ಶತಕದಲ್ಲೇ ಗೆದ್ದ HITಮ್ಯಾನ್ – LORD’S ಅಬ್ಬರ ಬಾಯಿ ಮುಚ್ಚಿಸಿತಾ?
ರೋಹಿತ್ ಆಟಕ್ಕೆ ಕೊಹ್ಲಿ ಕಣ್ಣೀರಾದ್ರಾ?

ಶತಕದಲ್ಲೇ ಗೆದ್ದ HITಮ್ಯಾನ್ – LORD’S ಅಬ್ಬರ ಬಾಯಿ ಮುಚ್ಚಿಸಿತಾ?ರೋಹಿತ್ ಆಟಕ್ಕೆ ಕೊಹ್ಲಿ ಕಣ್ಣೀರಾದ್ರಾ?

ಇಂಗ್ಲೆಂಡ್ ವಿರುದ್ಧದ ಕೊನೇ ಮ್ಯಾಚಲ್ಲಿ ಭಾರತ ಸೋಲುವ ಮೂಲಕ ಸರಣಿಯನ್ನೂ ಕಳ್ಕೊಳ್ತು. ಅಭಿಮಾನಿಗಳಿಗೆ ಸೋಲಿನ ಬೇಸರ ಇದ್ರೂ ರೋಹಿತ್ ಶರ್ಮಾ ವಿಚಾರದಲ್ಲಂತೂ ಸಮಾಧಾನ ಆಗಿದೆ. ಕೆರಿಯರ್ ಎಂಡ್ ಮ್ಯಾಚ್ ಅನ್ಕೊಂಡಿದ್ದ ಪಂದ್ಯದಲ್ಲೇ ಹಿಟ್​ಮ್ಯಾನ್ ಮರುಜನ್ಮ ಪಡೆದಿದ್ದಾರೆ. ಒಂದೇ ಒಂದು ಇನ್ನಿಂಗ್ಸ್​ನಲ್ಲಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ನಿವೃತ್ತಿ ಕೇಳಿದವ್ರಿಗೆ ದಾಖಲೆಗಳ ಮೂಲಕವೇ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ : RCB ಮೆಂಟರ್ ಮೇಲೆ CSK ಕಣ್ಣು – ಚೆನ್ನೈ ಕೋಚ್ ಆಗ್ತಾರಾ DK ಬಾಸ್?

ವಯಸ್ಸಾಯ್ತು ಅನ್ನೋ ನೆಪ.. ರನ್ಸ್ ಬರ್ತಿಲ್ಲ ಅನ್ನೋ ಟೀಕೆ.. ಮ್ಯಾನೇಜ್​ಮೆಂಟ್ ಕಡೆಯಿಂದಲೂ ಒತ್ತಡ.. ಸೋಶಿಯಲ್ ಮೀಡಿಯಾದಲ್ಲೂ ಚರ್ಚೆ. ಕಳೆದ ಮೂರ್ನಾಲ್ಕು ದಿನಗಳಿಂದ ರೋಹಿತ್ ಶರ್ಮಾ ಫುಲ್ ಟ್ರೆಂಡಿಂಗ್​ನಲ್ಲಿದ್ರು. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದ ಪಂದ್ಯವೇ ಕೊನೇ ಅಂತಾರಾಷ್ಟ್ರೀಯ ಪಂದ್ಯ ಅನ್ನೋ ಸುದ್ದಿ ಕಿಚ್ಚು ಹಚ್ಚಿತ್ತು. ಮಾಜಿ ಕ್ರಿಕೆಟರ್ಸ್ ಕೂಡ ಈ ಬಗ್ಗೆ ಇದ್ರೂ ಇರ್ಬೋದು ಅಂತಿದ್ರು. ಆದ್ರೆ ರೋಹಿತ್ ನಾನು ವಿಶ್ವಕಪ್ ಗೆದ್ದೇ ಕ್ರಿಕೆಟ್ ಮೈದಾನ ತೊರೆಯುತ್ತೇನೆ ಅಂತಾ ಪಣ ತೊಟ್ಟು ನಿಂತಿದ್ದಾರೆ. ಒಂದೇ ಮ್ಯಾಚಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಶತಕದಲ್ಲೇ ಬಿಸಿಸಿಐಗೆ ಮೆಸೇಜ್ ಪಾಸ್ ಮಾಡಿದ ರೋಹಿತ್!

