ರೋಹಿತ್ ದುಡ್ಡು ರಿತಿಕಾಗೆ ಸಾಲಲ್ವಾ? – Hitman ದುಡಿಮೆ ಹೆಂಡ್ತಿ ಮೋಜು? – ಹೊಟ್ಟೆ ಉರಿ ಯಾರಿಗೆ?
ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರೋಹಿತ್ ಶರ್ಮಾ ನೇತೃತ್ವದ ತಂಡ ಟ್ರೋಫಿ ಗೆಲ್ಲೋದ್ರ ಮೂಲಕ 17 ವರ್ಷಗಳ ಕನಸನ್ನ ನನಸು ಮಾಡಿದೆ. ಚಾಂಪಿಯನ್ ಆಗ್ತಾ ಇದ್ದಂತೆ ಹಿಟ್ಮ್ಯಾನ್ ವಿಶ್ವಕಪ್ಗೆ ವಿದಾಯ ಹೇಳಿದ್ದಾರೆ.. ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾಗೆ ಅವರ ಪತ್ನಿಯೇ ಬ್ಯಾಕ್ ಬೋನ್.. ಯಾಂಕದ್ರೆ ಹಿಟ್ಮ್ಯಾನ್ ಯಾವ ಟೂರ್ನಿಯಲ್ಲಿ ಆಟವಾಡಿದ್ರು ಕೂಡ ರಿತಿಕಾ ಸದಾ ಬೆನ್ನೆಲುಬಾಗಿ ನಿಲ್ತಾ ಇದ್ರು.. ಪತಿಯ ಆಟ ನೋಡಲು ಸ್ಟೇಡಿಯಂ ಗೆ ಬಂದು ಸಪೋರ್ಟ್ ಮಾಡ್ತಾ ಇರೋದು ನಿಮ್ಗೆಲ್ಲಾ ಗೊತ್ತೇ ಇದೆ. ಆದ್ರೀಗ ಹಿಟ್ ಮ್ಯಾನ್ ಪತ್ನಿ ಟಿ20 ವಿಶ್ವಕಪ್ ಬಳಿಕ ಇದೊಂದು ವಿಚಾರಕ್ಕೆ ಟ್ರೋಲ್ ಆಗ್ತಿದ್ದಾರೆ. ಈ ಬೆನ್ನಲ್ಲೇ ರೋಹಿತ್ ದುಡ್ಡಲ್ಲಿ ರಿತಿಕಾ ಶೋಕಿ ಮಾಡ್ತಾ ಇದ್ದಾರಾ ಅನ್ನೋ ಪ್ರಶ್ನೆ ಎದುರಾಗ್ತಾ ಇದೆ. ಅಷ್ಟಕ್ಕೂ ರೋಹಿತ್ ಪತ್ನಿ ಟ್ರೋಲ್ ಆಗ್ತಾ ಇರೋದು ಯಾಕೆ? ರಿತಿಕಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದೇಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಗಂಭೀರ್ ಕೊಹ್ಲಿ ಒಂದಾಗಿದ್ದು ಇದಕ್ಕಾ? – ಗೌತಮ್ ಗಂಭೀರ್ ಗಾಗಿ ಕೊಹ್ಲಿಯನ್ನೇ ಕಡೆಗಣಿಸಿತಾ BCCI
ಹಿಟ್ಮ್ಯಾನ್ ಎನ್ನುವ ಹೆಸರೇ ಭಾರತೀಯ ಕ್ರಿಕೆಟ್ನಲ್ಲಿ ಸಿಕ್ಕಾಪಟ್ಟೆ ಫೇಮಸ್. ಮೈದಾನಕ್ಕೆ ಇಳಿದ್ರು ಅಂದ್ರೆ ಸಿಕ್ಸ್, ಫೋರ್ ಗಳ ಸುರಿಮಳೆ ಗ್ಯಾರಂಟಿ.. ಝೀರೋದಿಂದ ಹೀರೋ ಆಗಲು ಹಿಟ್ಮ್ಯಾನ್ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಕಲ್ಲು ಮುಳ್ಳಿನ ಹಾದಿಯಲ್ಲಿ ಬೆಳೆದು ಬಂದಿರುವ ರೋಹಿತ್ ಈಗ ಕೋಟ್ಯಂತರ ಅಭಿಮಾನಿಗಳನ್ನ ಸಂಪಾದನೆ ಮಾಡಿದ್ದಾರೆ. ಸಾಧನೆಯ ಸರದಾರನಾಗಲು ಹಿಟ್ಮ್ಯಾನ್ ಗೆ ಕುಟುಂಬವೇ ಶಕ್ತಿ. ಅವರ ಕುಟುಂಬ ಸದಾ ಬೆಂಬಲವಾಗಿ ನಿಂತಿದೆ. ಪತ್ನಿ ರಿತಿಕಾ ಸಜ್ದೇ ಸೋಲು ಗೆಲುವಿನಲ್ಲೂ ಜೊತೆಯಾಗಿ ನಿಂತಿದ್ದಾರೆ.. ಪ್ರತಿ ಪಂದ್ಯದ ವೇಳೆ ಮೈದಾನಕ್ಕೆ ಬಂದು ಪಂದ್ಯ ವೀಕ್ಷಿಸುವ ರಿತಿಕಾ ಸೋತ್ರೆ ಸಮಧಾನ ಹೇಳ್ತಾರೆ.. ಗೆದ್ರೆ ಖುಷಿಯಿಂದ ಕುಣಿದು ಕುಪ್ಪಳಿಸ್ತಾರೆ.. ಹೀಗೆ ಈ ಜೋಡಿ ಸದಾ ಜೊತೆಯಾಗಿಯೇ ಇರ್ತಾರೆ.
