ನೋ ಹಿಟ್.. ಓನ್ಲಿ ಡಕ್! –ಸೊನ್ನೆಗೆ ಔಟ್ ಆದ ಹಿಟ್ಮ್ಯಾನ್!
ಕ್ಯಾಪ್ಟನ್ ರೋಹಿತ್ ಶರ್ಮಾ.. ಮತ್ತೊಮ್ಮೆ ಸೊನ್ನೆ.. ಬಿಗ್ ಜೀರೋ.. ಅಫ್ಘಾನಿಸ್ತಾನ ವಿರುದ್ಧದ ಸೆಕೆಂಡ್ ಟಿ20 ಮ್ಯಾಚ್ ರೋಹಿತ್ ಶರ್ಮಾ ಪಾಲಿಗೆ 150 ಅಂತಾರಾಷ್ಟ್ರೀಯ ಟಿ20 ಪಂದ್ಯವಾಗಿತ್ತು. ಹೀಗಾಗಿ ಒಂದು ಮೆಮೋರೇಬಲ್ ಇನ್ನಿಂಗ್ಸ್ ಆಡ್ಬಹುದು ಅಂದ್ಕೊಂಡ್ರೆ ನಮ್ಮ ಹಿಟ್ಮ್ಯಾನ್ ಇಲ್ಲೂ ಸೊನ್ನೆಗೆ ಔಟಾಗಿದ್ದಾರೆ. ಆಪ್ಘನ್ ಸೀರಿಸ್ನ್ನ ಎಲ್ರೂ ನೋಡ್ತಾ ಇರೋದೆ ಇಬ್ಬರಿಗೋಸ್ಕರ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ. ಅದ್ರಲ್ಲೂ ರೋಹಿತ್ ಅಂತೂ ಫಸ್ಟ್ ಮ್ಯಾಚ್ನಲ್ಲೂ ಸೊನ್ನೆಗೆ ರನ್ನೌಟ್ ಆಗಿದ್ರು. ಅನ್ಫಾರ್ಚ್ಯುನೇಟ್ಲಿ ಸೆಕೆಂಡ್ ಮ್ಯಾಚ್ನಲ್ಲಿ ಬ್ಯಾಟ್ನ ಎಡ್ಜಿಗೆ ಬಡಿದು ಬಾಲ್ ವಿಕೆಟ್ಗೆ ಬಿತ್ತು..ರೋಹಿತ್ ಶರ್ಮಾರಷ್ಟು ಅನ್ಲಕ್ಕಿಯೆಷ್ಟು ಕ್ರಿಕೆಟರ್ ಇನ್ಯಾರೂ ಕೂಡ ಇಲ್ಲ ಅನ್ಸುತ್ತೆ. ರೋಹಿತ್ ಶರ್ಮಾ ಜೀರೋ ಸುತ್ತಿರೋದ್ರಲ್ಲೇ ಒಂದು ರೆಕಾರ್ಡ್ ಮಾಡಿದ್ದಾರೆ. ಇದ್ರಿಂದ ಕ್ಯಾಪ್ಟನ್ಗೆ ಮುಂದಿನ ದಿನಗಳಲ್ಲಿ ಡ್ಯಾಮೇಜ್ ಆಗ್ಬಹುದಾ ಅನ್ನೋ ವಿಚಾರದ ಬಗ್ಗೆ ಮತ್ತು ಸೆಕೆಂಡ್ ಮ್ಯಾಚ್ನಲ್ಲಿ ಟೀಂ ಇಂಡಿಯಾದ ಪರ್ಫಾಮೆನ್ಸ್ ಬಗ್ಗೆಯೂ ರಿವ್ಯೂ ಇಲ್ಲಿದೆ..
ಇದನ್ನೂ ಓದಿ: ಮೊದಲ ಟಿ-20 ಪಂದ್ಯ ಗೆದ್ದ ಟೀಮ್ ಇಂಡಿಯಾ –ರನೌಟ್ ಮಾಡಿಸಿದ ಗಿಲ್ ಮೇಲೆ ರೋಹಿತ್ ಶರ್ಮಾ ಕಿಡಿಕಿಡಿ..!
ಟೀಂ ಇಂಡಿಯಾ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಇಳಿದಾಗ ಎಲ್ಲರೂ ರೋಹಿತ್ ಶರ್ಮಾ ಬ್ಯಾಟ್ನಿಂದ ಒಂದಷ್ಟು ರನ್ಗಳು ಬರ್ಲಿ ಅಂತಾನೆ ಕಾಯ್ತಾ ಇದ್ರು. ಸ್ಟೇಡಿಯಂ ಅಂತೂ ಫುಲ್ ಪ್ಯಾಕ್ಡ್ ಆಗಿತ್ತು. ರೋಹಿತ್ ಶರ್ಮಾ ಕ್ರೀಸ್ನಲ್ಲಿ ನಿಂತಿದ್ದಾಗ ಔಟಾಗದಿದ್ರೆ ಸಾಕಪ್ಪ ಅಂತಾನೆ ಎಲ್ಲರೂ ಅಂದುಕೊಂಡಿದ್ರು. ಬಟ್ ರೋಹಿತ್ ಫೇಸ್ ಮಾಡಿದ ಫಸ್ಟ್ ಬಾಲ್ಗೇ ಔಟ್. ಆ ರೀತಿ ಬಾಲ್ ಬ್ಯಾಟ್ನ ಎಡ್ಜಿಗೆ ಬಡಿದು ವಿಕೆಟ್ ಬಿದ್ದಾಗ ಬ್ಯಾಟ್ಸ್ಮನ್ನನ್ನ ಹೆಚ್ಚು ಬ್ಲೇಮ್ ಮಾಡೋಕೂ ಆಗಲ್ಲ. ಟೈಮ್ ಕೆಟ್ಟಿದೆ ಅಂತಾನೆ ಹೇಳ್ಬೇಕಷ್ಟೆ. ಯಾಕಂದ್ರೆ ಫಸ್ಟ್ ಮ್ಯಾಚ್ನಲ್ಲಿ ರೋಹಿತ್ ರನ್ನೌಟ್ ಆದ್ರು. ಈಗ ಮತ್ತೊಮ್ಮೆ ವಿಚಿತ್ರವಾಗಿ ಔಟಾದ್ರು. ಬಟ್ ಕೆರಿಯರ್ಗೆ ಡ್ಯಾಮೇಜ್ ಆಗೋದಿಕ್ಕೆ ಇವಿಷ್ಟೇ ಸಾಕು. ಬ್ಯಾಟ್ಸ್ಮನ್ಗಳ ವಿಚಾರದಲ್ಲಿ ಹೇಗೆ ಔಟಾದ್ರು ಅನ್ನೋದು ಇಂಪಾರ್ಟೆಂಟ್ ಆಗೋದಿಲ್ಲ. ಎಷ್ಟು ರನ್ ಮಾಡಿದ್ರು ಅನ್ನೋದಷ್ಟೇ ಕೌಂಟ್ ಆಗುತ್ತೆ. ಆ ಆ್ಯಂಗಲ್ನಲ್ಲಿ ನೋಡಿದ್ರೆ ಈಗ ರೋಹಿತ್ ಶರ್ಮಾ ನಿಜಕ್ಕೂ ಪ್ರಾಬ್ಲಂನಲ್ಲಿದ್ದಾರೆ. ಯಾಕಂದ್ರೆ, ರೋಹಿತ್ಗೆ ಟಿ20 ಕಮ್ಬ್ಯಾಕ್ ಸೀರೀಸ್. ಹಾಗೆಯೇ ವರ್ಲ್ಡ್ಕಪ್ಗೂ ಮುನ್ನ ಕೊನೆಯ ಸೀರಿಸ್. ಫೈನಲ್ ಚಾನ್ಸ್.. ಇಲ್ಲಿ ರೋಹಿತ್ ಮತ್ತು ಕೊಹ್ಲಿಯ ಪರ್ಫಾಮೆನ್ಸ್ ಮ್ಯಾಟರ್ ಆಗುತ್ತೆ. ಬಿಸಿಸಿಐ ಇವರಿಬ್ಬರ ಮೇಲೆಯೇ ಹೆಚ್ಚು ಫೋಕಸ್ ಮಾಡಿರೋದು.
