ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಚೆನ್ನೈ ಸೂಪರ್ ಕಿಂಗ್ಸ್ – ಪಂದ್ಯದ ಮೊದಲ ದಿನವೇ ಫುಲ್ ಧಮಾಕಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಚೆನ್ನೈ ಸೂಪರ್ ಕಿಂಗ್ಸ್ – ಪಂದ್ಯದ ಮೊದಲ ದಿನವೇ ಫುಲ್ ಧಮಾಕಾ

ಐಪಿಎಲ್​ ಶೆಡ್ಯೂಲ್ ರಿಲೀಸ್ ಆಗಿದೆ. ಫಸ್ಟ್ ಡೇ ಮ್ಯಾಚ್ ದಿನವೇ ಫುಲ್ ಧಮಾಕಾ. ಮಾರ್ಚ್​ 22ರಿಂದ ಮೇ 26ರ ವರೆಗೆ ಈ ಬಾರಿಯ ಟೂರ್ನಿ ನಡೆಯುತ್ತೆ. ಕಳೆದ ಬಾರಿಯಂತೆ ಈ ಬಾರಿಯ ಒಟ್ಟು 74 ಮ್ಯಾಚ್​ಗಳು ನಡೆಯಲಿವೆ. ಆದ್ರೆ ಕಳೆದ ವರ್ಷ ಒಟ್ಟು 60 ದಿನಗಳಲ್ಲಿ 74 ಮ್ಯಾಚ್ ನಡೆದಿದ್ವು. ಈ ಬಾರಿ 67 ದಿನಗಳಲ್ಲಿ 74 ಮ್ಯಾಚ್ ನಡೆಯುತ್ತೆ.

ಇದನ್ನೂ ಓದಿ:ಗುಜರಾತ್ ಟೈಟಾನ್ಸ್ ತಂಡಕ್ಕೆ ಮತ್ತೊಂದು ಬಿಗ್ ಶಾಕ್ – ಐಪಿಎಲ್‌ನಿಂದಲೂ ಸ್ಟಾರ್ ಬೌಲರ್ ಶಮಿ ಔಟ್?

2024ರ ಐಪಿಎಲ್​​ ಬ್ಲಾಕ್​​ಬಾಸ್ಟರ್​​ ಮ್ಯಾಚ್​​ನೊಂದಿಗೆ ಶುರುವಾಗುತ್ತೆ. ಫಸ್ಟ್ ಮ್ಯಾಚ್​ ಇರೋದು ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಚೆನ್ನೈ ಸೂಪರ್ ಕಿಂಗ್ಸ್ ನಡುವೆ. ಮೊದಲ ದಿನವೇ ಕೊಹ್ಲಿ VS ಧೋನಿ ನಡುವೆ ಫೈಟ್. ಮಾರ್ಚ್​ 22ರಂದು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಸಿಎಸ್​ಕೆ ಮತ್ತು ಆರ್​ಸಿಬಿ ಮಧ್ಯೆ ಮೊದಲ ಮ್ಯಾಚ್​​ ನಡೆಯುತ್ತೆ. ಈ ಪಂದ್ಯ ಆರಂಭವಾಗೋದು ರಾತ್ರಿ 8 ಗಂಟೆಗೆ. ಫಸ್ಟ್ ಮ್ಯಾಚ್ ಮಾತ್ರ ರಾತ್ರಿ 8 ಗಂಟೆಗೆ ಶುರುವಾಗುತ್ತೆ. ಯಾಕಂದ್ರೆ ಓಪನಿಂಗ್ ಸೆರಮನಿ ಎಲ್ಲಾ ಇರೋದ್ರಿಂದ ರಾತ್ರಿ 8 ಗಂಟೆಗೆ ಟೈಮ್ ಫಿಕ್ಸ್ ಮಾಡಿದ್ದಾರೆ. ಉಳಿದ ಮ್ಯಾಚ್​​ಗಳು ರಾತ್ರಿ 7.30ಕ್ಕೆ ಮತ್ತು ಮಧ್ಯಾಹ್ನ 3.30ಕ್ಕೆ ಶುರುವಾಗುತ್ತೆ. ಅಷ್ಟಕ್ಕೂ ಆರ್​​ಸಿಬಿ ಮತ್ತು ಸಿಎಸ್​​ಕೆ ಮಧ್ಯೆ ಫಸ್ಟ್ ಮ್ಯಾಚ್​ ಹಮ್ಮಿಕೊಂಡಿರೋದ್ಯಾಕೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಅದಕ್ಕೆ ಕಾರಣ ನೀವೇ. ಐ ಮೀನ್ ಫ್ಯಾನ್ಸ್..ಎಸ್ಪೆಷಲಿ ಆರ್​​ಸಿಬಿ ಫ್ಯಾನ್ಸ್. ಯಾಕಂದ್ರೆ ಈ ಬಾರಿಯ ಐಪಿಎಲ್​​ನಲ್ಲಿ ಓಪನಿಂಗ್ ಮ್ಯಾಚ್​​ನ್ನ ಯಾರ ಮಧ್ಯೆ ಹಮ್ಮಿಕೊಳ್ಳಬೇಕು ಅನ್ನೋ ಬಗ್ಗೆ ಅಭಿಮಾನಿಗಳೇ ಡಿಸೈಡ್ ಮಾಡಬೇಕು ಅಂತಾ ವೋಟಿಂಗ್ ಮಾಡಲಾಗಿತ್ತು. ಈ ಪೈಕಿ 50 ಪರ್ಸೆಂಟ್​ಗಿಂತಲೂ ಹೆಚ್ಚು ಮಂದಿ ಆರ್​ಸಿಬಿ VS ಸಿಎಸ್​ಕೆ ಮಧ್ಯೆ ಫಸ್ಟ್ ಮ್ಯಾಚ್​ ನಡೀಬೇಕು ಅಂತಾ ವೋಟ್ ಮಾಡಿದ್ರು. ಹೀಗಾಗಿ ಫ್ಯಾನ್ಸ್​ ತೀರ್ಮಾನದಂತೆಯೇ ಈಗ ಫಸ್ಟ್​​ ಮ್ಯಾಚ್​ನ್ನ ಶೆಡ್ಯೂಲ್ ಮಾಡಲಾಗಿದೆ.

 

Sulekha