ರನ್ ಮಷಿನ್ ವಿರಾಟ್ ಕೊಹ್ಲಿ ಕಟ್ಟಿದ್ದ ವಾಚ್ ಬೆಲೆಯೇ ಅಬ್ಬಬ್ಬಾ – ಕಿಂಗ್ ಕೊಹ್ಲಿಗೆ ಅದೆಷ್ಟು ಮೂಲಗಳಿಂದ ಆದಾಯ?

ರನ್ ಮಷಿನ್ ವಿರಾಟ್ ಕೊಹ್ಲಿ ಕಟ್ಟಿದ್ದ ವಾಚ್ ಬೆಲೆಯೇ ಅಬ್ಬಬ್ಬಾ – ಕಿಂಗ್ ಕೊಹ್ಲಿಗೆ ಅದೆಷ್ಟು ಮೂಲಗಳಿಂದ ಆದಾಯ?

ವಿರಾಟ್ ಕೊಹ್ಲಿ. ಕ್ರಿಕೆಟ್ ಲೋಕದ ರನ್ ಮಷಿನ್. ಕ್ರೀಡಾಂಗಣದಲ್ಲಿ ಕೊಹ್ಲಿ ಇದ್ದರೆ ಅದರ ಕ್ರೇಜ್ ಬೇರೆ ಲೆವೆಲ್ ಗೆ ಇರುತ್ತೆ. ಭಾರತೀಯ ಕ್ರಿಕೆಟ್ ತಂಡದ (Indian Cricket Team) ಆಟಗಾರ ಹಾಗೂ ತಂಡದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ ವೃತ್ತಿಜೀವನದಲ್ಲಿ ಹಲವು ದಾಖಲೆಗಳನ್ನ ಮುರಿದು ವಿಶ್ವವಿಖ್ಯಾತರಾಗಿದ್ದಾರೆ. ದೇಶದಲ್ಲೇ ಅತ್ಯಂತ ಪ್ರಸಿದ್ಧ ಕ್ರೀಡಾಪಟುವಾಗಿರುವ ವಿರಾಟ್​ ಹಲವು ಮೂಲಗಳಿಂದ ಆದಾಯಗಳಿಸುತ್ತಿದ್ದಾರೆ. ಬಿಸಿಸಿಐ (Bcci) ಒಪ್ಪಂದವಲ್ಲದೆ, ಜಾಹಿರಾತುಗಳಿಂದ (Endorsement) ಹಾಗೂ ಸ್ವಂತ ಬ್ರ್ಯಾಂಡ್​ ಕಂಪನಿಯನ್ನು ಹೊಂದಿರುವ ವಿರಾಟ್​ ಪ್ರಸ್ತುತ ದೇಶದಲ್ಲಿ ಹೆಚ್ಚು ಆದಾಯಗಳಿಸುವ ಕ್ರೀಡಾಪಟುವಾಗಿದ್ದಾರೆ. ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಅವರ ನಿವ್ವಳ ಆಸ್ತಿ ಮೌಲ್ಯ 1050 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.

ಜಗತ್ತಿನ ಶ್ರೀಮಂತ ಕ್ರಿಕೆಟರ್ ಆಗಿರೋ ಕೊಹ್ಲಿ, ಎಲ್ಲದರಲ್ಲೂ ಐಷಾರಾಮಿಯಾಗಿ ಇದ್ದಾರೆ. ಆಫ್​ಫೀಲ್ಡ್​ನಲ್ಲಿ ಕೊಹ್ಲಿ ಧರಿಸೋ ಬಟ್ಟೆ, ಶೂಸ್ ಸೇರಿದಂತೆ ಪ್ರತಿಯೊಂದು ವಸ್ತುವಿನ ಬೆಲೆ ಲಕ್ಷ, ಲಕ್ಷದಲ್ಲೇ ಇರುತ್ತೆ.  ಸೋಷಿಯಲ್ ಮೀಡಿಯಾ ಮೂಲಕವೇ ಕೊಹ್ಲಿಗೆ ಕೋಟ್ಯಂತರ ರೂಪಾಯಿ ಆದಾಯ ಹರಿದು ಬರುತ್ತೆ. ಬಿಸಿಸಿಐ, ಐಪಿಎಲ್‌ನಿಂದ ಬರೋ ಸಂಬಳ, ಜಾಹೀರಾತು ಶೂಟಿಂಗ್, ಸ್ವಂತ ವ್ಯಾಪಾರ ಸೇರಿದಂತೆ ವಿವಿಧ ಮೂಲಗಳಿಂದ ಕೊಹ್ಲಿ ವರ್ಷಕ್ಕೆ ನೂರಾರು ಕೋಟಿ ಗಳಿಸ್ತಾರೆ.