ಸ್ವಿಚ್ಯುವೇಶನ್ ಹೀಗಿರೋವಾಗ ಫಸ್ಟ್ ಎರಡೂ ಮ್ಯಾಚ್ನಲ್ಲೂ ಗೋಲ್ಡನ್ ಡಕ್ ಆದ್ರೆ ಹೇಗಿರ್ಬೇಡ. ಈಗ ಸೊನ್ನೆಗೆ ಔಟಾಗೋದ್ರಲ್ಲೇ ರೋಹಿತ್ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ನಿಮಗೆ ಗೊತ್ತಿರ್ಲಿ, ಟಿ-20 ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಇದು 12ನೇ ಬಾರಿಗೆ ಡಕ್ ಔಟಾಗಿರೋದು. ಟೀಂ ಇಂಡಿಯಾದ ಇತಿಹಾಸದಲ್ಲಿ ಯಾವುದೇ ಕ್ಯಾಪ್ಟನ್ ಕೂಡ ಇಷ್ಟೊಂದು ಬಾರಿಗೆ ಸೊನ್ನೆಗೆ ಔಟಾಗಿಲ್ಲ. ಅಷ್ಟೇ ಅಲ್ಲ, ಜಾಗತಿಕ ಟಿ20 ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾರದ್ದು ಸಕೆಂಡ್ ಮೋಸ್ಟ್ ಗೋಲ್ಡನ್ ಡಕ್. ಐರ್ಲೆಂಡ್ನ ಕೆವಿನ್ ಒಬ್ರಿಯಾನ್ ಒಟ್ಟು 13 ಮೂರು ಸೊನ್ನೆಗೆ ಔಟಾಗಿದ್ದಾರೆ. ರೋಹಿತ್ ಶರ್ಮಾ 12 ಬಾರಿ. ಇನ್ನೇನು ವರ್ಲ್ಡ್ಕಪ್ಗೆ ಕೆಲ ತಿಂಗಳುಗಳಷ್ಟೇ ಬಾಕಿಯಿರೋವಾಗ ರೋಹಿತ್ ಶರ್ಮಾ ಮೇಲಿಂದ ಮೇಲೆ ಸೊನ್ನೆಗೆ ಔಟಾಗಿದ್ದಾರೆ. ನಮ್ಮ ಕ್ಯಾಪ್ಟನ್ ಏನೋ ಸೆಲ್ಫ್ಲೆಸ್ ಪ್ಲೇಯರ್ ಅನ್ನೋದೇನೋ ನಿಜ. ಹಾಗಂತಾ ಈ ರೀತಿ ಸೊನ್ನೆಗೆ ಔಟಾಗ್ತಾ ಇದ್ರೆ, ಎಲ್ಲಿ ವರ್ಲ್ಡ್ಕಪ್ ಟೀಮ್ನಿಂದಲೇ ಔಟಾಗಿಬಿಡ್ತಾರೋ ಅನ್ನೋ ಟೆನ್ಷನ್ ಶುರುವಾಗಿದೆ. ಯಾಕಂದ್ರೆ ಅತ್ತ ಹಾರ್ದಿಕ್ ಪಾಂಡ್ಯಾ ವರ್ಲ್ಡ್ಕಪ್ನಲ್ಲೂ ಟೀಂ ಇಂಡಿಯಾದ ಕ್ಯಾಪ್ಟನ್ ಆಗೋಕೆ ಕಾಯ್ತಾ ಇದ್ದಾರೆ. ಐಪಿಎಲ್ ಬಳಿಕ ಏನು ಬೇಕಾದ್ರೂ ಚೇಂಜೆಸ್ಗಳಾಗಬಹುದು.
ರೋಹಿತ್ ಶರ್ಮಾ ಸದ್ಯ ಅಕ್ಷರಶ: ಹಗ್ಗದ ಮೇಲೆಯೇ ನಡೀತಾ ಇದ್ದಾರೆ. ಕೇವಲ ಕ್ಯಾಪ್ಟನ್ ಆಗಿ ಮ್ಯಾಚ್ಗಳನ್ನ ಗೆದ್ರಷ್ಟೇ ಸಾಕೋಗೋದಿಲ್ಲ. ರೋಹಿತ್ ಪರ್ಫಾಮೆನ್ಸ್ ಕೂಡ ಇಲ್ಲಿ ಮ್ಯಾಟರ್ ಆಗುತ್ತೆ. ರನ್ ಮಾಡಲೇಬೇಕಾದ ಒತ್ತಡದಲ್ಲಿ ರೋಹಿತ್ ಶರ್ಮಾ ಇದ್ದಾರೆ. ಇನ್ನು ಉಳಿದಿರೋದು ಒಂದೇ ಒಂದು ಟಿ20 ಮ್ಯಾಚ್. ಅಲ್ಲಾದ್ರೂ ಹಿಟ್ಮ್ಯಾನ್ ಒಂದು ಹಾಫ್ ಸೆಂಚೂರಿ ಹೊಡೆದ್ರೂ ಸಾಕಿತ್ತು. ಸ್ವಲ್ಪ ಸೇಫ್ ಜೋನ್ನಲ್ಲಿ ಬಂದು ನಿಲ್ಲಬಹುದು. ಮೂರನೇ ಮ್ಯಾಚ್ನಲ್ಲೂ ಫೇಲ್ ಆದ್ರು ಅಂದ್ರೆ ರೋಹಿತ್ ಶರ್ಮಾ ಕಂಡೀಷನ್ ಗ್ಯಾರಂಟಿ ಕ್ರಿಟಿಕಲ್ ಆಗುತ್ತೆ. ಹೀಗಾಗಿ ರೋಹಿತ್ ಶರ್ಮಾಗೆ ಲಕ್ ಸಾಥ್ ಕೊಡ್ಲಿ ಅನ್ನೋದಷ್ಟೇ ನಮ್ಮ ಹಾರೈಕೆ.
ಇನ್ನು ವಿರಾಟ್ ಕೊಹ್ಲಿ ಕಮ್ಬ್ಯಾಕ್ ಮ್ಯಾಚ್ನಲ್ಲಿ ಆರಂಭದಲ್ಲಿ ಚೆನ್ನಾಗಿಯೇ ಆಡಿದ್ರು. ಬಳಿಕ 29 ರನ್ಗೆ ಕ್ಯಾಚ್ ಕೊಟ್ಟು ಔಟಾಗ್ತಾರೆ. ಕೊಹ್ಲಿಗೂ ಅಷ್ಟೇ ಇನ್ನೊಂದೇ ಮ್ಯಾಚ್ ಇರೋದು. ಅಂತೂ ರೋಹಿತ್ ಮತ್ತು ವಿರಾಟ್ ಕೊಹ್ಲಿ..ನಾವ್ಯಾರನ್ನ ವರ್ಲ್ಡ್ಕಪ್ ಟೀಂನಲ್ಲಿ ಆಡ್ಬೇಕು ಅಂತಾ ಬಯಸಿದ್ದೀವೋ ಅವರಿಬ್ಬರೂ ಆಲ್ಮೋಸ್ಟ್ ಒಂದೇ ಪೊಸೀಶನ್ನಲ್ಲಿದ್ದಾರೆ ಈಗ. ಬೆಂಗಳೂರಿನಲ್ಲಿ ನಡೆಯೋ ಫೈನಲ್ ಟಿ-20 ಮ್ಯಾಚ್ನಲ್ಲಾದ್ರೂ ಇಬ್ಬರೂ ಒಂದಷ್ಟು ರನ್ ಮಾಡಿದ್ರೆ ಸಾಕಿತ್ತು.
