ನಾಯಕತ್ವದಿಂದ ಕೆಳಗಿಳಿಸಿದ್ದಕ್ಕೆ ಮುಂಬೈ ಟೀಂನಲ್ಲಿ ಆಡಲ್ವಾ ರೋಹಿತ್ ಶರ್ಮಾ – ಟಿ20 ಕ್ಯಾಪ್ಟನ್ಸಿಯಿಂದಲೂ ಕೊಕ್?

ನಾಯಕತ್ವದಿಂದ ಕೆಳಗಿಳಿಸಿದ್ದಕ್ಕೆ ಮುಂಬೈ ಟೀಂನಲ್ಲಿ ಆಡಲ್ವಾ ರೋಹಿತ್ ಶರ್ಮಾ – ಟಿ20 ಕ್ಯಾಪ್ಟನ್ಸಿಯಿಂದಲೂ ಕೊಕ್?

ರೋಹಿತ್​​ ಶರ್ಮಾರನ್ನ ಮುಂಬೈ ಇಂಡಿಯನ್ಸ್ ಟೀಂ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿರೋದು ಸಾಕಷ್ಟು ಚರ್ಚೆಯಾಗ್ತಿದೆ. ಇದಕ್ಕೆ ಮುಕ್ಯ ಕಾರಣ ಹಾರ್ದಿಕ್ ಪಾಂಡ್ಯ ಜೊತೆಗೆ ನಡೆದ ಡೀಲ್. ಪಾಂಡ್ಯಾ ಕ್ಯಾಪ್ಟನ್ಸಿಯಲ್ಲಿ ಫಸ್ಟ್​ ಸೀಸನ್​ನಲ್ಲೇ ಗುಜರಾತ್​ ಟೈಟಾನ್ಸ್ ಟ್ರೋಫಿ ಗೆದ್ದಿತ್ತು. 2023ರಲ್ಲಿ ಪಾಂಡ್ಯ ಪಡೆ ಫೈನಲ್​ಗೆ ತಲುಪಿತ್ತು. ಸೋ ಹಾರ್ದಿಕ್ ಪಾಂಡ್ಯಾರಲ್ಲಿ ಕ್ಯಾಪ್ಟನ್ಸಿ ಕೆಪಾಸಿಟಿ ಇದೆ ಅನ್ನೋದು ಮಾತ್ರ ಗ್ಯಾರಂಟಿ.

ಇನ್ನು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿ ಚೇಂಜ್ ಆಗಿರೋದು ಫ್ರಾಂಚೈಸಿ ಮೇಲೆ ಒಂದಷ್ಟು ನೆಗೆಟಿವ್ ಎಫೆಕ್ಟ್ ಆಗ್ತಿರೋದಂತೂ ​ಸುಳ್ಳಲ್ಲ. ರೋಹಿತ್ ಶರ್ಮಾ ಇನ್ಮುಂದೆ ಕ್ಯಾಪ್ಟನ್ ಆಗಿರೋದಿಲ್ಲ ಅಂತಾ ಅನೌನ್ಸ್ ಆದ ಕೆಲ ಗಂಟೆಗಳಲ್ಲೇ ಸೋಷಿಯಲ್​ ಮೀಡಿಯಾದಲ್ಲಿ 4 ಲಕ್ಷಕ್ಕೂ ಹೆಚ್ಚು ಮಂದಿ ಮುಂಬೈ ಇಂಡಿಯನ್ಸ್ ಪೇಜ್ ಅನ್ನು ಅನ್​ಫಾಲೋ ಮಾಡಿದ್ದಾರೆ. ರೋಹಿತ್ ಫ್ಯಾನ್ಸ್​ ಅಂತೂ ಮುಂಬೈ ಇಂಡಿಯನ್ಸ್ ಜೆರ್ಸಿಗೂ ಬೆಂಕಿ ಇಟ್ಟಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗ್ತಿದೆ. ಇನ್ನು ಮುಂಬೈ ಇಂಡಿಯನ್ಸ್​ ತಂಡದ ಸೂರ್ಯಕುಮಾರ್ ಯಾದವ್ ಅಂತೂ ವಾಟ್ಸ್ ಹ್ಯಾಪನಿಂಗ್ ಇನ್ ಮುಂಬೈ ಇಂಡಿಯನ್ಸ್ ಅನ್ನೋ ರೀತಿಯಲ್ಲಿ ಒಂದು ಬ್ರೋಕನ್ ಹಾರ್ಟ್ ಫೋಟೋವನ್ನೇ ಶೇರ್ ಮಾಡಿದ್ದಾರೆ. ಈ ಹಿಂದೆ ಬುಮ್ರಾ ಕೂಡ ಪಾಂಡ್ಯಾ ಕಮ್​ಬ್ಯಾಕ್ ಆದಾಗ ಸೈಲೆನ್ಸ್ ಇಸ್​ ದಿ ಆನ್ಸರ್​ ಅಂತಾ ಪೋಸ್ಟ್ ಹಾಕ್ಕೊಂಡಿದ್ರು.

