ಸೂಪರ್‌ ಓವರ್‌ನಲ್ಲಿ ಆರ್‌ಸಿಬಿಗೆ ವಿರೋಚಿತ ಸೋಲು – ತನ್ನ ತಪ್ಪಿನಿಂದಲೇ ಸೋತ ಬೆಂಗಳೂರು!

ಸೂಪರ್‌ ಓವರ್‌ನಲ್ಲಿ ಆರ್‌ಸಿಬಿಗೆ ವಿರೋಚಿತ ಸೋಲು – ತನ್ನ ತಪ್ಪಿನಿಂದಲೇ ಸೋತ ಬೆಂಗಳೂರು!

ಆರ್‌ಸಿಬಿಯ ಗೆಲುವಿನ ಓಟಕ್ಕೆ ಮತ್ತೊಂದ್ಸಲ ಬ್ರೇಕ್‌ ಬಿದ್ದಿದೆ. ಮೊದಲ ಸೂಪರ್‌ ಓವರ್‌ನಲ್ಲಿ   ಯುಪಿ ವಾರಿಯರ್ಸ್‌ ಆರ್‌ಸಿಬಿ ವಿರುದ್ಧ ಗೆದ್ದು ಬೀಗಿದೆ. ಇದ್ರಿಂದ ಆರ್‌ಸಿಬಿಗೆ ಭಾರಿ ಮುಖಭಂಗ ಆಗಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ನಡೆದ ಡಬ್ಲುಪಿಎಲ್​​ನ 9ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಗರ್ಲ್ಸ್​ ಹೀನಾಯ ಸೋಲು ಕಂಡಿದ್ದಾರೆ. ಯುಪಿ ವಾರಿಯರ್ಸ್​ ವಿರುದ್ಧದ ರಣ ರೋಚಕ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಡಬ್ಲ್ಯುಪಿಎಲ್​ನಲ್ಲಿ ಸೂಪರ್ ಓವರ್ ಪಂದ್ಯ ನಡೆಯಿತು. ಆದರೆ 4 ರನ್​ಗಳಿಂದ ವಾರಿಯರ್ಸ್​ ತಂಡ, ಆರ್​ಸಿಬಿಯನ್ನು ಮಣಿಸಿದೆ.

ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಕಿಂಗ್ ಕೊಹ್ಲಿ ರಣಾರ್ಭಟ – ಏಕಾಂಗಿಯಾಗಿ ನಿಂತು ಪಂದ್ಯ ಗೆಲ್ಲಿಸಿದ್ದಾರೆ ವಿರಾಟ್

ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್​ ತಂಡ 6 ಎಸೆತದಲ್ಲಿ 8 ರನ್ ಗಳಿಸಿತ್ತು. ಆರ್‌ಸಿಬಿಗೆ 9 ರನ್‌ಗಳ ಟಾರ್ಗೆಟ್ ಇತ್ತು. ಆದರೆ ಸ್ಮೃತಿ ಮಂದಾನ ಹಾಗೂ ರಿಚಾ ಘೋಷ್ ಅವರ ಬ್ಯಾಟಿಂಗ್​ ದುಬಾರಿಯಾಯಿತು. ಇಬ್ಬರು ಒತ್ತಡದಲ್ಲೇ ಬಿಗ್ ಶಾಟ್ ಹೊಡೆಯುವಲ್ಲಿ ಕೈಚೆಲ್ಲಿದರು. ಸ್ಪೋಟಕ ಆಟಗಾರ್ತಿ ಎಲ್ಲಿಸ್ ಪೆರ್ರಿರನ್ನ ಬ್ಯಾಟಿಂಗ್​ಗೆ ಕಳಿಸಿದ್ರೆ ಆರ್​ಸಿಬಿ ಮ್ಯಾಚ್ ಗೆಲ್ಲಬಹುದಿತ್ತು. ಆದರೆ ಯುಪಿ ಪರವಾಗಿ ಸೋಫಿ ಎಕ್ಲೆಸ್ಟೋನ್ ಬೌಲಿಂಗ್‌ನಲ್ಲಿ ಪರಾಕ್ರಮ ಮೆರೆದು ಆರ್‌ಸಿಬಿ ಜಯ ಕಸಿದುಕೊಂಡರು. ಸೂಪರ್ ಓವರ್‌ನಲ್ಲಿ ಕೇವಲ 4 ರನ್‌ ಮಾತ್ರ ನೀಡಿದರು.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡಿದ್ದ ಯುಪಿ ವಾರಿಯರ್ಸ್​ ನಾಯಕಿ ದೀಪ್ತಿ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್​ಗೆ ಆಗಮಿಸಿದ ಆರ್​ಸಿಬಿ ಪರ ಓಪನರ್ ಸ್ಮೃತಿ ಮಂದಾನ ಕೇವಲ 6 ರನ್​ಗೆ ಔಟ್ ಆಗಿ ಮತ್ತೆ ನಿರಾಸೆ ಮೂಡಿಸಿದರು. ಆದರೆ ಕ್ರೀಸ್ ಕಚ್ಚಿ ಬ್ಯಾಟ್ ಬೀಸಿದ ವ್ಯಾಟ್-ಹಾಡ್ಜ್ 57 ರನ್ ಹಾಗೂ ಸ್ಪೋಟಕ ಬ್ಯಾಟ್ಸ್​ ವುಮೆನ್ ಎಲ್ಲಿಸ್ ಪೆರ್ರಿ 90 ರನ್ ಗಳಿಸಿ ಅಜೆಯರಾಗಿ ಉಳಿದು ಶತಕ ಮಿಸ್ ಮಾಡಿಕೊಂಡರು. ಉಳಿದವರು ಯಾರು ಉತ್ತಮ ಬ್ಯಾಟಿಂಗ್ ಮಾಡಲಿಲ್ಲ, ಹೀಗಾಗಿ 20 ಓವರ್​ಗಳಲ್ಲಿ 6 ವಿಕೆಟ್​ಗೆ 180 ರನ್​ ಟಾರ್ಗೆಟ್ ನೀಡಿತು.

ಈ ಟಾರ್ಗೆಟ್ ಬೆನ್ನು ಹತ್ತಿದ ಯುಪಿ ವಾರಿಯರ್ಸ್ ಎಲ್ಲ ಬ್ಯಾಟರ್ಸ್ ಸಾಧಾರಣ ಬ್ಯಾಟಿಂಗ್ ಮಾಡಿದರು. ಹೀಗಾಗಿ 180 ರನ್ ಗಳಿಸಿ ಪಂದ್ಯವನ್ನು ಸಮಬಲಗೊಳಿಸಿದರು. ಇದರಿಂದಾಗಿ ಸೂಪರ್ ಓವರ್‌ ಆಡಿಸಲಾಗಿತ್ತು. ಆದರೆ ಆರ್‌ಸಿಬಿಯನ್ನು 4 ರನ್‌ಗಳಿಂದ ಯುಪಿ ಸೋಲಿಸಿತು. ಹ್ಯಾಟ್ರಿಕ್ ಗೆಲುವಿನಲ್ಲಿದ್ದ ಆರ್​ಸಿಬಿ ಈಗ ಹ್ಯಾಟ್ರಿಕ್ ಸೋಲಿನ ಸುಳಿಯಲ್ಲಿ ನಿಂತಿದೆ ಎಂದು ಹೇಳಬಹುದು.

Shwetha M

Leave a Reply

Your email address will not be published. Required fields are marked *