ಕೊನೆವರೆಗೂ ಗುದ್ದಾಡಿ ಗೆದ್ದ ಭಾರತ – 11/3 ಸ್ಕೋರ್.. 332ಕ್ಕೆ ಆಲೌಟ್
ಮ್ಯಾಚ್ ಗೆದ್ರೂ ಮಂಕಾಯ್ತಾ ಭಾರತ?

ಕೊನೆವರೆಗೂ ಗುದ್ದಾಡಿ ಗೆದ್ದ ಭಾರತ – 11/3 ಸ್ಕೋರ್.. 332ಕ್ಕೆ ಆಲೌಟ್ಮ್ಯಾಚ್ ಗೆದ್ರೂ ಮಂಕಾಯ್ತಾ ಭಾರತ?

ಟೀಂ ಇಂಡಿಯಾದ ಕೋಟ್ಯಂತರ ಫ್ಯಾನ್ಸ್ ಈಗ ಫುಲ್ ಹ್ಯಾಪಿ ಮೂಡ್​ನಲ್ಲಿದ್ದಾರೆ. ಸೂಪರ್ ಸಂಡೇಯಲ್ಲಿ ಸೌತ್ ಆಫ್ರಿಕಾ ವಿರುದ್ಧ ಭಾರತ ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದೆ. ಸೋ ಟೆಸ್ಟ್ ಸರಣಿ ಸೋಲಿನ ಗಾಯಕ್ಕೆ ಕೊಂಚ ಮುಲಾಮು ಹಚ್ಚಿದಂತಾಗಿದೆ. ಹಾಗೇ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಅರ್ಧಶತಕ, ವಿರಾಟ್ ಕೊಹ್ಲಿ ಶತಕ ಹೀಗೆ ಸಂಭ್ರಮಿಸೋಕೆ ಹಲವು ಕಾರಣಗಳಿವೆ. ಅಟ್ ದಿ ಸೇಂ ಟೈಂ ಮೊದಲ ಪಂದ್ಯದಿಂದ ಕಲಿಯಬೇಕಾದ ಕೆಲ ಪಾಠಗಳೂ ಇವೆ. ಮುಂದಿನ ಪಂದ್ಯಕ್ಕೆ ಒಂದಷ್ಟು ವಿಚಾರದಲ್ಲಿ ಅಲರ್ಟ್ ಆಗ್ಬೇಕಿದೆ.

ಇದನ್ನೂ ಓದಿ :7 ಕೋಟಿ ದರೋಡೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸ್‌ ಇಲಾಖೆ – RBIಗೆ ಪತ್ರ ಬರೆದ ಪೊಲೀಸರು!

ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಸೌತ್ ಆಫ್ರಿಕಾ ವಿರುದ್ಧ 17 ರನ್​ಗಳ ಅಂತರದ ಜಯಭೇರಿ ಬಾರಿಸಿದೆ. ಆರಂಭದಲ್ಲಿ ಭಾರತ ನಿರಾಯಾಸವಾಗಿ ಒನ್ ಸೈಡೆಡ್ ಆಗಿ ಗೆಲ್ಲುತ್ತೆ ಅನ್ಕೊಂಡ್ರೆ ಕೊನೇ ಓವರ್​ವರೆಗೂ ಪಂದ್ಯ ಇಬ್ಬರ ಕಡೆಗೂ ಇತ್ತು. ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಮ್ಯಾಚ್ ಕೊನೆಗೂ ಭಾರತದ ಪಾಲಾಯ್ತು.

ಕೊಹ್ಲಿ ಪವರ್ ಶೋ.. ರಾಹುಲ್, ರೋಹಿತ್ ಅರ್ಧಶತಕ!

ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಆಡೆನ್​ ಮಾರ್ಕ್ರಮ್​ ಬೌಲಿಂಗ್ ಚೂಸ್ ಮಾಡಿಕೊಳ್ತಾರೆ. ಸೋ ಭಾರತದ ಪರ ಗಿಲ್ ಆಬ್ಸೆನ್ಸ್​ನಲ್ಲಿ ರೋಹಿತ್ ಶರ್ಮಾ ಜೊತೆ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದ್ರು. ಬಟ್ ಬ್ಯಾಡ್​​ಲಕ್ ಜೈಸ್ವಾಲ್ ಬೇಗನೇ ವಿಕೆಟ್ ಒಪ್ಪಿಸಿದ್ರು. ಌಂಡ್ ನೆಕ್ಸ್​ಟ್ ರೋಕೋ ಜೋಡಿಯ ಜೊತೆಯಾಟ ಮತ್ತೊಮ್ಮೆ ವರ್ಕೌಟ್ ಆಯ್ತು. ಇಬ್ಬರ ಪಾರ್ಟ್ನರ್​ಶಿಪ್​ನಲ್ಲಿ 136 ರನ್ಸ್ ಕೂಡ ಬಂತು. ರೋಹಿತ್ 57 ರನ್ ಗಳಿಸಿ ಔಟಾದ್ರೆ ವಿರಾಟ್ ಕೊಹ್ಲಿ 135 ರನ್ ಸಿಡಿಸಿ ಆರ್ಭಟಿಸಿದ್ರು. ನೆಕ್ಸ್​ಟ್ ರುತುರಾಜ್ ಗಾಯಕ್ವಾಡ್ ಮತ್ತು ವಾಷಿಂಗ್ಟನ್ ಸುಂದರ್ ಕ್ಲಿಕ್ ಆಗ್ಲಿಲ್ಲ. ಬಟ್ ನಾಯಕ ಕೆಎಲ್ ರಾಹುಲ್ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ್ರು. 60 ರನ್ಸ್ ಕಲೆ ಹಾಕಿದ್ರು. ಜಡ್ಡು 32 ರನ್ಸ್ ಬಾರಿಸಿದ್ರು. ಒಟ್ಟಾರೆ 50 ಓವರ್​ಗಳಲ್ಲಿ 8 ವಿಕೆಟ್ ಕಳ್ಕೊಂಡು 349 ರನ್ಸ್ ಕಲೆ ಹಾಕಿದ್ರು.