ಇದನ್ನೂ ಓದಿ : ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟಿ20 ಮ್ಯಾಚ್ – ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ< /a>

ಇನ್ನು ರೋಹಿತ್ ಶರ್ಮಾ ಫ್ಯೂಚರ್ ಬಗ್ಗೆ ಒಂದಷ್ಟು ಪಾಯಿಂಟ್ಸ್  ಹೇಳಲೇಬೇಕು. ಈಗ ರೋಹಿತ್ ಶರ್ಮಾ ಕ್ಯಾಪ್ಟನ್ಸ ಪಾಂಡ್ಯ ಅಂಡರ್​​ನಲ್ಲಿ ಆಡ್ತಾರಾ ಅನ್ನೋ ಬಗ್ಗೆ ಭಾರಿ ಚರ್ಚೆಯಾಗ್ತಿದೆ. ರೋಹಿತ್​ಗೆ ಈ ವಿಚಾರದಲ್ಲಿ ಯಾವುದೇ ಪ್ರಾಬ್ಲಂ ಇಲ್ಲ. ಅಂಹಕಾರ ಅನ್ನೋದು ರೋಹಿತ್​ಗೆ ಸ್ವಲ್ಪವೂ ಇಲ್ಲ. ಹೀಗಾಗಿ ಪಾಂಡ್ಯಾ ಅಂಡರ್​ನಲ್ಲಿ ಆಡಬಹುದು. ಆದ್ರೆ ಎಷ್ಟು ಸಮಯ ಅನ್ನೋದು ಇಲ್ಲಿರುವ ಪ್ರಶ್ನೆ. ಐಪಿಎಲ್​​ ವಿಚಾರಕ್ಕೆ ಬರೋದಾದ್ರೆ, 2025ರ ಸೀಸನ್​​ ರೋಹಿತ್​ ಶರ್ಮಾಗೆ ಕೊನೆಯ ಐಪಿಎಲ್​​ ಟೂರ್ನಿ ಆಗಬಹುದು. 2024ರಲ್ಲಿ ಆಡಬಹುದು. ಲಾಸ್ಟ್ ಮೂರು ಸೀಸನ್​​ಗಳಿಗಿಂತ ಬೆಟರ್​ ಪರ್ಫಾಮೆನ್ಸ್ ಕೊಟ್ರೆ ಮ್ಯಾಕ್ಸಿಮಮ್ ಅಂದ್ರೆ 2025ರ ಟೂರ್ನಿಯಲ್ಲಿ ಆಡಬಹುದು. ಬಳಿಕ ರೋಹಿತ್​ ಶರ್ಮಾ ಐಪಿಎಲ್​​​ಗೆ ಗುಡ್​ಬೈ ಹೇಳುವ ಚಾನ್ಸ್ ಹೆಚ್ಚಿದೆ. ಯಾಕಂದ್ರೆ ಫ್ರಾಂಚೈಸಿ ಈಗ ಹೊಸ ಪ್ಲೇಯರ್ಸ್​​ ಮೇಲೆ ಕಣ್ಣಿಟ್ಟಿರೋದು ಕ್ಲಿಯರ್ ಆಗಿದೆ. ಹೀಗಾಗಿ ರೋಹಿತ್ ಶರ್ಮಾಗೆ 2024ರ ಸೀಸನ್ ತುಂಬಾ ಕಠಿಣ ಆಗಿರಲಿದೆ.

