ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಟೌಟ್..! – ವೈರಲ್ ಫೋಟೋ ಹಿಂದಿರುವ ಅಸಲಿಯತ್ತೇನು?
ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಮ್ಯಾಚ್ನಲ್ಲಿ ಭಾರತೀಯರಿಗೆ ಅಭಿಮಾನಿಗಳಿಗೆ ಮೊದಲ ಬಾರಿಗೆ ಆಘಾತ ಆಗಿದ್ದು ಕ್ಯಾಪ್ಟನ್ ರೋಹಿತ್ ಶರ್ಮಾ ಔಟಾದಾಗ. ಗ್ಲೇನ್ ಮ್ಯಾಕ್ಸ್ವೆಲ್ ಬಾಲ್ಗೆ ಸಿಕ್ಸರ್ ಹೊಡೆಯೋಕೆ ಹೋಗಿ, ಬ್ಯಾಟ್ನ ಎಡ್ಜಿಗೆ ತಾಗಿ ಬಾಲ್ ಹೈಟ್ ಹೋದಾಗ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಓಡಿಕೊಂಡು ಹೋಗಿ ಡೈವ್ ಮಾಡಿ ಕ್ಯಾಚ್ ಹಿಡೀತಾರೆ. ರೋಹಿತ್ ಶರ್ಮಾ ಔಟಾಗ್ತಾರೆ. ಶಾಕ್ಗೊಳಗಾದ ಇಡೀ ಭಾರತವೇ ಸೈಲೆಂಟ್ ಆಗಿಬಿಡುತ್ತೆ. ಟೀಂ ಇಂಡಿಯಾಗೆ ಸುಧಾರಿಸಿಕೊಳ್ಳೋಕೆ ಆಗದಂಥಾ ಹೊಡೆತ ಅದಾಗಿತ್ತು. ಟ್ರಾವಿಸ್ ಅಂದು ಡೈವ್ ಮಾಡಿ ಕೇವಲ ಬಾಲ್ ಹಿಡಿದಿರಲಿಲ್ಲ. ವರ್ಲ್ಡ್ಕಪ್ನ್ನೇ ಹಿಡಿದಿದ್ರು. ಅದು ಕ್ಯಾಚ್ ಆಫ್ ದಿ ಮ್ಯಾಚ್ ಆಗಿಬಿಟ್ಟಿತ್ತು. ಆದ್ರೆ ಈ ಕ್ಯಾಚ್ ಬಗ್ಗೆ ಈಗ ಸಾಕಷ್ಟು ಕ್ವಶ್ಚನ್ಸ್ ರೈಸ್ ಆಗಿದೆ. ಹೆಡ್ ಹಿಡಿದ ಬಾಲ್ ನೆಲಕ್ಕೆ ಟಚ್ ಆಗಿರುವಂತೆ ಕಾಣ್ತಿದೆ. ಆ್ಯಕ್ಚುವಲಿ ಅಂದು ರೋಹಿತ್ ಶರ್ಮಾ ನಾಟ್ಔಟ್ ಅನ್ನೋ ಬಗ್ಗೆ ಭಾರಿ ಚರ್ಚೆಯಾಗ್ತಿದೆ. ಈಗ ಟ್ರಾವಿಸ್ ಹೆಡ್ ಹಿಡಿದ ರೋಹಿತ್ ಶರ್ಮಾರ ಕ್ಯಾಚ್ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಇದನ್ನೂ ಓದಿ: ರಿಂಕು ಸಿಂಗ್ ಮ್ಯಾಚ್ ಫಿನಿಷರ್ ಆಗೋಕೆ ಕಾರಣ ಯಾರು? – ರಿಂಕು ಸಕ್ಸಸ್ ಹಿಂದಿರೋ ಆ ವ್ಯಕ್ತಿ ಯಾರು?