ಬಟ್ ಟೀಂ ಇಂಡಿಯಾದ ಯಂಗಿಸ್ತಾನಿಗಳು ಮ್ಯಾಚ್ಗಳನ್ನ ಗೆಲ್ಲಿಸಿಕೊಡ್ತಾ ಇದ್ದಾರೆ. ಶುಬ್ಮನ್ ಗಿಲ್ರನ್ನ ಸೆಕೆಂಡ್ ಮ್ಯಾಚ್ಗೆ ಟೀಮ್ನಿಂದ ಡ್ರಾಪ್ ಮಾಡಿದ್ರು. ಯಶಸ್ವಿ ಜೈಸ್ವಾಲ್ರನ್ನ ಓಪನಿಂಗ್ ಕಳಿಸಿದ್ರು. ಗುಡ್ ಡಿಸೀಶನ್..ಸಿಕ್ಕ ಅವಕಾಶವನ್ನ ಬಾಚಿಕೊಳ್ಳೋದು ಅಂದ್ರೆ ಹೀಗೆ. ಜೈಸ್ವಾಲ್ ಅಂತೂ ಫೀಯರ್ಲೆಸ್, ಸೆಲ್ಫ್ಲೆಸ್ ಕ್ರಿಕೆಟ್ ಆಡಿದ್ರು. ಕೇವಲ 34 ಬಾಲ್ಗಳಲ್ಲೇ 68 ರನ್ ಹೊಡ್ರೆದ್ರು. ಜೈಸ್ವಾಲ್ ಬ್ಯಾಟಿಂಗ್ ನೋಡೋಕೂ ಚೆನ್ನಾಗಿರುತ್ತೆ. ಅವರ ಶಾಟ್ ಸೆಲೆಕ್ಷನ್, ಟೈಮಿಂಗ್ ಓವರ್ ಆಗಿ ಒಬ್ಬ ಕ್ಲಾಸ್ ಬ್ಯಾಟ್ಸ್ಮನ್. ಟಿ20ಗೆ ಹೇಳಿ ಮಾಡಿಸಿದಂಥಾ ಪ್ಲೇಯರ್. ಜೈಸ್ವಾಲ್ರ ಈ ಪರ್ಫಾಮೆನ್ಸ್ನಿಂದಾಗಿ ಈಗ ಶುಬ್ಮನ್ ಗಿಲ್ ಬುಡಕ್ಕೆ ಬೆಂಕಿ ಬಿದ್ದಿರೋದಂತೂ ಸುಳ್ಳಲ್ಲ. ನೆಕ್ಸ್ಟ್ ಐಪಿಎಲ್ನಲ್ಲೂ ಜೈಸ್ವಾಲ್ ಇದನ್ನೇ ಮೇಂಟೇನ್ ಮಾಡಿದ್ರೆ ಸಾಕು, ವರ್ಲ್ಡ್ಕಪ್ ಸ್ಕ್ವಾಡ್ಗೆ ಗ್ಯಾರಂಟಿ ಸೆಲೆಕ್ಟ್ ಆಗ್ತಾರೆ.
