ಬಿಗ್‌ಬಾಸ್ ಮನೆಯಲ್ಲಿ ಮಿತಿಮೀರಿದ ರೋಮ್ಯಾನ್ಸ್ – ಹಗ್ಗಿಂಗು, ಕಿಸ್ಸಿಂಗು ದೃಶ್ಯ ನೋಡಲು ಅಸಹ್ಯವಾಗುತ್ತದೆ ಎಂದ ವೀಕ್ಷಕರು

ಬಿಗ್‌ಬಾಸ್ ಮನೆಯಲ್ಲಿ ಮಿತಿಮೀರಿದ ರೋಮ್ಯಾನ್ಸ್ – ಹಗ್ಗಿಂಗು, ಕಿಸ್ಸಿಂಗು ದೃಶ್ಯ ನೋಡಲು ಅಸಹ್ಯವಾಗುತ್ತದೆ ಎಂದ ವೀಕ್ಷಕರು

ಬಿಗ್‌ಬಾಸ್ ಮನೆಯಲ್ಲಿ ಯಾರಿಂದ ಬೇಕಾದರೂ ತಪ್ಪಿಸಿಕೊಳ್ಳಬಹುದು. ಆದರೆ, ಕ್ಯಾಮರಾ ಕಣ್ಣಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಹೀಗಿರುವಾಗ ಸ್ಪರ್ಧಿಗಳು ಆಟ ಆಡೋದು ಬಿಟ್ಟು ಬೇರೇನೋ ಮಾಡಿದರೆ ಕಾಣಿಸದೇ ಇರುತ್ತಾ?. ಹಗ್ಗಿಂಗು, ಕಿಸ್ಸಿಂಗು, ರೋಮ್ಯಾನ್ಸು ಮಾಡುವ ಸ್ಪರ್ಧಿಗಳನ್ನು ನೋಡಿ ವೀಕ್ಷಕರು ಬಾಯಿಗೆ ಬಂದಂಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ನಮ್ರತಾ ಬಾಯಲ್ಲಿ ಯಾಕೆ ಆ ಪದ..? – ಕಾರ್ತಿಕ್, ವಿನಯ್‌ಗೂ ಅಡಲ್ಟ್ ಟಾಕ್ ಬೇಕಿತ್ತಾ?

ಬಿಗ್‌ಬಾಸ್ ಮನೆಯೆಂದ ಮೇಲೆ ಡ್ರಾಮಾ, ಜಗಳ, ಖುಷಿ ಎಲ್ಲಾ ಇರುತ್ತದೆ. ಇದನ್ನೇ ವೀಕ್ಷಕರು ಕೂಡಾ ಮೆಚ್ಚಿಕೊಳ್ಳುವುದು. ಇದರ ಮಧ್ಯೆ ಫ್ರೆಂಡ್ ಶಿಪ್, ಲವ್ ಸ್ಟೋರಿ, ಬ್ರೇಕಪ್ ಸ್ಟೋರಿಯೂ ಇರುತ್ತೆ. ಇದಕ್ಕೂ ವೀಕ್ಷಕರಿಂದ ತಕರಾರು ಇಲ್ಲ. ಆದರೆ, ಎಲ್ಲವುದಕ್ಕೂ ಒಂದು ಮಿತಿ ಅಂತಾ ಇರುತ್ತದೆ. ಹಿಂದಿ ಬಿಗ್‌ಬಾಸ್ ಮನೆಯಲ್ಲಿ ಮಾತ್ರ ಇವೆಲ್ಲವನ್ನೂ ಮೀರಿ ಇನ್ನೇನೋ ನಡೆಯುತ್ತಿದೆ. ಅದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಹಿಂದಿ ಬಿಗ್‌ಬಾಸ್ ಮನೆಯೊಳಗಡೆ ಸ್ಪರ್ಧಿಗಳು ಎಲ್ಲೆ ಮೀರಿ ವರ್ತಿಸ್ತಿರೋದಕ್ಕೆ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫ್ಯಾಮಿಲಿ ಜೊತೆ ಕುಳಿತು ಬಿಗ್ಬಾಸ್ ರಿಯಾಲಿಟಿ ಶೋವನ್ನು ನೋಡೋಕೆ ಸಾಧ್ಯಾನೇ ಇಲ್ಲ ಅಂತಿದ್ದಾರೆ. ಕಿರುತೆರೆ ನಟ-ನಟಿಯರಾದ ಸಮರ್ಥ್ ಜುರೆಲ್ ಹಾಗೂ ಇಶಾ ಮಾಳವಿಯಾ ರೋಮ್ಯಾನ್ಸ್ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.

