ರೋಹಿತ್ ಶರ್ಮಾ ಕಳಪೆ ಪ್ರದರ್ಶನ – ಜಸ್ಪ್ರೀತ್ ಬುಮ್ರಾಗೆ ಕ್ಯಾಪ್ಟನ್ಸಿ ಒಲಿಯುತ್ತಾ?

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಭಾರತಕ್ಕೆ ತುಂಬಾ ಮುಖ್ಯ. ಅದ್ರಲ್ಲೂ ನಾಲ್ಕನೇ ಮ್ಯಾಚ್ ಟೀಂ ಇಂಡಿಯಾ ಪಾಲಿಗೆ ನಿರ್ಣಾಯಕ. ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ರೇಸ್ನಲ್ಲಿ ಉಳೀಬೇಕು ಅಂದ್ರೆ ಈ ಪಂದ್ಯವನ್ನ ಗೆಲ್ಲಲೇಬೇಕು. ಆದ್ರೆ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ನೀಡ್ತಾ ಬಂದಿದೆ. ರೋಹಿತ್ ಶರ್ಮಾರ ಈ ಕಳಪೆ ಪ್ರದರ್ಶನ ಹಾಗೇ ಕ್ಯಾಪ್ಟನ್ಸಿಯಲ್ಲಿ ಸೋಲು ಹೆಚ್ಚಾಗ್ತಿದೆ. ಕ್ರಿಕೆಟ್ ಫ್ಯಾನ್ಸ್ ಅಂತೂ ಜಸ್ಪ್ರೀತ್ ಬುಮ್ರಾಗೆ ಕ್ಯಾಪ್ಟನ್ಸಿ ಕೊಡಿ ಅಂತಾ ಒತ್ತಾಯ ಮಾಡ್ತಿದ್ದಾರೆ.
ಇದನ್ನೂ ಓದಿ: ಮೋದಿ ನಂತ್ರ ಯಾರು ನಾಯುಕ? – ದೇಶದ ಪ್ರಧಾನಿ ಆಗ್ತಾರಾ ಯೋಗಿ?
ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಪರ್ತ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು 295 ರನ್‌ಗಳಿಂದ ಭಾರತ ಸೋಲಿಸಿತ್ತು. ಬಟ್ ಅಡಿಲೇಡ್‌ನಲ್ಲಿ ರೋಹಿತ್ ತಂಡಕ್ಕೆ ಮರಳಿದ ನಂತರ, ಭಾರತ ಸೋಲು ಕಾಣ್ತು. ಬ್ರಿಸ್ಬೇನ್ನಲ್ಲಿ ಪಂದ್ಯವನ್ನ ಡ್ರಾ ಮಾಡಿಕೊಳ್ಳಲಾಗಿತ್ತು. ಅಲ್ದೇ ಬುಮ್ರಾ ಕೂಡ ಬೌಲಿಂಗ್ನಲ್ಲಿ ಒನ್ ಮ್ಯಾನ್ ಆರ್ಮಿ ಥರ ಭಾರತವನ್ನ ಕಾಪಾಡ್ತಿದ್ದಾರೆ. ಆಸಿಸ್ ಸರಣಿಯಲ್ಲಿ ಹೈಯೆಸ್ಟ್ ವಿಕೆಟ್ ಟೇಕರ್ ಆಗಿದ್ದಾರೆ. ಸದ್ಯ ಮೆಲ್ಬೊರ್ನ್ ಟೆಸ್ಟ್ ನಲ್ಲೂ ಫಸ್ಟ್ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಗಳನ್ನ ಬೇಟೆಯಾಡಿದ್ದಾರೆ.
ಒಂದ್ಕಡೆ ಬುಮ್ರಾ ಪಂದ್ಯದಿಂದ ಪಂದ್ಯಕ್ಕೆ ಬೆಸ್ಟ್ ಪರ್ಪಾಮೆನ್ಸ್ ನೀಡ್ತಿದ್ರೆ ರೋಹಿತ್ ಶರ್ಮಾ ಬ್ಯಾಕ್ ಟು ಬ್ಯಾಕ್ ಫೇಲ್ಯೂರ್ ಕಾಣ್ತಿದ್ದಾರೆ. ಹಿಟ್ ಮ್ಯಾನ್ ರ ಈ ಪ್ರದರ್ಶನಕ್ಕೆ ಅಭಿಮಾನಿಗಳೂ ಕೂಡ ಬೇಸರಗೊಂಡಿದ್ದಾರೆ. ಇನ್ನಾದ್ರೂ ಕಮ್ ಬ್ಯಾಕ್ ಮಾಡಿ ಇಲ್ದಿದ್ರೆ ದೃಢ ನಿರ್ಧಾರ ಕೈಗೊಳ್ಳಿ ಅಂತಾ ಸಜೇಷನ್ಸ್ ಕೊಡ್ತಿದ್ದಾರೆ.