ಹೊಸ ಐಶರಾಮಿ ಕಾರು ಖರೀದಿಸಿದ ಹಿಟ್‌ಮ್ಯಾನ್‌! – ರೋಹಿತ್‌ ಶರ್ಮಾ ಕಾರಿನ ನಂಬರ್‌ ಪ್ಲೇಟ್‌ ವಿಶೇಷತೆಯೇನು?

ಹೊಸ ಐಶರಾಮಿ ಕಾರು ಖರೀದಿಸಿದ ಹಿಟ್‌ಮ್ಯಾನ್‌! – ರೋಹಿತ್‌ ಶರ್ಮಾ ಕಾರಿನ ನಂಬರ್‌ ಪ್ಲೇಟ್‌ ವಿಶೇಷತೆಯೇನು?

ಟೀಮ್‌ ಇಂಡಿಯಾ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಹೊಸ ಐಶರಾಮಿ ಕಾರು ಖರೀದಿಸಿದ್ದಾರೆ. ರೋಹಿತ್‌ ಕೆಂಪು ಬಣ್ಣದ ಲ್ಯಾಂಬೋರ್ಗಿನಿ ಕಾರೊಂದನ್ನು ಖರೀದಿಸಿದ್ದು, ಇದ್ರ ನಂಬರ್‌ ಪ್ಲೇಟ್‌ ಈಗ ಭಾರಿ ಚರ್ಚೆಯಲ್ಲಿದೆ. ರೋಹಿತ್‌ ಕಾರಿನ ನಂಬರ್‌ ಪ್ಲೇಟ್‌ 3015 ಆಗಿದ್ದು, ಅಭಿಮಾನಿಗಳ ಆ ನಂಬರ್‌ನ ವಿಶೇಷತೆ ಏನು ಅನ್ನೋದನ್ನ ಪತ್ತೆಹಚ್ಚಿದ್ದಾರೆ.

ಇದನ್ನೂ ಓದಿ: ನನ್ನ ಮಾತಿನಿಂದ ಹೀಗಾಗುತ್ತೆ ಎಂದು ಗೊತ್ತಿರ್ಲಿಲ್ಲ! – ಸಂಪುಟದಿಂದ ವಜಾಗೊಂಡ ಬೆನ್ನಲ್ಲೇ ರಾಜಣ್ಣ ಪಶ್ಚಾತ್ತಾಪದ‌ ಮಾತು!

ರೋಹಿತ್‌ ಶರ್ಮಾಗೆ ಕಾರ್‌ ಕ್ರೇಜ್‌ ಬಗ್ಗೆ ಹೇಳಬೇಕೆಂದಿಲ್ಲ. ಈಗಾಗಲೇ ಹಿಟ್‌ಮ್ಯಾನ್‌ ಐಶರಾಮಿ ಕಾರುಗಳನ್ನ ಹೊಂದಿದ್ದಾರೆ. ಈ ಹಿಂದೆ ರೋಹಿತ್‌ ಶರ್ಮಾ ಬಳಿ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಉರುಸ್ ಕಾರು ಸಖತ್‌ ಹೈಲೈಟ್‌ ಆಗಿತ್ತು. ಆ ಕಾರನ್ನು ಐಪಿಎಲ್‌ ಡ್ರೀಮ್‌ 11  ಫ್ಯಾಂಟಸಿ ಕ್ರಿಕೆಟ್ ಸ್ಪರ್ಧೆಯ ವಿಜೇತರಿಗೆ ನೀಡಿದ್ದರು. ಇದೀಗ ಮತ್ತೊಂದು ಕಾರು ಖರೀದಿಸಿದ್ದಾರೆ. ರೋಹಿತ್ ಅವರ ಹೊಸ ಕಾರಿನ ನಂಬರ್ ಪ್ಲೇಟ್ 3015 ಆಗಿದ್ದು, ಅಭಿಮಾನಿಗಳು ಡಿಕೋಡ್ ಮಾಡಿದ್ದಾರೆ.  ‘3015’ ಸಂಖ್ಯೆಯು ಹಿಟ್‌ಮ್ಯಾನ್‌ನ ಇಬ್ಬರು ಮಕ್ಕಳ ಜನ್ಮದಿನಗಳನ್ನು ಸೂಚಿಸುತ್ತದೆ. ಇನ್ನೊಂದು ವಿಶೇಷ ಎಂದರೆ 30 ಪ್ಲಸ್‌ 15 ಸೇರಿದರೆ ಒಟ್ಟು ಮೊತ್ತವು 45 ಆಗುತ್ತದೆ. 45 ರೋಹಿತ್‌ ಅವರ ಜೆರ್ಸಿ ನಂಬರ್‌ ಆಗಿದೆ. ಒಟ್ಟಾರೆ ಈ ಕಾರ್‌ ಅವರ ಪಾಲಿಗೆ ಭಾವನಾತ್ಮಕವಾಗಿದೆ.

‘264’ ನೋಂದಣಿ ಸಂಖ್ಯೆಯನ್ನು ಹೊಂದಿರುವ ರೋಹಿತ್ ಅವರ ಲ್ಯಾಂಬೋರ್ಗಿನಿ ಕಾರು, ಬಹಳ ಹಿಂದಿನಿಂದಲೂ ಅವರಿಗೆ ಭಾವನಾತ್ಮಕ ಮೌಲ್ಯವನ್ನು ಹೊಂದಿತ್ತು. ಇದು ಅವರು ಏಕದಿನ ಪಂದ್ಯಗಳಲ್ಲಿ ಬಾರಿಸಿದ 264 ರನ್‌ಗಳ ವಿಶ್ವ ದಾಖಲೆಯ ನೆನಪಿಗಾಗಿ ಈ ನಂಬರನ್ನು ತಮ್ಮ ಕಾರಿಗೆ ನೋಂದಣಿ ಮಾಡಿಸಿಕೊಂಡಿದ್ದರು. ಹಲವು ಬಾರಿ ರೋಹಿತ್‌ ಈ ಕಾರಿನಲ್ಲಿ ಮುಂಬೈನ ಹಲವು ಬೀದಿಗಳಲ್ಲಿ ಸುತ್ತಾಡಿದ ವಿಡಿಯೊಗಳು ಕೂಡ ವೈರಲ್‌ ಆಗಿತ್ತು. ಇದೇ ಕಾರಿನಲ್ಲಿ ಅತಿ ವೇಗದ ಚಾಲನೆ ಮಾಡಿ ಮೂರು ಬಾರಿ ದಂಡ ಕೂಡ ಕಟ್ಟಿಸಿಕೊಂಡಿದ್ದರು.

Shwetha M