RCBಗೆ ಶೆಫರ್ಡ್ ಭಾರವೇ? – ಕೊನೇ ಓವರ್ ಬೌಲಿಂಗ್ ರಿಸ್ಕ್ ಏಕೆ?
ಬೆಥೆಲ್ ಆಡಿಸಿದ್ರೆ ಪ್ಲಸ್ ಆಗುತ್ತಾ?

RCBಗೆ ಶೆಫರ್ಡ್ ಭಾರವೇ? – ಕೊನೇ ಓವರ್ ಬೌಲಿಂಗ್ ರಿಸ್ಕ್ ಏಕೆ?ಬೆಥೆಲ್ ಆಡಿಸಿದ್ರೆ ಪ್ಲಸ್ ಆಗುತ್ತಾ?

ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತ ಮೇಲೆ ಕೆಲವ್ರು ರೊಮ್ಯಾರಿಯೋ ಶೆಫರ್ಡ್​ರನ್ನ ಬ್ಲೇಮ್ ಮಾಡ್ತಿದ್ದಾರೆ. ಲಾಸ್ಟ್ ಓವರ್ ಅವ್ರಿಂದ ಬೌಲಿಂಗ್ ಮಾಡ್ಸಿದ್ದಕ್ಕೆ ಸೋತ್ವಿ ಅಂತಿದ್ದಾರೆ. ಹಾಗೇ ಮುಂದಿನ ಪಂದ್ಯಗಳಲ್ಲಿ ಶೆಫರ್ಡ್ ಬದಲಿಗೆ ಜೇಕಬ್ ಬೆಥೆಲ್ ಆಡ್ಸಿ ಅಂತಿದ್ದಾರೆ.

ಇದನ್ನೂ ಓದಿ : ಟ್ಯಾಟೂ ಬ್ಯೂಟಿಗೆ ಅರ್ಶದೀಪ್ ಬೋಲ್ಡ್.. ಡೇಟಿಂಗ್‌ ಗುಟ್ಟು.. ಫೋಟೋದಲ್ಲಿ ರಟ್ಟು! – PBKS ಮ್ಯಾಚ್‌ನಲ್ಲಿ‌ ಲವ್‌ ರಿವೀಲ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸೀಸನ್​ನಲ್ಲಿ ಈವರೆಗೆ 6 ಪಂದ್ಯಗಳನ್ನ ಆಡಿದ್ದು ನಾಲ್ಕರಲ್ಲಿ ಗೆದ್ದಿದೆ. ಹಾಗೇ ಎರಡು ಪಂದ್ಯಗಳನ್ನ ಸೋತಿದೆ. ಬಟ್ ಈ ಸೀಸನ್ ಅಂತಾ ನೊಡಿದಾಗ ಆರ್​ಸಿಬಿ ಕ್ಲೋಸ್ ಗೇಮ್ ಅಂತಾ ಆಡಿದ್ದು ಡೆಲ್ಲಿ ವಿರುದ್ಧ. 4 ಪಂದ್ಯಗಳನ್ನ ಒನ್ ಸೈಡೆಡ್ ಆಗಿ ಗೆದ್ದಿದ್ರು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಶನಿವಾರ ಮಧ್ಯಾಹ್ನ ಗ್ರೀನ್ ಜೆರ್ಸಿಯಲ್ಲಿ ನಡೆದ ಈ ಮ್ಯಾಚ್ ತುಂಬಾನೇ ಕ್ಲೋಸ್ ಗೇಮ್ ಆಗಿತ್ತು. ಲಾಸ್ಟ್ ಓವರ್​ವರೆಗೂ ಅವ್ರು ಗೆಲ್ತಾರೋ ಇವ್ರು ಗೆಲ್ತಾರೋ ಅನ್ನೋ ಕ್ಯೂರಿಯಾಸಿಟಿ ಇತ್ತು. ಫೈನಲಿ ಡೆಲ್ಲಿ ತಂಡವೇ ವಿನ್ ಆಯ್ತು. ಆದ್ರೆ ಆರ್​ಸಿಬಿಯ ಈ ಸೋಲಿಗೆ ರೊಮ್ಯಾರಿಯೋ ಶೆಫರ್ಡ್ ಬೌಲಿಂಗ್ ಮಾಡಿದ್ದೇ ಕಾರಣ ಅನ್ನೋದು ಕೆಲವರ ವಾದ.

