ಸೂರ್ಯನಿಗೆ NO LOSS ಚಾಲೆಂಜ್ – ರೋಹಿತ್ ಸ್ಟ್ಯಾಂಡರ್ಡ್ ಉಳಿಸಿಕೊಳ್ತಾರಾ?
ವಿಶ್ವಕಪ್ ಸಕ್ಸಸ್ ಏಷ್ಯಾಕಪ್ ನಲ್ಲಿ ಸಿಗುತ್ತಾ?

ಟ್ರೋಫಿ ಗೆಲ್ಲೋದು ದಾಖಲೆ.. ಆದ್ರೆ ಸೋಲೇ ಕಾಣದೆ ಟ್ರೋಫಿ ಎತ್ತಿ ಹಿಡಿಯೋದಿದ್ಯಲ್ಲ ಅದು ನಿಜವಾದ ಸಾಧನೆ. ಸದ್ಯ ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾ ಸೋಲಿಲ್ಲದ ಸರದಾರನಾಗಿ ಮೆರೀತಿದೆ. ರೋಹಿತ್ ಶರ್ಮಾರಿಂದ ಶುರುವಾದ ನೋ ಲಾಸ್ ಲೆಗಸಿ ಈಗ ಏಷ್ಯಾಕಪ್ನಲ್ಲೂ ಕಂಟಿನ್ಯೂ ಆಗಿದೆ. ಅಜೇಯವಾಗಿ ಫೈನಲ್ಗೆ ಲಗ್ಗೆ ಇಟ್ಟಿರೋ ಭಾರತ ಚಾಂಪಿಯನ್ ಪಟ್ಟಕ್ಕೇರೋಕೆ ಇನ್ನೊಂದೇ ಹೆಜ್ಜೆ.
ವಿಶ್ವಕ್ರಿಕೆಟ್ನ ಪ್ರಸೆಂಟ್ ಸಿಚುಯೇಷನ್ನಲ್ಲಿ ಟೀಂ ಇಂಡಿಯಾ ದಿ ಬೆಸ್ಟ್ ಟೀಂ. ಕಳೆದ ಎರಡು ವರ್ಷಗಳಿಂದ ವೈಟ್ ಬಾಲ್ ಫಾರ್ಮೆಟ್ನಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡ್ಕೊಂಡು ಬಂದಿದ್ದಾರೆ. ಟಿ-20ಐ ಹಾಗೇ ಒಡಿಐ ಮಾದರಿಯಲ್ಲಿ ಭಾರತವೇ ನಂಬರ್ 1.. ಐಸಿಸಿ ರ್ಯಾಂಕಿಂಗ್ನಲ್ಲೂ ಆಲ್ಮೋಸ್ಟ್ ಭಾರತೀಯರೇ ಇದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಇತಿಹಾಸವನ್ನೇ ಸೃಷ್ಟಿಸುತ್ತಿದ್ದಾರೆ. ಅದ್ರಲ್ಲೂ ಸೋಲಿಲ್ಲದ ಪ್ರಯಾಣವೇ ಅತ್ಯದ್ಭುತವಾಗಿದೆ. ರೋಹಿತ್ ಶರ್ಮಾರಿಂದ ಶುರುವಾದ ಈ ಇತಿಹಾಸ ಈಗ ಹೊಸತಲೆಮಾರಿನ ಆಟಗಾರರಲ್ಲೂ ಬೇರೂರಿದೆ. ಪ್ರಸ್ತುತ ಏಷ್ಯಾಕಪ್ನಲ್ಲೂ ಯಂಗ್ ಜನರೇಷನ್ ಅದೇ ಮೈಂಡ್ಸೆಟ್ನಲ್ಲೇ ಅಬ್ಬರಿಸುತ್ತಿದ್ದಾರೆ. ಭಾನುವಾರ ಪಾಕಿಸ್ತಾನವನ್ನ ಮಟ್ಟ ಹಾಕಿ ಏಷ್ಯಾಕಪ್ ಟೈಟಲ್ ಎತ್ತಿ ಹಿಡಿಯೋ ಹುಮ್ಮಸ್ಸಿನಲ್ಲಿದ್ದಾರೆ. ಜೊತೆಗೆ ಭಾರತದ ಸ್ಟಾಂಡರ್ಡ್ನ ಉಳಿಸಿಕೊಳ್ಳೋ ಸವಾಲೂ ಇದೆ.
