ಕೊಹ್ಲಿ ಆಡ್ತಿಲ್ಲ.. ಸಾಲ್ಟ್ ಸಿಡೀತಿಲ್ಲ.. ಹ್ಯಾಜಲ್ ವುಡ್ ಇಂಜುರಿ – ಐಪಿಎಲ್ ಗೂ ಮುನ್ನವೇ ಆರ್ ಸಿಬಿಗೆ ಶಾಕ್
ಸತತ 17 ಸೀಸನ್ಗಳಿಂದಲೂ ಟ್ರೋಫಿಯನ್ನ ಮಿಸ್ ಮಾಡಿಕೊಂಡಿರೋ ಬೆಂಗಳೂರು ತಂಡಕ್ಕೆ 18ನೇ ಸೀಸನ್ ತುಂಬಾನೇ ಇಂಪಾರ್ಟೆಂಟ್. ಫ್ರಾಂಚೈಸಿಗೋಸ್ಕರ ಅಲ್ಲದೇ ಇದ್ರೂ ಫ್ಯಾನ್ಸ್ಗೋಸ್ಕರನಾದ್ರೂ ಟ್ರೋಫಿ ಗೆಲ್ಲಲೇಬೇಕಿದೆ. ಇದೇ ಕಾರಣಕ್ಕೋ ಏನೋ ಕಳೆದ ನವೆಂಬರ್ನಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಅಚ್ಚರಿಯ ಆಟಗಾರರನ್ನೇ ಆಯ್ಕೆ ಮಾಡಿದೆ. ಆರಂಭದಲ್ಲಿ ಟೀಂ ಸೂಪರ್ ಅನ್ನಿಸಿದ್ರೂ ಕೂಡ ಈಗ ಅದೇ ಆಟಗಾರರ ಪ್ರದರ್ಶನ ಮತ್ತು ಗಾಯದ ಸಮಸ್ಯೆ ಹಲವು ಪ್ರಶ್ನೆಗಳನ್ನ ಮೂಡಿಸಿದೆ. ಅದ್ರಲ್ಲೂ ಈ ಆಟಗಾರರೇ ಮೇನ್ ಟಾರ್ಗೆಟ್ ಆಗಿದ್ದಾರೆ.
ಇದನ್ನೂ ಓದಿ : ದೇವರ ಮುಡಿಗೆ ಜೀವಮಾನ ಸಾಧನೆ ಗರಿ – ಸಚಿನ್ ತೆಂಡೂಲ್ಕರ್ ಜರ್ನಿಯೇ ರೋಚಕ
ಮೆಗಾ ಹರಾಜಿನಲ್ಲಿ ಆರ್ ಸಿಬಿ ಫ್ರಾಂಚೈಸಿ ಮೂವರು ಇಂಗ್ಲೆಂಡ್ ಆಟಗಾರರನ್ನ ಖರೀದಿ ಮಾಡಿದೆ. ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಾಕೋಬ್ ಬೆಥೆಲ್. ಇವ್ರೆಲ್ಲಾ ಸ್ಟಾರ್-ಸ್ಟಡ್ಡ್ ಇಂಗ್ಲಿಷ್ ಪ್ಲೇಯರ್ಸ್. ಇವ್ರೇ ಗೇಮ್ ಚೇಂಜರ್ಸ್ ಎಂದೆಲ್ಲಾ ಅನ್ಕೊಂಡಿದ್ರು. ಬಟ್ ಈ ಆಟಗಾರರು ಕಳಪೆ ಫಾರ್ಮ್ನಲ್ಲಿರೋದೇ ಫ್ರಾಂಚೈಸಿ ಮಾಲೀಕರಿಗೆ ಟೆನ್ಷನ್ ತಂದಿದೆ. ಅದ್ರಲ್ಲೂ ವಿರಾಟ್ ಕೊಹ್ಲಿಯೊಂದಿಗೆ ಓಪನರ್ ಆಗಿ ಆಡುವ ಸಾಧ್ಯತೆ ಇರುವ ಫಿಲ್ ಸಾಲ್ಟ್ ಇಂಗ್ಲೆಂಡ್ ವಿರುದ್ಧದ ಮೊದಲ ಮೂರು T20Iಗಳಲ್ಲಿ ರನ್ ಗಳಿಸಲು ಪರದಾಡಿದ್ದಾರೆ. ಮೊದಲ ಟಿ-20ಐನಲ್ಲಿ ಡಕ್ ಔಟ್ ಆಗಿದ್ದ ಸಾಲ್ಟ್ ಎರಡನೇ ಪಂದ್ಯದಲ್ಲಿ 4 ರನ್ ಹಾಗೇ ಮೂರನೇ ಪಂದ್ಯದಲ್ಲಿ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಇನ್ನು ಲಿಯಾಮ್ ಲಿವಿಂಗ್‌ಸ್ಟೋನ್ ಭಾರತದ ವಿರುದ್ಧದ ಮೊದಲ ಪಂದ್ಯದಲ್ಲಿ ಶೂನ್ಯ ಸುತ್ತಿದ್ರೆ 2ನೇ ಪಂದ್ಯದಲ್ಲಿ 13 ರನ್ ಗಳಿಸಿದ್ರು. ಬಟ್ ಮೂರನೇ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿ 43 ರನ್ ಬಾರಿಸಿದ್ರು. ಇನ್ನು ಜಾಕೋಬ್ ಬೆತೆಲ್ ವಿಚಾರಕ್ಕೆ ಬರೋದಲ್ಲಿ ಭಾರತದ ವಿರುದ್ಧ ಮೊದಲ ಪಂದ್ಯಕ್ಕಷ್ಟೇ ಚಾನ್ಸ್ ಪಡೆದಿದ್ರು. 