ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಮುಂಬೈ ಇಂಡಿಯನ್ಸ್ ಸೆಣಸಾಟ- ಕೊಹ್ಲಿ, ರೋಹಿತ್ ಮೇಲೆ ಅಭಿಮಾನಿಗಳ ಕಣ್ಣು

ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಮುಂಬೈ ಇಂಡಿಯನ್ಸ್ ಸೆಣಸಾಟ- ಕೊಹ್ಲಿ, ರೋಹಿತ್ ಮೇಲೆ ಅಭಿಮಾನಿಗಳ ಕಣ್ಣು

ಹ್ಯಾಟ್ರಿಲ್ ಸೋಲುಂಡು ಗೆಲುವಿಗಾಗಿ ಹವಣಿಸ್ತಿರೋ ಆರ್​ಸಿಬಿ. ಹ್ಯಾಟ್ರಿಕ್ ಸೋಲಿನ ಬಳಿಕ ಒಂದು ಪಂದ್ಯ ಗೆದ್ದು ಮತ್ತದೇ ಲಯ ಮುಂದುವರಿಸೋ ತವಕದಲ್ಲಿರೋ ಮುಂಬೈ ಇಂಡಿಯನ್ಸ್. ಐಪಿಎಲ್​ನ ಹೈವೋಲ್ಟೇಜ್ ಟೀಮ್​ಗಳ ನಡುವಿನ ಹಣಾಹಣಿಗೆ ಕೌಂಟ್​ಡೌನ್ ಶುರುವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಮುಂಬೈ ಇಂಡಿಯನ್ಸ್ ತಂಡಗಳು ವಾಂಖೆಡೆ ಸ್ಟೇಡಿಯಂನಲ್ಲಿ ಎದುರು ಬದುರಾಗಲಿವೆ. ಹ್ಯಾಟ್ರಿಕ್ ಸೋಲು ಕಂಡಿರೋ ಎರಡೂ ತಂಡಗಳಿಗೆ ಇಂದಿನ ಮ್ಯಾಚ್ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಪಾಯಿಂಟ್ ಟೇಬಲ್ ನಲ್ಲಿ ಮೇಲೆ ಬರಬೇಕು, ಪ್ಲೇಆಫ್ ಗೆ ಹೋಗೋ ಕನಸು ಜೀವಂತವಾಗಿರಬೇಕು ಅಂದ್ರೆ ವಿನ್ ಆಗ್ಲೇಬೇಕು. ಬೆಂಗಳೂರು ಹಾಗೂ ಮುಂಬೈ ತಂಡಗಳ ನಡುವಿನ ಪ್ಲಸ್, ಮೈನಸ್ ಏನು..? ಆರ್​ಸಿಬಿ ಟೀಮ್​ನಲ್ಲಿ ಏನೆಲ್ಲಾ ಚೇಂಜಸ್ ಆಗ್ಬೇಕು..? ಹಿಂದಿನ ರೆಕಾರ್ಡ್ಸ್ ಹೇಗಿದೆ..? ಎಂಬ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: RR ಜಟಾಪಟಿ ಗೆದ್ದ GT – ರಶೀದ್ ತಡೆಯೋದೇ ಕಷ್ಟ? – ತಪ್ಪು ಮಾಡಿದ್ದೆಲ್ಲಿ ಸ್ಯಾಮ್ಸನ್?

