ಟಿ20 ವಿಶ್ವಕಪ್ ಗೆ ಕೌಂಟ್‌ ಡೌನ್‌ – ಸೌಲಭ್ಯಗಳ ಬಗ್ಗೆ ಅಸಮಾಧಾನ ಹೊರ ಹಾಕಿದ ಟೀಂ ಇಂಡಿಯಾ ಕ್ಯಾಪ್ಟನ್‌

ಟಿ20 ವಿಶ್ವಕಪ್ ಗೆ ಕೌಂಟ್‌ ಡೌನ್‌ – ಸೌಲಭ್ಯಗಳ ಬಗ್ಗೆ ಅಸಮಾಧಾನ ಹೊರ ಹಾಕಿದ ಟೀಂ ಇಂಡಿಯಾ ಕ್ಯಾಪ್ಟನ್‌

ಟಿ20 ವಿಶ್ವಕಪ್​ ಬ್ಯಾಟಲ್​ಗೆ ಕೌಂಟ್‌ಡೌನ್ ಶುರುವಾಗಿದೆ. ಜೂನ್ 2ರಿಂದಲೇ ಮೆಗಾ ಟೂರ್ನಿ ಆರಂಭಗೊಳ್ಳಲಿದೆ. ಈ ಮಧ್ಯೆ ಟೀಮ್ ಇಂಡಿಯಾ, ಐಸಿಸಿ ವಿರುದ್ಧ ಸಿಡಿದೆದ್ದಿದೆ. ನ್ಯೂಯಾರ್ಕ್​ನಲ್ಲಿನ ಆವರೇಜ್ ಪ್ರಾಕ್ಟೀಸ್​​​​ ಸೌಲಭ್ಯಕ್ಕೆ ಟೀಮ್ ಇಂಡಿಯಾ ಅಸಮಾಧಾನ ವ್ಯಕ್ತಪಡಿಸಿದೆ.

ಭಾರತ ತಂಡ ಕ್ಯಾಂಟಿಯಾಗ್ ಪಾರ್ಕ್​ನಲ್ಲಿ ವಿಶ್ವಕಪ್​​ಗೆ ಸಿದ್ಧತೆ ಆರಂಭಿಸಿದೆ. ಇಲ್ಲಿ ಅಭ್ಯಾಸಕ್ಕೆ ಸಮರ್ಪಕ ಸೌಲಭ್ಯಗಳು ಇಲ್ಲವೆಂದು ಟೀಮ್ ಇಂಡಿಯಾ ದೂರಿದೆ. ಇಲ್ಲಿ ಎಲ್ಲವೂ ತಾತ್ಕಾಲಿಕವಾಗಿದೆ. ಪಿಚ್​ಗಳಿಂದ ಹಿಡಿದು ಇತರೆ ಸೌಲಭ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕ್ಯಾಪ್ಟನ್ ರೋಹಿತ್​ ಶರ್ಮಾ ಹಾಗೂ ಹೆಡ್​ಕೋಚ್​​​​​​ ರಾಹುಲ್​ ದ್ರಾವಿಡ್​ ಅವರು ಐಸಿಸಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಕಿಂಗ್ ಕೊಹ್ಲಿಯೇ ಕ್ಯಾಪ್ಟನ್? – RCBಯಿಂದ ಯಾರೆಲ್ಲಾ ಔಟ್?

ಟೀಮ್ ಇಂಡಿಯಾ ಟಿ20 ವಿಶ್ವಕಪ್​​ನಲ್ಲಿ 17 ವರ್ಷಗಳ ನಂತರ ಟ್ರೋಫಿ ಕನಸು ಕಾಣುತ್ತಿದೆ. ಇವತ್ತು ಮೊದಲ ಅಭ್ಯಾಸ ಪಂದ್ಯವನ್ನಾಡಲಿದೆ. ಸ್ಟ್ರೆಂಥ್​​​ ಅಂಡ್ ವೀಕ್ನೆಸ್ ಬಗ್ಗೆ ತಿಳಿದುಕೊಳ್ಳಲು ಈ ಪ್ರಾಕ್ಟೀಸ್ ಮ್ಯಾಚ್​ ​ ಉತ್ತಮ ವೇದಿಕೆಯಾಗಿದೆ. ಒಂದು ರೀತಿಯಲ್ಲಿ ಇಂದಿನಿಂದಲೇ ಟೀಮ್ ಇಂಡಿಯಾ ವಿಶ್ವಕಪ್​ ಜರ್ನಿ ಶುರುವಾಗಲಿದೆ. ಅಭ್ಯಾಸ ಪಂದ್ಯದಲ್ಲಿ ಭಾರತ-ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ. ನಸ್ಸೌ ಅಂತಾರಾಷ್ಟ್ರೀಯ ಕೌಂಟಿ ಸ್ಟೇಡಿಯಂನಲ್ಲಿ ಪಂದ್ಯವನ್ನಾಡಲು ಸಾಕಷ್ಟು ಎಕ್ಸೈಟ್ ಆಗಿದ್ದೇವೆ  ಎಂದು ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿದ್ದಾರೆ.

Shwetha M