RO-KO ಆಟಕ್ಕೆ ಗಂಭೀರ್ ಗಪ್ ಚುಪ್ – 2027ರ ವಿಶ್ವಕಪ್ ಆಡಲು ಒಪ್ಪಿದ್ರಾ?
ಬ್ಯಾಟಿಂಗ್ ಕೋಚ್ ಬಿಚ್ಚಿಟ್ರು ಸೀಕ್ರೆಟ್!

RO-KO ಆಟಕ್ಕೆ ಗಂಭೀರ್ ಗಪ್ ಚುಪ್ – 2027ರ ವಿಶ್ವಕಪ್ ಆಡಲು ಒಪ್ಪಿದ್ರಾ?ಬ್ಯಾಟಿಂಗ್ ಕೋಚ್ ಬಿಚ್ಚಿಟ್ರು ಸೀಕ್ರೆಟ್!

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಜೋಡೆತ್ತು. ಕಳೆದ ಒಂದೂವರೆ ದಶಕದಿಂದ  ಭಾರತದ ಯಶಸ್ಸಿನ ಹಿಂದೆ ಈ ಇಬ್ಬರು ಬೆನ್ನೆಲುಬಾಗಿದ್ದಾರೆ. ಹೀಗಿದ್ರೂ ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದಲ್ಲಿ ಇವ್ರನ್ನ ನಡೆಸಿಕೊಳ್ತಿರೋ ಬಗ್ಗೆ ಅಪಸ್ವರಗಳು ಕೇಳಿ ಬರ್ತಿವೆ. ಗೌತಮ್ ಗಂಭೀರ್ ನೆಗ್ಲೆಕ್ಟ್ ಮಾಡ್ತಿದ್ದಾರೆ ಅನ್ನೋದೇ ಅಭಿಮಾನಿಗಳ ಸಿಟ್ಟಿಗೆ ಪ್ರಮುಖ ಕಾರಣ.

ಇದನ್ನೂ ಓದಿ : NZ ಪಾಲಿಗೆ ವಿಲನ್ KL – ಭಾರತದ REAL ಗೇಮ್ ಚೇಂಜರ್

ಟೆಸ್ಟ್ ಮತ್ತು ಟಿ-20ಐ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರೋ ಲೆಜೆಂಡರಿ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಏಕದಿನ ಮಾದರಿಯಲ್ಲಿ ಮಾತ್ರ ಆಡ್ತಿದ್ದಾರೆ. 2027ರ ಏಕದಿನ ವಿಶ್ವಕಪ್​​ನಲ್ಲಿ ಆಡ್ಬೇಕು ಟ್ರೋಫಿ ಗೆಲ್ಬೇಕು ಅನ್ನೋದೇ ಅವ್ರ ಪರಮಗುರಿ.. ಆದ್ರೆ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಗೌತಮ್ ಗಂಭೀರ್ ಮಾತ್ರ ಈ ಬಗ್ಗೆ ಇಂಟ್ರೆಸ್ಟ್ ತೋರಿಸ್ತಿರಲಿಲ್ಲ. ಇದು ಎದ್ದು ಕಾಣ್ತಿತ್ತು ಕೂಡ. ಆದ್ರೀಗ ರೋಕೋ ವಿಚಾರದಲ್ಲಿ ಗಂಭೀರ್ ಥಂಡಾ ಹೊಡೆದ್ರಾ ಅನ್ನೋ ಮಾತುಗಳು ಶುರುವಾಗಿವೆ. ಅದಕ್ಕೆ ಕಾರಣ ಬ್ಯಾಟಿಂಗ್ ಕೋಚ್ ನೀಡಿರೋ ಹೇಳಿಕೆ.

ಮೂವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದ ಸೀತಾಂಶು!

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹಾಗೇ ಹೆಡ್ ಕೋಚ್ ಗೌತಮ್ ಗಂಭೀರ್ ನಡುವೆ ಯಾವುದೇ ಅಸಮಾಧಾನಗಳಿಲ್ಲ.. ಎಲ್ಲವೂ ಚೆನ್ನಾಗಿದೆ ಅಂತಾ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಹೇಳಿದ್ದಾರೆ. ರೋಹಿತ್ ಮತ್ತು ಕೊಹ್ಲಿ ಇಬ್ರೂ ಕೂಡ ಸಾಕಷ್ಟು ಎಕ್ಸ್​ಪೀರಿಯನ್ಸ್ ಇರೋ ಪ್ಲೇಯರ್ಸ್. ಇಬ್ಬರು ಕೂಡ ಗೌತಮ್ ಗಂಭೀರ್ ಜೊತೆ ನಿರಂತರವಾಗಿ ಚರ್ಚೆ ಮಾಡ್ತಾರೆ. ಹಾಗೇ ಭವಿಷ್ಯದ ತಂಡದ ಬಗ್ಗೆಯೂ ಪರಸ್ಪರ ಅಭಿಪ್ರಾಯಗಳನ್ನ ಹಂಚಿಕೊಳ್ತಾರೆ. ರೋಹಿತ್ ಮತ್ತು ಕೊಹ್ಲಿ 2027 ರ ಏಕದಿನ ವಿಶ್ವಕಪ್ ಆಡುವ ಬಗ್ಗೆ ಆಸೆಯನ್ನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆಯೂ ಮ್ಯಾನೇಜ್​ಮೆಂಟ್ ಚರ್ಚಿಸುತ್ತದೆ. ಪ್ರತೀ ಸರಣಿಯ ವೇಳೆಯೂ ಪಂದ್ಯದ ಆರಂಭ ಮತ್ತು ಅಂತ್ಯಕ್ಕೂ ಮುನ್ನ ಒಂದಷ್ಟು ಮಾತುಕತೆ ನಡೆಯುತ್ತೆ. ಅವ್ರಿಬ್ಬರು ಗೌತಮ್ ಜೊತೆ ಮಾತನಾಡುವುದನ್ನು ನಾನು ಯಾವಾಗಲೂ ನೋಡುತ್ತೇನೆ ಎಂದು ಸೀತಾಂಶು ಹೇಳಿದ್ದಾರೆ. ಹಾಗೇ ಸೋಶಿಯಲ್ ಮೀಡಿಯಾದಲ್ಲಿ ಬರೋದೆಲ್ಲವೂ ಸತ್ಯ ಅಲ್ಲ ಅನ್ನೋ ಮೂಲಕ ವೈರಲ್ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