6 ಬಾಲ್.. 15 ರನ್.. ಗೆದ್ದು ಬೀಗಿದ ಡೆಲ್ಲಿ!

ಶನಿವಾರದ ಮ್ಯಾಚಲ್ಲಿ ಮಿಡಲ್ ಓವರ್​ಗಳಲ್ಲೇ ಕೈ ಜಾರಿದ್ದ ಪಂದ್ಯವನ್ನ 17, 18ನೇ ಓವರ್​ನಲ್ಲಿ ಭುವನೇಶ್ವರ್ ಕುಮಾರ್ ಹಾಗೇ ಜೋಶ್ ಹೇಜಲ್​ವುಡ್ ಎಳೆದಿದ್ರು. ಡೆಲ್ಲಿ ಬ್ಯಾಟರ್​ಗಳಿಗೆ ಪ್ರೆಶರ್ ಹೆಚ್ಚಿಸಿದ್ರು. ಹೀಗಾಗಿ ಕೊನೆಯ 2 ಓವರ್‌ಗಳಲ್ಲಿ ಡೆಲ್ಲಿ ಗೆಲುವಿಗೆ 25 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ನಲ್ಲಿ ರಸಿಕ್ ಸಲಾಂ ಧಾರ್10 ರನ್ ನೀಡಿದ್ರಿಂದ ಲಾಸ್ಟ್ ಓವರ್​ನಲ್ಲಿ ಡೆಲ್ಲಿ ಗೆಲ್ಲೋಕೆ 15 ರನ್ಸ್ ಬೇಕಿತ್ತು. ಈ ವೇಳೆ ಬೌಲಿಂಗ್​ಗೆ ಬಂದ ಶೆಫರ್ಡ್ ಅವರ ಎಸೆತಗಳನ್ನು ಕಿಲ್ಲರ್ ಮಿಲ್ಲರ್ ಬ್ಯಾಕ್​ ಟು ಬ್ಯಾಕ್ ಸಿಕ್ಸರ್​ಗಟ್ಟಿದ್ರು. ಆರ್​ಸಿಬಿ ಗೆಲುವನ್ನ ಕಸಿದುಕೊಂಡ್ರು. ಇನ್ನೂ 1 ಎಸೆತ ಬಾಕಿ ಇರುವಂತೆಯೇ ಪಂದ್ಯ ಗೆದ್ರು. ಈ ಮ್ಯಾಚ್ ಆದ್ಮೇಲೆ ರೊಮ್ಯಾರಿಯೋ ಶೆಫರ್ಡ್​ ವಿರುದ್ಧ ಕೆಲವ್ರು ಸಿಟ್ಟಾಗಿದ್ದಾರೆ. ಕೆರೆಬಿಯನ್ ದೈತ್ಯನನ್ನು ಪ್ಲೇಯಿಂಗ್ 11ನಲ್ಲಿ ಆಡಿಸೋದೇ ಬೇಡ. ಡ್ರಾಪ್ ಮಾಡಿ ಜೇಕಬ್ ಬೆಥೆಲ್​ರನ್ನ ಆಡಿಸಿ ಅಂತಿದ್ದಾರೆ. ಈ ಸೀಸನ್​ನಲ್ಲಿ ಬೌಲಿಂಗ್​ನಲ್ಲಿ ಸಿಕ್ಕಾಪಟ್ಟೆ ಎಕ್ಸ್​ಪೆನ್ಸಿವ್ ಆಗ್ತಿದ್ದಾರೆ ಅನ್ನೋದು ಅವ್ರ ವಾದ.

ಶೆಫರ್ಡ್ ಇಂಪ್ಯಾಕ್ಟ್!

ಎದುರಾಳಿ                          ಬೌಲಿಂಗ್                      ಬ್ಯಾಟಿಂಗ್

ಹೈದ್ರಾಬಾದ್                       54/3 (4)                      ಸಿಕ್ಕಿಲ್ಲ

ಚೆನ್ನೈ                                19(1)                        ಸಿಕ್ಕಿಲ್ಲ

ರಾಜಸ್ಥಾನ                           18(2)                         22(11)

ಮುಂಬೈ                             28(1.1)                        2(2)

ಲಕ್ನೋ                               0                               14(8)

ಡೆಲ್ಲಿ                                 17( 0.5)                     12(10)

