ಆರ್ ಸಿಬಿಗೆ ಮುಂದಿನ ಪಂದ್ಯ ಚಿನ್ನಸ್ವಾಮಿಯಲ್ಲಿ – ಮತ್ತೆ ಕಾಡುತ್ತಾ ಹೋಂ ಫಿಚ್ ಭಯ?

ಆರ್ ಸಿಬಿಗೆ ಮುಂದಿನ ಪಂದ್ಯ ಚಿನ್ನಸ್ವಾಮಿಯಲ್ಲಿ – ಮತ್ತೆ ಕಾಡುತ್ತಾ ಹೋಂ ಫಿಚ್ ಭಯ?

ಏಪ್ರಿಲ್ 18ರಂದು ಬೆಂಗಳೂರಿನಲ್ಲಿ ಪಂಜಾಬ್ ವಿರುದ್ಧ ಸೋತಿದ್ದ ಆರ್​ಸಿಬಿ ಈಗ ಅದೇ ಪಂಜಾಬ್​ ವಿರುದ್ಧ ಪಂಜಾಬ್​ನಲ್ಲೇ ಸೇಡು ತೀರಿಸಿಕೊಂಡಿದೆ. 40 ಗಂಟೆಗಳ ಒಳಗೇ ಪಿಬಿಕೆಎಸ್​​ಗೆ ತಿರುಗೇಟು ಕೊಟ್ಟಿದೆ. ಮುಲ್ಲನ್‌ಪುರದ ಮಹಾರಾಜ ಯದ್ವಿಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 37ನೇ ಪಂದ್ಯದಲ್ಲಿ ರಜತ್ ಪಡೆ, ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ 157 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಇನ್ನು 7 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.

ಇದನ್ನೂ ಓದಿ : ಚಿನ್ನಸ್ವಾಮಿ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ವಿಚಾರ – ಬೆಂಗಳೂರಿನ ಮೈದಾನದಲ್ಲಿ ಅದೆಷ್ಟು ದಾಖಲೆಗಳು?

ಪಂಜಾಬ್ ಪರ ಪ್ರಭ್ ಸಿಮ್ರಾನ್ ಸಿಂಗ್ 33 ರನ್ ಗಳಿಸಿದ್ದು ಬಿಟ್ರೆ ಉಳಿದವ್ರೆಲ್ಲಾ ಬಹುಬೇಗನೇ ವಿಕೆಟ್ ಒಪ್ಪಿಸಿದ್ರು. ಹೀಗಾಗಿ ಪಂಜಾಬ್​ಗೆ ಉತ್ತಮ ಸ್ಕೋರ್ ಕಲೆಹಾಕೋಕೆ ಸಾಧ್ಯವಾಗ್ಲಿಲ್ಲ. ಬೌಲಿಂಗ್​ನಲ್ಲಿ ಪಂಜಾಬ್ ತಂಡವನ್ನ ಕಟ್ಟಿಹಾಕಿದ ಆರ್​ಸಿಬಿ 158 ರನ್‌ಗಳ ಗುರಿ ಬೆನ್ನಟ್ಟಿತ್ತು. ಬಟ್ ಆರಂಭದಲ್ಲೇ ಆಘಾತ ಎದುರಾಗಿತ್ತು. ಫಿಲ್ ಸಾಲ್ಟ್ 1 ರನ್ ಬಾರಿಸಿ ವಿಕೆಟ್ ಕಳ್ಕೊಂಡ್ರು. ಬಟ್ ಆ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ 100 ರನ್​ಗಳ ಜೊತೆಯಾಟವಾಡಿದ್ರು.. ಇಬ್ಬರೂ ಅರ್ಧಶತಕ ಸಿಡಿಸಿದ್ರು.  ದೇವದತ್ ಪಡಿಕ್ಕಲ್ 35 ಎಸೆತಗಳಲ್ಲಿ 174.28 ಸ್ಟ್ರೈಕ್ ರೇಟ್‌ನಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 61 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ ಅಜೇಯ 73 ರನ್ ಗಳಿಸಿದ್ರು.  ಅಲ್ದೇ ಪಡಿಕ್ಕಲ್​ಗೂ ಕೂಡ ಇಂಥಾದ್ದೊಂದು ಕಮ್ ಬ್ಯಾಕ್ ಬೇಕಿತ್ತು. ಯಾಕಂದ್ರೆ ಈ ಸೀಸನ್​ನಲ್ಲಿ ಪಡಿಕ್ಕಲ್ ಬ್ಯಾಟಿಂಗ್ ಯಾವುದೇ ದೊಡ್ಡ ಇನ್ನಿಂಗ್ಸ್ ಬಂದಿರ್ಲಿಲ್ಲ. ಪಂಜಾಬ್ ವಿರುದ್ಧದ ಮ್ಯಾಚಲ್ಲಿ ಬೆಂಗಳೂರಲ್ಲಿ ಪ್ಲೇಯಿಂಗ್ 11ನಿಂದ ಡ್ರಾಪ್ ಮಾಡ್ಲಾಗಿತ್ತು. ಹೀಗಾಗಿ ಮುಂದಿನ ಪಂದ್ಯಗಳಿಗೆ ಚಾನ್ಸ್ ಸಿಗ್ಬೇಕು ಅಂದ್ರೆ ಇಂಥಾದ್ದೊಂದು ಇನ್ನಿಂಗ್ಸ್​​ನ ಅಗತ್ಯ ಇದ್ದೇ ಇತ್ತು.

