ಅತಿವೇಗದ ಅರ್ಧಶತಕ ಸಿಡಿಸಿದ ರೋಹಿತ್ ಶರ್ಮಾ – ಹಿಟ್‌ಮ್ಯಾನ್ ದುರಾದೃಷ್ಟಕ್ಕೆ ಪಾಂಡ್ಯ ಬ್ರೇಕ್

13 ವರ್ಷಗಳ ನಂತರ ಮುಂಬೈ ಇಂಡಿಯನ್ಸ್ ಐಪಿಎಲ್‌ನ ಮೊದಲ ಪಂದ್ಯ ಗೆದ್ದಿದೆ. ಜೊತೆಗೆ 13 ವರ್ಷಗಳಿಂದ ಮುಂಬೈನ ದುರಾದೃಷ್ಟಕ್ಕೆ ಹಾರ್ದಿಕ್ ಪಾಂಡ್ಯ ಬ್ರೇಕ್ ಹಾಕಿದ್ದಾರೆ. ಮತ್ತೊಂದು ವಿಶೇಷವೆಂದರೆ, ಹಿಟ್‌ಮ್ಯಾನ್ ತನ್ನ ಐಪಿಎಲ್ ವೃತ್ತಿಜೀವನದ ಅತಿವೇಗದ ಅರ್ಧಶತಕ ಬಾರಿಸಿದ್ದಾರೆ.
ಇದನ್ನೂ ಓದಿ:KKR ವಿರುದ್ಧ ಮುಂಬೈಗೆ ರೋಚಕ ಗೆಲುವು – ಅತ್ಯಧಿಕ ಮೊತ್ತ ಬೆನ್ನಟ್ಟಿದ ದಾಖಲೆ ಬರೆದ ಪಾಂಡ್ಯ ಪಡೆ
ಮುಂಬೈ ಇಂಡಿಯನ್ಸ್ ತನ್ನ ತವರಲ್ಲಿ ಮೊದಲ ಜಯ ಸಾಧಿಸಿದೆ. ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಐಪಿಎಲ್ 2026 ರ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 221 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ. ಈ ಗುರಿ ಬೆನ್ನಟ್ಟಿರುವ ಮುಂಬೈ ಇಂಡಿಯನ್ಸ್ ಪರ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ರಿಯಾನ್ ರಿಕಲ್ಟನ್ ತಂಡಕ್ಕೆ ಸ್ಫೋಟಕ ಆರಂಭ ಶುರು ಮಾಡಿದರು. ಪವರ್‌ಪ್ಲೇನಲ್ಲಿಯೇ ತಂಡವನ್ನು 80 ರನ್ಗಳ ಗಡಿ ಮುಟ್ಟಿಸಿದ್ದಾರೆ. ಇದೇ ವೇಳೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ ತಮ್ಮ ಅರ್ಧಶತಕವನ್ನು ಪೂರೈಸಿದರು. ಸಖತ್ ಫಿಟ್ ಆಗಿಯೂ ದೈಹಿಕವಾಗಿ ಸ್ವಲ್ಪ ಸ್ಲಿಮ್ ಆಗಿ ಕಾಣಿಸಿಕೊಂಡ ರೋಹಿತ್ ಶರ್ಮಾ ಆರಂಭದಲ್ಲೇ ಹೊಡಿಬಡಿ ಆಟಕ್ಕೆ ಮುಂದಾದರು. ಇದರ ಪರಿಣಾಮವಾಗಿ ರೋಹಿತ್ ಪವರ್‌ಪ್ಲೇನಲ್ಲಿಯೇ ತಮ್ಮ ಅರ್ಧಶತಕವನ್ನು ಪೂರೈಸಿದರು. ಕೇವಲ 23 ಎಸೆತಗಳಲ್ಲಿ ಐದು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳೊಂದಿಗೆ ಅರ್ಧಶತಕ ಸಿಡಿಸಿದರು. ಇದು ರೋಹಿತ್ ಶರ್ಮಾ ಐಪಿಎಲ್ ವೃತ್ತಿಜೀವನದಲ್ಲಿ ಅತಿ ವೇಗದ ಅರ್ಧಶತಕವಾಗಿದೆ.
ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಬಾರಿ ಮೊದಲ ಮ್ಯಾಚ್ ಗೆದ್ದಿದ್ದು 2012 ರಲ್ಲಿ. ಅದು ಸಹ ಹರ್ಭಜನ್ ಸಿಂಗ್ ನಾಯಕತ್ವದಲ್ಲಿ. ಇದಾದ ಬಳಿಕ 2013 ರಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದರು. ಇತ್ತ ಹಿಟ್‌ಮ್ಯಾನ್ ನಾಯಕನಾದ ಬಳಿಕ ಮುಂಬೈ ಇಂಡಿಯನ್ಸ್ ತಂಡವು ಒಮ್ಮೆಯೂ ಮೊದಲ ಮ್ಯಾಚ್ನಲ್ಲಿ ಗೆಲುವು ದಾಖಲಿಸಿರಲಿಲ್ಲ. ಐಪಿಎಲ್ 2024 ರಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾದರೂ ಮುಂಬೈ ಇಂಡಿಯನ್ಸ್ ತಂಡ ಎರಡು ಸೀಸನ್ಗಳಲ್ಲಿ ಮೊದಲ ಮ್ಯಾಚ್ನಲ್ಲಿ ಸೋಲು ಕಂಡಿದ್ದರು. ಆದರೆ, ಈ ವರ್ಷ ರೋಹಿತ್ ಶರ್ಮಾ ಶುರು ಮಾಡಿದ್ದ ದುರಾದೃಷ್ಟಕ್ಕೆ ಬ್ರೇಕ್ ಹಾಕುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾಗಿದ್ದಾರೆ. ಕೊನೆಗೂ 13 ವರ್ಷಗಲ ನಂತರ ಮುಂಬೈ ತನ್ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದೆ.

ನೋಡಿರಿ