ಅಂದ್ಹಾಗೆ ರಿತಿಕಾ ತುಂಬಾನೇ ಬ್ಯೂಟಿಫುಲ್.. ಆರು ವರ್ಷದ ಮಗಳಿದ್ರೂ ಕೂಡ ಇನ್ನೂ ಯುವತಿಯಂತೆ ಕಾಣ್ತಾರೆ.. ರಿತಿಕಾ ಸಖತ್ ಸ್ಟೈಲಿಶ್ ಹೌದು.. ಮಾರ್ಡನ್ ಲುಕ್ ನಲ್ಲೇ ಯಾವಾಗ್ಲೂ ಕಾಣಿಸಿಕೊಳ್ತಾರೆ.. ಟ್ರೆಂಡ್ಗೆ ತಕ್ಕಂತೆ ಅವರ ಸ್ಟೈಲ್ ಕೂಡ ಬದಲಾಗುತ್ತಾ ಹೋಗುತ್ತೆ.. ಹೀಗಾಗಿ ಅದೆಷ್ಟೋ ಹುಡುಗ, ಹುಡುಗಿರು ರೋಹಿತ್ ಜೊತೆಗೆ ರಿತಿಕಾಳನ್ನ ಕೂಡ ನೋಡಲು ಬರ್ತಾರೆ.. ಹುಡುಗ್ರು ಆಕೆಯ ಬ್ಯೂಟಿಗೆ ಮರುಳಾದ್ರೆ.. ಯುವತಿಯರು ಆಕೆಯ ಫ್ಯಾಷನ್ ಗೆ ಮಾರು ಹೋಗಿದ್ದಾರೆ.. ಆದ್ರೀಗ ರಿತಿಕಾ ಹೊಸ ವಿಚಾರಕ್ಕೆ ಸುದ್ದಿಯಾಗಿದ್ದಾರೆ..
ಹೌದು, ರೋಹಿತ್ ಶರ್ಮಾ ಏಳುಬೀಳಿನಲ್ಲಿ ಸದಾ ಜತೆಯಾಗಿಯೇ ನಿಂತಿರುವ ಪತ್ನಿ ರಿತಿಕಾ ಸಜ್ದೇ ಅವರು ಎಷ್ಟೊಂದು ಖರ್ಚು ಮಾಡ್ತಾರೆ ಅನ್ನೋ ಚರ್ಚೆ ಶುರುವಾಗಿದೆ. ಸಾಕಷ್ಟು ಸ್ಟೈಲೀಷ್ ಆಗಿ ಕಾಣಿಸಿಕೊಳ್ಳುವ ರಿತಿಕಾ, ಇದೀಗ ಅವರ ಧರಿಸುವ ಡ್ರೆಸ್ ಮೂಲಕವೇ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಆಕೆಯ ಶೂ, ಡ್ರೆಸ್, ಬ್ಯಾಗ್ ಎಲ್ಲದರ ಬೆಲೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ..
