ಈ ಸಲ ಕಪ್ ನಮ್ದೇ – 1 ಗೆಲುವು.. TOP 5 ಗೆ RCB
Playoffs ರೇಸ್ ಗೆ ಇನ್ನೊಂದೇ ಹೆಜ್ಜೆ
ಇದಪ್ಪ ಆರ್ಸಿಬಿ ಪವರ್ ಅಂದ್ರೆ. ಫಸ್ಟ್ ಆಫ್ನಲ್ಲಿ ವರ್ಸ್ಟ್ ಪರ್ಫಾಮೆನ್ಸ್ ತೋರಿಸಿದ್ರೂ ಸೆಕೆಂಡ್ ಆಫ್ನಲ್ಲಿ ಎದುರಾಳಿಗಳ ಎದೆ ನಡುಗಿಸಿದ್ದಾರೆ. ಒಂದರ ಹಿಂದೆ ಒಂದರಂತೆ ಸತತ ಐದು ಪಂದ್ಯಗಳಿಂದ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂನ ಕಟ್ಟಿ ಹಾಕೋಕೆ ಯಾರಿಂದಲೂ ಸಾಧ್ಯವಾಗೇ ಇಲ್ಲ. ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲೂ ಫಾಫ್ ಪಡೆ ಮತ್ತೊಮ್ಮೆ ಗೆಲುವಿನ ನಗಾರಿ ಬಾರಿಸಿದೆ. ರಾಜಧಾನಿ ದೆಹಲಿ ತಂಡವನ್ನ ಬೆಂಗಳೂರಿನಲ್ಲಿ ಬಗ್ಗು ಬಡಿದಿದೆ. ಈ ಗೆಲುವು ಆರ್ಸಿಬಿಗೆ ಅತಿದೊಡ್ಡ ಶಕ್ತಿ ನೀಡಿದೆ. ಪ್ಲೇಆಫ್ ಹೊಸ್ತಿಲಿಗೆ ತಂದು ನಿಲ್ಲಿಸಿದೆ. ಅಷ್ಟಕ್ಕೂ ಆರ್ಸಿಬಿ ವರ್ಸಸ್ ಡಿಸಿ ನಡುವಿನ ಪಂದ್ಯ ಹೇಗಿತ್ತು..? ಆರ್ಸಿಬಿಗೆ ಏನೆಲ್ಲಾ ಪ್ಲಸ್ ಆಯ್ತು..? ಪ್ಲೇ ಆಫ್ ಗೆ ಇರೋ ಸವಾಲೇನು..? ಗೆಲ್ಲಬೇಕಿದ್ದ ಮ್ಯಾಚ್ನ ಡೆಲ್ಲಿ ಕೈಚೆಲ್ಲಿಕೊಂಡಿದ್ದೇಗೆ..? ಈ ಕುರಿತ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಪ್ಲೇ ಆಫ್ಗೆ ಒಂದೇ ಮೆಟ್ಟಿಲು! – RCBಯೇ ದೊಡ್ಡ ಸವಾಲು!- OUTನಲ್ಲೂ ಜಡೇಜಾ ದಾಖಲೆ!
ಐಪಿಎಲ್ನ ಫಸ್ಟ್ ಆಫ್ನಲ್ಲಿ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್ ಟೆನ್ನಲ್ಲಿದ್ದ ಆರ್ಸಿಬಿ ಗುಜರಾತ್ ವಿರುದ್ಧದ ಗೆಲುವಿನ ಮೂಲಕ 7ನೇ ಸ್ಥಾನಕ್ಕೆ ಜಿಗಿದಿತ್ತು. ಇದೀಗ ಭಾನುವಾರ ಡೆಲ್ಲಿ ತಂಡವನ್ನ ಮಣಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ ಐಪಿಎಲ್ ಸೀಸನ್ 17 ರ ಪ್ಲೇಆಫ್ ರೇಸ್ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ನಿಧಾನಗತಿಯ ಓವರ್ನಿಂದಾಗಿ ಡೆಲ್ಲಿ ಕ್ಯಾಪಿಟನ್ಸ್ ತಂಡದ ನಾಯಕ ರಿಷಬ್ ಪಂತ್ಗೆ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ನಿಷೇಧ ಹೇರಲಾಗಿತ್ತು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಅಕ್ಸರ್ ಪಟೇಲ್ ಮುನ್ನಡೆಸಿದ್ದರು. ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಆರ್ಸಿಬಿಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿತ್ತು. ಆದ್ರೆ ಆರ್ಸಿಬಿಗೆ ಅಂದುಕೊಂಡಂಥ ಓಪನಿಂಗ್ ಸಿಗಲಿಲ್ಲ. ಎಂದಿನಂತೆ ನಾಯಕ ಫಾಫ್ ಡುಪ್ಲೆಸಿಸ್ ನೀರಸ ಪ್ರದರ್ಶನ ನೀಡಿದ್ರು. ಜಸ್ಟ್ 6 ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ವಿರಾಟ್ ಕೊಹ್ಲಿ ಉತ್ತಮ ಇನ್ನಿಂಗ್ಸ್ ಆರಂಭಿಸಿದ್ರೂ ಯಶಸ್ವಿಯಾಗಲಿಲ್ಲ. 13 ಎಸೆತಗಳ್ಲಲಿ 27 ರನ್ ಸಿಡಿಸಿ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದ್ರು. ಬಳಿಕ ಒಟ್ಟುಗೂಡಿದ ರಜತ್ ಪಟೀದಾರ್ ಮತ್ತು ವಿಲ್ ಜಾಕ್ಸ್ ಒಳ್ಳೆ ಪಾರ್ಟರ್ಶಿಪ್ ಮೂಲಕ ಉತ್ತಮ ರನ್ ಕಲೆ ಹಾಕಿದ್ರು. 3 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ ಪಟೀದಾರ್ ಅಮೋಘ 52 ರನ್ ಸಿಡಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ವಿಲ್ ಜ್ಯಾಕ್ಸ್ ಸಹ 29 ಎಸೆದತಲ್ಲಿ 2 ಸಿಕ್ಸ್ ಹಾಗೂ 3 ಬೌಂಡರಿಗಳ ಮೂಲಕ 41 ರನ್ ಗಳಿಸಿದರು. ಉಳಿದಂತೆ ಕ್ಯಾಮರೂನ್ ಗ್ರೀನ್ 24 ಎಸೆದತಲ್ಲಿ 2 ಸಿಕ್ಸ್ ಸಹಿತ ಅಜೇಯ 32 ರನ್ ಮತ್ತು ಮಹಿಪಾಲ್ ಲೋಮ್ರೋರ್ 8 ಎಸೆತದಲ್ಲಿ 13 ರನ್ ಗಳಿಸಿದರು. ಆದ್ರೆ ಭಾನುವಾರದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು. ಹೀಗೆ ನಿಗದಿತ 20 ಓವರ್ನಲ್ಲಿ ಆರ್ಸಿಬಿ 9 ವಿಕೆಟ್ ಕಳೆದುಕೊಂಡ ಆರ್ಸಿಬಿ 187 ರನ್ಗಳ ಸಾಧಾರಣ ಟಾರ್ಗೆಟ್ ನೀಡಿತ್ತು. ಆದ್ರೆ ಈ ಗುರಿ ರೀಚ್ ಮಾಡೋಕೆ ಡೆಲ್ಲಿಗೆ ಆಗ್ಲೇ ಇಲ್ಲ. ಆರ್ಸಿಬಿಯ ಮಾರಕ ಬೌಲಿಂಗ್ ದಾಳಿ ಹಾಗೂ ಫೀಲ್ಡಿಂಗ್ನಲ್ಲಿ ನಡೆದ ಚಮತ್ಕಾರದಿಂದ 187 ರನ್ಗಳನ್ನು ಡಿಫೆನ್ಸ್ ಮಾಡಿಕೊಳ್ಳುವಲ್ಲಿ ಯಶಸ್ವಿ ಆಯಿತು. 19.1 ಓವರ್ನಲ್ಲಿ 140 ರನ್ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ಆಲ್ಔಟ್ ಆಯಿತು. ಈ ಮೂಲಕ ಆರ್ಸಿಬಿ 46 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಯಶ್ ದಯಾಳ್, ಗ್ರೀನ್ ತಲಾ ಒಂದೊಂದು ರನೌಟ್ ಮೂಲಕ ವಿಕೆಟ್ ಪಡೆದರು. ಆರ್ಸಿಬಿ ಪರ ಯಶ್ ದಯಾಳ್ 3, ಸಿರಾಜ್ 1, ಫರ್ಗುಸನ್ 2, ಸ್ವಪ್ನಿಲ್ ಸಿಂಗ್ 1, ಗ್ರೀನ್ 1 ವಿಕೆಟ್ ಪಡೆದು ಮಿಂಚಿದ್ರು. ಆದ್ರೆ ಇಲ್ಲಿ ಆರ್ಸಿಬಿ ಗೆಲುವಿಗೆ ಮೇನ್ ರೀಸನ್ ಡೆಲ್ಲಿ ತಂಡದ ಆಟಗಾರರ ಫೇಲ್ಯೂರ್. ರಜತ್ ಪಟೀದಾರ್ ಮತ್ತು ವಿಲ್ ಜಾಕ್ಸ್ ರ ತಲಾ ಎರಡೆರಡು