ರೋಹಿತ್ ಗೆ BCCI ಹೊಸ ಟಾಸ್ಕ್  – ಇಂಗ್ಲೆಂಡ್ ಟೆಸ್ಟ್ ಸರಣಿ ಟಾರ್ಗೆಟ್   

ರೋಹಿತ್ ಗೆ BCCI ಹೊಸ ಟಾಸ್ಕ್  – ಇಂಗ್ಲೆಂಡ್ ಟೆಸ್ಟ್ ಸರಣಿ ಟಾರ್ಗೆಟ್   

ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರೋ ಟೀಂ ಇಂಡಿಯಾ ಆಟಗಾರರೆಲ್ಲಾ ಸದ್ಯ ಐಪಿಎಲ್​ಗೆ ರೆಡಿಯಾಗ್ತಿದ್ದಾರೆ. ಮಾರ್ಚ್ 22ರಿಂದ ಮೇ 25ರವರೆಗೆ ಅಂದ್ರೆ ಎರಡು ತಿಂಗಳ ಕಾಲ ಐಪಿಎಲ್ ಹಬ್ಬವೇ ನಡೆಯಲಿದೆ. ಆ ಬಳಿಕ ಜೂನ್ ತಿಂಗಳಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಬೇಕಿದೆ.  ಈ ಸರಣಿ ಮೂಲಕ 2025-27ರ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್​ ಕೂಡ ಶುರುವಾಗುತ್ತೆ. ಹೀಗಾಗಿ ಇನ್ಮುಂದೆ ರೆಡ್​ ಬಾಲ್​ ಕ್ರಿಕೆಟ್​ಗೆ ಹೊಸ ಸಾರಥಿ ಬರಬಹುದು ಅನ್ನೋ ನಿರೀಕ್ಷೆ ಇತ್ತು. ಬಟ್ ಒನ್ಸ್ ಅಗೇನ್ ಹಿಟ್​ಮ್ಯಾನ್​ಗೆ ಬಿಸಿಸಿಐ ಮಣೆ ಹಾಕುವ ಸಾಧ್ಯತೆಗಳಿವೆ.

ಇದನ್ನೂ ಓದಿ : ಡೆಲ್ಲಿ ತಂಡಕ್ಕೆ ಅಕ್ಷರ್ ಪಟೇಲ್ ಕ್ಯಾಪ್ಟನ್ – ಕಪ್ ಗೆಲ್ಲಿಸಿಕೊಡ್ತಾರಾ ಆಲ್ ರೌಂಡರ್?