ಸೆಲೆಬ್ರಿಟಿಗಳು ಅಂದ್ಮೇಲೆ ಬೇಕಾದಷ್ಟು ದುಡ್ಡು ಇರುತ್ತೆ.. ಹೀಗಾಗಿ ನೂರು ಸಾವಿರ ಲೆಕ್ಕವೇ ಅಲ್ಲ.. ಹೀಗಾಗಿ ಪ್ರತಿಯೊಂದು ವಸ್ತುವಿಗೂ ಲೆಕ್ಕವಿಲ್ಲದಷ್ಟು ದುಡ್ಡು ಸುರಿತಾರೆ.. ನೀರಿನಂತೆ ಪೋಲು ಮಾಡ್ತಾರೆ.. ಹಾಕೋ ಬಟ್ಟೆಯಿಂದ ಹಿಡಿದು, ಕುಡಿಯೋ ನೀರು, ತಿನ್ನೋ ಆಹಾರ ಎಲ್ಲವೂ ಬ್ರಾಂಡೆಡ್ ಆಗಿರುತ್ತೆ.. ಹೀಗಾಗಿ ಫ್ಯಾನ್ಸ್ ಸದಾ ಅವ್ರ ಮೇಲೆ ಕಣ್ಣಿಟ್ಟಿರ್ತಾರೆ.. ಇದೀಗ ರಿತಿಕಾ ಹಾಕೋ ಬ್ರಾಂಡೆಡ್ ಡ್ರೆಸ್, ಶೂ, ಬ್ಯಾಗ್ ಬೆಲೆ ಬಿಸಿ ಬಿಸಿ ಚರ್ಚೆ ನಡಿತಾ ಇದೆ.. ಇದ್ರ ಬೆಲೆಗಳನ್ನ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ.. ಇವುಗಳ ರೇಟ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ..
ರಿತಿಕಾ ಸಜ್ದೇ ಫಾರ್ಮ್ ರಿಯೊ ಮ್ಯಾಕೌ ಪುಫ್ ಸ್ಲೀವ್ ರೊಂಪರ್ ಎನ್ನುವ ಡ್ರೆಸ್ ತೊಟ್ಟಿರುವ ಫೋಟೋವೊಂದು ವೈರಲ್ ಆಗಿದ್ದು, ಇದರ ಬೆಲೆ ಬರೋಬ್ಬರಿ 21,706 ರುಪಾಯಿಗಳು ಎಂದು ನಮೂದಿಸಲಾಗಿದೆ.
ಇನ್ನು ಇದೇ ಡ್ರೆಸ್ ಜತೆಗೆ ನೀಲಿ ಬಣ್ಣದ ಸಣ್ಣ ಸಿ’ಸೆಸ್ಟ್ ಡಿಯೊರ್ ಒಬ್ಲಿಕ್ ಜಾಕಾರ್ಡ್ ಎನ್ನುವ ಸೈಡ್ ಬ್ಯಾಗ್ನ ರಿತಿಕಾ ಹಾಕಿಕೊಂಡಿದ್ದಾರೆ. ಇದರ ಬೆಲೆ ಬರೋಬ್ಬರಿ 4,05,932 ರುಪಾಯಿಗಳು. ಇದಿಷ್ಟೇ ಅಲ್ಲ ರಿತಿಕಾ ಧರಿಸೋ ಶೂ, ಹೈಹೀಲ್ಸ್ ಬೆಲೆ ಲಕ್ಷಾಂತರ ರೂಪಾಯಿ ದಾಟಿದೆ.. ಇದನ್ನ ನೋಡಿದ ಅನೇಕರು ನಾನಾ ಕಾಮೆಂಟ್ ಹಾಕ್ತಾ ಇದ್ದಾರೆ.. ಕೆಲವರು ಇದು ಅನೇಕರ ಒಂದು ವರ್ಷದ ಸಂಪಾದನೆ ಅಂತಾ ಹೇಳಿದ್ರೆ. ಇನ್ನೂ ಕೆಲವರು ರೋಹಿತ್ ಶರ್ಮಾ ದುಡಿಯುವ ಹಣವೆಲ್ಲಾ ಪತ್ನಿ ರಿತಿಕಾ ಬಟ್ಟೆಬರೆಗೆ ಸಾಲೊಲ್ಲ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾರಂಭಿಸಿದ್ದಾರೆ.