ನಿನ್ನೆ ಮ್ಯಾಚಲ್ಲಿ ಮತ್ತೊಂದು ಹೈಲೆಟ್ ಆಗಿದ್ದು ಅಂದ್ರೆ ಒಂದೇ ಎಸೆತದಲ್ಲಿ 4 ರನ್ ಓಡಿದ್ದು. 3ನೇ ಓವರ್ ನ ಕೊನೇ ಬಾಲ್​ನಲ್ಲಿ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ನಾಲ್ಕು ರನ್ ಓಡಿದ್ರು. ಹಾಗಂತ ಇಲ್ಲೇನು ಯಾವ್ದೇ ಮಿಸ್ ಫೀಲ್ಡ್ ಆಗಿರಲಿಲ್ಲ. ಆರ್ಶ್ ದೀಪ್ ಸಿಂಗ್ ಎಸೆದ ಲೆಂಗ್ತ್ ಡೆಲಿವರಿಯನ್ನು ದೇವದತ್ ಪಡಿಕ್ಕಲ್ ಡೀಪ್ ಮಿಡ್ ವಿಕೆಟ್ ನತ್ತ ಭಾರಿಸಿದರು. ಈ ವೇಳೆ ಫೈನ್ ನಲ್ಲಿ ಫೀಲ್ಡಿಂಗ್ ಮಾಡ್ತಿದ್ದ ನೇಹಲ್ ವದೇರಾ ಬಾಲ್ ಬೌಂಡರಿ ಲೈನ್ ದಾಟದಂತೆ ತಡೆದ್ರು. ಅತ್ತ ಕ್ರೀಸ್ ನಲ್ಲಿದ್ದ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ನೋಡ ನೋಡುತ್ತಲೇ 4 ರನ್ ಓಡಿದ್ರು. 36 ವರ್ಷದ ಕೊಹ್ಲಿ ಫಿಟ್​ನೆಸ್​​ಗೆ ಫ್ಯಾನ್ಸ್ ಶಹಬ್ಬಾಸ್ ಹೇಳ್ತಿದ್ದಾರೆ.