ಸೆಕೆಂಡ್ ಮ್ಯಾಚ್ನಲ್ಲೂ ಹೈಲೈಟ್ ಆದ ಇನ್ನೊಂದು ಪರ್ಫಾಮೆನ್ಸ್ ಅಂದ್ರೆ ಶಿವಮ್ ದುಬೆಯ ಬ್ಯಾಟಿಂಗ್. ಬ್ಯಾಕ್ ಟು ಬ್ಯಾಕ್ ಹಾಫ್ ಸೆಂಚೂರಿ..ನಿಜಕ್ಕೂ ಗ್ರೇಟ್ ಸೈನ್.. ಗುಡ್ ಫಾರ್ ಹಿಮ್.. ಗುಡ್ ಫಾರ್ ಟೀಂ ಇಂಡಿಯಾ. ಶಿವಮ್ ದುಬೆ 32 ಬಾಲ್ಗಳಲ್ಲಿ 62 ರನ್ ಹೊಡೆದ್ರು. ಶಿವಮ್ ದುಬೆಯೂ ಅಷ್ಟೇ ವರ್ಲ್ಡ್ಕಪ್ ಸ್ಕ್ವಾಡ್ಗೆ ಟಾಪ್ ಕಂಟೆಂಡರ್ ಆಗಿದ್ದಾರೆ. ಯಾಕಂದ್ರೆ ಅಲ್ರೌಂಡರ್ ಬೇರೆ. ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡ್ತಾರೆ. ಅಲ್ಲಿ ಮಹೇಂದ್ರ ಸಿಂಗ್ ಧೋನಿಯಿಂದ ಸಿಗೋ ಸಪೋರ್ಟ್ ಮತ್ತು ಟಿಪ್ಸ್ ಶಿವಮ್ ದುಬೆಯನ್ನ ಇನ್ನಷ್ಟು ಎಫೆಕ್ಟಿವ್ ಪ್ಲೇಯರ್ ಆಗಿಸೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಸೋ ಬಿಸಿಸಿಐ ಈಗಾಗ್ಲೇ ಶಿವಮ್ ದುಬೆಯವರನ್ನ ನೋಟ್ ಮಾಡಿಕೊಂಡಿರುತ್ತೆ. ಐಪಿಎಲ್ನಲ್ಲಿ ಅವರ ಮೇಲೊಂದು ಕಣ್ಣಿಡೋದಂತೂ ಸತ್ಯ. ಹಾಗೆಯೇ ಬೌಲರ್ಸ್ಗಳ ವಿಚಾರದಲ್ಲಿ ಅಕ್ಸರ್ ಪಟೇಲ್ ಟಾಪ್ ಕ್ಲಾಸ್ ಬೌಲಿಂಗ್ ಮಾಡ್ತಾ ಇದ್ದಾರೆ. ಅವರೂ ಅಷ್ಟೇ ವರ್ಲ್ಡ್ಕಪ್ಗೆ ಸೆಲೆಕ್ಟ್ ಆಗುವ ಎಲ್ಲಾ ಸಾಧ್ಯತೆಗಳಿವೆ.
ಬಟ್ ಸ್ಟಿಲ್ ಕ್ವಶ್ಚನ್ ಮಾರ್ಕ್ ಇರೋದು ನಮ್ಮೆಲ್ಲರ ಫೇವರೇಟ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆಯೇ.. ಅಣ್ಣಂದ್ರೇ ಒಂದಷ್ಟು ರನ್ ಮಾಡ್ರಪ್ಪಾ.. ಟಿ20 ವರ್ಲ್ಡ್ಕಪ್ಗೆ ಸೆಲೆಕ್ಟ್ ಆಗಿ, ರೋಹಿತ್ ಶರ್ಮಾ ಟೀಂ ಇಂಡಿಯಾವನ್ನ ಲೀಡ್ ಮಾಡಿ.. ಇಬ್ಬರೂ ಸೀನಿಯರ್ ಕ್ರಿಕೆಟರ್ಸ್ ದೇಶಕ್ಕೆ ಟ್ರೋಫಿ ಗೆಲ್ಲಿಸಿಕೊಡ್ಲಿ ಅನ್ನೋದಷ್ಟೇ ಕ್ರಿಕೆಟ್ ಅಭಿಮಾನಿಗಳ ಆಶಯ.