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಮುಂದುವರೆಯಲಿದ್ದಾರೆ. ಜೂನ್ 20 ರಿಂದ ಶುರುವಾಗಲಿರುವ ಈ ಸರಣಿಗಾಗಿ ಹೊಸ ನಾಯಕನನ್ನು ಆಯ್ಕೆ ಮಾಡಲು ಬಿಸಿಸಿಐ ಹಿಂದೇಟು ಹಾಕಿದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಭಾರತ ಟೆಸ್ಟ್ ತಂಡದ ನಾಯಕ ಬದಲಾಗಣೆ ಸುದ್ದಿಗಳು ಹರಿದಾಡಿದ್ವು. ಅದ್ರಲ್ಲೂ ಜಸ್​ಪ್ರೀತ್ ಬುಮ್ರಾಗೆ ಟೆಸ್ಟ್ ತಂಡ ಕ್ಯಾಪ್ಟನ್ಸಿ ನೀಡಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ರೋಹಿತ್ ಶರ್ಮಾ ಅವರನ್ನೇ ಟೆಸ್ಟ್ ತಂಡದ ನಾಯಕರನ್ನಾಗಿ ಮುಂದುವರೆಸಲು ನಿರ್ಧರಿಸಲಾಗಿದೆ. ಅದರಂತೆ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹಿಟ್​ಮ್ಯಾನ್ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿಗೆ ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ಕೊಡ್ತಿರೋ ಬಿಸಿಸಿಐ ಇಲ್ಲೊಂದು ಪ್ಲ್ಯಾನ್ ಮಾಡಿದೆ. ಹಾಗೇನಾದ್ರೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ರೋಹಿತ್ ಫೇಲ್ಯೂರ್ ಆದ್ರೆ ಟೆಸ್ಟ್ ತಂಡಕ್ಕೆ ಬಿಸಿಸಿಐ ಹೊಸ ನಾಯಕನನ್ನು ಆಯ್ಕೆ ಮಾಡೋದು ಗ್ಯಾರಂಟಿ. ಅಂದರೆ ಇದು ಟೆಸ್ಟ್ ತಂಡದಲ್ಲಿ ರೋಹಿತ್ ಶರ್ಮಾ ಅವರಿಗೆ ಕೊನೆಯ ಅವಕಾಶ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ 5 ಇನಿಂಗ್ಸ್​ಗಳಲ್ಲಿ ಕಲೆಹಾಕಿದ್ದು ಕೇವಲ​ 31 ರನ್​ಗಳನ್ನ ಮಾತ್ರ. ಹೀಗಾಗಿಯೇ ಅವರನ್ನು ಟೆಸ್ಟ್ ತಂಡದಿಂದ ಕೈ ಬಿಡಬೇಕೆಂಬ ಕೂಗುಗಳು ಕೇಳಿ ಬಂದಿದ್ದವು. ಆದರೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಲ್ಲದೇ, ನಾಯಕನಾಗಿಯೂ ಯಶಸ್ವಿಯಾಗಿದ್ದಾರೆ. ಹೀಗಾಗಿ ಟೆಸ್ಟ್ ತಂಡದ ನಾಯಕತ್ವದಿಂದ ಅವರನ್ನು ಕೆಳಗಿಸಿಳಿದರೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ ಎಂಬ ನಿರ್ಧಾರಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಬಂದಿದೆ. ಇದೇ ಕಾರಣದಿಂದ ರೋಹಿತ್ ಶರ್ಮಾ ಅವರಿಗೆ ಮತ್ತೆ ಐದು ಪಂದ್ಯಗಳಲ್ಲಿ ಅವಕಾಶ ನೀಡಲು ನಿರ್ಧರಿಸಲಾಗಿದೆ. ಅದರಂತೆ ಜೂನ್ 20 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಅವರೇ ಮುನ್ನಡೆಸಲಿದ್ದಾರೆ. ಇನ್ನು ಐದು ಪಂದ್ಯಗಳ ಶೆಡ್ಯೂಲ್ ಹೇಗಿದೆ ಅನ್ನೋದನ್ನ ನೋಡೋಣ.

ಭಾರತ Vs ಇಂಗ್ಲೆಂಡ್ ಶೆಡ್ಯೂಲ್!

ಪಂದ್ಯಗಳು        ತಿಂಗಳು       ದಿನಾಂಕ                ಸ್ಥಳ

1 ಟೆಸ್ಟ್          ಜೂನ್        20-24          –   ಲೀಡ್ಸ್

2ನೇ ಟೆಸ್ಟ್        ಜುಲೈ         2-6                   ಬರ್ಮಿಂಗ್​ಹ್ಯಾಮ್

3ನೇ ಟೆಸ್ಟ್          ಜುಲೈ       10-14        –     ಲಂಡನ್

4ನೇ ಟೆಸ್ಟ್           ಜುಲೈ             23-27                ಮ್ಯಾಂಚೆಸ್ಟರ್

5ನೇ ಟೆಸ್ಟ್       ಜುಲೈ-ಆಗಸ್ಟ್         31 ಜುಲೈ-4 ಆಗಸ್ಟ್        ಲಂಡನ್

ಹೀಗೆ ಐದು ಪಂದ್ಯಗಳಿಗೆ ಈಗಾಗ್ಲೇ ಡೇಟ್ ಌಂಡ್ ಪ್ಲೇಸ್ ಫೈನಲ್ ಆಗಿದೆ. ಇತ್ತೀಚೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನ ಗೆದ್ದಿರೋ ಆಟಗಾರರು ಐಪಿಎಲ್​ಗೆ ರೆಡಿಯಾಗ್ತಿದ್ದಾರೆ. ಇದಾದ ಬಳಿಕ ಮತ್ತೆ ಟೀ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ. 2026ರ ಮಾರ್ಚ್​ವರೆಗೂ ಭಾರತದ ಎಲ್ಲಾ ಪಂದ್ಯಗಳ ವೇಳಾಪಟ್ಟಿ ಫೈನಲ್ ಆಗಿದೆ. ಮುಂದಿನ 12 ತಿಂಗಳವರೆಗೆ ಭಾರತ  39 ಪಂದ್ಯಗಳನ್ನಾಡಲಿದೆ.

Shantha Kumari

Leave a Reply

Your email address will not be published. Required fields are marked *