ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ರಿ ಎಂಟ್ರಿ – ಕೆ.ಎಲ್ ಔಟ್, ಹಾರ್ದಿಕ್ ಕನಸು ಭಗ್ನ..!

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ರಿ ಎಂಟ್ರಿ – ಕೆ.ಎಲ್ ಔಟ್, ಹಾರ್ದಿಕ್ ಕನಸು ಭಗ್ನ..!

ಇಂಡಿಯನ್ ಟಿ-20 ಟೀಮ್​ಗೆ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿಯ ರಿ ಎಂಟ್ರಿಯಾಗಿದೆ. ರೋಹಿತ್ ಮತ್ತೆ ಕ್ಯಾಪ್ಟನ್​ ಆಗಿಯೂ ಕಮ್​ಬ್ಯಾಕ್ ಮಾಡ್ತಿದ್ದಾರೆ. ಟಿ-20 ವರ್ಲ್ಡ್​ಕಪ್ ಇದೆ. ಆ ದೃಷ್ಟಿಯಿಂದ ಈಗ ರೋಹಿತ್ ಮತ್ತು ಕೊಹ್ಲಿ ಕಮ್​​ಬ್ಯಾಕ್ ಆಗ್ತಿರೋದು ನಿಜಕ್ಕೂ ಒಳ್ಳೆಯ ಬೆಳವಣಿಗೆ.

ಇದನ್ನೂ ಓದಿ: 31 ವರ್ಷಗಳ ನಂತರ ಗೆಲುವು ಸಾಧಿಸಿದ ಟೀಮ್ಇಂಡಿಯಾ – ಸೌತ್ಆಫ್ರಿಕಾ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ ಪಡೆ

ಅಫ್ಘಾನಿಸ್ತಾನ ವಿರುದ್ಧದ ಸೀರಿಸ್​​ನಲ್ಲಿ ಎಲ್ಲರ ಚಿತ್ತ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ. ಕಳೆದ ಒಂದೂವರೆ ವರ್ಷಗಳಿಂದ ಇಬ್ಬರೂ ಟೀಂ ಇಂಡಿಯಾ ಪರ ಒಂದೇ ಒಂದು ಟಿ20 ಮ್ಯಾಚ್ ಆಡಿಲ್ಲ. ಆದ್ರೆ ಈ ಬಾರಿಯ ಟಿ20 ವರ್ಲ್ಡ್​​ಕಪ್​​ನಲ್ಲಿ ಆಡೋಕೆ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಬಯಸಿದ್ದಾರೆ. ಅದ್ರಲ್ಲೂ ಬಿಸಿಸಿಐ ಅಂತೂ ರೋಹಿತ್​ ಶರ್ಮಾರನ್ನೇ ವರ್ಲ್ಡ್​​ಕಪ್ ಕ್ಯಾಪ್ಟನ್ ಮಾಡೋ ಪ್ಲ್ಯಾನ್​ನಲ್ಲಿದೆ. ಹೀಗಾಗಿಯೇ ವಿಶ್ವಕಪ್​ಗೂ ಮುನ್ನ ನಡೆಯೋ ಏಕೈಕ ಟಿ20 ಸೀರಿಸ್ ಅಂದ್ರೆ ಅದು ಅಪ್ಘಾನಿಸ್ತಾನದ ವಿರುದ್ಧ ಮಾತ್ರ. ಇದೇ ಕಾರಣಕ್ಕೆ ರೋಹಿತ್ ಮತ್ತು ಕೊಹ್ಲಿಯನ್ನ ಈ ಸೀರಿಸ್​ಗೆ ಪಿಕ್ ಮಾಡಲಾಗಿದೆ. ಈಗ ರೋಹಿತ್ ಮತ್ತು ಕೊಹ್ಲಿಗೆ ಇಬ್ಬರಿಗೂ ಅಗ್ನಿ ಪರೀಕ್ಷೆಯಾಗಲಿದೆ. ವರ್ಲ್ಡ್​​ಕಪ್​ ಶುರುವಾಗೋದು ಜೂನ್​ನಲ್ಲಿ. ಹೀಗಾಗಿ ಮುಂದಿನ ನಾಲ್ಕು ತಿಂಗಳುಗಳ ಕಾಲವೂ ಎಲ್ಲರ ಫೋಕಸ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆಯೇ ಇರುತ್ತೆ.