ಹಿಂದಿ ಕಿರುತೆರೆಯ ಫೇಮಸ್ ನಟಿ ಕಾಮ್ಯಾ ಪಂಜಾಬಿ ಸಹ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್‌ನ ಹೊಸ ಸೀಸನ್‌ನಲ್ಲಿ ಇಶಾ ಮಾಳವಿಯಾ ಮತ್ತು ಸಮರ್ಥ್ ಜುರೆಲ್ ಅವರ ಅತಿಯಾದ ರೋಮ್ಯಾನ್ಸ್ ಕಾರ್ಯಕ್ರಮವನ್ನು ಹಾಳು ಮಾಡಿದೆ ಕಾಮ್ಯಾ ಪಂಜಾಬಿ ಟ್ವೀಟ್ ಮಾಡಿದ್ದಾರೆ. ನಟ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ, ಇಶಾ ಮತ್ತು ಸಮರ್ಥ್ ಅವರ ವರ್ತನೆಯಿಂದಾಗಿ ನನ್ನ ನೆಚ್ಚಿನ ರಿಯಾಲಿಟಿ ಶೋವನ್ನು ಈಗ ಕುಟುಂಬ ಸಮೇತವಾಗಿ ಕುಳಿತು ನೋಡಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಟ್ವೀಟ್ನಲ್ಲಿ, ಈಶಾ ಮತ್ತು ಸಮರ್ಥ್ ಅವರಿಗೆ ಧನ್ಯವಾದಗಳು, ಈಗ ನನ್ನ ನೆಚ್ಚಿನ ಕಾರ್ಯಕ್ರಮವನ್ನು ನನ್ನ ಕುಟುಂಬದೊಂದಿಗೆ ವೀಕ್ಷಿಸಲು ಸಾಧ್ಯವಿಲ್ಲ. ದಯವಿಟ್ಟು ನೀವಿಬ್ಬರೂ ಮನೆಯಿಂದ ಹೊರ ಹೋಗಿ ಮತ್ತು ಒಂದು ಪ್ರತ್ಯೇಕ ಬೆಡ್ರೂಮ್ ಹುಡುಕಿಕೊಳ್ಳಿ’ ಎಂದಿದ್ದಾರೆ. ಇದಕ್ಕೆ Biggboss ಹಾಗೂ Colorshindiಯನ್ನು ಟ್ಯಾಗ್ ಮಾಡಿದ್ದಾರೆ. ನಟಿ ಕಾಮ್ಯಾ ಪಂಜಾಬಿ ಟ್ವೀಟ್ಗೆ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್ಗಳು ಬಂದಿವೆ. ಒಬ್ಬ ಬಳಕೆದಾರರು, ಕುಟುಂಬ ಸಮೇತವಾಗಿ ಕುಳಿತು ನೋಡಬಹುದಾಗಿದ್ದ ಈ ರಿಯಾಲಿಟಿ ಶೋ ಈಗ ಅಸಹ್ಯವಾಗಿದೆ ಎಂದು ಬರೆದಿದ್ದಾರೆ, ಇನ್ನೊಬ್ಬರು, ಇಂಥಾ ದೃಶ್ಯಗಳನ್ನು ಕಟ್ ಮಾಡಿ ಪ್ರಸಾರ ಮಾಡುವ ಅವಕಾಶವಿದೆ. ಆದರೂ ಇವರು