ಪಂಜಾಬ್ ವಿರುದ್ಧ ಆರ್ ಸಿಬಿ ಗೆದ್ದಮೇಲೆ ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ಗೆ ಕಿಚಾಯಿಸೋ ರೀತಿ ಸೆಲೆಬ್ರೇಟ್ ಮಾಡಿದ್ರು. ಇದು ಶ್ರೇಯಸ್ ಅಯ್ಯರ್ ಅವರ ಸೌಂಡ್ ಸೆಲೆಬ್ರೇಷನ್​ಗೆ ರಿಯಾಕ್ಷನ್ ಎಂದು ತುಂಬಾ ಜನ ಪೋಸ್ಟ್ ಮಾಡ್ತಿದ್ದಾರೆ.  ಬಟ್ ಸತ್ಯ ಏನಂದ್ರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ವಿರುದ್ಧ ಗೆದ್ದ ಬಳಿಕ ಶ್ರೇಯಸ್ ಅಯ್ಯರ್ ಕಿವಿ ಕಡೆ ಕೈಯಿಟ್ಟು ಸೌಂಡ್ ಕೇಳಿಸ್ತಿಲ್ಲ ಅಂತಾ  ಸನ್ನೆ ಮಾಡಿರಲಿಲ್ಲ. ಬದಲಾಗಿ ಮುಲ್ಲನ್​ಪುರ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದ ಬಳಿಕ ಶ್ರೇಯಸ್ ಅಯ್ಯರ್ ಮಾಡಿದ ಸನ್ನೆಯನ್ನೇ ಎಡಿಟ್ ಮಾಡಿ ವೈರಲ್ ಮಾಡಲಾಗಿತ್ತು. ಕೆಕೆಆರ್ ವಿರುದ್ಧ 111 ರನ್​ಗಳನ್ನ ಡಿಫೆನ್ಸ್ ಮಾಡಿಕೊಂಡ ಬಳಿಕ ಪಂಜಾಬ್ ಕಿಂಗ್ಸ್ ಅಭಿಮಾನಿಗಳಿಗೆ ಸೌಂಡ್​ ಕೇಳಿಸುತ್ತಿಲ್ಲ. ಮತ್ತಷ್ಟು ಜೋರಾಗಿ ಕೂಗಿ ಎಂದಷ್ಟೇ ಸನ್ನೆ ಮಾಡಿದ್ದರು. ಈ ವಿಡಿಯೋವನ್ನು ಎಡಿಟ್ ಮಾಡಿ, ಬೆಂಗಳೂರಿನಲ್ಲಿ ಆರ್​ಸಿಬಿ ಅಭಿಮಾನಿಗಳನ್ನು ಶ್ರೇಯಸ್ ಅಯ್ಯರ್ ಕಿಚಾಯಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಇದೇ ನಿಜ ಅನ್ಕೊಂಡಿರೋ ಫ್ಯಾನ್ಸ್ ಶ್ರೇಯಸ್ ಅಯ್ಯರ್ ವರ್ತನೆಗೆ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ ಎನ್ನುತ್ತಿದ್ದಾರೆ. ಬಟ್ ಇದು ಸುಳ್ಳು.

ಸದ್ಯ ಟೂರ್ನಿಯಲ್ಲಿ ಇದುವರೆಗೆ 8 ಪಂದ್ಯಗಳನ್ನು ಆಡಿರುವ ಆರ್​ಸಿಬಿ ಐದು ಮ್ಯಾಚ್​ಗಳನ್ನ ಗೆದ್ದಿದೆ. ಮೂರು ಮ್ಯಾಚ್ ಸೋತಿದೆ. ಪಾಯಿಂಟ್ಸ್​ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಬಟ್ ನೆಕ್​ಸ್​ಟ್ ಮ್ಯಾಚ್ ಇರೋದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ. ಹೋಂ ಗ್ರೌಂಡ್​ನಲ್ಲಿ ಸತತ ಮೂರು ಮ್ಯಾಚ್ ಸೋತಿರೋ ರೆಡ್ ಆರ್ಮಿ ಏಪ್ರಿಲ್ 24ಕ್ಕೆ ರಾಜಸ್ಥಾನ ರಾಯಲ್ಸ್ ವಿರುದ್ಧ ತನ್ನ 9ನೇ ಪಂದ್ಯ ಆಡಲಿದೆ. ಈಗಾಗ್ಲೇ ಜೈಪುರದಲ್ಲಿ ರಾಜಸ್ಥಾನ ಆರ್​ಸಿಬಿ ವಿರುದ್ಧ ಸೋಲು ಕಂಡಿತ್ತು. ಆ ಸೋಲಿನ ಪ್ರತೀಕಾರಕ್ಕೆ ಆರ್​ಆರ್ ತಂಡ ಕಾಯ್ತಿದೆ.

Shantha Kumari

Leave a Reply

Your email address will not be published. Required fields are marked *