ಸೋ ಇಲ್ಲಿ ಶೆಫರ್ಡ್ ಕಡೆಯಿಂದಲೂ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಬಂದಿದೆ. ಹೈದ್ರಾಬಾದ್ ವಿರುದ್ಧ ಮೂರು ವಿಕೆಟ್ಸ್ ಬೇಟೆಯಾಡಿದ್ರು. ಹೀಗಿದ್ರೂ ಮುಂಬೈ ಮತ್ತೆ ಡೆಲ್ಲಿ ವಿರುದ್ಧದ ಮ್ಯಾಚಲ್ಲಿ ಸ್ವಲ್ಪ ಎಕ್ಸ್​ಪೆನ್ಸಿವ್ ಆದ್ರು ಅಂತಾ ಪ್ಲೇಯಿಂಗ್ 11ನಿಂದಲೇ ಹೊರಗಿಡಿ ಅಂತಿದ್ದಾರೆ. ಆಕ್ಚುಲಿ ಡಿಸಿ ವಿರುದ್ಧ ಸೋಲೋಕೆ ಶೆಫರ್ಡ್ ಅಲ್ಲ ಕಾರಣ ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡೂ ವೀಕ್​ನೆಸ್ ಇತ್ತು.

ಆರ್ ಸಿಬಿ ಸೋಲಿಗೆ ಕಾರಣಗಳು!