ಭಾರತದ ಕ್ರಿಕೆಟ್ ಅಭಿಮಾನಿಗಳೆಲ್ಲಾ ಇನ್ನೂ ಕೂಡ ವರ್ಲ್ಡ್ಕಪ್ ಸೋಲಿನ ಹ್ಯಾಂಗ್ಓವರ್ನಲ್ಲೇ ಇದ್ದಾರೆ. ಟಿ-20 ಸೀರಿಸ್ ಶುರುವಾದ್ರೂ, ಫಸ್ಟ್ ಮ್ಯಾಚ್ನ್ನ ಗೆದ್ದರೂ ಕೂಡ ಸೋಲಿನ ಕಹಿಯಿಂದ ಇನ್ನೂ ಹೊರಬಂದಿಲ್ಲ. ಆ ಕರಾಳ ವರ್ಲ್ಡ್ಕಪ್ ಫೈನಲ್ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಈ ಪೈಕಿ ಒಂದು ರೋಹಿತ್ ಶರ್ಮಾ ಔಟಾದ ರೀತಿ ಬಗ್ಗೆ. ಟ್ರಾವಿಸ್ ಹೆಡ್ ಹಿಡಿದ ಕ್ಯಾಚ್ ಬಗ್ಗೆ. ಫೈನಲ್ ಮುಗಿದು ಒಂದು ದಿನದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಈ ಕ್ಯಾಚ್ ಕುರಿತ ಕೆಲ ಫೋಟೋಸ್ ಭಾರಿ ವೈರಲ್ ಆಗ್ತಿದೆ. ಟ್ರಾವಿಸ್ ಹೆಡ್ ಸರಿಯಾಗಿ ಕ್ಯಾಚ್ ಹಿಡಿದೇ ಇಲ್ಲ. ರೋಹಿತ್ ಶರ್ಮಾ ನಾಟೌಟ್. ವರ್ಲ್ಡ್ಕಪ್ ಫೈನಲ್ ರಿ ಮ್ಯಾಚ್ ಆಗುತ್ತಾ ಹೀಗೆಲ್ಲಾ ಸುದ್ದಿಗಳು ಹರಿದಾಡ್ತಿವೆ. ಈ ಕ್ಯಾಚ್ ಮತ್ತು ಫೋಟೋದ ಅಸಲಿಯತ್ತಿನ ಬಗ್ಗೆ ಒಂದಷ್ಟು ಅಪ್ಡೇಟ್ಸಿಕ್ಕಿದೆ.
ವೈರಲ್ ಆಗಿರುವ ಈ ಫೋಟೋದಲ್ಲಿ ಟ್ರಾವಿಸ್ ಹೆಡ್ ಹಿಡಿದ ಕ್ಯಾಚ್ನಲ್ಲಿ ಬಾಲ್ ನೆಲಕ್ಕೆ ಟಚ್ ಆದಂತೆ ಕಾಣ್ತಿದೆ. ರೋಹಿತ್ ಶರ್ಮಾ ಕ್ಯಾಚ್ನ್ನ ಟ್ರಾವಿಸ್ ಸರಿಯಾಗಿ ಹಿಡಿದಿಲ್ಲ. ಡೈವ್ ಮಾಡಿ ಹಿಡಿಯುವಾಗ ಬಾಲ್ ಮೊದಲೇ ಗ್ರೌಂಡ್ಗೆ ಟಚ್ ಆಗಿದೆ. ಗ್ರೌಂಡ್ನಲ್ಲಿ ಬಂಪ್ ಆದ ಬಾಲ್ನ್ನ ಟ್ರಾವಿಸ್ ಹೆಡ್ ಹಿಡಿದು ಔಟ್ ಅಂತಾ ಸಂಭ್ರಮಿಸಿದ್ದಾರೆ. ಆಸ್ಟ್ರೇಲಿಯನ್ನರು ಇಲ್ಲಿ ಮೋಸದಾಟವಾಡಿದ್ದಾರೆ. ಆ್ಯಕ್ಚುವಲಿ ಫೈನಲ್ ಮ್ಯಾಚ್ನಲ್ಲಿ ರೋಹಿತ್ ಶರ್ಮಾ ನಾಟೌಟ್ ಅಂತಾ ಪೋಸ್ಟ್ಗಳು ಹರಿದಾಡ್ತಿವೆ. ಇದಕ್ಕೆ ಸಾಕಷ್ಟು ಮಂದಿ ಕಾಮೆಂಟ್ಸ್ ಕೂಡ ಮಾಡ್ತಿದ್ದಾರೆ. ಈ ಕ್ಯಾಚ್ನ್ನ ಮತ್ತೊಮ್ಮೆ ಪರಿಶೀಲಿಸಬೇಕಿತ್ತು. ಮತ್ತೊಮ್ಮೆ ವರ್ಲ್ಡ್ಕಪ್ ಫೈನಲ್ ಮ್ಯಾಚ್ ನಡೆಸಬೇಕು ಅಂತೆಲ್ಲಾ ಹಲವು ಭಾರತೀಯ ಕ್ರಿಕೆಟ್ ಫ್ಯಾನ್ಸ್ ಬೇಡಿಕೆಯಿಡುತ್ತಿದ್ದಾರೆ.
