ರೋಹಿತ್ & ಕೊಹ್ಲಿ ಆಡ್ಬೇಕಿದ್ದ ಸರಣಿ ರದ್ದು – ಭಾರತ & ಬಾಂಗ್ಲಾ ಟೂರ್ ಕ್ಯಾನ್ಸಲ್?
ರೋಹಿತ್, ಕೊಹ್ಲಿ ಕಮ್ ಬ್ಯಾಕ್ ಯಾವಾಗ?

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಸೂಪರ್ ಸ್ಟಾರ್ ಪ್ಲೇಯರ್ಸ್. ಭಾರತ ತಂಡವನ್ನ ಒಟ್ಟೊಟ್ಟಿಗೆ ಉತ್ತುಂಗಕ್ಕೇರಿಸಿದ್ದ ಈ ದಿಗ್ಗಜರು ಒಟ್ಟೊಟ್ಟಿಗೆ ವಿದಾಯದ ಆಘಾತ ಕೂಡ ಕೊಡ್ತಿದ್ದಾರೆ. ಈಗಾಗ್ಲೇ ಟಿ-20ಐ ಹಾಗೇ ಏಕದಿನ ಮಾದರಿಗೆ ನಿವೃತ್ತಿ ಘೋಷಣೆ ಮಾಡಿರೋದ್ರಿಂದ ಏಕದಿನ ಫಾರ್ಮೆಟ್ನಲ್ಲಿ ಮಾತ್ರ ಕಂಟಿನ್ಯೂ ಆಗ್ತಾರೆ. ಸೋ ಆಗಸ್ಟ್‌ನಲ್ಲಿ ಶೆಡ್ಯೂಲ್ ಆಗಿರುವ ಬಾಂಗ್ಲಾ ಪ್ರವಾಸದ ಮೂಲಕ ಮತ್ತೆ ಮೈದಾನಕ್ಕೆ ಇಳೀತಾರೆ ಅಂತಾ ಕಾಯ್ತಿದ್ದವರಿ ಶಾಕ್ ಎದುರಾಗಿದೆ.
ಇದನ್ನೂ ಓದಿ : ಹೋಟೆಲ್ ಉದ್ಯಮಿಯಾದ ಮೊಹಮ್ಮದ್ ಸಿರಾಜ್ – ಟೀಮ್ ಇಂಡಿಯಾ ವೇಗಿ ಬದುಕಿನಲ್ಲಿ ಹೊಸ ಇನ್ನಿಂಗ್ಸ್
ಆಗಸ್ಟ್ ತಿಂಗಳಲ್ಲಿ ಬಾಂಗ್ಲಾ ಸರಣಿಗೆ ಡೇಟ್ ಫಿಕ್ಸ್!
ಇಂಗ್ಲೆಂಡ್ ಸರಣಿ ಬಳಿಕ ಟೀಂ ಇಂಡಿಯಾ ಆಗಸ್ಟ್‌ನಲ್ಲಿ ಬಾಂಗ್ಲಾದೇಶ ಪ್ರವಾಸ ಮಾಡ್ಬೇಕಿದೆ. ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ 20 ಪಂದ್ಯಗಳನ್ನು ನಡೆಸಲು ವೇಳಾಪಟ್ಟಿ ಸಿದ್ಧ ಆಗಿದೆ. ಮೊದಲ ಏಕದಿನ ಪಂದ್ಯ ಆಗಸ್ಟ್ 17 ರಂದು ಮಿರ್ಪುರದಲ್ಲಿ ಪ್ರಾರಂಭವಾಗಲಿದ್ದು, ಆಗಸ್ಟ್ 23 ರಂದು ಚಟ್ಟೋಗ್ರಾಮ್‌ನಲ್ಲಿ ಅಂತಿಮ ಪಂದ್ಯ ಆಡಿಸೋಕೆ ಡೇಟ್ ಕೂಡ ಫಿಕ್ಸ್ ಆಗಿದೆ. ಈ ಸರಣಿಗೆ ಫ್ಯಾನ್ಸ್ ಕೂಡ ಅಷ್ಟೇ ಎಕ್ಸೈಟ್ಮೆಂಟ್ನಿಂದ ಕಾಯ್ತಿದ್ದಾರೆ. ಯಾಕಂದ್ರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡ್ತಾರೆ ಅಂತಾ. ಆದರೆ ಪ್ರಸ್ತುತ ಈ ಸರಣಿ ನಡೆಯೋದೇ ಡೌಟಿದೆ. ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದ್ದು ಆಂತರಿಕ ಕಲಹಗಳು ಹೆಚ್ಚಾಗಿವೆ. ಸೋ ಇಂಥಾ ಟೈಮಲ್ಲಿ ಭಾರತದ ಆಟಗಾರರನ್ನ ಬಾಂಗ್ಲಾಗೆ ಕಳಿಸೋದು ಎಷ್ಟು ಸೇಫ್ ಅನ್ನೋ ಪ್ರಶ್ನೆಯೂ ಮೂಡಿದೆ. ಅಲ್ದೇ ಬಿಸಿಸಿಐ ಕೂಡ ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕಾಯ್ತಿದೆ. ಹಾಗೇನಾದ್ರೂ ಬಾಂಗ್ಲಾ ಟೂರ್ ರದ್ದಾದ್ರೆ ಅಥವಾ ಪೋಸ್ಟ್ಪೋನ್ ಆದ್ರೆ ರೋಕೋ ಜೋಡಿಯನ್ನ ಮೈದಾನದಲ್ಲಿ ನೋಡೋಕೆ ಫ್ಯಾನ್ಸ್ ಮತ್ತಷ್ಟು ದಿನ ಕಾಯ್ಲೇಬೇಕಾಗುತ್ತೆ.