ವರ್ಲ್ಡ್​​ಕಪ್​ಗೂ ಮುನ್ನ ಐಪಿಎಲ್​ ಟೂರ್ನಿ ನಡೆಯುತ್ತೆ. ಅಲ್ಲೂ ಅಷ್ಟೇ, ಇಬ್ಬರೂ ರನ್ ಹೊಡಿಲೇಬೇಕು. ರೋಹಿತ್ ಮತ್ತು ಕೊಹ್ಲಿಗೆ ಈ ಬಾರಿಯ ಐಪಿಎಲ್​ ಡಿಸೈಡಿಂಗ್​ ಫ್ಯಾಕ್ಟರ್ ಆಗಲಿದೆ. ಯಾಕಂದ್ರೆ ಅಫ್ಘಾನ್ ವಿರುದ್ಧ ಬಿಟ್ರೆ ಟೀಂ ಇಂಡಿಯಾಗೆ ಇನ್ಯಾವುದೇ ಟಿ-20 ಸೀರಿಸ್​​ಗಳಿಲ್ಲ. ಹೀಗಾಗ ಐಪಿಎಲ್​​ನಲ್ಲಿ ನಮ್ಮ ಪ್ಲೇಯರ್ಸ್​ಗಳ ಪರ್ಫಾಮೆನ್ಸ್​ ಮೇಲೆ ಬಿಸಿಸಿಐ ನಿಗಾ ವಹಿಸಲಿದೆ. ಈಗಾಗ್ಲೇ 30 ಮಂದಿ ಆಟಗಾರರ ಲಿಸ್ಟ್​ನ್ನ ಕೂಡ ಬಿಸಿಸಿಐ ರೆಡಿ ಮಾಡಿಕೊಂಡಿದೆ. ಈ 30 ಮಂದಿ ಪೈಕಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಇದ್ದಾರೆ. ಒಂದು ವೇಳೆ ಐಪಿಎಲ್​​ನಲ್ಲಿ ಇಬ್ಬರೂ ಫೇಲ್ ಆದ್ರೆ ವರ್ಲ್ಡ್​​ಕಪ್​ ಸ್ಕ್ವಾಡ್​​ನಲ್ಲಿ ಏನು ಬೇಕಾದ್ರೂ ಆಗಬಹುದು. ರೋಹಿತ್ ಮತ್ತು ಕೊಹ್ಲಿ ಡ್ರಾಪ್ ಆದ್ರೂ ಆಶ್ಚರ್ಯ ಇಲ್ಲ. ಇವರಿಬ್ಬರಿಗೂ ಇದು ಕೊನೆಯ ಟಿ20 ವರ್ಲ್ಡ್​​ಕಪ್​​ ಟೂರ್ನಿಯಾಗಲಿದೆ. ಹೀಗಾಗಿ ಮುಂದಿನ ನಾಲ್ಕು ತಿಂಗಳು, ವರ್ಲ್ಡ್​​ಕಪ್​ ಸ್ಕ್ವಾಡ್​​ಗೆ ಸೆಲೆಕ್ಷನ್ ಆಗೋವರೆಗೂ ರೋಹಿತ್ ಮತ್ತು ಕೊಹ್ಲಿ ಹಗ್ಗದ ಮೇಲೆಯೇ ನಡೀಬೇಕಾಗುತ್ತೆ. ಯಾಕಂದ್ರೆ ಟಿ20 ಫಾರ್ಮೆಟ್​​ನಲ್ಲಿ ಆ ಲೆವೆಲ್​ಗೆ ಕಾಂಪಿಟೀಶನ್ ಇದೆ. 2022ರಲ್ಲಿ ಟಿ20 ವರ್ಲ್ಡ್​ಕಪ್ ಸೆಮಿಫೈನಲ್​​ನಲ್ಲಿ ಸೋತ ಬಳಿಕ ಟೀಂ ಇಂಡಿಯಾ ಟಿ20 ಟೀಮ್​ಗೆ ಸರ್ಜರಿ ಮಾಡೋಕೆ ಬಿಸಿಸಿಐ ಮುಂದಾಗಿತ್ತು. ಟಿ-20ಗೆ ಅಂತಾನೆ ಸಪರೇಟ್ ತಂಡವನ್ನ ರೆಡಿ ಮಾಡೋಕೆ ಕೆಲಸಕ್ಕೆ ಬಿಸಿಸಿಐ ಕೈ ಹಾಕಿತ್ತು. ಆ ಪ್ರಾಸೆಸ್​​​ನ ಕಾರಣವೇ ಕಳೆದ ಒಂದೂವರೆ ವರ್ಷಗಳಿಂದ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಯಾವುದೇ ಟಿ20 ಮ್ಯಾಚ್​ಗಳನ್ನ ನೋಡಿಲ್ಲ. ಪ್ರತಿ ಸೀರಿಸ್​​ನಲ್ಲೂ ಟಿ-20 ಎಕ್ಸ್​ಪರ್ಟ್​​ಗಳನ್ನ ಸೆಲೆಕ್ಟ್ ಮಾಡಿ ಎಕ್ಸ್​​ಪರಿಮೆಂಟ್ ಮಾಡ್ತಾನೆ. ಇದ್ರು. ಈಗ ರೋಹಿತ್ ಮತ್ತು ಕೊಹ್ಲಿಯನ್ನ ಟೀಂಗೆ ಸೇರಿಸ್ಕೊಂಡು ಇನ್ನೊಂದು ಹಂತದ ಎಕ್ಸ್​​ಪರಿಮೆಂಟ್ ನಡೀತಾ ಇದೆ. ಟಿ-20 ವರ್ಲ್ಡ್​​ಕಪ್ ನಲ್ಲಿ ರೋಹಿತ್ ಮತ್ತು ಕೊಹ್ಲಿ ಆಡಿಯೇ ಆಡ್ತಾರೆ ಅಂತಾ 100 ಪರ್ಸೆಂಟ್ ಆಗಿ ಹೇಳೋಕೆ ಸಾಧ್ಯವಿಲ್ಲ. ಐಪಿಎಲ್​​ವರೆಗೂ ಕಾಯಲೇಬೇಕು..

