RCBಯಲ್ಲಿ ಬೆಂಕಿ ಬ್ಯಾಟಿಂಗ್ – 200+ ಟಾರ್ಗೆಟ್ ಲೆಕ್ಕಕ್ಕೇ ಇಲ್ವಾ?
ಪವರ್ ಪ್ಲೇನಲ್ಲೇ ಮಂಕಾದ ಬೌಲರ್ಸ್

RCBಯಲ್ಲಿ ಬೆಂಕಿ ಬ್ಯಾಟಿಂಗ್ – 200+ ಟಾರ್ಗೆಟ್ ಲೆಕ್ಕಕ್ಕೇ ಇಲ್ವಾ?ಪವರ್ ಪ್ಲೇನಲ್ಲೇ ಮಂಕಾದ ಬೌಲರ್ಸ್

19ನೇ ಆವೃತ್ತಿಯ ಐಪಿಎಲ್​ ಅದ್ಧೂರಿಯಾಗೇ ಸ್ಟಾರ್ಟ್ ಆಗಿ ಈಗ ಆಲ್ರೆಡಿ 20 ಮ್ಯಾಚಸ್ ಕಂಪ್ಲೀಟ್ ಆಗಿವೆ. ಒಂದೊಂದು ತಂಡಗಳು ನಾಲ್ಕು ನಾಲ್ಕು ಪಂದ್ಯಗಳನ್ನ ಆಡಿವೆ. ಇಂಟ್ರೆಸ್ಟಿಂಗ್ ಅಂದ್ರೆ ನಾಲ್ಕು ಪಂದ್ಯಗಳನ್ನ ಆಡಿದ್ರೂ ಸೋಲನ್ನೇ ಕಾಣದೆ ಇರೋ ತಂಡಗಳೂ ಇವೆ. ಗೆಲುವಿನ ಖಾತೆಯನ್ನೇ ತೆರೆಯದ ಟೀಮ್​ ಕೂಡ ಇದೆ. ಬಟ್ ಇಷ್ಟು ಪಂದ್ಯಗಳಲ್ಲಿ ಒಂದಂತು ಕ್ಲಿಯರ್ ಆಗಿದೆ. ಅದೇನಂದ್ರೆ ಬ್ಯಾಟರ್​ಗಳು ಡಾಮಿನೇಷನ್ ಮಾಡ್ತಿದ್ದಾರೆ ಅನ್ನೋದು. ಬ್ಯಾಟರ್ಸ್ ಫ್ರೆಂಡ್ಲಿ ಪಿಚ್​ನಲ್ಲಿ 200+ ರನ್ಸ್​ಗಳ ಟಾರ್ಗೆಟ್ ಟಾರ್ಗೆಟ್ಟೇ ಅಲ್ಲ ಅನ್ಸೋಕೆ ಶುರುವಾಗಿದೆ.

ಇದನ್ನೂ ಓದಿ : ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ರಿಷಭ್‌ ಪಂತ್‌ ಅತ್ಯಂತ ಕೆಟ್ಟ ಬ್ಯಾಟ್ಸ್‌ಮನ್‌ – ಲಕ್ನೋ ನಾಯಕ ಪಂತ್ ಹಿಗ್ಗಾಮುಗ್ಗಾ ಟ್ರೋಲ್