ಟೀಂ ಇಂಡಿಯಾದ ಟಿ-20 ಕ್ಯಾಪ್ಟನ್ಸಿಯಿಂದಲೂ ರೋಹಿತ್ ಶರ್ಮಾಗೆ ಕೊಕ್ ಸಿಗೋ ಸಾಧ್ಯತೆ ಹೆಚ್ಚಿದೆ. ಅಂದ್ರೆ ಮುಂದಿನ ಟಿ-20 ವರ್ಲ್ಡ್​​ಕಪ್​ಗೆ ರೋಹಿತ್ ಶರ್ಮಾ ಟೀಂ ಇಂಡಿಯಾವನ್ನ ಲೀಡ್ ಮಾಡೋದು ಡೌಟ್. ಅಲ್ಲೂ ಅಷ್ಟೇ, ಹಾರ್ದಿಕ್​ ಪಾಂಡ್ಯಾರೇ ಟೀಂ ಇಂಡಿಯಾದ ಕ್ಯಾಪ್ಟನ್ ಆಗೋ ಸಾಧ್ಯತೆ ಇದೆ. ಯಾಕಂದ್ರೆ ಈಗ ಮುಂಬೈ ಇಂಡಿಯನ್ಸ್​​ನಲ್ಲಾಗಿರೋ ಬೆಳವಣಿಗೆಯಿಂದ ರೋಹಿತ್ ಮತ್ತು ಪಾಂಡ್ಯಾ ಕೆರಿಯರ್​ಗೆ ಸ್ಟೇಜ್ ಸೆಟ್ ಆಗಿದೆ. ಇದು ಐಪಿಎಲ್​​.. ಅಲ್ಲಿ ಟೀಂ ಇಂಡಿಯಾವನ್ನ ರೆಪ್ರೆಸೆಂಟ್ ಮಾಡೋದು. ಐಪಿಎಲ್​​ನಲ್ಲಾಗಿರೋ ಡೆವಲಪ್​ಮೆಂಟ್ ಇಂಡಿಯನ್​​ ಕ್ಯಾಪ್ಟನ್ಸಿಗೆ ಹೇಗೆ ಎಫೆಕ್ಟ್ ಆಗುತ್ತೆ ಅಂತಾ ನಿಮಗೆ ಅನ್ನಿಸ್​ಬಹುದು. ಆದ್ರೆ ಮುಂದಿನ ಟಿ20 ವರ್ಲ್ಡ್​ಕಪ್​ಗೂ ಮುನ್ನ ಐಪಿಎಲ್​ ನಡೆಯುತ್ತೆ. ಅಲ್ಲಿ ಕ್ಯಾಪ್ಟನ್ ಆಗಿ ಪಾಂಡ್ಯ ಕ್ಲಿಕ್ ಆದ್ರು ಅಂದ್ರೆ, ಟೂರ್ನಿ ಗೆದ್ರು ಅಂದ್ರೆ, ಟಿ-20 ವರ್ಲ್ಡ್​​ಕಪ್​ನಲ್ಲೂ ಹಾರ್ದಿಕ್​ ಪಾಂಡ್ಯಾ ಟೀಂ ಇಂಡಿಯಾವನ್ನ ಲೀಡ್ ಮಾಡೋದು ಆಲ್​ಮೋಸ್ಟ್ ಗ್ಯಾರಂಟಿ. ಇದ್ರ ಜೊತೆಗೆ ರೋಹಿತ್ ಶರ್ಮಾ ಟಿ20 ವರ್ಲ್ಡ್​​ಕಪ್​ನಲ್ಲಿ ಆಡಿಯೇ ಆಡ್ತಾರೆ ಅನ್ನೋದು ಕೂಡ ಈಗ ಗ್ಯಾರಂಟಿ ಇಲ್ಲ. ಹೀಗಾಗಿ ರೋಹಿತ್ ವಂಡೇ ಮತ್ತು ಟೆಸ್ಟ್ ಟೀಂನ ಕ್ಯಾಪ್ಟನ್​ ಆಗಿ ಮುಂದುವರಿಬಹುದು. ಟಿ-20 ಕ್ಯಾಪ್ಟನ್ಸಿಯಿಂದ ಮುಂದಿನ ದಿನಗಳಲ್ಲಿ ಹಿಂದೆ ಸರಿದ್ರೂ ಆಶ್ಚರ್ಯ ಇಲ್ಲ. ಈಗ ಮುಂಬೈ ಇಂಡಿಯನ್ಸ್​​ನಲ್ಲಾಗಿರೋ ಡೆವಲಪ್​ಮೆಂಟ್​​ನಿಂದ ಈಗಾಗ್ಲೇ ರೋಹಿತ್​ ಶರ್ಮಾಗೆ ತಮ್ಮ ಟಿ-20 ಭವಿಷ್ಯದ ಬಗ್ಗೆ ಹಿಂಟ್ ಸಿಕ್ಕಿರುತ್ತೆ.

Shantha Kumari