ಜನವರಿ 11ರಿಂದ ಅಪ್ಘಾನಿಸ್ತಾನ ವಿರುದ್ಧ ಮೂರು ಮ್ಯಾಚ್​​ಗಳು ಟಿ-20 ಸೀರಿಸ್​ಗೆ ಯಾರೆಲ್ಲಾ ಸೆಲೆಕ್ಟ್ ಆಗಿದ್ದಾರೆ. ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿದೆ ಅನ್ನೋದನ್ನ ನೋಡ್ತಾ ಹೋಗೋಣ.

  • T20 ಟೀಂ ಇಂಡಿಯಾ 
  • ರೋಹಿತ್ ಶರ್ಮಾ
  • ವಿರಾಟ್ ಕೊಹ್ಲಿ
  • ಶುಬ್ಮನ್ ಗಿಲ್
  • ಯಶಸ್ವಿ ಜೈಸ್ವಾಲ್
  • ತಿಲಕ್ ವರ್ಮಾ
  • ಸಂಜು ಸ್ಯಾಮ್ಸನ್
  • ರಿಂಕು ಸಿಂಗ್
  • ಜಿತೇಶ್ ಶರ್ಮಾ
  • ಶಿವಮ್ ದುಬೆ
  • ವಾಷಿಂಗ್ಟನ್ ಸುಂದರ್
  • ಅಕ್ಸರ್ ಪಟೇಲ್
  • ರವಿ ಬಿಷ್ಣೋಯಿ
  • ಅರ್ಶ್​​ದೀಪ್ ಸಿಂಗ್
  • ಕುಲ್​ದೀಪ್ ಯಾದವ್
  • ಅವೇಶ್ ಖಾನ್
  • ಮುಕೇಶ್ ಕುಮಾರ್

ಇದು ಅಫ್ಘಾನಿಸ್ತಾನ ವಿರುದ್ಧ ಟಿ-20 ಸೀರಿಸ್​ಗೆ ಟೀಂ ಇಂಡಿಯಾದ 15 ಮಂದಿ ಆಟಗಾರರ ಸ್ಕ್ವಾಡ್. ಆದ್ರೆ ಈ ಟೀಂನಲ್ಲೂ ಇನ್ನೂ ಕೆಲ ಪ್ರಮುಖ ಪ್ಲೇಯರ್ಸ್​ಗಳು ಇಲ್ಲ. ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕೆ.ಎಲ್​.ರಾಹುಲ್ ಇವಱರು ಕೂಡ ಅಪ್ಘಾನಿಸ್ತಾನ ವಿರುದ್ಧ ಆಡ್ತಿಲ್ಲ.

Sulekha