ಬಾಂಗ್ಲಾ ಸರಣಿಗೆ ಕೇಂದ್ರ ಸರ್ಕಾರದಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಬಿಸಿಸಿಐ ಇನ್ನೂ ಬಾಂಗ್ಲಾದೇಶ ಪ್ರವಾಸಕ್ಕೆ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ. ಸರ್ಕಾರ ಕೂಡ ಇದಕ್ಕೆ ಇನ್ನು ಯಾವುದೇ ರೀತಿಯ ಅನುಮತಿ ನೀಡಿಲ್ಲ. ಒಂದು ವೇಳೆ ಭಾರತ ತಂಡಕ್ಕೆ ಬಾಂಗ್ಲಾದೇಶಕ್ಕೆ ಹೋಗಲು ಅನುಮತಿ ನೀಡದಿದ್ದರೆ, ಈ ಸರಣಿ ರದ್ದುಗೊಳ್ಳಬಹುದು ಅಥವಾ ಬೇರೊಂದು ಸ್ಥಳದಲ್ಲಿ ನಡೆಸಬೇಕಾಗುತ್ತದೆ. ಪ್ರಸ್ತುತ, ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಉತ್ತಮವಾಗಿಲ್ಲದ ಕಾರಣ ಇದು ಸರಣಿಯ ಮೇಲೆ ಪರಿಣಾಮ ಬೀರಬಹುದು. ಕಳೆದ ವರ್ಷ ಆಗಸ್ಟ್‌ನಲ್ಲಿ ಶೇಖ್ ಹಸೀನಾ ಸರ್ಕಾರವನ್ನು ಪದಚ್ಯುತಗೊಳಿಸಿದ ನಂತರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿರುವುದರಿಂದ, IND vs BAN ಸರಣಿಯು ಮುಂದೂಡಿಕೆಯಾಗುವ ಸಾಧ್ಯತೆ ಇದೆ.
2027ರ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಸರಣಿ ಭಾರತಕ್ಕೆ ತುಂಬಾನೇ ಇಂಪಾರ್ಟೆಂಟ್. ಭಾರತ ತಂಡ 2014ರ ಬಳಿಕ ಬಾಂಗ್ಲಾದಲ್ಲಿ ಏಕದಿನ ಸರಣಿ ಗೆದ್ದಿಲ್ಲ. ಭಾರತ ಕೊನೆಯ ಬಾರಿಗೆ. 2022ರಲ್ಲಿ ಬಾಂಗ್ಲಾದೇಶಕ್ಕೆ ಏಕದಿನ ಸರಣಿ ಆಡಲು ತಲುಪಿದ್ದ ಟೀಮ್ ಇಂಡಿಯಾ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಆಗಿನ ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ, ಭಾರತ 1-2 ಅಂತರದಿಂದ ಸರಣಿಯನ್ನು ಕಳೆದುಕೊಳ್ಳಬೇಕಾಯಿತು. ಇದೀಗ 2 ವರ್ಷಗಳ ಬಳಿಕ ಹಳೆಯ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಸುವರ್ಣಾವಕಾಶವಿದೆ. ಅಲ್ದೇ ಭಾರತ ಬಾಂಗ್ಲಾದೇಶದಲ್ಲಿ ಇದುವರೆಗೆ ದ್ವಿಪಕ್ಷೀಯ ಟಿ20 ಸರಣಿಯನ್ನು ಆಡಿಲ್ಲ. ಹಾಲಿ ವಿಶ್ವ ಟಿ20 ಚಾಂಪಿಯನ್ ಆಗಿರುವ ಭಾರತ ಬಾಂಗ್ಲಾದೇಶದಲ್ಲಿ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಆಡುತ್ತಿರುವುದು ಇದೇ ಮೊದಲು. ಬಾಂಗ್ಲಾದೇಶ ವಿರುದ್ಧದ ತವರಿನಲ್ಲಿ ನಡೆದ ಇತ್ತೀಚಿನ ಟಿ20 ಸರಣಿಯಲ್ಲಿ ವೈಟ್ ವಾಶ್ ಮಾಡಿ ಗೆಲುವು ಸಾಧಿಸಿತ್ತು.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅಮೀನುಲ್ ಇಸ್ಲಾಂ, ಈ ಸಂಬಂಧ ಬಿಸಿಸಿಐ ಜೊತೆ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳು ತುಂಬಾ ಸಕಾರಾತ್ಮಕವಾಗಿದ್ದು, ಸರಣಿಯನ್ನು ಹೇಗೆ ಆಯೋಜಿಸಬಹುದು ಎಂಬುದರ ಕುರಿತು ಮಾತುಕತೆ ನಡೆಯುತ್ತಿದೆ. ಈ ಸರಣಿಯನ್ನು ಈಗಲೇ ಆಯೋಜಿಸಲು ಸಾಧ್ಯವಾಗದಿದ್ದರೆ, ಮುಂದಿನ ದಿನಗಳಲ್ಲಿ ಆಯೋಜಿಸುತ್ತೇವೆ ಎಂದಿದ್ದಾರೆ. ಹಾಗೇನಾದ್ರೂ ಬಾಂಗ್ಲಾ ವಿರುದ್ಧದ ಸರಣಿ ನಡೆಯದೇ ಇದ್ರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯವ್ರ ಆಟವನ್ನ ನೋಡೋಕೆ ಅಕ್ಟೋಬರ್ ತಿಂಗಳವರೆಗೆ ಕಾಯ್ಬೇಕಾಗುತ್ತೆ. ಅಕ್ಟೋಬರ್ ನಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು ಅಲ್ಲಿಯೂ ಮೂರು ಏಕದಿನ ಪಂದ್ಯಗಳನ್ನಾಡಲಿದೆ.

ನೋಡಿರಿ

