ವಿರಾಟ್ ಕೊಹ್ಲಿ Vs ರೋಹಿತ್ ಶರ್ಮಾ – ಸಿಕ್ಸರ್ HITಮ್ಯಾನ್ ಗೆ KING ಶಾಕ್
IPLನಲ್ಲೇ ಪವರ್ ಹಿಟ್ಟರ್ ಕ್ರಿಸ್ ಗೇಲ್

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ ಪ್ಲೇಯರ್ಸ್. ಟೀಂ ಇಂಡಿಯಾಗೆ ಅವ್ರು ನೀಡಿರೋ ಕೊಡುಗೆಯನ್ನ ಯಾವ ಕ್ರಿಕೆಟ್ ಅಭಿಮಾನಿಗಳೂ ಮರೆಯೋಕೆ ಸಾಧ್ಯನೇ ಇಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ಅವ್ರಿಬ್ಬರ ನಡುವಿನ ಬಾಂಡಿಂಗ್ ಅಣ್ತಮ್ಮಂದಿರಿಗಿಂತ ಹೆಚ್ಚಾಗಿದೆ. ಇದೀಗ ಅದೇ ಆಟಗಾರರ ನಡುವೆ ಐಪಿಎಲ್‌ನಲ್ಲಿ ರೇಸ್ ನಡೀತಿದೆ? ನಾನಾ ನೀನಾ ಎನ್ನುವ ಪೈಪೋಟಿ ಏರ್ಪಟ್ಟಿದೆ? ಏನದು ಕದನ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಿಲ್ಲ ರಂಗ ಭಾಷಾ ಬಗ್ಗೆ ಕಿಚ್ಚನಿಂದ ಗುಡ್ ನ್ಯೂಸ್ – ಶೂಟಿಂಗ್‌ಗೆ ಡೇಟ್ ಫಿಕ್ಸ್!
ಟೀಂ ಇಂಡಿಯಾದಲ್ಲಿ ಆಡುವಾಗ ರಾಮ ಲಕ್ಷ್ಮಣರಂತಿರೋ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಐಪಿಎಲ್ ಅಂತಾ ಬಂದಾಗ ಎದುರಾಳಿಗಳಾಗಿದ್ದಾರೆ. ಹಿಟ್ಮ್ಯಾನ್ ರೋಹಿತ್ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದ್ರೆ ಕಿಂಗ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡ್ತಾರೆ. ಇಬ್ಬರೂ ಕೂಡ ಆಯಾ ಫ್ರಾಂಚೈಸಿಗಳಿಗೆ ಐಕಾನ್ ಪ್ಲೇಯರ್ಗಳಾಗಿದ್ದು ಕೋಟಿಗಟ್ಟಲೆ ಫ್ಯಾನ್ಸ್ ಇದ್ದಾರೆ. ಮೈದಾನದಲ್ಲಿ ಸಾಕಷ್ಟು ದಾಖಲೆಗಳನ್ನ ಬರೆದಿದ್ದು ಈಗರೂ ಬರೆಯುತ್ತಲೇ ಇದ್ದಾರೆ. ಇದೀಗ ರೋಹಿತ್ರ ಒಂದು ದಾಖಲೆಯನ್ನ ವಿರಾಟ್ ಕೊಹ್ಲಿ ಬ್ರೇಕ್ ಮಾಡೋಕೆ ಹೊರಟಿದ್ದಾರೆ.
ಐಪಿಎಲ್ ನಲ್ಲಿ ರೋಹಿತ್ & ಕೊಹ್ಲಿ ಸಿಕ್ಸರ್ ಸ್ಪರ್ಧೆ!
ಸದ್ಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೈಯೆಸ್ಟ್ ಸಿಕ್ಸರ್ ರೇಸ್ ನಲ್ಲಿದ್ದಾರೆ. ರೋಹಿತ್ ಶರ್ಮಾ ಅವರ ವೃತ್ತಿಜೀವನದ ಐಪಿಎಲ್ ದಾಖಲೆಯನ್ನ ಸರಿಗಟ್ಟಲು ವಿರಾಟ್ ಕೊಹ್ಲಿ ಕೇವಲ ನಾಲ್ಕು ಸಿಕ್ಸರ್‌ಗಳ ದೂರದಲ್ಲಿದ್ದಾರೆ. ರೋಹಿತ್ ಶರ್ಮಾ 256 ಇನ್ನಿಂಗ್ಸ್‌ಗಳಲ್ಲಿ 282 ಸಿಕ್ಸರ್ ಳೊಂದಿಗೆ ಸಾರ್ವಕಾಲಿಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 248 ಇನ್ನಿಂಗ್ಸ್‌ಗಳಲ್ಲಿ 278 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಆಟಗಾರನೇ ರೋಹಿತ್ ಶರ್ಮಾ. ಇನ್ನು ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 5 ಸಿಕ್ಸರ್ ಬಾರಿಸಿದ್ರೂ ರೋಹಿತ್ ಶರ್ಮಾರನ್ನ ಹಿಂದಿಕ್ಕಲಿದ್ದಾರೆ. ಬಟ್ ಈ ರೇಸ್ನಲ್ಲಿ ಫಸ್ಟ್ನಲ್ಲಿರೋ ಯುನಿವರ್ಸಲ್ ಬಾಸ್ ಕ್ರಿಸ್ಗೇಲ್ ಅವ್ರ ದಾಖಲೆಯನ್ನ ಬಹುಶಃ ಯಾರಿಂದಲೂ ಬ್ರೇಕ್ ಮಾಡೋಕೆ ಸಾಧ್ಯ ಇಲ್ಲ ಅನ್ಸುತ್ತೆ. ನಾಲ್ಕು ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ಐಪಿಎಲ್ ಸಿಕ್ಸ್-ಹಿಟ್ಟಿಂಗ್ ಸಂಖ್ಯೆಯೇ ಬೆರಗು ಮೂಡಿಸಿತ್ತು. ಕೇವಲ 141 ಇನ್ನಿಂಗ್ಸ್ಗಳಲ್ಲೇ 357 ಸಿಕ್ಸರ್‌ಗಳೊಂದಿಗೆ ಟಾಪ್ 1ನಲ್ಲಿದ್ದಾರೆ. ಆ ಸಿಕ್ಸರ್‌ಗಳಲ್ಲಿ 127 ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಾಖಲಾಗಿವೆ. 2012 ರಲ್ಲಿ ಒಂದೇ ಸೀಸನ್ನಲ್ಲಿ 51 ಸಿಕ್ಸರ್‌ಗಳನ್ನು ಬಾರಿಸಿದ್ದ ಗೇಲ್ 2013 ರಲ್ಲಿ ಒಂದೇ ಸೀಸನ್ನಲ್ಲಿ 59 ಸಿಕ್ಸರ್‌ಗಳ ದಾಖಲೆ ಬರೆದಿದ್ರು.