ಕ್ಯಾಚ್ಗಳನ್ನ ಕೈ ಚೆಲ್ಲಿದ್ರು. ‘ ಡೆಲ್ಲಿ ಕ್ಯಾಪಿಟಲ್ಸ್ ಫೀಲ್ಡರ್ಸ್ ಬರೋಬ್ಬರಿ 4 ಕ್ಯಾಚ್ಗಳನ್ನು ಕೈಚೆಲ್ಲಿದ್ದೇ ದುಬಾರಿಯಾಯ್ತು. ಈ ಮೂಲಕ ಆರ್ಸಿಬಿ ಸತತ ಐದನೇ ಪಂದ್ಯವನ್ನ ಗೆದ್ದು ಪ್ಲೇಆಫ್ ಹೊಸ್ತಿಲಿಗೆ ಬಂದು ನೀಂತಿದೆ. ಆದ್ರೆ ಪ್ಲೇಆಫ್ ಬಾಗಿಲು ತೆರೀಬೇಕು ಅಂದ್ರೆ ಮತ್ತೊಂದು ಮ್ಯಾಜಿಕ್ ನಡೆಯಬೇಕಿದೆ. ಅದೇನು ಅನ್ನೋದನ್ನೂ ಹೇಳ್ತೇನೆ.
ಐಪಿಎಲ್ ಸೀಸನ್ 17 ರಲ್ಲಿ ಆರ್ಸಿಬಿ ತಂಡವು ಒಟ್ಟು 13 ಪಂದ್ಯಗಳನ್ನಾಡಿದೆ. ಈ ಹದಿಮೂರು ಮ್ಯಾಚ್ಗಳ ಪೈಕಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಫಾಫ್ ಪಡೆ ಇದೀಗ ಅಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಇನ್ನು ಆರ್ಸಿಬಿ ತಂಡದ ಕೊನೆಯ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್. ಮೇ 18ರಂದು ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕವಾಗಿದೆ. ಯಾಕಂದ್ರೆ ಒಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾನುವಾರದ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದಿದೆ. ಈ ಮೂಲಕ ಸಿಎಸ್ಕೆ ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದರೆ, ಆರ್ಸಿಬಿ ಕೂಡ ಡಿಸಿ ತಂಡವನ್ನ ಮಣಿಸಿ 5ನೇ ಸ್ಥಾನಕ್ಕೆ ಬಂದು ನಿಂತಿದೆ. ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿದೆ. ಹೀಗಾಗಿ ಈ ಪಂದ್ಯವು ಪ್ಲೇಆಫ್ ಹಂತಕ್ಕೇರಲು ಉಭಯ ತಂಡಗಳಿಗೆ ನಿರ್ಣಾಯಕ. ಈ ಮ್ಯಾಚ್ನಲ್ಲಿ ಆರ್ಸಿಬಿ ಗೆದ್ದರೆ ಟಾಪ್-4 ಹಂತಕ್ಕೇರಲಿದೆ. ಆದರೆ ಇದೊಂದೇ ಪಂದ್ಯದ ಗೆಲುವಿನಿಂದ ಆರ್ಸಿಬಿ ತಂಡದ ಪ್ಲೇಆಫ್ ಖಚಿತವಾಗುವುದಿಲ್ಲ. ಬದಲಾಗಿ ಅತ್ತ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕೂಡ 12 ಅಂಕಗಳೊಂದಿಗೆ ಪ್ಲೇಆಫ್ ರೇಸ್ನಲ್ಲಿದೆ. ಹೀಗಾಗಿ ಈ ತಂಡಗಳ ಫಲಿತಾಂಶ ಕೂಡ ಇಲ್ಲಿ ಮುಖ್ಯವಾಗುತ್ತದೆ. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಇನ್ನೂ 2 ಪಂದ್ಯಗಳಿವೆ. ಈ ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ ಕೆಎಲ್ ರಾಹುಲ್ ಪಡೆ 16 ಅಂಕಗಳೊಂದಿಗೆ ಪ್ಲೇಆಫ್ ಹಂತಕ್ಕೇರುವುದು ಬಹುತೇಕ ಖಚಿತ. ಹೀಗಾಗಿ ಎಲ್ಎಸ್ಜಿ ತಂಡವು ಮುಂದಿನ 2 ಪಂದ್ಯಗಳಲ್ಲೂ ಸೋಲನುಭವಿಸಬೇಕು. ಅಥವಾ ಒಂದು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಮುಂಬೈ ಇಂಡಿಯನ್ಸ್ ಜಯ ಸಾಧಿಸಬೇಕು. ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಒಂದು ಪಂದ್ಯವಿದ್ದು, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ಪಂದ್ಯದಲ್ಲಿ ರಿಷಭ್ ಪಂತ್ ಪಡೆ ಸಾಧಾರಣ ಗೆಲುವು ಸಾಧಿಸಬೇಕು. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಜಯ ಸಾಧಿಸಿದರೆ ಉತ್ತಮ ನೆಟ್ ರನ್ ರೇಟ್ನೊಂದಿಗೆ ಪ್ಲೇಆಫ್ ಪ್ರವೇಶಿಸಬಹುದು. ಇನ್ನು ಗುಜರಾತ್ ಟೈಟಾನ್ಸ್ ತಂಡವು 12 ಪಂದ್ಯಗಳಿಂದ ಒಟ್ಟು 10 ಅಂಕಗಳನ್ನು ಕಲೆಹಾಕಿದೆ. ಮುಂದಿನ 2 ಮ್ಯಾಚ್ಗಳಲ್ಲಿ ಗುಜರಾತ್ ತಂಡವು ಅಮೋಘ ಗೆಲುವು ಸಾಧಿಸಿದರೆ 14 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಹೊಂದಿದೆ. ಹೀಗಾಗಿ ಜಿಟಿ ತಂಡದ ಒಂದು ಸೋಲು ಆರ್ಸಿಬಿಗೆ ಪ್ಲಸ್ ಆಗಲಿದೆ.
ಸದ್ಯ ಡೆಲ್ಲಿ ವಿರುದ್ಧದ ಪಂದ್ಯದ ಮೂಲಕ ಆರ್ಸಿಬಿ ಮುಂದಿನ ಪಂದ್ಯದಲ್ಲೂ ಗೆಲ್ಲೂ ವಿಶ್ವಾಸದಲ್ಲಿದೆ. ಭಾನುವಾರದ ಪಂದ್ಯದ ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಫಾಫ್ ಡುಪ್ಲೆಸಿಸ್, ನಾವು ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದೇವೆ, ನಿಜವಾಗಿಯೂ ಸಂತೋಷವಾಗುತ್ತಿದೆ. ಈ ಋತುವಿನ ಮೊದಲಾರ್ಧದಲ್ಲಿ ನಾವು ಬ್ಯಾಟಿಂಗ್ ದೃಷ್ಟಿಕೋನದಿಂದ ಮತ್ತು ಬೌಲಿಂಗ್ನಲ್ಲಿ ಅಂದುಕೊಂಡಂತೆ ಸಾಗಲಿಲ್ಲ. ಆದರೀಗ ನಾವು ಎರಡೂ ವಿಭಾಗಗಳಲ್ಲಿ ಫಾರ್ಮ್ ಕಂಡುಕೊಂಡು ಉತ್ತಮವಾಗಿ ಆಟವಾಡುತ್ತಿದ್ದೇವೆ ಎಂದಿದ್ದಾರೆ. ಹಾಗೇ ಮುಂದಿನ ಪಂದ್ಯವನ್ನೂ ಗೆಲ್ಲೋ ಭರವಸೆಯಲ್ಲಿದ್ದಾರೆ. ಸದ್ಯದ ಮಟ್ಟಿಗೆ ಆರ್ಸಿಬಿ ಫಾರ್ಮ್ ನೋಡಿದ್ರೆ ಮುಂದಿನ ಮ್ಯಾಚ್ನಲ್ಲಿ ಸಿಎಸ್ಕೆ ವಿರುದ್ಧ ಗೆದ್ದು ಕಳೆದ ಪಂದ್ಯದ ಸೋಲಿನ ಸೇಡನ್ನ ತೀರಿಸಿಕೊಳ್ಳಬಹುದು. ಆದ್ರೆ ಇದೊಂದೇ ಗೆಲುವು ಆರ್ಸಿಬಿಯನ್ನ ಟಾಪ್ 4ಗೆ ಕೊಂಡೊಯ್ಯಲ್ಲ. ಬೇರೆ ತಂಡಗಳ ಸೋಲೂ ನೆರವಾಗಬೇಕು. ಒಟ್ಟಾರೆ ಐಪಿಎಲ್ ಸೀಸನ್ 17 ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು ಟಾಪ್ 7 ರೇಸ್ ಜೋರಾಗಿದೆ. ಫೈನಲಿ ಯಾವ ತಂಡಗಳು ರೇಸ್ನಲ್ಲಿ ಉಳಿಯಲಿವೆ.