ಆದ್ರೆ ಈಗ ಇದಕ್ಕೊಂದು ಕ್ಲ್ಯಾರಿಟಿ ಸಿಕ್ಕಿದೆ. ರೋಹಿತ್ ಶರ್ಮಾ ಔಟಾದ ಕ್ಯಾಚ್ನ ವಿಡಿಯೋ ಐಸಿಸಿಯ ಅಫೀಶಿಯಲ್ ವೆಬ್ಸೈಟ್ನಲ್ಲಿ ನೀವು ಕೂಡ ನೋಡಬಹುದು. ಡಿಸ್ನಿ ಹಾಟ್ಸ್ಟಾರ್ನಲ್ಲಿ ಕೂಡ ಮ್ಯಾಚ್ ರಿಪ್ಲೇನಲ್ಲಿ ಈ ಕ್ಯಾಚ್ನ್ನ ಕ್ಲೀನ್ ಆಗಿ ಅಬ್ಸರ್ವ್ಮಾಡಬಹುದು. ಅದ್ರಲ್ಲಿ ರೋಹಿತ್ ಶಾಟ್ ಮತ್ತು ಟ್ರಾವಿಸ್ ಹೆಡ್ ಡೈವ್ ಮಾಡಿ ಹಿಡಿದ ಕ್ಯಾಚ್ನ್ನ ಸ್ಲೋಮೋಷನ್ನಲ್ಲಿ ತೋರಿಸಿದ್ದಾರೆ. ಇದ್ರಲ್ಲಿ ಬಾಲ್ನ್ನ ಟ್ರಾವಿಸ್ ಹೆಡ್ ಕ್ಲೀಯರ್ ಆಗಿ ಹಿಡಿದಿರೋದು ಸ್ಪಷ್ಟವಾಗಿ ಕಾಣುತ್ತೆ. ಎಲ್ಲೂ ಕೂಡ ಬಾಲ್ ಗ್ರೌಂಡ್ಗೆ ಟಚ್ ಆಗಿಯೇ ಇಲ್ಲ. ಬಾಲ್ ನೆಲಕ್ಕೆ ಬೌನ್ಸ್ ಆಗೋಕೆ ಅಥವಾ ಟಚ್ ಆಗೋಕೆ ಟ್ರಾವಿಸ್ ಹೆಡ್ ಅವಕಾಶವೇ ಕೊಟ್ಟಿಲ್ಲ. ಇನ್ನು ಅಫೀಶಿಯಲ್ ಇಮೇಜ್ ವೆಬ್ಸೈಟ್ ಆಗಿರುವಂಥಾ ಗೆಟ್ಟಿ ಇಮೇಜಸ್ನಲ್ಲೂ ಟ್ರಾವಿಸ್ ಹೆಡ್ ಹಿಡಿದ ಕ್ಯಾಚ್ನ ಫೋಟೋ ಇದೆ. ಅದ್ರಲ್ಲೂ ಇದೊಂದು ಪರ್ಫೆಕ್ಟ್ ಕ್ಯಾಚ್ ಅನ್ನೋದು ಕ್ರಿಸ್ಟಾ ಕ್ಲೀಯರ್ ಆಗಿದೆ. ಅಸೋಸಿಯೇಟೆಡ್ ಪ್ರೆಸ್ ಪಬ್ಲಿಶ್ ಮಾಡಿರುವಂಥಾ ಫೋಟೋದಲ್ಲೂ ಅಷ್ಟೇ, ಇಂದೊಂದು ಪಕ್ಕಾ ಕ್ಯಾಚ್ ಅನ್ನೋದು ಸ್ಪಷ್ಟವಾಗುತ್ತೆ. ಮ್ಯಾಚ್ ನಡೆದ ದಿನವೂ ಅಷ್ಟೇ, ಸ್ಟಾರ್ಸ್ ಸ್ಪೋರ್ಟ್ಸ್ನಲ್ಲಿ ರೋಹಿತ್ ಕ್ಯಾಚ್ನ್ನ ಪದೇ ಪದೆ ಹಲವು ಬಾರಿ ತೋರಿಸಿದ್ರು. ಟ್ರಾವಿಸ್ ಹೆಡ್ ಕ್ಯಾಚಿಂಗ್ನಲ್ಲಿ There is no fault at all..