ಟಿ-20ಯಲ್ಲಿ 13 ಸಾವಿರ ರನ್ ಗಳ ಮೈಲುಗಲ್ಲು ದಾಟಿದ ಕೊಹ್ಲಿ!
ಇನ್ನು ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮಿಂಚುತ್ತಿದ್ದಾರೆ ಮತ್ತು ಇತ್ತೀಚೆಗೆ 13,000 ಟಿ20 ರನ್‌ಗಳನ್ನು ಕಂಪ್ಲೀಟ್ ಮಾಡಿದ್ದಾರೆ. ಈ ಮೈಲಿಗಲ್ಲು ಸಾಧಿಸಿದ ಐದನೇ ಆಟಗಾರ ಮತ್ತು ಈ ಮೈಲಿಗಲ್ಲು ಸಾಧಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, 256 ಪಂದ್ಯಗಳಿಂದ ಎಂಟು ಶತಕಗಳು ಸೇರಿದಂತೆ 8168 ರನ್‌ಗಳನ್ನು ಗಳಿಸಿದ್ದಾರೆ. 18ನೇ ಸೀಸನ್ನಲ್ಲಿ ಇಲ್ಲಿಯವರೆಗೆ, ವಿರಾಟ್ ನಾಲ್ಕು ಪಂದ್ಯಗಳಲ್ಲಿ 54.66 ಸರಾಸರಿ ಮತ್ತು 143 ಕ್ಕಿಂತ ಹೆಚ್ಚು ಸೈಕ್ ರೇಟ್‌ನಲ್ಲಿ 164 ರನ್ ಗಳಿಸಿದ್ದಾರೆ, ಎರಡು ಅರ್ಧಶತಕಗಳು ಮತ್ತು 67 ರ ಅತ್ಯಧಿಕ ಸ್ಕೋರ್ ಆಗಿದೆ. ಇಲ್ಲಿಯವರೆಗಿನ ಪಂದ್ಯಾವಳಿಯಲ್ಲಿ ಆರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಹೀಗೆ ಕೊಹ್ಲಿ ಈ ವರ್ಷವೂ ಐಪಿಎಲ್‌ನಲ್ಲಿ ಮಿಂಚುತ್ತಿದ್ರೆ ರೋಹಿತ್ ಶರ್ಮಾ ಮಾತ್ರ ಫಾರ್ಮ್ ಕಂಡುಕೊಳ್ಳೋಕೆ ಹೆಣಗಾಡಿದ್ದಾರೆ. ಅವರು ನಾಲ್ಕು ಪಂದ್ಯಗಳಲ್ಲಿ ಕೇವಲ 38 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ, ಅತ್ಯಧಿಕ ಸ್ಕೋರ್ 17 ಆಗಿದ್ರೆ 131.03 ರ ಸೈಕ್ ರೇಟ್ ಹೊಂದಿದ್ದಾರೆ.
ಇನ್ನು ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಹಿರಿಮೆ ಮಹೇಂದ್ರ ಸಿಂಗ್ ಧೋನಿ ಅವರಿಗೂ ಸಲ್ಲುತ್ತದೆ. ಧೋನಿ ಆಡಿರುವ 234 ಇನಿಂಗ್ಸ್‌ಗಳಲ್ಲಿ 259 ರನ್ ಸಿಡಿಸಿದ್ದಾರೆ. ಧೋನಿ ಸಾಮಾನ್ಯವಾಗಿ 5 ರಿಂದ 8ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದು, ಅವರ ಬ್ಯಾಟಿಂಗ್ ಕ್ರಮಾಂಕವನ್ನು ನೋಡಿದರೆ ಈ ನಂಬರ್ ಬೆಸ್ಟ್ ಇದೆ. ಒಟ್ನಲ್ಲಿ ರೋಹಿತ್, ವಿರಾಟ್ ಹಾಗೇ ಧೋನಿ ಟೀಂ ಇಂಡಿಯಾ ಕಂಡಂತಹ ಲೆಜೆಂಡರಿ ಪ್ಲೇಯರ್ಸ್. ದಾಖಲೆಗಳಲ್ಲೂ ಒಬ್ರಿಗಿಂತ ಒಬ್ರು ಬೆಸ್ಟ್ ಇದ್ದಾರೆ.