ಪ್ರತೀ ಐಪಿಎಲ್​ ಸೀಸನ್​ನಲ್ಲೂ ಆರ್​ಸಿಬಿ ಮ್ಯಾಚ್ ಅಂದ್ರೆನೇ ಅದೇನೋ ಕ್ರೇಜ್. ಗೆಲ್ತಾರೋ ಬಿಡ್ತಾರೋ ಅದು ಸೆಕೆಂಡ್ರಿ ಬಿಡಿ. ಅದ್ರಲ್ಲೂ ಆರ್​ಸಿಬಿ ವರ್ಸಸ್ ಸಿಎಸ್​ಕೆ ಮ್ಯಾಚ್ ಬಿಟ್ರೆ ಫ್ಯಾನ್ಸ್ ಅತೀ ಹೆಚ್ಚು ಕಾಯೋದೇ ಆರ್​ಸಿಬಿ ವರ್ಸಸ್ ಮುಂಬೈ ಬ್ಯಾಟಲ್​​ಗಾಗಿ. ಗುರುವಾರದ ಐಪಿಎಲ್​ ರಣರಂಗದಲ್ಲಿ ಮುಂಬೈ ಮತ್ತು ಬೆಂಗಳೂರು ತಂಡಗಳು ಪೈಪೋಟಿ ನಡೆಸಲಿವೆ. ಬ್ಯಾಕ್​ ಟು ಬ್ಯಾಕ್ ಮೂರು ಸೋಲುಗಳನ್ನ ಕಂಡು ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್​ ತಂಡ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಡೆಲ್ಲಿ ಮಣಿಸಿದ ಆತ್ಮವಿಶ್ವಾಸದಲ್ಲಿರೋ ಹಾರ್ದಿಕ್​ ಪಾಂಡ್ಯ ಸೈನ್ಯ ಗುರುವಾರ ಆರ್​ಸಿಬಿ ತಂಡವನ್ನ ಎದುರಿಸಲಿದೆ. ಆರ್​ಸಿಬಿ ಕೂಡ ಒಂದು ಮ್ಯಾಚ್ ಬಿಟ್ರೆ ನಾಲ್ಕರಲ್ಲಿ ಸೋತಿದ್ದು, ಗೆಲ್ಲಲೇಬೇಕಾದ ಪ್ರೆಶರ್​ನಲ್ಲಿದೆ. ಆದ್ರೆ ಅವರದ್ದೇ ನೆಲದಲ್ಲಿ ಮುಂಬೈ ಪಡೆಯನ್ನ ಬೇಟೆಯಾಡೋದು ಸುಲಭದ ಮಾತಲ್ಲ. ಹಾಗಂತ ಅದು ಅಸಾಧ್ಯವೂ ಅಲ್ಲ. ಆದ್ರೆ ಅದಕ್ಕೆ ಒಂದಷ್ಟು ಸ್ಟ್ರಾಟಜಿ ಬೇಕು ಅಷ್ಟೇ.

ಮುಂಬೈ ಟೀಮ್​ನಲ್ಲಿ ಓಪನರ್ಸ್​ ಸದ್ಯ ಗುಡ್​ ಟಚ್​​ನಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಹಿತ್​ ಶರ್ಮಾ ಹಾಗೂ ಇಶನ್​​ ಕಿಶನ್ ಸ್ಪೋಟಕ ಇನ್ನಿಂಗ್ಸ್ ಕಟ್ಟಿದ್ರು. ಆರ್​ಸಿಬಿ ಬೌಲರ್ಸ್​ ಈ ಇಬ್ಬರು ಆಟಗಾರರು ಸೆಟಲ್ ಆಗದಂತೆ ನೋಡಿಕೊಳ್ಬೇಕು. ಹಾಗೇ ಮುಂಬೈ ತಂಡದಲ್ಲಿ ಸೂರ್ಯಕುಮಾರ್​ ಯಾದವ್​​, ಟಿಮ್ ಡೇವಿಡ್​ ಹಾಗೂ ರೊಮಾರಿಯೋ ಶೆಫರ್ಡ್​ರಂತ ಬಿಗ್​​ ಹಿಟ್ಟರ್​ಗಳ ದಂಡೇ ಇದೆ. ಯಾವುದೇ ಕ್ಷಣದಲ್ಲಿ ಪಂದ್ಯದ ಗತಿ ಬದಲಿಸುವ ತಾಕತ್ತು ಇವ್ರಲ್ಲಿದೆ. ಇವ್ರ ಪೈಕಿ ಒಬ್ಬರು ಬ್ಯಾಟ್ ಬೀಸೋಕೇ ನಿಂತ್ರೂ ಕೂಡ ರನ್​ ಮಳೆಯೇ ಹರಿಯುತ್ತೆ. ಹೀಗಾಗಿ ರನ್ ಕೊಡದೆ ಬೇಗನೆ ಕಟ್ಟಿಹಾಕಲು ಆರ್​ಸಿಬಿ ಗ್ಯಾಂಗ್ ಸೂಕ್ತ ಪ್ಲ್ಯಾನ್​ನೊಂದಿಗೆ ಕಣಕ್ಕಿಳಿಯಬೇಕು. ಮುಂಬೈ ಟೀಂನ ಮೇನ್ ಸ್ಟ್ರೆಂಥ್ ಅಂದ್ರೆ ಅದು ಬೌಲರ್ಸ್. ಮುಂಬೈ ಇಂಡಿಯನ್ಸ್​ನಲ್ಲಿ ಜಸ್​ಪ್ರೀತ್​ ಬೂಮ್ರಾ, ಜೆರಾಲ್ಡ್​​ ಕೊಯೆಟ್ಜಿ ಹಾಗೂ ಆಕಾಶ್​​ ಮದ್ವಾಲ್​ ರಂತ ಎಕ್ಸ್​ಪ್ರೆಸ್​ ವೇಗಿಗಳಿದ್ದಾರೆ. ಮುಂಬೈಗೆ ಇವರೇ ದೊಡ್ಡ ಶಕ್ತಿ. ಈ ತ್ರಿಮೂರ್ತಿ ಸ್ಪೀಡ್ ವೆಪನ್​​​​ ಗಳನ್ನ ಒತ್ತಡಕ್ಕೆ ಸಿಲುಕಿಸಿದ್ರೆ ರೆಡ್​ ಆರ್ಮಿ ಅರ್ಧ ಪಂದ್ಯ ಗೆದ್ದಂತೆ. ಸೋ ಮುಂಬೈ ಅಂತೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸ್ಟ್ರಾಂಗ್ ಇದೆ. ಹೀಗಾಗಿ ಆರ್​ಸಿಬಿ ತಂಡ ಮುಂಬೈನಂತ ಚಾಂಪಿಯನ್​ ತಂಡವನ್ನ ಮಣಿಸಬೇಕಾದ್ರೆ ಅಟ್ಯಾಕಿಂಗ್ ಸ್ಟೈಲ್ ಕ್ರಿಕೆಟ್​​​​​​ ಆಡಬೇಕಿದೆ. ಬೌಲರ್ ಯಾರೇ ಆದ್ರೂ ಬೀಸಿ ಹೊಡೆಯಬೇಕಿದೆ. ಎಸ್ಪೆಶಲಿ ಪವರ್​​​ಪ್ಲೇ ಹಾಗೂ ಮಿಡ್​ ಓವರ್ಸ್​ನಲ್ಲಿ ತಡಕಾಡೋದನ್ನ ಬಿಟ್ಟು ರನ್ ಗಳಿಸಬೇಕು. ಆದ್ರೆ ಟೀಮ್​ನಲ್ಲಿ ಫಾರಿನ್ ಪ್ಲೇಯರ್​​ಗಳೇ ದುಬಾರಿಯಾಗ್ತಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಸೋತಿರೋ ಆರ್​ಸಿಬಿಯಲ್ಲಿ ಇವತ್ತಿನ ಮ್ಯಾಚ್ ಗೆಲ್ಲಬೇಕಂದ್ರೆ ಒಂದಷ್ಟು ಬದಲಾವಣೆಗಳೂ ಅನಿವಾರ್ಯವಾಗಿವೆ.

ಆರ್​ಸಿಬಿ ಪ್ಲೇಯರ್​ಗಳ ಅಟ್ಟರ್ ಪ್ಲಾಫ್ ಪರ್ಫಾಮೆನ್ಸ್ ನೋಡಿ ರೊಚ್ಚಿಗೆದ್ದಿರೋ ಫ್ಯಾನ್ಸ್ ಕೆಲ ಆಟಗಾರರನ್ನ ಕಿತ್ತಾಕುವಂತೆ ಸಜೇಷನ್ ಕೊಡ್ತಿದ್ದಾರೆ. ಬ್ಯಾಟ್ ಬೀಸಲು ತಿಣುಕಾಡ್ತಿರೋ ಕ್ಯಾಮರೂನ್​ ಗ್ರೀನ್​ ರನ್ನ ತೆಗೆದು ವಿಲ್​ ಜಾಕ್ಸ್​​ಗೆ ಚಾನ್ಸ್​ ನೀಡಬೇಕು ಅನ್ನೋದು ಫ್ಯಾನ್ಸ್​ ಆಗ್ರಹವಾಗಿದೆ. ವಿಲ್​ ಜಾಕ್ಸ್​​, ಫಾಫ್​ ಡುಪ್ಲೆಸಿ ಜೊತೆ ಇನ್ನಿಂಗ್ಸ್​ ಓಪನ್​ ಮಾಡಿದ್ರೆ ತಂಡಕ್ಕೆ ಒಳ್ಳೆಯ ಓಪನಿಂಗ್ ಸಿಗುತ್ತೆ ಅನ್ನೋ ನಿರೀಕ್ಷೆ ಇದೆ. ಇನ್ನು ರನ್ ಮಷಿನ್ ವಿರಾಟ್ ಕೊಹ್ಲಿಗೆ ನಂಬರ್​ 3 ಫೇವರಿಟ್​ ಸ್ಲಾಟ್​. ಈ ಕ್ರಮಾಂಕದಲ್ಲಿ ಕೊಹ್ಲಿ ಸಾಲಿಡ್​ ಟ್ರ್ಯಾಕ್​ ರೆಕಾರ್ಡ್​​ ಹೊಂದಿದ್ದಾರೆ. ಸದ್ಯ ಸೂಪರ್ ಡೂಪರ್​ ಫಾರ್ಮ್​ನಲ್ಲಿರೋ ವಿರಾಟ್​ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಿದ್ರೆ, ಆರ್​​ಸಿಬಿಯ ಮಿಡಲ್​ ಆರ್ಡರ್​ ಬ್ಯಾಟಿಂಗ್​ ಸ್ಟ್ರೆಂಥ್​ ಹೆಚ್ಚಲಿದೆ. ಹಾಗೇ ವೈಫಲ್ಯದ ಸುಳಿಗೆ ಸಿಲುಕಿರೋ ರಜತ್​ ಪಟಿದಾರ್​ಗೆ ಗೇಟ್​ ಪಾಸ್​ ನೀಡಿ ಲೆಫ್ಟ್​ ಆರ್ಮ್​ ಬ್ಯಾಟರ್​ ಅನುಜ್​ ರಾವತ್​ಗೆ ಚಾನ್ಸ್​ ನೀಡಬೇಕಿದೆ. 4ನೇ ಕ್ರಮಾಂಕದಲ್ಲಿ ಅನುಜ್​ ರಾವತ್​ ಕಣಕ್ಕಿಳಿದ್ರೆ, ಬ್ಯಾಟಿಂಗ್​ ಲೈನ್​ ಅಪ್​ಗೆ ಅಡ್ವಾಂಟೇಜ್​​ ಆಗಲಿದೆ. ಇನ್ನು ಲೋವರ್​​ ಆರ್ಡರ್​​ನಲ್ಲಿ ಗ್ಲೆನ್​ ಮ್ಯಾಕ್ಸ್​​ವೆಲ್​, ದಿನೇಶ್​ ಕಾರ್ತಿಕ್​ ಆಡಿದ್ರೆ, ಆರ್​​ಸಿಬಿ ಒಳ್ಳೆ ರನ್ ಕಲೆ ಹಾಕಬಹುದು. ಆದ್ರೆ ಮ್ಯಾಕ್ಸ್​​ವೆಲ್ ಈ ಮ್ಯಾಚ್​ನಲ್ಲೂ ಅದೇಗೆ ಆಡ್ತಾರೆ ಅನ್ನೋದನ್ನ ಹೇಳೋಕೆ ಆಗಲ್ಲ. ಯಾಕಂದ್ರೆ ಈಗ ಆಡಿರೋ ಐದು ಮ್ಯಾಚ್​ಗಳಲ್ಲೂ ಮ್ಯಾಕ್ಸಿ ಕಲೆ ಹಾಕಿರೋದೇ ಜಸ್ಟ್ 32 ರನ್​ಗಳು ಮಾತ್ರ.  ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಮ್ಯಾಕ್ಸಿ, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಲೆಹಾಕಿದ್ದು ಕೇವಲ 3 ರನ್​ಗಳು ಮಾತ್ರ. ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 28 ರನ್ ಬಾರಿಸಲಷ್ಟೇ ಶಕ್ತರಾಗಿದ್ದರು. ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದದ ಮ್ಯಾಕ್ಸಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್​ವೆಲ್ ಕಲೆಹಾಕಿದ್ದು ಕೇವಲ 1 ರನ್ ಮಾತ್ರ. ಅಂದ್ರೆ ಇದುವರೆಗೆ ಕೇವಲ 6.40 ಸರಾಸರಿಯಲ್ಲಷ್ಟೇ ರನ್ ಕಲೆಹಾಕಿದ್ದಾರೆ. ಗ್ಲೆನ್ ಮ್ಯಾಕ್ಸ್​ವೆಲ್ ಅವರ ಈ ಫ್ಲಾಪ್ ಶೋನಿಂದ ಕೂಡ ಆರ್​ಸಿಬಿ ತಂಡದ ಫಲಿತಾಂಶದ ಮೇಲೆ ಎಫೆಕ್ಟ್ ಆಗ್ತಿದೆ. ಹೀಗಾಗಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಒಂದು ಪಂದ್ಯ ಆಡಿ ಬಳಿಕ ಬೆಂಚ್​ಗೆ ಸೀಮಿತವಾಗಿರುವ ಕರಣ್​ ಶರ್ಮಾಗೆ ಅವಕಾಶ ನೀಡಬೇಕು. ಮಯಾಂಕ್​ ಡಾಗರ್​​ಗಿಂತ ಕರಣ್​ ಶರ್ಮಾ ಉತ್ತಮ ಟ್ರ್ಯಾಕ್​ ರೆಕಾರ್ಡ್​ ಹೊಂದಿದ್ದಾರೆ. ಹಾಗೇ ಮಹಿಪಾಲ್​ ಲೋಮ್ರೋರ್​, ಯಶ್​ ದಯಾಳ್​ರನ್ನ ಇಂಪ್ಯಾಕ್ಟ್​ ಪ್ಲೇಯರ್ ಅವಕಾಶದಲ್ಲಿ ಟಾಸ್​ ಲೆಕ್ಕಾಚಾರಕ್ಕೆ ಅನುಗುಣವಾಗಿ ಆಡಿಸಬೇಕಿದೆ. ಮೊದಲು ಬ್ಯಾಟಿಂಗ್​ ಆದ್ರೆ ಲೋಮ್ರೋರ್​, ಬೌಲಿಂಗ್​ ಆದ್ರೆ ಯಶ್​​ ದಯಾಳ್​ರನ್ನ ಪ್ಲೇಯಿಂಗ್​ ಇಲೆವೆನ್​ನಲ್ಲಿ ಆಡಿಸಿ, ಇನ್ನಿಂಗ್ಸ್​ ಅಂತ್ಯದ ಬಳಿಕ ಬದಲಾವಣೆ ಮಾಡಿಕೊಳ್ಳಬೇಕಿದೆ. ಇಷ್ಟು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದ್ರೆ, ಗೆಲುವಿನ ಹಳಿಗೆ ಮರಳೋದು ಆರ್​​ಸಿಬಿಗೆ ಕಷ್ಟದ ವಿಚಾರವೇನಲ್ಲ.

ಸದ್ಯ ಈ ಸೀಸನ್​ನಲ್ಲಿ ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನದ ಮೂಲಕ ಮುಂಬೈ ಟೀಂ ಅಂಕಪಟ್ಟಿಯಲ್ಲಿ ಪ್ರಸ್ತುತ 8ನೇ ಸ್ಥಾನದಲ್ಲಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು 9ನೇ ಸ್ಥಾನದಲ್ಲಿದೆ. ಇಂದಿನ ಮ್ಯಾಚ್ ಉಭಯ ತಂಡಗಳಿಗೂ ಮಾಡು ಇಲ್ಲವೆ ಮಡಿ ಎನ್ನುವಂತೆಯೇ ಇದೆ. ಇನ್ನು ಎರಡು ತಂಡಗಳ ಹಿಂದಿನ ರೆಕಾರ್ಡ್ಸ್ ನೋಡೋದಾದ್ರೆ, ಮುಂಬೈ ಇಂಡಿಯನ್ಸ್ ಮತ್ತು ಬೆಂಗಳೂರು ತಂಡಗಳು ಈವರೆಗೆ ಒಟ್ಟು 34 