ಟಿ-20 ಫಾರ್ಮೆಟ್​​ನಲ್ಲಿ ಬ್ಯಾಟರ್​ಗಳದ್ದೇ ಕಾರುಬಾರು. ಅದ್ರಲ್ಲೂ ಐಪಿಎಲ್​ನಲ್ಲಂತೂ ಬೌಲರ್​ಗಳನ್ನ ಹಿಗ್ಗಾಮುಗ್ಗಾ ಜಾಡಿಸ್ತಿದ್ದಾರೆ. ವರ್ಲ್ಡ್ ಕ್ಲಾಸ್ ಬೌಲರ್​ಗಳು ಕೂಡ ಥಂಡಾ ಹೊಡೆದಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಈ ಸೀಸನ್​ನಲ್ಲಿ ಪವರ್‌ಪ್ಲೇ ರನ್-ರೇಟ್ ಪ್ರತಿ ಓವರ್‌ಗೆ 10.47 ರನ್‌ಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಲಾಸ್ಟ್ ಸೀಸನಲ್ಲಿ ಪ್ರತಿ ಓವರ್‌ಗೆ 9.61 ಆಗಿತ್ತು. ಬಟ್ ಈ ವರ್ಷ ದಾಖಲೆ ಬರೆದಿದೆ. 2020 ಮತ್ತು 2021 ರ ಸೀಸನ್‌ಗಳಲ್ಲಿ ಈ ರೇಟ್ 7.71 ಇತ್ತು. ಬಟ್ ಈಗ 10ನ್ನೂ ಕ್ರಾಸ್ ಆಗಿ ಮುನ್ನುಗ್ತಿದೆ. ಪಿಚ್​ಗಳನ್ನು ಬ್ಯಾಟರ್ಸ್ ಫ್ರೆಂಡ್ಲಿಯಾಗಿ ಮಾಡ್ತಾ ಇರೋದೇ ಮುಖ್ಯ ಕಾರಣ. ಈ ಸೀಸನ್​ನಲ್ಲಿ ಆಲ್ರೆಡಿ 200+ ರನ್​ಗಳ ಪರ್ವ ನಡೀತಿದೆ.

20 ಮ್ಯಾಚ್.. 11 ಪಂದ್ಯಗಳಲ್ಲಿ 200+ ರನ್ಸ್!

ಪ್ರಸ್ತುತ ಸೀಸನ್​ನಲ್ಲಿ ಈವರೆಗೆ 20 ಪಂದ್ಯಗಳು ಕಂಪ್ಲೀಟ್ ಆಗಿವೆ. ಌಂಡ್ ಎಲ್ಲಾ ತಂಡಗಳು ತಲಾ ನಾಲ್ಕು ನಾಲ್ಕು ಪಂದ್ಯಗಳನ್ನ ಆಡಿವೆ. ರಾಜಸ್ಥಾನ ರಾಯಲ್ಸ್ ಒಂದೂ ಪಂದ್ಯ ಸೋಲದೆ ಟಾಪ್​ನಲ್ಲಿದೆ. ಪಂಜಾಬ್ ತಂಡ ಕೂಡ ಸೋತಿಲ್ಲ. ಕೆಕೆಆರ್ ವಿರುದ್ಧದ ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಅತ್ತ ಕೆಕೆಆರ್ ಟೀಂ ಇನ್ನೂ ಒಂದು ಪಂದ್ಯವನ್ನೂ ಗೆಲ್ಲೋಕೆ ಸಾಧ್ಯವಾಗಿಲ್ಲ. ಪಂದ್ಯ ರದ್ದಾಗಿ ಒಂದು ಅಂಕ ಸಿಕ್ಕಿದ್ದಷ್ಟೇ. ಇಂಟ್ರೆಸ್ಟಿಂಗ್ ಅಂದ್ರೆ ಈ 20 ಪಂದ್ಯಗಳ ವೇಳೆಗೆ ಐಪಿಎಲ್​ನಲ್ಲಿ ಬ್ಯಾಟರ್ಸ್ ಡಾಮಿನೇಷನ್ ನಡೀತಾ ಇರೋದು ಗೊತ್ತಾಗ್ತಿದೆ. ಯಾಕಂದ್ರೆ ಐಪಿಎಲ್​ನ ಮೊದಲ 20 ಪಂದ್ಯಗಳು ಮುಗಿದಿದ್ದು ಇದ್ರಲ್ಲಿ ಪಂಜಾಬ್ ಮತ್ತು ಕೊಲ್ಕತ್ತಾ ನಡುವಿನ ಒಂದು ಪಂದ್ಯ ಮಳೆ ಕಾರಣಕ್ಕೆ ರದ್ದಾಗಿದೆ. ಹಾಗೇ ಮುಂಬೈ ಮತ್ತು ರಾಜಸ್ಥಾನ ಪಂದ್ಯ ಮಳೆ ಕಾರಣದಿಂದಲೇ 11 ಓವರ್​ಗಳಿಗೆ ಪಂದ್ಯ ಸೀಮಿತಗೊಳಿಸಿ ಆಡಿಸಲಾಗಿತ್ತು. ಸೋ ಈ 2 ಪಂದ್ಯಗಳನ್ನ ಹೊರತುಪಡಿಸಿದ್ರೆ ಉಳಿದ 18 ಮ್ಯಾಚ್​ಗಳಲ್ಲಿ 11 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 200 ಪ್ಲಸ್ ರನ್ಸ್​ಗಳನ್ನ ಸ್ಕೋರ್ ಮಾಡಿದ್ದಾರೆ. ಅಂದ್ರೆ 200ಕ್ಕಿಂತ ಹೆಚ್ಚಿನ ಸ್ಕೋರ್ ಸೆಟ್ ಮಾಡಿದ್ದಾರೆ. ಹಾಗೇ ಐದು ತಂಡಗಳು ಆ ಟಾರ್ಗೆಟ್​ನ ಯಶಸ್ವಿಯಾಗಿ ಚೇಸ್ ಕೂಡ ಮಾಡಿದ್ದಾರೆ. ಅಂದ್ರೆ ಇಲ್ಲಿ 200+ ರನ್ಸ್ ಕೊಟ್ರೂ ಅದನ್ನ ಡಿಫೆನ್ಸ್ ಮಾಡಿಕೊಳ್ಳೋಕೆ ಆಗ್ತಾ ಇಲ್ಲ ಅನ್ನೋದು ಕ್ಲಿಯರ್ ಆಗಿ ಗೊತ್ಥಾಗ್ತಿದೆ.