ವೈಟ್ ಬಾಲ್ ಕ್ರಿಕೆಟ್​​ನಲ್ಲಿ ಒನ್ ಆಫ್ ದಿ ಮೋಸ್ಟ್ ಸಕ್ಸಸ್​ಫುಲ್ ಬ್ಯಾಟರ್ ಆಗಿರೋ ರೋಹಿತ್ ಶರ್ಮಾ ಲಾರ್ಡ್ಸ್ ಮೈದಾನದಲ್ಲಿ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. 110 ಎಸೆತಗಳಲ್ಲಿ 17 ಫೋರ್, 5 ಸಿಕ್ಸರ್​ಗಳ ಸಮೇತ 138 ರನ್ ಗಳಿಸಿದ್ರು.  ರೋಹಿತ್ ಔಟ್ ಆದಾಗ ಭಾರತದ ಡಗೌಟ್​ನಲ್ಲಿದ್ದವ್ರು ಹಾಗೇ ಮ್ಯಾಚ್ ನೋಡ್ತಿದ್ದ ಪ್ರೇಕ್ಷಕರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟೋ ಮೂಲಕ ರೋಹಿತ್​ಗೆ ಬೆಸ್ಟ್ ಗಿಫ್ಟ್ ನೀಡಿದ್ರು. ಈ ಶತಕದ ಮೂಲಕವೇ ರೋಹಿತ್ ಶರ್ಮಾ ಬಿಸಿಸಿಐಗೆ ತಾನು 2027ರ ಏಕದಿನ ವಿಶ್ವಕಪ್​ವರೆಗೂ ಆಡಬಲ್ಲೆ ಅನ್ನೋ ಮೆಸೇಜ್ ಕೊಟ್ಟಿದ್ದಾರೆ.

ರೋಹಿತ್ ಗಿಂತ ಜಾಸ್ತಿ ಸೆಂಚುರಿ ಸೆಲೆಬ್ರೇಟ್ ಮಾಡಿದ ಕೊಹ್ಲಿ!

ಇನ್ನು ಲಾರ್ಡ್ಸ್​​ನಲ್ಲಿ ರೋಹಿತ್ ಶರ್ಮಾ ಸೆಂಚುರಿ ಹೊಡೆದಾಗ ರೋಹಿತ್​ಗಿಂತ ಜಾಸ್ತಿ ಖುಷಿಯಾಗಿದದ್ದು ಅವ್ರ ಆಪ್ತಮಿತ್ರ ವಿರಾಟ್ ಕೊಹ್ಲಿ.. ವೀ ಆರ್ ಬ್ರದರ್ಸ್ ಫ್ರಂ ಅನದರ್ ಮದರ್ಸ್ ಅನ್ನೋ ಥರನೇ ಇರೋ ರೋಹಿತ್ ಮತ್ತು ಕೊಹ್ಲಿ ಒಟ್ಟೊಟ್ಟಿಗೆ ಕರಿಯರ್ ಆರಂಭಿಸಿ ಪ್ರತೀ ಏಳುಬೀಳುವಿನಲ್ಲೂ ಜೊತೆಯಾಗಿದ್ದವರು. ಈಗ ರೋಹಿತ್ ಬಗ್ಗೆ ಕೇಳಿ ಬಂದಿದ್ದ ನಿವೃತ್ತಿ ಮಾತುಗಳಿಂದ ಕೊಹ್ಲಿ ಕೂಡ ಮಂಕಾಗಿದ್ರು. ಆದ್ರೆ ಲಾರ್ಡ್ಸ್​ನಲ್ಲಿ ರೋಹಿತ್ ಶತಕ ಬಾರಿಸಿದಾಗ ಕೊಹ್ಲಿ ತಮ್ಮ ಬಲಗೈಯನ್ನು ರೋಹಿತ್ ಶರ್ಮಾ ಹೆಗಲ ಮೇಲಿಟ್ಟು ಪೆವಿಲಿಯನ್ ಕಡೆ ನೋಡಿದ್ರು. ನಿವೃತ್ತಿ ಕೇಳಿದವ್ರಿಗೆಲ್ಲಾ ಬ್ಯಾಟ್​ನಲ್ಲೇ ಉತ್ತರ ಕೊಟ್ಟಂತಿತ್ತು. ಈ ಕ್ಷಣದಲ್ಲಿ ಕೊಹ್ಲಿ ಅವ್ರ ಕಣ್ಣಾಲೆಗಳೂ ಕೂಡ ಒದ್ದೆಯಾಗಿದ್ವು. ಹೀಗೆ ಕೋಟಿ ಕೋಟಿ ಫ್ಯಾನ್ಸ್, ಪ್ಲೇಯರ್ಸ್ ಪ್ರೌಡ್ ಫೀಲ್ ಆಗುವಂತೆ ಮಾಡಿದ ರೋಹಿತ್ ಶರ್ಮಾ ಲಾರ್ಡ್ಸ್​ನಲ್ಲಿ ಅದೆಷ್ಟು ರೆಕಾರ್ಡ್ಸ್ ಮಾಡಿದ್ರು ಅನ್ನೋದನ್ನ ಹೇಳ್ತೇನೆ ನೋಡಿ.