ಪಂದ್ಯಗಳಲ್ಲಿ ಮುಖಾಮುಖಿ ಆಗಿದೆ. ಅದರಲ್ಲಿ 20 ಪಂದ್ಯವನ್ನು ಮುಂಬೈ ಗೆದ್ದರೆ ಉಳಿದ 14 ಪಂದ್ಯಗಳನ್ನು ಆರ್​ಸಿಬಿ ಗೆದ್ದಿದೆ. ಇನ್ನು, ವಾಂಖೆಡೆ ಮೈದಾನ ಮುಂಬೈಗೆ ತವರು ಮೈದಾನವಾಗಿರುವುದಿರಂದ ಹೆಚ್ಚಿನ ಲಾಭ ಪಡೆದುಕೊಳ್ಳುವ ನಿರೀಕ್ಷೆಯಿದೆ. ಪಿಚ್ ವರದಿ ನೋಡೋದಾದ್ರೆ ವಾಂಖೆಡೆ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿ ಪಿಚ್ ಎಂದು ಹೆಸರುವಾಸಿಯಾಗಿದೆ. ಸಣ್ಣ ಬೌಂಡರಿಗಳು ಇರುವುದರಿಂದ ಬಿಗ್​ ಸ್ಕೋರ್​ ಮ್ಯಾಚ್​​ ಆಗುವುದಂತೂ ಖಂಡಿತ. ಟಾಸ್ ಗೆದ್ದ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಬಹುದು. ಇನ್ನು ಈ ಬಿಗ್ ಗೇಮ್​ ಕಿಂಗ್ ಕೊಹ್ಲಿ ಹಾಗೂ ರೋಹಿತ್​​ ಶರ್ಮಾಗೆ ಪ್ರತಿಷ್ಠೆಯ ಕದನ. ವಾಂಖೆಡೆಯಲ್ಲಿ ಇಬ್ಬರೂ ತಮ್ಮದೇ ಆದ ರೆಕಾರ್ಡ್ಸ್ ಹೊಂದಿದ್ದಾರೆ. ಆರ್​ಸಿಬಿ ಮತ್ತು ಮುಂಬೈ ಟೀಮ್​ನಿಂದ ಇದೇ ಮೊದಲ ಬಾರಿಗೆ ಇಬ್ಬರೂ ಮಾಜಿ ಕ್ಯಾಪ್ಟನ್​ಗಳಾಗಿ ಫೀಲ್ಡಿಗೆ ಇಳಿಯುತ್ತಿದ್ದಾರೆ. ಇಬ್ಬರು ಸಾಧ್ಯ ಸಾಲಿಡ್​ ಫಾರ್ಮ್​ನಲ್ಲಿದ್ದು,  ರನ್ ಹೊಳೆ ನಿರೀಕ್ಷಿಸಲಾಗಿದೆ. ಕಿಂಗ್ ಕೊಹ್ಲಿ ವಾಂಖೆಡೆ ಮೈದಾನದಲ್ಲಿ 17 ಪಂದ್ಯಗಳನ್ನ ಆಡಿದ್ದು, 138.25ರ ಉತ್ತಮ ಸ್ಟ್ರೈಕ್​ರೇಟ್​ನಲ್ಲಿ 571 ರನ್ ಚಚ್ಚಿದ್ದಾರೆ. ವಿರಾಟ್ ಬ್ಯಾಟ್​​ನಿಂದ 5 ಅರ್ಧಶತಕಗಳು ಮೂಡಿ ಬಂದಿವೆ. ಆದ್ರೆ ಇಲ್ಲಿತನಕ ಒಂದೂ ಶತಕ ಹೊಡೆದಿಲ್ಲ. ಹಾಗೇ ರೋಹಿತ್ ಕೂಡ ವಾಂಖೆಡೆಯಲ್ಲಿ ಮ್ಯಾಸಿವ್ ರೆಕಾರ್ಡ್ಸ್ ಹೊಂದಿದ್ದಾರೆ. ಹೋಮ್​ಗ್ರೌಂಡ್​​​​ನಲ್ಲಿ ರೋಹಿತ್​ ಶರ್ಮಾ 75 ಪಂದ್ಯಗಳನ್ನ ಆಡಿದ್ದಾರೆ. 134.70ರ ಸ್ಟ್ರೈಕ್​ರೇಟ್​ನಲ್ಲಿ ಬರೋಬ್ಬರಿ 2,069 ರನ್​ಗಳನ್ನ ಸಿಡಿಸಿದ್ದಾರೆ. ಒಂದೂ ಶತಕ ಬರದಿದ್ರೂ 15 ಹಾಫ್​​ಸೆಂಚುರಿ ಹೊಡೆದಿದ್ದಾರೆ.

Sulekha