ಬ್ಯಾಟರ್ ಗಳ ಆರ್ಭಟ!

ತಂಡ                             200+ ರನ್ಸ್ ( ಫಸ್ಟ್ ಬ್ಯಾಟಿಂಗ್)             ಫಲಿತಾಂಶ

ಬೆಂಗಳೂರು                              3 ಬಾರಿ                              2 ಗೆಲುವು

ಹೈದ್ರಾಬಾದ್                             3 ಬಾರಿ                              1 ಗೆಲುವು

ಚೆನ್ನೈ                                     2 ಬಾರಿ                              1 ಗೆಲುವು

ಕೊಲ್ಕತ್ತಾ                                1 ಬಾರಿ                               ಸೋಲು

ರಾಜಸ್ಥಾನ ರಾಯಲ್ಸ್             1 ಬಾರಿ                               ಗೆಲುವು

ಗುಜರಾತ್                               1 ಬಾರಿ                                ಗೆಲುವು

ಸೋ ಈ ನಂಬರ್ಸ್ ನೋಡಿದಾಗ್ಲೇ ಗೊತ್ತಾಗುತ್ತೆ ಪಿಚ್​ಗಳು ಎಷ್ಟು ಬ್ಯಾಟಿಂಗ್ ಫ್ರೆಂಡ್ಲಿ ಆಗಿವೆ. ಜೊತೆಗೆ ಬ್ಯಾಟರ್​ಗಳು ಅದೆಷ್ಟು ಅಗ್ರೆಸ್ಸಿವ್ ಮೋಡ್​ನಲ್ಲಿ ಬ್ಯಾಟಿಂಗ್ ಮಾಡ್ತಾ ಇದ್ದಾರೆ ಅನ್ನೋದು. ಅಲ್ದೇ ಈ ಸೀಸನ್​ನಲ್ಲಿ ಸದ್ಯಕ್ಕೆ ಹೈಯೆಸ್ಟ್ ರನ್ ಚೇಸ್ ಅಂದ್ರೆ ಕೆಕೆಆರ್ ಕಲೆ ಹಾಕಿದ್ದ 220 ರನ್​ಗಳ ಟಾರ್ಗೆಟ್​ ಅನ್ನು ಮುಂಬೈ ಇಂಡಿಯನ್ಸ್ ತಂಡ ಯಶಸ್ವಿಯಾಗಿ ಚೇಸ್ ಮಾಡಿತ್ತು. ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಟಾರ್ಗೆಟ್ ರೀಚ್ ಆಗಿತ್ತು. ಮತ್ತೊಂದೆಡೆ ಈ ಸೀಸನ್​ನಲ್ಲಿ ಈವರೆಗೆ ಯಾವುದೇ ಟೀಂ ಮಾಡದೇ ಇರೋ ಸಾಧನೆಯನ್ನ ಆರ್​ಸಿಬಿ ಮಾಡಿದೆ. ಅದೇನಂದ್ರೆ ಆಡಿರುವಂಥ ನಾಲ್ಕಕ್ಕೆ ನಾಲ್ಕೂ ಮ್ಯಾಚ್​ಗಳಲ್ಲೂ 200+ ರನ್ಸ್ ಹೊಡೆದ್ದಾರೆ. ಅದು ಬ್ಯಾಟಿಂಗ್ ಇರ್ಲಿ ಚೇಸಿಂಗ್ ಇರ್ಲಿ ಆರ್​ಸಿಬಿ ಬ್ಯಾಟರ್​ಗಳ ಕಡೆಯಿಂದ 200 ಪ್ಲಸ್ ರನ್ಸ್ ಅಂತೂ ಬಂದಿದೆ. ಈ ಸೀಸನ್​ನಲ್ಲಿ ಆರ್​ಸಿಬಿ ಸ್ಕೋರ್ ಯಾವ್ಯಾವ ಮ್ಯಾಚ್​ಗಳಲ್ಲಿ ಹೇಗಿದೆ ಅನ್ನೋದನ್ನ ನೋಡೋಣ.

ಆರ್ ಸಿಬಿ ಬ್ಯಾಟಿಂಗ್ ಧಮಾಕ!

ಎದುರಾಳಿ                             ರನ್ಸ್                          ಫಲಿತಾಂಶ

ಹೈದರಾಬಾದ್                         203/4(15.4)                ಗೆಲುವು

ಚೆನ್ನೈ                                  250/3(20)                  ಗೆಲುವು

ರಾಜಸ್ಥಾನ                             201/8(20)                   ಸೋಲು

ಮುಂಬೈ                               240/4(20)                   ಗೆಲುವು

ಇಲ್ಲಿ ಆರ್​ಸಿಬಿ ನಾಲ್ಕು ಪಂದ್ಯಗಳ ಪೈಕಿ ಮೂರು ಮ್ಯಾಚ್​ಗಳಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿ 200 ಪ್ಲಸ್ ಟಾರ್ಗೆಟ್ ಸೆಟ್ ಮಾಡಿದೆ. ಅದ್ರಲ್ಲೂ ಈ ಸೀಸನ್​ನ ಟಾಪ್ 2 ಹೈಯೆಸ್ಟ್ ಸ್ಕೋರ್ ಆರ್​ಸಿಬಿಯದ್ದೇ ಆಗಿದೆ. ಮೊದಲ ಟಾರ್ಗೆಟ್ ಚೆನ್ನೈ ವಿರುದ್ಧ 250 ರನ್ಸ್ ಹಾಗೇ ಮುಂಬೈ ವಿರುದ್ಧ 240 ರನ್ಸ್. ಇದು ಕೂಡ ದಾಖಲೆಯಾಗಿದೆ. ಌಂಡ್ ಎರಡೂ ಪಂದ್ಯಗಳನ್ನ ಗೆದ್ದಿದೆ ಕೂಡ.

Shantha Kumari