ಇದನ್ನೂ ಓದಿ : ICC ವಾರ್ನ್ ಮಾಡಿದ್ರೂ ಶೇಕ್ ಹ್ಯಾಂಡ್ ಇಲ್ಲ? – ಪಾಕಿಗಳ ಮೇಲೆ ಕ್ರಮ ಇಲ್ವಾ?
2 ವರ್ಷ.. 3 ಐಸಿಸಿ ವಿಶ್ವಕಪ್.. 2 ಬಾರಿ ಚಾಂಪಿಯನ್ಸ್!
ಮಾರ್ಡ್ರೆನ್ ಕ್ರಿಕೆಟ್ ಲೋಕದಲ್ಲಿ ಸದ್ಯ ಭಾರತವೇ ಬಾಸ್. ಐಸಿಸಿ ಟೂರ್ನಿಗಳಲ್ಲೂ ಭಾರತವೇ ಗೆಲ್ಲುವಂತ ಮೋಸ್ಟ್ ಫೇವರೆಟ್ ಟೀಂ. ರೋಹಿತ್ ಶರ್ಮಾ ಟೀಂ ಇಂಡಿಯಾ ಕ್ಯಾಪ್ಟನ್ಸಿ ಅವಧಿಯಲ್ಲಿ ಐಸಿಸಿ ಟೂರ್ನಿಗಳಲ್ಲಿ ಅತ್ಯದ್ಭುತ ಪ್ರದರ್ಶನಗಳನ್ನೇ ನೀಡಿದೆ. ನಾಯಕನಾಗಿ ಭಾರತ ತಂಡಕ್ಕೆ ಹಿಟ್ಮ್ಯಾನ್ ಒಂದು ಸ್ಟಾಂಡರ್ಡ್ ಸೆಟ್ ಮಾಡಿಕೊಟ್ಟಿದ್ದಾರೆ. ಸೋ ಇದೇ ಸ್ಟ್ಯಾಂಡರ್ಡ್ನ ಮೇಂಟೇನ್ ಮಾಡೋದಷ್ಟೇ ಸೂರ್ಯಕುಮಾರ್ ಯಾದವ್ ಮುಂದಿರೋ ಸವಾಲು. ಮೊದ್ಲಿಗೆ 2023ರ ಏಕದಿನ ವಿಶ್ವಕಪ್ ನಲ್ಲಿ ಸೆಮಿಫೈನಲ್, ಫೈನಲ್ ಎಲ್ಲಾ ಸೇರಿ ಟೋಟಲ್ ಆಗಿ 11 ಪಂದ್ಯಗಳನ್ನ ಆಡಿತ್ತು. ಫಿನಾಲೆವರೆಗೂ ಅಜೇಯವಾಗಿ ಬಂದಿದ್ರು. ಬಟ್ ಬ್ಯಾಡ್ ಲಕ್ ಏನಂದ್ರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಟ್ರೋಫಿ ವಂಚಿತವಾಗಿತ್ತು. ಬಟ್ 2024ರ ಐಸಿಸಿ ಟಿ-20 ವಿಶ್ವಕಪ್ನಲ್ಲಿ ಮಾತ್ರ ಈ ಮಿಸ್ಟೇಕ್ ಮಾಡ್ಲಿಲ್ಲ. ಟಿ-20 ಮಾದರಿ ವಿಶ್ವಕಪ್ನಲ್ಲಿ ಗ್ರೂಪ್ ಸ್ಟೇಜ್, ಸೂಪರ್ 8 ಹಾಗೇ ಸೆಮಿಫೈನಲ್, ಫೈನಲ್ ಎಲ್ಲಾ ಸೇರಿ ಭಾರತ 9 ಪಂದ್ಯಗಳನ್ನ ಆಡಿತ್ತು. ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಒಂದೇ ಒಂದು ಪಂದ್ಯವನ್ನೂ ಸೋಲದೆ ಫೈನಲ್ನಲ್ಲಿ ಸೌತ್ ಆಫ್ರಿಕಾವನ್ನ ಮಣಿಸಿ ಟ್ರೋಫಿಯನ್ನ ಮುಡಿಗೇರಿಸಿಕೊಂಡಿತ್ತು. ಇನ್ನು ಕಳೆದ ಮಾರ್ಚ್ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲೂ ರೋಹಿತ್ ನಾಯಕತ್ವದಲ್ಲಿ ಭಾರತದ ಪರ್ಫಾಮೆನ್ಸ್ ನೆಕ್ಸ್ಟ್ ಲೆವೆಲ್ನಲ್ಲಿತ್ತು. ಗ್ರೂಪ್ ಸ್ಟೇಜ್, ಸೆಮಿಫೈನಲ್, ಫೈನಲ್ ಸೇರಿ ಒಟ್ಟು ಐದು ಪಂದ್ಯಗಳನ್ನ ಆಡಿದ್ದು ಐದಕ್ಕೆ ಐದರಲ್ಲೂ ಗೆದ್ದು ಅಜೇಯವಾಗಿ ಟ್ರೋಫಿಗೆ ಮುತ್ತಿಟ್ಟಿತ್ತು. ಹೀಗೆ ವೈಟ್ ಬಾಲ್ ಫಾರ್ಮೆಟ್ನ ಬಿಗ್ ಟೂರ್ನಮೆಂಟ್ಗಳಲ್ಲಿ ನೋ ಲಾಸ್ ಪರಂಪರೆಯನ್ನ ಉಳಿಸಿಕೊಂಡು ಬಂದಿದೆ. ಇದೀಗ ಏಷ್ಯಾಕಪ್ನಲ್ಲೂ ಭಾರತ ಅಜೇಯವಾಗಿ ಫಿನಾಲೆಗೆ ಕಾಲಿಟ್ಟಿದೆ. ಇದೇ ಜೋಶ್ನಲ್ಲೇ ಟೈಟಲ್ನೂ ಗೆಲ್ಲಬೇಕಿದೆ. ರೋಹಿತ್ ಸೆಟ್ ಮಾಡಿರೋ ಈ ಸ್ಟಾಂಡರ್ಡ್ನ ಸೂರ್ಯ ಉಳಿಸಿಕೊಳ್ಳಬೇಕಾಗಿದೆ. ಆದ್ರೆ ಕ್ಯಾಪ್ಟನ್ ಆಗಿ ಸೂರ್ಯ ಕಂಪ್ಲೀಟ್ ಮಂಕಾಗಿದ್ದಾರೆ.
ಗ್ರೂಪ್ ಹಂತದಲ್ಲಿ ಯುಎಇ ವಿರುದ್ಧ ಭಾರತ ಮೊದಲ ಪಂದ್ಯ ಆಡಿತ್ತು. ಈ ಮ್ಯಾಚಲ್ಲಿ ಯುಎಇ ಫಸ್ಟ್ ಬ್ಯಾಟಿಂಗ್ ಮಾಡಿ 57 ರನ್ಗಳಿಗೆ ಆಲೌಟ್ ಆಗಿತ್ತು. ಈ ಮ್ಯಾಚಲ್ಲಿ 3ನೇ ಸ್ಲಾಟ್ನಲ್ಲಿ ಕಣಕ್ಕಿಳಿದಿದ್ದ ಸೂರ್ಯ 7 ರನ್ ಕಲೆ ಹಾಕಿ ಟಾರ್ಗೆಟ್ ರೀಚ್ ಮಾಡಿ ನಾಟೌಟ್ ಆಗಿ ಉಳಿದ್ರು. ಇನ್ನು ಪಾಕಿಸ್ತಾನ ವಿರುದ್ಧ ಎರಡನೇ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 47 ರನ್ ಕಲೆ ಹಾಕಿ ಅಜೇಯರಾಗಿ ಉಳಿದಿದ್ರು. ಪಾಕಿಸ್ತಾನ ನೀಡಿದ್ದ 128 ರನ್‌ಗಳ ಟಾರ್ಗೆಟ್ನ ಭಾರತ 15.5 ಓವರ್ಗಳಲ್ಲೇ ಚೇಸ್ ಮಾಡಿತ್ತು. ಇನ್ನು ಗೂಪ್ ಹಂತದ 3ನೇ ಪಂದ್ಯದಲ್ಲಿ ಓಮನ್ ವಿರುದ್ಧ ಭಾರತ ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಈ ಮ್ಯಾಚಲ್ಲಿ ಸೂರ್ಯ ಬ್ಯಾಟಿಂಗ್ಗೆ ಬರಲೇಇಲ್ಲ. ಬೇರೆ ಆಟಗಾರರಿಗೆ ಚಾನ್ಸ್ ಸಿಗ್ಲಿ ಅನ್ನೋ ಕಾರಣಕ್ಕೆ ಟೀಮ್ನಲ್ಲಿ ಇದ್ರೂ ಲಾಸ್ಟ್ ಬ್ಯಾಟರ್ ಆಗಿ ಡಗ್ಔಟ್ನಲ್ಲೇ ಕುಳಿತಿದ್ರು. ಭಾರತ ಈ ಮ್ಯಾಚಲ್ಲಿ 188 ರನ್ ಹಾಕಿದ್ರೆ ಓಮನ್ ತಂಡ 167 ರನ್ಗಳಿಸಲಷ್ಟೇ ಸಾಧ್ಯವಾಗಿತ್ತು. ಆ ಬಳಿಕ ಸೂಪರ್ 4 ಹಂತದಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಆಡಿತ್ತು. ಈ ಮ್ಯಾಚಲ್ಲಿ ಪಾಕ್ ಫಸ್ಟ್ ಬ್ಯಾಟಿಂಗ್ ಮಾಡಿ 171 ರನ್ ಗಳಿಸಿದ್ರೆ ಭಾರತ 18.5 ಓವರ್ಗಳಲ್ಲಿ ಟಾರ್ಗೆಟ್ ರೀಚ್ ಆಗಿತ್ತು. ಈ ಮ್ಯಾಚಲ್ಲಿ ಸೂರ್ಯ ಹ್ಯಾರಿಸ್ ರೌಫ್ ಬೌಲಿಂಗ್ನಲ್ಲಿ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದ್ರು. ಆ ಬಳಿಕ ಬಾಂಗ್ಲಾ ವಿರುದ್ಧದ ಮ್ಯಾಚಲ್ಲಿ ಭಾರತ ಫಸ್ಟ್ ಬ್ಯಾಟಿಂಗ್ ಮಾಡಿ 168 ರನ್ ಸಿಡಿಸಿತ್ತು. ಸೂರ್ಯ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 11 ಬಾಲ್ಗಳಲ್ಲಿ 5 ರನ್ ಅಷ್ಟೇ ಗಳಿಸಿದ್ರು. ಇನ್ನು ಶುಕ್ರವಾರ ನಡೆದ ಲಂಕಾ ವಿರುದ್ಧದ ಮ್ಯಾಚಲ್ಲೂ ಸೂರ್ಯ ಶೈನ್ ಆಗ್ಲಿಲ್ಲ. 13 ಬಾಲ್ಗಳಲ್ಲಿ 12 ರನ್ ಅಷ್ಟೇ ಸಿಡಿಸಿದ್ರು. ಬಟ್ ಸೂಪರ್ ಓವರ್ನಲ್ಲಿ ಫಸ್ಟ್ ಬಾಲ್ನಲ್ಲೇ 3 ರನ್ ಸಿಡಿಸಿ ಪಂದ್ಯ ಗೆಲ್ಲಿಸಿದ್ರು. ಸೋ ಅಲ್ಲಿಗೆ ಏಷ್ಯಾಕಪ್ನಲ್ಲಿ ಐದು ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು 75 ರನ್ಸ್ ಕಲೆ ಹಾಕಿದ್ದಾರೆ.