ಇನ್ನು ರಿತಿಕಾ ಟ್ರೋಲ್ ಆಗ್ತಾ ಇದ್ದಂತೆ ಆಕೆಯ ಆದಾಯದ ಬಗ್ಗೆಯೂ ಚರ್ಚೆ ಶುರುವಾಗಿದೆ.. ರೋಹಿತ್ ಪತ್ನಿ ರಿತಿಕಾ ಸಜ್ದೇಹ ಕ್ರೀಡೆಯ ಜೊತೆ ಸಂಪರ್ಕ ಹೊಂದಿದ್ದಾರೆ. ರಿತಿಕಾ ಕಂಪನಿಯೊಂದರಲ್ಲಿ ಸ್ಪೋರ್ಟ್ಸ್ ಮ್ಯಾನೇಜರ್ ಆಗಿದ್ದರು. ಇಲ್ಲಿಯೇ ರಿತಿಕಾ ಹಾಗೂ ರೋಹಿತ್ ಜಾಹಿರಾತು ಶೂಟಿಂಗ್ ವೇಳೆ ಪರಿಚಯವಾಗಿದ್ರು. ಬಳಿಕ ಸ್ನೇಹ ಪ್ರೀತಿಗೆ ತಿರುಗಿದೆ. ಮುಂಬೈನ ಬೊರಿವಲಿ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ರೋಹಿತ್ ಶರ್ಮಾ ರಿತಿಕಾ ಸಜ್ದೇ ಅವರಿಗೆ ಲವ್ ಪ್ರಪೋಸ್ ಮಾಡಿದ್ದರು.
ಒಂದೊಮ್ಮೆ ವಿರಾಟ್ ಕೊಹ್ಲಿ ಅವರ ಕ್ರೀಡಾ ವ್ಯವಸ್ಥಾಪಕರಾಗಿಯೂ ರಿತಿಕಾ ಕೆಲಸ ಮಾಡಿದ್ದಾರೆ. ರೋಹಿತ್ ಶರ್ಮಾ ಅವರನ್ನು ಮದುವೆಯಾಗುವ ಮುನ್ನ ಹಲವು ವರ್ಷಗಳ ಕಾಲ ವಿರಾಟ್ ಕೊಹ್ಲಿಯ ಮ್ಯಾನೇಜರ್ ಆಗಿದ್ದರು. ಪ್ರಸ್ತುತ ಅವರು ತಮ್ಮ ಪತಿಯ ಕ್ರೀಡಾ ವ್ಯವಸ್ಥಾಪಕರಾಗಿದ್ದಾರೆ. ಕ್ರೀಡಾ ವ್ಯವಸ್ಥಾಪಕರಾಗಿರುವ ರಿತಿಕಾ ಅವರ ಒಟ್ಟು ಆಸ್ತಿ 1 ಮಿಲಿಯನ್’ನಿಂದ 5 ಮಿಲಿಯನ್’ಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ.. ಇನ್ನು ರಿತಿಕಾ ಕೂಡಾ ಬಟ್ಟೆ ಧರಿಸೋದು ಕೂಡಾ ಕೆಲವೊಂದು ಜಾಹಿರಾತುಗಳಿಗಾಗಿ. ಇದನ್ನು ಕೂಡಾ ಹಿಟ್ ಮ್ಯಾನ್ ಪತ್ನಿಯನ್ನ ಆಡಿಕೊಳ್ಳೋರು ಅರ್ಥ ಮಾಡಿಕೊಳ್ಳಲೇಬೇಕು. ಸೆಲೆಬ್ರಿಟುಗಳು ಖರೀದಿಸುವ ಬಟ್ಟೆ ಬೆರೆ ಮೇಲೆ ಕಣ್ಣಿಡುವ ಟ್ರೋಲರ್ ಗಳು ಅವರ ದುಡಿಮೆಯನ್ನೂ ಅರ್ಥ ಮಾಡ್ಕೊಂಡ್ರೆ ಒಳ್ಳೆಯದು. ಇಲ್ಲಾಂದ್ರೆ, ಬರೀ ಅವರ ಸ್ಟೈಲ್ ನೋಡು, ಗಂಡನ ದುಡಿಮೆ ಇವಳ ಬಟ್ಟೆ ಬ್ಯಾಗ್‌ಗೆ ಸಾಕಾಗಲ್ಲ ಅಂತಾ ಹೊಟ್ಟೆ ಉರಿ ಪಡ್ಕೊಂಡು, ತೋಚಿದೆಲ್ಲಾ ಕಾಮೆಂಟ್ ಮಾಡ್ಕೊಂಡು ಇರ್ಬೇಕಾಗುತ್ತೆ. ಅದೇನೇ ಇದ್ರೂ, ರಿತಿಕಾ ಸಜ್ದೇ, ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಪತ್ನಿ. ಆಕೆಗೆ ಯಾವುದರಲ್ಲೂ ಕೊರತೆಯಿಲ್ಲ. ಇದು ಕೂಡಾ ನೆಟ್ಟಿಗರಿಗೆ ಗೊತ್ತಿಲ್ಲದ ವಿಚಾರವೇನಲ್ಲ.