ಮಾಡುತ್ತಿಲ್ಲ. ಯಾಕೆಂದರೆ ಟಿಆರ್ಪಿಗಾಗಿ ಅವರೂ ಇಂಥದನ್ನು ಬಯಸುತ್ತಾರೆ’ ಎಂದು ಕಮೆಂಟಿಸಿದ್ದಾರೆ. ಇನ್ನೊಬ್ಬ ವ್ಯಕ್ತಿ, ‘ಮೇಡಂ ಇದು 16+ ಕಾರ್ಯಕ್ರಮ. ಆದ್ದರಿಂದ ಇದು ಖಂಡಿತವಾಗಿಯೂ ಕುಟುಂಬ ಪ್ರೇಕ್ಷಕರಿಗೆ ಅಲ್ಲ’ ಎಂದು ತಿಳಿಸಿದ್ದಾರೆ. ಸಮರ್ಥ್ ಹಾಗೂ ಇಶಾ, ಬಿಗ್ಬಾಸ್ ಮನೆಯಲ್ಲಿ ಯಾವಾಗಲೂ ಜೊತೆಯಾಗಿ ಓಡಾಡುವುದು, ಮಲಗುವುದು ಮಾಡುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ಇವರಿಬ್ಬರ ವರ್ತನೆ ಮಿತಿ ಮೀರ್ತಿದೆ ಅಂತಿದ್ದಾರೆ ಪ್ರೇಕ್ಷಕರು. ಇಬ್ಬರೂ ಹೋದಲ್ಲಿ, ಬಂದಲ್ಲಿ ಕಿಸ್ ಮಾಡಿಕೊಳ್ಳುವುದು, ಹಗ್ ಮಾಡುವುದು ಮಾಡುತ್ತಿದ್ದಾರೆ. ಅದಲ್ಲದೆ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಹೊಸ ವೀಡಿಯೊ ಕ್ಲಿಪ್ನಲ್ಲಿ ಸಮರ್ಥ್ ಇಶಾ ಅವರ ಸೀರೆಯನ್ನೆತ್ತಿ ಸೊಂಟಕ್ಕೆ ಕಿಸ್ ಮಾಡಲು ಯತ್ನಿಸಿದ್ದರು. ಬಾತ್ರೂಮ್ನಲ್ಲಿ ಸಮರ್ಥ್, ಇಶಾಳನ್ನು ಎಳೆದಾಡಿಕೊಂಡು ಕಿಸ್ ಮಾಡಲು ಯತ್ನಿಸುತ್ತಿದ್ದರು. ಸಮರ್ಥ್ ಹಾಗೂ ಇಶಾ ಇಬ್ಬರೂ ಬೆಡ್ ಮೇಲೆ ಕುಳಿತಿರುತ್ತಾರೆ. ಸಮರ್ಥ್, ಇಶಾಗೆ ಯಾವುದೋ ವಿಚಾರಕ್ಕಾಗಿ ಸಮಾಧಾನ ಮಾಡುತ್ತಿರುತ್ತಾನೆ. ಈ ಸಂದರ್ಭದಲ್ಲಿ ಆಕೆಯ ಮುಖ, ಭುಜವನ್ನು ಚುಂಬಿಸುತ್ತಾನೆ. ಸೀರೆಯನ್ನು ಸರಿಸಿ ಸೊಂಟಕ್ಕೆ ಕಿಸ್ ಮಾಡಲು ಸಹ ಪ್ರಯತ್ನಿಸುವುದನ್ನು ವೀಡಿಯೋದಲ್ಲಿ ನೋಡಬಹುದು. ಬಿಗ್‌ಬಾಸ್‌ನ ಈ ವೀಡಿಯೋ ನೋಡಿ ಪ್ರೇಕ್ಷಕರು ಕಿಡಿಕಾರಿದ್ದಾರೆ.

Sulekha