ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಚೆನ್ನೈ ಸೂಪರ್ ಕಿಂಗ್ಸ್ – ಪಂದ್ಯದ ಮೊದಲ ದಿನವೇ ಫುಲ್ ಧಮಾಕಾ
ಐಪಿಎಲ್ ಶೆಡ್ಯೂಲ್ ರಿಲೀಸ್ ಆಗಿದೆ. ಫಸ್ಟ್ ಡೇ ಮ್ಯಾಚ್ ದಿನವೇ ಫುಲ್ ಧಮಾಕಾ. ಮಾರ್ಚ್ 22ರಿಂದ ಮೇ 26ರ ವರೆಗೆ ಈ ಬಾರಿಯ ಟೂರ್ನಿ ನಡೆಯುತ್ತೆ. ಕಳೆದ ಬಾರಿಯಂತೆ ಈ ಬಾರಿಯ ಒಟ್ಟು 74 ಮ್ಯಾಚ್ಗಳು ನಡೆಯಲಿವೆ. ಆದ್ರೆ ಕಳೆದ ವರ್ಷ ಒಟ್ಟು 60 ದಿನಗಳಲ್ಲಿ 74 ಮ್ಯಾಚ್ ನಡೆದಿದ್ವು. ಈ ಬಾರಿ 67 ದಿನಗಳಲ್ಲಿ 74 ಮ್ಯಾಚ್ ನಡೆಯುತ್ತೆ.
ಇದನ್ನೂ ಓದಿ:ಗುಜರಾತ್ ಟೈಟಾನ್ಸ್ ತಂಡಕ್ಕೆ ಮತ್ತೊಂದು ಬಿಗ್ ಶಾಕ್ – ಐಪಿಎಲ್‌ನಿಂದಲೂ ಸ್ಟಾರ್ ಬೌಲರ್ ಶಮಿ ಔಟ್?
2024ರ ಐಪಿಎಲ್ ಬ್ಲಾಕ್ಬಾಸ್ಟರ್ ಮ್ಯಾಚ್ನೊಂದಿಗೆ ಶುರುವಾಗುತ್ತೆ. ಫಸ್ಟ್ ಮ್ಯಾಚ್ ಇರೋದು ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಚೆನ್ನೈ ಸೂಪರ್ ಕಿಂಗ್ಸ್ ನಡುವೆ. ಮೊದಲ ದಿನವೇ ಕೊಹ್ಲಿ VS ಧೋನಿ ನಡುವೆ ಫೈಟ್. ಮಾರ್ಚ್ 22ರಂದು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಸಿಎಸ್ಕೆ ಮತ್ತು ಆರ್ಸಿಬಿ ಮಧ್ಯೆ ಮೊದಲ ಮ್ಯಾಚ್ ನಡೆಯುತ್ತೆ. ಈ ಪಂದ್ಯ ಆರಂಭವಾಗೋದು ರಾತ್ರಿ 8 ಗಂಟೆಗೆ. ಫಸ್ಟ್ ಮ್ಯಾಚ್ ಮಾತ್ರ ರಾತ್ರಿ 8 ಗಂಟೆಗೆ ಶುರುವಾಗುತ್ತೆ. ಯಾಕಂದ್ರೆ ಓಪನಿಂಗ್ ಸೆರಮನಿ ಎಲ್ಲಾ ಇರೋದ್ರಿಂದ ರಾತ್ರಿ 8 ಗಂಟೆಗೆ ಟೈಮ್ ಫಿಕ್ಸ್ ಮಾಡಿದ್ದಾರೆ. ಉಳಿದ ಮ್ಯಾಚ್ಗಳು ರಾತ್ರಿ 7.30ಕ್ಕೆ ಮತ್ತು ಮಧ್ಯಾಹ್ನ 3.30ಕ್ಕೆ ಶುರುವಾಗುತ್ತೆ. ಅಷ್ಟಕ್ಕೂ ಆರ್ಸಿಬಿ ಮತ್ತು ಸಿಎಸ್ಕೆ ಮಧ್ಯೆ ಫಸ್ಟ್ ಮ್ಯಾಚ್ ಹಮ್ಮಿಕೊಂಡಿರೋದ್ಯಾಕೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಅದಕ್ಕೆ ಕಾರಣ ನೀವೇ. ಐ ಮೀನ್ ಫ್ಯಾನ್ಸ್..ಎಸ್ಪೆಷಲಿ ಆರ್ಸಿಬಿ ಫ್ಯಾನ್ಸ್. ಯಾಕಂದ್ರೆ ಈ ಬಾರಿಯ ಐಪಿಎಲ್ನಲ್ಲಿ ಓಪನಿಂಗ್ ಮ್ಯಾಚ್ನ್ನ ಯಾರ ಮಧ್ಯೆ ಹಮ್ಮಿಕೊಳ್ಳಬೇಕು ಅನ್ನೋ ಬಗ್ಗೆ ಅಭಿಮಾನಿಗಳೇ ಡಿಸೈಡ್ ಮಾಡಬೇಕು ಅಂತಾ ವೋಟಿಂಗ್ ಮಾಡಲಾಗಿತ್ತು. ಈ ಪೈಕಿ 50 ಪರ್ಸೆಂಟ್ಗಿಂತಲೂ ಹೆಚ್ಚು ಮಂದಿ ಆರ್ಸಿಬಿ VS ಸಿಎಸ್ಕೆ ಮಧ್ಯೆ ಫಸ್ಟ್ ಮ್ಯಾಚ್ ನಡೀಬೇಕು ಅಂತಾ ವೋಟ್ ಮಾಡಿದ್ರು. ಹೀಗಾಗಿ ಫ್ಯಾನ್ಸ್ ತೀರ್ಮಾನದಂತೆಯೇ ಈಗ ಫಸ್ಟ್ ಮ್ಯಾಚ್ನ್ನ ಶೆಡ್ಯೂಲ್ ಮಾಡಲಾಗಿದೆ.