ಟಾಪ್ ಆರ್ಡರ್ ಕೈಕೊಟ್ರೂ ಜಗ್ಗದ ಸೌತ್ ಆಫ್ರಿಕಾ!

ಭಾರತ ನೀಡಿದ್ದ 350 ರನ್​ಗಳ ಟಾರ್ಗೆಟ್ ಬೆನ್ನತ್ತಿದ್ದ ಸೌತ್ ಆಫ್ರಿಕಾ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಎರಡನೇ ಓವರ್​ನಲ್ಲೇ 2 ವಿಕೆಟ್ ಬಿದ್ದಿತ್ತು. ಌಂಡ್ 11 ರನ್ ಆಗುವಷ್ಟ್ರಲ್ಲಿ ಟಾಪ್ 3 ಬ್ಯಾಟರ್ ಪೆವಿಲಿಯನ್ ಸೇರಿದ್ರು. ಈ ಸಿಚುಯೇಷನ್​ನಲ್ಲಿ ಸೌತ್ ಆಫ್ರಿಕಾ 200 ರನ್ಸ್ ಒಳಗೆಲ್ಲಾ ಆಲೌಟ್ ಆಗ್ಬೋದು ಅನ್ನೋದೇ ಎಲ್ಲರ ಲೆಕ್ಕಾಚಾರ ಆಗಿತ್ತು. ಬಟ್ ದಕ್ಷಿಣ ಆಫ್ರಿಕಾ ಪಡೆ ಅಷ್ಟು ಈಸಿಯಾಗಿ ಸೋಲೊಪ್ಪಿಕೊಳ್ಳೋಕೆ ಚಾನ್ಸೇ ಇಲ್ಲ ಅನ್ನೋದನ್ನ ತೋರಿಸಿದ್ರು. ಲಾಸ್ಟ್ ಮೂಮೆಂಟ್​ವರೆಗೂ ಗೆಲುವಿಗಾಗಿ ಹೋರಾಡಿದ್ರು. 4ನೇ ಸ್ಲಾಟ್​ನಲ್ಲಿ ಬಂದ ಮ್ಯಾಥ್ಯೂ ಬ್ರೀಟ್ಜ್​ಕೆ 72 ರನ್, ಟೋನಿ ಡಿ ಜೋರ್ಜೆ 39, ಡೆವಾಲ್ಡ್ ಬ್ರೇವಿಸ್ 37, ಮಾರ್ಕೊ ಜಾನ್ಸೆನ್ 70, ಕಾರ್ಬಿನ್ ಬಾಷ್ 67, ಸುಬ್ರಾಯನ್ ಹಾಗೇ ಬರ್ಗಲ್ ತಲಾ 17 ರನ್ ಚಚ್ಚಿದ್ರು. ಅಂತಿಮವಾಗಿ 49.2ನೇ ಓವರ್​ವರೆಗೂ ಹೋರಾಡಿ ಆಲೌಟ್ ಆದ್ರು. 17 ರನ್​ಗಳಿಂದ ಭಾರತ ಮ್ಯಾಚ್ ಗೆಲ್ತು. ಭಾರತದ ಪರ ಕುಲ್ದೀಪ್ 4, ಹರ್ಷಿತ್ ರಾಣಾ 3 , ಅರ್ಶದೀಪ್ ಸಿಂಗ್ 2 ಹಾಗೇ ಪ್ರಸಿದ್ಧ್ ಕೃಷ್ಣ 1 ವಿಕೆಟ್ ಉರುಳಿಸಿದ್ರು. ಌಕ್ಚುಲಿ ಇಲ್ಲಿ ಭಾರತ ಗೆಲ್ತು ಅನ್ನೋದ್ರ ಜೊತೆಗೆ ಮುಂದಿನ ಪಂದ್ಯಕ್ಕೆ ಕೆಲ ಬದಲಾವಣೆ ಆಗ್ಬೇಕಿದೆ. ಏನೆಲ್ಲಾ ಅಂತಾ ನೋಡೋದಾದ್ರೆ..

ಭಾರತಕ್ಕೆ ಬೇಕಿದೆ ಬದಲಾವಣೆ!

  1. ರೋಹಿತ್ & ಕೊಹ್ಲಿ ಮೇಲೆಯೇ ಡಿಪೆಂಡ್ ಆಗ್ತಿರೋದು!
  2. ಮಿಡರ್ ಆರ್ಡರ್ ಶ್ರೀ ಟೇಲ್ ಎಂಡರ್ಸ್ ಲೆಕ್ಕಕ್ಕಿಲ್ಲ
  3. ಏಕದಿನ ಮಾದರಿಯಲ್ಲೂ ಬ್ಯಾಟಿಂಗ್ ಆರ್ಡರ್ ಚೇಂಜ್
  4. 11/3 ಸ್ಕೋರ್.. 332 ರನ್ ಗೆ ಆಲೌಟ್, ಬೌಲಿಂಗ್ ವೀಕ್ ನೆಸ್
  5. ಟಾಪ್ ಆರ್ಡರ್ ಕೈಕೊಟ್ರೂ ಸೌತ್ ಆಫ್ರಿಕಾ ದಿಟ್ಟ ಹೋರಾಟ

Shantha Kumari