ಇದನ್ನೂ ಓದಿ : ಆರ್‌ಸಿಬಿ ತಂಡಕ್ಕೆ ಸಿಕ್ತು ಆನೆ ಬಲ – ಹೊಸ ಮುಖ್ಯ ಕೋಚ್ ಆಗಿ ಆ್ಯಂಡಿ ಫ್ಲವರ್ ನೇಮಕ

ಇತ್ತೀಚೆಗೆ ಕೊಹ್ಲಿ ಧರಿಸಿದ್ದ ವಾಚ್ ಭಾರೀ ಸುದ್ದಿಯಾಗುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಇರಲಿಲ್ಲ. ಆದ್ರೆ, ಸಬ್​ಸ್ಟಿಟ್ಯುಟ್​ ಆಗಿ ಮೈದಾನಕ್ಕಿಳಿದಿದ್ರು. ಈ ವೇಳೆ ಕೊಹ್ಲಿ ಧರಿಸಿದ್ದ ವಾಚ್​ ಈಗ ಹಾಟ್ ಟಾಪಿಕ್ ಆಗಿದೆ. ಪಾಟೆಕ್ ಫಿಲಿಪ್ ಕಂಪನಿಯ ಅಕ್ವಾನಾಟ್ ವಾಚ್​​ನ ಕೊಹ್ಲಿ ಕಟ್ಟಿ ಕೊಂಡಿದ್ರು. ಈ ವಾಚ್​​ನ ಬೆಲೆ ಬರೋಬ್ಬರಿ 88 ಲಕ್ಷ ರೂಪಾಯಿಯಾಗಿದೆ. ಇನ್ನು ಕೊಹ್ಲಿ ಭಾರತಕ್ಕೆ ಮರಳೋವಾಗ ಮತ್ತೊಂದು ವಾಚ್ ಧರಿಸಿದ್ರು. ಇದ್ರ ಬೆಲೆ 3.2 ಕೋಟಿ ರೂಪಾಯಿ. ರೋಲೆಕ್ಸ್ ಕಂಪನಿಯ ಡೇಟೋನಾ ವಾಚ್ ಇದಾಗಿದೆ. ಇವೆರೆಡು ಅಷ್ಟೇ ಅಲ್ಲ, ಕೊಹ್ಲಿ ಬಳಿ ಹಲವು ಲಕ್ಸುರಿ ವಾಚ್​ಗಳ ಕಲೆಕ್ಷನ್ನೇ ಇದೆ. ಈ ಎಲ್ಲಾ ವಾಚ್​ಗಳ ಮೌಲ್ಯವೇ 20 ಕೋಟಿಗೂ ಅಧಿಕವಾಗಿದೆ.

ಕ್ರಿಕೆಟ್ ಹೊರತಾಗಿ, ಕೊಹ್ಲಿ ಹಲವಾರು ಬ್ರ್ಯಾಂಡ್ ಅನುಮೋದನೆಗಳನ್ನು ಹೊಂದಿದ್ದಾರೆ ಮತ್ತು ಪೂಮಾ, ಆಡಿ, MRF ಮತ್ತು ಇತರ ಹಲವು ಬ್ರಾಂಡ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಅವರು ತಮ್ಮದೇ ಆದ ಫ್ಯಾಷನ್ ಲೇಬಲ್, ರಾಗ್ನ್ ಮತ್ತು ಚಿಸೆಲ್ ಎಂಬ ಜಿಮ್‌ಗಳು ಮತ್ತು ಫಿಟ್‌ನೆಸ್ ಕೇಂದ್ರಗಳ ಸರಣಿಯನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಭಾರತದಲ್ಲಿ ಮನೆ ಮತ್ತು ಅಪಾರ್ಟ್‌ಮೆಂಟ್ ಸೇರಿದಂತೆ ಹಲವಾರು ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ. ಮುಂಬೈನ ವರ್ಲಿ ಪ್ರದೇಶದಲ್ಲಿ ಕೊಹ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. 2016 ರಲ್ಲಿ ಸುಮಾರು ರೂ. 34 ಕೋಟಿಗೆ ಈ ಮನೆಯನ್ನು ವಿರಾಟ್ ಖರೀದಿಸಿದ್ದಾರೆ. ಕೊಹ್ಲಿ ಅವರು ಗುರುಗ್ರಾಮ್‌ನ ಡಿಎಲ್‌ಎಫ್ ಫೇಸ್-1 ಏರಿಯಾದಲ್ಲಿ ಮನೆಯನ್ನು ಹೊಂದಿದ್ದಾರೆ, ಇದನ್ನು 2015 ರಲ್ಲಿ ಸುಮಾರು ರೂ. 80 ಕೋಟಿಗೆ ಖರೀದಿಸಿದ್ದಾರೆ.

suddiyaana