ಪವರ್ ಪ್ಲೇ ಚೆನ್ನಾಗಿತ್ತು.. ನಂತ್ರ 10 ಓವರ್ ಗಳಲ್ಲಿ 76 ರನ್ಸ್ ಕಲೆ

ಮಿಡಲ್ ಆರ್ಡರ್ ನಲ್ಲಿ ರನ್ಸ್ ಬರಲಿಲ್ಲ 20 ರನ್ಸ್ ಶಾರ್ಟೇಜ್

ಚಿನ್ನಸ್ವಾಮಿಯಂತ ಪಿಚ್ ನಲ್ಲಿ 175 ರನ್ಸ್ ಉತ್ತಮ ಆಗಿರಲಿಲ್ಲ

18ಕ್ಕೆ ಮೂರು ವಿಕೆಟ್ ತೆಗೆದ್ರೂ ಆ ನಂತ್ರ ಬೌಲರ್ಸ್ ಫೇಲ್

ಸ್ಟಬ್ಸ್ ಮತ್ತು ರಾಹುಲ್ ನಡುವೆ 50+ ರನ್ ಗಳ ಜೊತೆಯಾಟ

ಕೊನೇ ಓವರ್ ನಲ್ಲಿ 15 ರನ್ಸ್ ಡಿಫೆನ್ಸ್ ಮಾಡಿಕೊಳ್ಳೋದು ಕಷ್ಟ

ಸೆಟಲ್ ಆಗಿದ್ದ ಸ್ಟಬ್ಸ್, ಕಿಲ್ಲರ್ ಮಿಲ್ಲರ್ ರಂಥ ಬ್ಯಾಟರ್ಸ್ ಹತ್ರ ಕಷ್ಟ

ಭುವಿ ಮತ್ತು ಜೋಶ್ ಎಳೆದಿದ್ದಕ್ಕೆ ಕ್ಲೋಸ್ ಗೇಮ್ ಆದ್ರೂ ಆಯ್ತು

ಡೆಲ್ಲಿ ವಿರುದ್ಧದ ಸೋಲಿಗೆ ಇಷ್ಟೆಲ್ಲಾ ಕಾರಣಗಳು ಇದೆ. ಹೀಗಿದ್ರೂ ಕೆಲವ್ರು ರೊಮ್ಯಾರಿಯೋ ಶೆಫರ್ಡ್ ಮಾತ್ರ ಕಾರಣ ಅನ್ನೋದು ಸರಿ ಇಲ್ಲ. ಇದೇ ಕಾರಣಕ್ಕೆ ಬೆಂಗಳೂರು ತಂಡದ ಹೆಡ್ ಕೋಚ್ ಌಂಡಿ ಫ್ಲವರ್ ಶೆಫರ್ಡ್ ಬೆನ್ನಿಗೆ ನಿಂತಿದ್ದಾರೆ. ಆಫ್ಟರ್ ದಿ ಮ್ಯಾಚ್ ಡ್ರೆಸ್ಸಿಂಗ್ ರೂಮ್​ನಲ್ಲಿ ಮಾತನಾಡಿರೋ ಫ್ಲವರ್, ನಾವು 100 ಪರ್ಸೆಂಟ್ ಶೆಫರ್ಡ್ ಬೆನ್ನಿಗೆ ಇರುತ್ತೇವೆ ಎಂದಿದ್ದಾರೆ. ಯಾಕಂದ್​ರೆ ಲಾಸ್ಟ್ ಸೀಸನ್​ನಲ್ಲಿ ಬೆಂಗಳೂರು ಚಾಂಪಿಯನ್ ಆಗುವಲ್ಲಿ ಶೆಫರ್ಡ್ ಕೊಡುಗೆಯೇ ದೊಡ್ಡದಿತ್ತು. ಚೆನ್ನೈ ವಿರುದ್ಧ 14 ಬಾಲಲ್ಲೇ 53 ರನ್ಸ್ ಬಂದಿತ್ತು. ಹಾಗೇ ಪಂಜಾಬ್ ವಿರುದ್ಧದ ಫೈನಲ್ ಮ್ಯಾಚಲ್ಲಿ ಶ್ರೇಯಸ್ ಅಯ್ಯರ್​ರ್ನ್ನ ಜಸ್ಟ್ 1 ರನ್​ಗೆ ಔಟ್ ಮಾಡಿ ಬಿಗ್ ಬ್ರೇಕ್ ಥ್ರ್ಯೂ ತಂದುಕೊಟ್ಟಿದ್ರು. ಹೀಗಾಗಿ ಶೆಫರ್ಡ್ ಬೆನ್ನಿಗೆ ನಿಲ್ಲೋದಾಗಿ ಹೇಳಿದ್ದಾರೆ. ಹೀಗಾಗಿ ಯಾವುದೋ ಒಂದು ಪಂದ್ಯದ ಪರ್ಪಾಮೆನ್ಸ್ ಇಟ್ಕೊಂಡು ಒಬ್ಬ ಆಟಗಾರನನ್ನ ಜಡ್ಜ್ ಮಾಡೋದು ತಪ್ಪು ಅನ್ನೋದನ್ನ ಹೇಳಿದ್ದಾರೆ. ಸೋ ಇದು ಒಂದ್ಕಡೆಯಾದ್ರೆ ಜೇಕಬ್ ಬೆಥೆಲ್​ರನ್ನ ಪ್ಲೇಯಿಂಗ್ 11ಗೆ ತನ್ನಿ ಅನ್ನೋದು ಇನ್ನೂ ಕೆಲವ್ರ ವಾದ. ಬೆಥೆಲ್ ಬೆಸ್ಟ್ ಪ್ಲೇಯರ್ ಅನ್ನೋದೇನೋ ನಿಜ. ಬ್ಯಾಟಿಂಗ್ ಜೊತೆ ಬೌಲಿಂಗ್ ಸ್ಕಿಲ್ಸ್ ಕೂಡ ಇದೆ. ಇಂಟರ್​ನ್ಯಾಷನಲ್ ಕ್ರಿಕೆಟ್​ನಲ್ಲೂ ವಿಕೆಟ್ಸ್ ತೆಗೆದಿದ್ದಾರೆ. ಆದ್ರೆ ವಿನ್ನಿಂಗ್ ಮೂಮೆಂಟ್ಸ್ ಇದ್ದಾಗ ಪ್ಲೇಯಿಂಗ್ 11ನಲ್ಲಿ ದಿಢೀರ್ ಬದಲಾವಣೆಗಳನ್ನ ಮಾಡೋದು ಕೆಲವು ಸಲ ರಿಸ್ಕ್ ಇರುತ್ತೆ. ಹೀಗಾಗೆಯೇ ಮ್ಯಾನೇಜ್​ಮೆಂಟ್ ಮೋಸ್ಟ್ ಆಫ್ ದಿ ಟೈಂ ವಿನ್ನಿಂಗ್ ಕಾಂಬಿನೇಷನ್ ಇದ್ರೆ ಅವ್ರನ್ನೇ ಕಂಟಿನ್ಯೂ ಮಾಡ್ತಾರೆ. ಶೆಫರ್ಡ್ ವಿಚಾರದಲ್ಲೂ ಇದೇ ಆಗುತ್ತೆ.

Shantha Kumari