2027ರ ವಿಶ್ವಕಪ್ ಗೂ ಸಿದ್ಧವಾಗ್ತಿದ್ಯಾ ಯೋಜನೆ?

ಇನ್ನು ಇದೇ ವೇಳೆ 2027ರ ವಿಶ್ವಕಪ್ ಸಿದ್ಧತೆ ಬಗ್ಗೆಯೂ ಸೀತಾಂಶು ಮಾತ್ನಾಡಿದ್ದಾರೆ. ನೆಕ್ಸ್​ಟ್ ಇಯರ್ ಸೌತ್ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಯೋಜನೆಗಳ ಬಗ್ಗೆಯೂ ಮೂವರು ತಮ್ಮ ತಮ್ಮ ಯೋಜನೆಗಳನ್ನ ಶೇರ್ ಮಾಡ್ತಾರೆ ಎಂದಿದ್ದಾರೆ. ಸೋ ಅಲ್ಲಿಗೆ ರೋಕೋ ಜೋಡಿ 2027ರ ವಿಶ್ವಕಪ್​ನಲ್ಲೂ ಆಡ್ತಾರೆ ಅನ್ನೋ ಬಗ್ಗೆ ಹಿಂಟ್ ಕೊಟ್ಟಿದ್ದಾರೆ. ಅಷ್ಟಕ್ಕೂ ಇಲ್ಲಿ ಬಿಸಿಸಿಐ ಮತ್ತು ಗೌತಮ್ ಗಂಭೀರ್ ಸೈಲೆಂಟ್ ಆಗೋಕೆ ಕಾರಣ ಕೂಡ ಇದೆ. ಯಾಕಂದ್ರೆ ಟೀಂ ಇಂಡಿಯಾ ಪರ ಏಕದಿನ ಮಾದರಿಯಲ್ಲಿ ದಿ ಬೆಸ್ಟ್ ಬ್ಯಾಟಿಂಗ್ ಪರ್ಫಾಮೆನ್ಸ್ ಬರ್ತಿರೋದೇ ಇಬವ್ರಿಬ್ಬರ ಬ್ಯಾಟಿಂದ. ಕಳೆದ ವರ್ಷ ನಂಬರ್ 1, ನಂಬರ್ 2 ಬ್ಯಾಟರ್​ಗಳಾಗಿ ಹೊರ ಹೊಮ್ಮಿದ್ರು. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧವೂ ವಿರಾಟ್ ಕೊಹ್ಲಿ 93 ರನ್ಸ್ ಹೊಡೆದಿದ್ರು. ಆಸ್ಟ್ರೇಲಿಯಾ ಸೀರೀಸ್​ನಿಂದಲೂ ಇಬ್ಬರ ಆಟ ಬೊಂಬಾಟ್ ಆಗಿದೆ. ಸೋ ರೋಹಿತ್ ಮತ್ತು ಕೊಹ್ಲಿ ತಂಡದಲ್ಲಿ ಇರೋದು ಅವ್ರಿಬ್ಬರಿಗಿಂತ ತಂಡಕ್ಕೇ ಹೆಚ್ಚು ಲಾಭ ಇದೆ. ಹೀಗಾಗಿ ರೋಕೊ ಗತ್ತು ಗೊತ್ತಾದ್ಮೇಲೆ ಗಂಭೀರ್ ಗಪ್ ಚುಪ್ ಆದ್ರಾ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಒಟ್ನಲ್ಲಿ ಬ್ಯಾಟಿಂಗ್ ಕೋಚ್ ಮಾತುಗಳಿಂದ ಒಂದಂತು ಕನ್ಫರ್ಮ್ ಆಗ್ತಿದೆ. ನೆಕ್ಸ್​ಟ್ ಇಯರ್ ರೋಹಿತ್ ಮತ್ತು ಕೊಹ್ಲಿ ಏಕದಿನ ವಿಶ್ವಕಪ್ ಆಡೋದು ಪಕ್ಕಾ. ಯಾಕಂದ್ರೆ ಫಾರ್ಮ್, ಫಿಟ್​ನೆಸ್, ಬ್ಯಾಟಿಂಗ್ ಖದರ್ ಅಂತಾ ನೋಡ್ದಾಗ ಅವ್ರು ಯಾವತ್ತೂ ಹಿಂದೆ ಬಿದ್ದಿಲ್ಲ.  ಬೀಳೋದೂ ಇಲ್ಲ.

Shantha Kumari