7 ರನ್ ಗಳಿಸಿ ಔಟಾಗಿದ್ರು. ಇವ್ರೆಲ್ಲಾ ಭಾರತದ ವಿರುದ್ಧದ ಪಂದ್ಯದಲ್ಲಿ ಫ್ಲ್ಯಾಪ್ ಶೋ ತೋರಿಸಿರೋದು ಖುಷಿ ವಿಚಾರನೇ. ಆದ್ರೆ ರನ್ ಗಳಿಸದೇ ಇರೋ ಆರ್ ಸಿಬಿ ಫ್ರಾಂಚೈಸಿಗೆ ತಲೆ ನೋವಾಗಿದೆ ಅಷ್ಟೇ.
ಆರ್‌ಸಿಬಿಗೆ ಕಳವಳಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಫಾರ್ಮ್. 2024 ರ ಐಪಿಎಲ್ನಲ್ಲಿ ಹೈಯೆಸ್ಟ್ ಸ್ಕೋರರ್ ಆಗಿದ್ರೂ ಕೂಡ ಆನಂತರದ ಪಂದ್ಯಗಳಲ್ಲಿ ಚೆನ್ನಾಗಿ ಆಡಿಲ್ಲ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಒಂದು ಶತಕ ಬಿಟ್ರೆ ಉಳಿದೆಲ್ಲಾ ಮ್ಯಾಚ್ಗಳಲ್ಲೂ ರನ್ ಗಳಿಸೋಕೆ ಪರದಾಡಿದ್ರು. ಅಲ್ದೇ ರಣಜಿಗೆ ಕಮ್ ಬ್ಯಾಕ್ ಮಾಡಿದ್ರೂ ಅಲ್ಲೂ 6 ರನ್ ಗಳಿಸಿ ನಿರಾಸೆ ಮೂಡಿಸಿದ್ರು. ಹೀಗಾಗಿ ಈ ವರ್ಷ ವಿರಾಟ್ ಏನ್ ಮಾಡ್ತಾರೆ ಅನ್ನೋದೂ ಕೂಡ ಚರ್ಚೆಗೆ ಕಾರಣವಾಗಿದೆ.
ಇನ್ನು ಇದೆಲ್ಲದ್ರ ನಡುವೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಜೋಶ್ ಹೇಜಲ್‌ವುಡ್ ಗಾಯಗೊಂಡಿದ್ದಾರೆ. 2023 ರ ಆವೃತ್ತಿಯಲ್ಲಿ ಆರ್ಸಿಬಿ ಪರ ಆಡಿದ್ದ ಹೇಜಲ್‌ವುಡ್ 2 ಕೋಟಿ ಮೂಲ ಬೆಲೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಅಂತಿಮವಾಗಿ ಅವರನ್ನು ಆರ್ಸಿಬಿ 12.50 ಕೋಟಿಗೆ ಖರೀದಿ ಮಾಡಿತ್ತು ದುಬಾರಿ ಮೊತ್ತದ ಈ ಆಟಗಾರ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಾಲಿನ ಗಾಯಕ್ಕೆ ತುತ್ತಾಗಿದ್ರು. ಕೊನೆಯ ಎರಡು ಟೆಸ್ಟ್‌ಗಳಿಂದ ಹೊರಗುಳಿದಿದ್ದರು. ಇದೀಗ 2025ರ ಐಪಿಎಲ್ ವೇಳೆಗೆ ಫಿಟ್ ಆಗ್ತಾರೋ ಇಲ್ವೋ ಅನ್ನೋ ಅನುಮಾನಗಳು ಮೂಡಿವೆ. ಹ್ಯಾಜಲ್‌ವುಡ್ ಅವರ ಬೌಲಿಂಗ್ ದಾಳಿಯನ್ನು ಮುನ್ನಡೆಸುವ ನಿರೀಕ್ಷೆಯಿತ್ತು.