ಸೂರ್ಯಂಗೆ ಇರೋ ಸ್ಟ್ಯಾಮಿನಾಗೆ ಒಂದೇ ಮ್ಯಾಚಲ್ಲಿ ಬರೋ ರನ್ಸ್ ಇವು. ಬಟ್ ಕ್ಯಾಪ್ಟನ್ ಆದ್ಮೇಲೆ ಸೂರ್ಯ ಬ್ಯಾಟಿಂಗ್ನಲ್ಲಿ ಒದ್ದಾಡ್ತಿದ್ದಾರೆ. 35 ವರ್ಷದ ಸೂರ್ಯ ನಾಯಕನಾಗಿ 21 ಪಂದ್ಯಗಳ 19 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದಾರೆ. 19.35 ರ ಸರಾಸರಿಯಲ್ಲಿ ಕೇವಲ 329 ರನ್‌ಗಳನ್ನು ಗಳಿಸಿದ್ದಾರೆ. ಎರಡು ಅರ್ಧಶತಕಗಳು ಮತ್ತು 145 + ಸ್ಟ್ರೈಕ್ ರೇಟ್ ಹೊಂದಿದ್ದಾರೆ. ನಾಯಕತ್ವ ವಹಿಸಿಕೊಂಡ ನಂತರ ಅವರು ಕೇವಲ ಆರು ಬಾರಿ 20 ರನ್‌ಗಳ ಗಡಿಯನ್ನು ದಾಟಿದ್ದಾರೆ. ಸೋ ಕ್ಯಾಪ್ಟನ್ ಪ್ರೆಶರ್ ಇಲ್ಲಿ ಕಂಪ್ಲೀಟ್ ಆಗಿ ಕಾಣ್ತಿದೆ. ಆದ್ರೀಗ ಏಷ್ಯಾಕಪ್ ಫೈನಲ್ನಲ್ಲಿ ಬೆಸ್ಟ್ ಪರ್ಪಾಮೆನ್ಸ್ ಬರ್ಲೇಬೇಕಿದೆ. ಯಾಕಂದ್ರೆ ಪಾಕಿಸ್ತಾನ ಎದುರಾಳಿ ಆಗಿರೋದು.
41 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಬದ್ಧವೈರಿಗಳ ಮುಖಾಮುಖಿ!
ಏಷ್ಯಾಕಪ್ ಟೂರ್ನಿ 1984ರಲ್ಲಿ ಆರಂಭವಾಗಿತ್ತು. ಸೋ ಅಲ್ಲಿಂದ ಇಲ್ಲೀವರೆಗೆ ಟೋಟಲ್ ಆಗಿ 16 ಸೀಸನ್ಗಳನ್ನ ಮುಗಿಸಿದೆ. ಪ್ರಸ್ತುತ 17ನೇ ಸೀಸನ್ ನಡೀತಿದೆ. ಆದ್ರೆ ಇಷ್ಟೂ ವರ್ಷಗಳ ಜರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಮ್ಮೆಯೂ ಕೂಡ ಫೈನಲ್ನಲ್ಲಿ ಮುಖಾಮುಖಿ ಆಗಿರಲಿಲ್ಲ. ಹಿಸ್ಟರಿಯಲ್ಲೇ ಫಾರ್ ದಿ ಫಸ್ಟ್ ಟೈಂ ಎದುರು ಬದುರಾಗಿದ್ದಾರೆ. ಅದೂ ಅಲ್ದೇ ಲೀಗ್ ಹಂತದಲ್ಲಿ ಮತ್ತು ಸೂಪರ್ 4 ಸ್ಟೇಜ್ನಲ್ಲಿ ಎರಡು ಸಲ ಮುಖಾಮುಖಿ ಆಗಿವೆ. ಎರಡೂ ಸಲವೂ ಭಾರತವೇ ಮ್ಯಾಚ್ ವಿನ್ ಆಗಿದೆ. ಬಟ್ ಎರಡೂ ಪಂದ್ಯಗಳಲ್ಲೂ ಕೆಲ ಕಾಂಟ್ರವರ್ಸಿಗಳು ಆಗಿದ್ದು ಐಸಿಸಿ ಮೆಟ್ಟಿಲೇರಿತ್ತು. ಉಭಯ ತಂಡಗಳ ಆಟಗಾರರು ಕೂಡ ಫೈನ್ ಕಟ್ಟಿದ್ದಾರೆ. ಹೀಗಾಗಿ ಫೈನಲ್ ಪಂದ್ಯವನ್ನ ಗೆದ್ರೆ ಪ್ರತಿಷ್ಠೆ ಜೊತೆ ಟೈಟಲ್ ವಿನ್ ಆಗೋ ಅದೃಷ್ಟವೂ ಇರುತ್ತೆ.

ನೋಡಿರಿ