ಹಾಗಿದ್ರೆ ಈ ವೈರಲ್ ಫೋಟೋದ ಅಸಲಿಯತ್ತೇನು? ಟ್ರಾವಿಸ್ ಹೆಡ್ ಕ್ಯಾಚ್ ಹಿಡಿದಾಗ ಬಾಲ್ ಗ್ರೌಂಡ್ ಟಚ್ ಆದಂತೆ ಕಾಣುತ್ತಿರುವ ಈ ಫೋಟೋವನ್ನ ಕಂಪ್ಲೀಟ್ ಆಗಿ ಎಡಿಟ್ ಮಾಡಲಾಗಿದೆ. ಕೇವಲ ಫೋಟೋ ಮಾತ್ರವಲ್ಲ, ಟ್ರಾವಿಸ್ ಹೆಡ್ ಹಿಡಿದ ರೋಹಿತ್ ಶರ್ಮಾರ ಕ್ಯಾಚ್ನ ವಿಡಿಯೋವನ್ನ ಕೂಡ ಎಡಿಟ್ ಮಾಡಲಾಗಿದೆ. ಕ್ಯಾಚ್ ಹಿಡಿಯೋವಾಗ ಟ್ರಾವಿಸ್ ಹೆಡ್ ಪರದಾಡಿದಂತೆ ವಿಡಿಯೋದಲ್ಲಿ ತೋರಿಸಲಾಗಿದೆ. ಬಳಿಕ ಇದನ್ನ ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಂ ಸೇರಿದಂತೆ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೆ ಅಪ್ಲೋಡ್ ಮಾಡಲಾಗಿದೆ. ಸೋ..ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗಿರುವ ಈ ವೈರಲ್ ಫೋಟೋ, ವಿಡಿಯೋಗಳು ಕಂಪ್ಲೀಟ್ ಫೇಕ್. ಇಲ್ಲಿ ಹರಿದಾಡ್ತಿರೋದು ಮಿಸ್ ಇನ್ಫಾರ್ಮೇಷನ್ ಅಷ್ಟೇ. ಇದನ್ನ ನೋಡಿದ ರೋಹಿತ್ ಶರ್ಮಾ ಫ್ಯಾನ್ಸ್ಗಳಂತೂ ಈ ಬಗ್ಗೆ ಇನ್ವೆಸ್ಟಿಗೇಷನ್ ಮಾಡುವಂತೆ ಆಗ್ರಹಿಸಬೇಕು. ಐಸಿಸಿ ಈ ಬಗ್ಗೆ ತನಿಖೆ ನಡೆಸಬೇಕು. ಮತ್ತೊಮ್ಮೆ ಫೈನಲ್ ಮ್ಯಾಚ್ನ್ನ ಕಂಡಕ್ಟ್ ಮಾಡಬೇಕು ಅಂತೆಲ್ಲಾ ಆಗ್ರಹಿಸುತ್ತಿದ್ದಾರೆ.
ಇವೆಲ್ಲದ್ರ ಮಧ್ಯೆ, ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಪುತ್ರಿಯ ವಿಡಿಯೋ ಕೂಡ ಈಗ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ಆಕೆ ತನ್ನ ತಂದೆಯ ಬಗ್ಗೆ ಮಾತನಾಡ್ತಾಳೆ. ತಂದೆ ಎಲ್ಲಿ ಅಂತಾ ಮೀಡಿಯಾದವರು ಪ್ರಶ್ನಿಸಿದಾಗ, ಅವರು ರೂಮ್ನಲ್ಲಿದ್ದಾರೆ. ಅವರು ಆಲ್ಮೋಸ್ಟ್ ಪಾಸಿಟಿವ್ ಆಗಿದ್ದಾರೆ. ಇನ್ನೊಂದು ತಿಂಗಳಲ್ಲಿ ಮತ್ತೆ ಎಂದಿನಂತೆ ಸ್ಮೈಲ್ ಮಾಡ್ತಾರೆ ಅಂತಾ ರೋಹಿತ್ ಪುತ್ರಿ ಹೇಳ್ತಾಳೆ. ಆದ್ರೆ ಇದನ್ನ ಬಹುತೇಕ ಮಂದಿ ವರ್ಲ್ಡ್ಕಪ್ ಫೈನಲ್ ಬಳಿಕದ ವಿಡಿಯೋ ಅಂತಾನೆ ಅಂದುಕೊಂಡಿದ್ದಾರೆ. ಮ್ಯಾಚ್ ಸೋತ ಬಳಿಕ ರೋಹಿತ್ ಶರ್ಮಾ ಕಂಡೀಷನ್ ಬಗ್ಗೆ ಪುತ್ರಿ ಮಾತನಾಡಿದ್ದಾಳೆ ಅಂತಾ ರಿಲೇಟ್ ಮಾಡ್ತಿದ್ರು. ಆದ್ರೆ ಇದು ಕೂಡ ಈಗಿನ ವಿಡಿಯೋ ಅಲ್ಲ. 2022ರಲ್ಲಿ ರೋಹಿತ್ ಶರ್ಮಾ ಕೊರೊನಾ ವೈರಸ್ಗೆ ತುತ್ತಾಗಿ ತಮ್ಮ ರೂಮ್ನಲ್ಲೇ ಐಸೋಲೇಟ್ ಆಗಿದ್ದಾಗ ರೋಹಿತ್ ಶರ್ಮಾ ಪುತ್ರಿ ಈ ಮಾತನ್ನ ಹೇಳಿದ್ಲು.
ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋ, ಫೋಟೋಗಳನ್ನ ಸೀರಿಯಸ್ ಆಗಿ ತೆಗೆದುಕೊಳ್ಳೋಕೆ ಸಾಧ್ಯವೇ ಇಲ್ಲ.