, ವಿರಾಟ್ ಕೊಹ್ಲಿ ಜೊತೆ ಸೂಪರ್ ಸಾಲಿಡ್ ಓಪನಿಂಗ್ ಸಿಗ್ತಾ ಇಲ್ಲ. ಬೆಥೆಲ್ ಬದಲಿಯಾಗಿ ಆಡ್ತಿದ್ರೂ ಬೆಥೆಲ್ ಕಡೆಯಿಂದ ಒಳ್ಳೆ ಸಪೋರ್ಟ್ ಸಿಕ್ಕೇ ಇಲ್ಲ. ಕಳೆದ ಐದು ಪಂದ್ಯಗಳಲ್ಲೂ ಬೆಥೆಲ್ ಕಡೆಯಿಂದ ಬ್ಯಾಟಿಂಗ್ ಸಾಥ್ ಸಿಕ್ಕಿಲ್ಲ. ಅದೂ ಅಲ್ದೇ ಕಳೆದ 2 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಡಕ್ ಔಟ್ ಆಗಿದ್ದಾರೆ. ಹೀಗಾಗಿ ಸಾಲ್ಟ್ ಪ್ಲೇಯಿಂಗ್ 11ನಲ್ಲಿ ಆಡೋದು ತುಂಬಾನೇ ಮುಖ್ಯವಾಗುತ್ತೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬೆಂಗಳೂರಿನ ಮ್ಯಾಚಲ್ಲಿ ಫೀಲ್ಡಿಂಗ್ ವೇಳೆ ಬೆರಳಿಗೆ ಗಾಯ ಮಾಡ್ಕೊಂಡಿದ್ದ ಸಾಲ್ಟ್ ಟ್ರೀಟ್ಮೆಂಟ್ಗೆಂದು ಇಂಗ್ಲೆಂಡ್ಗೆ ತೆರಳಿದ್ರು ಈಗ ಭಾರತಕ್ಕೆ ವಾಪಸ್ ಬಂದಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಮೂಲಕ ಫಿಲ್ ಸಾಲ್ಟ್ ಮತ್ತೆ ಮೈದಾನಕ್ಕಿಳಿಯಬಹುದು. ಇತ್ತ ಸಾಲ್ಟ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದರೆ ಜೇಕಬ್ ಬೆಥೆಲ್ ಆಡುವ ಬಳಗದಿಂದ ಹೊರಗುಳಿಯಲಿದ್ದಾರೆ.
ಆರ್ ಸಿಬಿ ಸಂಭಾವ್ಯ ಪ್ಲೇಯಿಂಗ್ 11
ಫಿಲ್ ಸಾಲ್ಟ್
ವಿರಾಟ್ ಕೊಹ್ಲಿ
ದೇವದತ್ ಪಡಿಕ್ಕಲ್
ರಜತ್ ಪಾಟಿದಾರ್
ಜಿತೇಶ್ ಶರ್ಮಾ
ಟಿಮ್ ಡೇವಿಡ್
ರೊಮಾರಿಯೊ ಶೆಫರ್ಡ್
ಕೃನಾಲ್ ಪಾಂಡ್ಯ
ಭುವನೇಶ್ವರ್ ಕುಮಾರ್
ಜೋಶ್ ಹೇಜಲ್ ವುಡ್
ಸುಯಾಶ್ ಶರ್ಮಾ
ರಸಿಖ್ ಸಲಾಮ್ ದಾರ್
ಇಲ್ಲಿ ಪ್ಲೇಯಿಂಗ್ 11ನಲ್ಲಿ ಫಿಲ್ ಸಾಲ್ಟ್ ಮಾತ್ರವೇ ಜಾಯ್ನ್ ಆಗ್ಬೋದು ಉಳಿದಂತೆ ಯಾವುದೇ ಬದಲಾವಣೆ ಮಾಡಲ್ಲ. ರೊಮ್ಯಾರಿಯೋ ಶೆಫರ್ಡ್ ಕಡೆಯಿಂದ ಸಪೋರ್ಟ್ ಸಿಗದೇ ಇದ್ರೂ ಚಾನ್ಸ್ ಕೊಡ್ತಾರೆ. ಯಾಕಂದ್ರೆ ಮುಂಬೈ ವಿರುದ್ಧದ ಮ್ಯಾಚಲ್ಲಿ ಫೇಲ್ಯೂರ್ ಆದ್ಮೇಲೂ ಕೂಡ ವಿರಾಟ್ ಕೊಹ್ಲಿ ಶೆಫರ್ಡ್ ಬೆನ್ನಿಗೆ ನಿಲ್ಲೋದಾಗಿ ಹೇಳಿದ್ದಾರೆ. ಹೀಗಾಗಿ ಶೆಫರ್ಡ್ರನ್ನ ಕೂರಿಸೋದಿಲ್ಲ. ಫ್ಯಾನ್ಸ್ ಆಪೋಸ್ ಮಾಡಿದ್ರೂ ಫ್ರಾಂಚೈಸಿ ಲೆಕ್ಕಾಚಾರಗಳೇ ಬೇರೆ ಇರುತ್ತೆ.
ಕೊಲ್ಕತ್ತಾಗೆ ಬ್ರೇಕ್ ಹಾಕುತ್ತಾ ಬೆಂಗಳೂರು?
ಮೊದಲ 6 ಪಂದ್ಯ ಸೋತ್ರೂ ನಂತರ ಸತತ 4 ಪಂದ್ಯಗಳಲ್ಲಿ ಗೆಲುವು
ಡೆಲ್ಲಿ ವಿರುದ್ಧ ಫಿನ್ ಅಲೆನ್ ಶತಕ, ವಿನ್ನಿಂಗ್ ಟ್ರ್ಯಾಕ್ ಪ್ಲಸ್ ಪಾಯಿಂಟ್
ಒಟ್ಟಾರೆ 36 ಪಂದ್ಯಗಳಲ್ಲಿ ಆರ್ ಸಿಬಿ 15 ಗೆದ್ರೆ ಕೆಕೆಆರ್ 20 ಪಂದ್ಯ ವಿನ್
ಪ್ಲೇ ಆಫ್ ರೇಸ್ ನ ಕಠಿಣ ಸ್ಪರ್ಧಿ ಆಗಿರೋದ್ರಿಂದ ಸೋಲಿಸಿದ್ರೆ ಬೆಸ್ಟ್
ಆರ್ ಸಿಬಿಗೆ ಎಡವಿದ್ರೆ ನೆಕ್ಸ್ ಟ್ ಎದುರಾಳಿ ಹೈದ್ರಾಬಾದ್ & ಪಂಜಾಬ್
ಒಂದು ಮ್ಯಾಚ್ ಮೈನಸ್ ಆಗೋದ್ರಿಂದ ಉಳಿಯೋ 2 ಪಂದ್ಯಗಳಲ್ಲಿ ಪ್ರೆಶರ್
ಟಾಪ್-2 ಟಾರ್ಗೆಟ್ ಇರೋದ್ರಿಂದ ಆರ್ ಸಿಬಿ ಶತಾಯ ಗತಾಯ ಗೆಲ್ಲಬೇಕು

ನೋಡಿರಿ