ದಾಖಲೆಗಳ ಸರದಾರ ರೋಹಿತ್!

ಲಾರ್ಡ್ಸ್ ಮೈದಾನದಲ್ಲಿ ಏಕದಿನ ಶತಕ ಬಾರಿಸಿದ ಮೊದಲ ಭಾರತೀಯ

ಏಕದಿನ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಹಿರಿಯ ಭಾರತೀಯ ಆಟಗಾರ

ಲಾರ್ಡ್ಸ್ ನಲ್ಲಿ ಪ್ರವಾಸಿ ಬ್ಯಾಟರ್ ಒಬ್ಬರು ಏಕದಿನದಲ್ಲಿ ಅತ್ಯಧಿಕ ರನ್ಸ್ (138)

ವಿದೇಶಿ ನೆಲದಲ್ಲಿ ಅತೀಹೆಚ್ಚು ಏಕದಿನ ಶತಕ(8) ಬಾರಿಸಿದ ವಿಶ್ವದ ಏಕೈಕ ಬ್ಯಾಟರ್

ಇಂಗ್ಲೆಂಡ್ ನಲ್ಲಿ 1,500ಕ್ಕೂ ಹೆಚ್ಚು ಏಕದಿನ ರನ್ ಗಳಿಸಿದ ಮೊದಲ ಪ್ರವಾಸಿ ಬ್ಯಾಟರ್

ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಒಟ್ಟಿಗೆ 400 ಪಂದ್ಯ ಆಡಿದ ಮೊದಲ ಭಾರತೀಯ ಜೋಡಿ

ಹೀಗೆ ರೋಹಿತ್ ಶರ್ಮಾ ಒಂದೇ ಒಂದು ಇನ್ನಿಂಗ್ಸ್​ ಮೂಲಕ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಹಾಗೇ ನಿವೃತ್ತಿ ಚರ್ಚೆ ಬಗ್ಗೆ ಮಾತ್ನಾಡಿರೋ ರೋಹಿತ್ ಶರ್ಮಾ ಈ ಬಗ್ಗೆ ಕ್ಲಾರಿಟಿ ಕೂಡ ಕೊಟ್ಟಿದ್ದಾರೆ. ಬ್ಯಾಟಿಂಗ್ ಮಾಡುವುದು, ದೇಶ ಮತ್ತು ತಂಡವನ್ನು ರೆಪ್ರೆಸೆಂಡ್ ಮಾಡುವುದು ನನ್ನ ಕೆಲದ. ನಾನು ಡೆಬ್ಯೂ ಮಾಡಿದಾಗಿನಿಂದಲೂ ನಾನು ಅದನ್ನೇ ಮಾಡಿದ್ದೇನೆ. ನಾನು ಕ್ರಿಕೆಟ್​ಗೆ ಬಂದಾಗಿನಿಂದಲೂ ಇಂತಹ ಮಾತುಗಳು ಕೇಳಿಬರುತ್ತಲೇ ಇವೆ. ನಾನು ಇಲ್ಲಿರುವವರೆಗೂ ಅವು ಇದ್ದೇ ಇರುತ್ತವೆ. ಹಾಗಾಗಿ, ಅದರಿಂದ ನನಗೆ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲ. ಮೈದಾನದಲ್ಲಿ ನಾನು ಏನು ಮಾಡುತ್ತೇನೆ ಎಂಬುದಷ್ಟೇ ಮುಖ್ಯ. ತಂಡದ ಯಶಸ್ಸಿಗೆ ಕೊಡುಗೆ ನೀಡಲು ಪ್ರಯತ್ನಿಸುವುದೇ ಮುಖ್ಯ. ನಿವೃತ್ತಿ ಗದ್ದಲವಿದ್ದರೂ ಇರಲಿ ಬಿಡಿ; ಗದ್ದಲವಿಲ್ಲದಿದ್ದರೆ ಮಜವೇ ಇರುವುದಿಲ್ಲ ಎನ್ನೋ ಮೂಲಕ ತಾವು ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ. ಒಟ್ನಲ್ಲಿ ರೋಹಿತ್ ಶರ್ಮಾ ಲೆಜೆಂಡರಿ ಪ್ಲೇಯರ್. ಭಾರತೀಯ ಕ್ರಿಕೆಟ್ ಲೋಕದ ದಿಗ್ಗಜ.  2027ರ ಏಕದಿನ ವಿಶ್ವಕಪ್ ಆಡೋಕೆ ಪಣ ತೊಟ್ಟಿರೋ ಹಿಟ್​ಮ್ಯಾನ್ ಈಗ ತಮ್ಮ ದಾರಿಗೆ ಅಡ್ಡವಾಗಿದ್ದವ್ರಿಗೆಲ್ಲಾ ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ.

Shantha Kumari