ಪಿಂಕ್ ಟೆಸ್ಟಲ್ಲಿ ಭಾರತದ ಪ್ಲಾಫ್ ಶೋ! – ರೋಹಿತ್ ಶರ್ಮಾ ತಲೆದಂಡ ಫಿಕ್ಸ್
ಅಗ್ರೆಸ್ಸಿವ್ ಅಪ್ರೋಚ್, ಸ್ಲೆಡ್ಜಿಂಗ್, ಅಹಂ..!
ಪಿಂಕ್ ಬಾಲ್ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ ಸೋಲಿಗೆ ಕಾರಣ ಹುಡುಕುತ್ತಾ ಸಾಗಿದರೆ, ಎಂಡಿಂಗ್ ಸಿಗೋದೇ ಇಲ್ವೇನೋ.. ಮೈದಾನದ ಮೂಲೆ ಮೂಲೆ ಹುಡುಕಿದರೂ ನಾನಾ ಕಾರಣಗಳ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಅತಿಯಾದ ಆತ್ಮವಿಶ್ವಾಸ ಮುಳುವಾದ್ರೆ, ಅಹಂಕಾರ ನೆತ್ತಿಗೇರಿಸಿಕೊಂಡಿದ್ದು ತಿರುಗುಬಾಣವಾಗಿದೆ. ಇದಕ್ಕೆಲ್ಲಾ ದಂಡ ಕಟ್ಟಲೇಬೇಕಾದ ಸಂಕಟಕ್ಕೆ ಸಿಲುಕಿದ್ದಾರೆ ಕ್ಯಾಪ್ಟನ್ ರೋಹಿತ್ ಶರ್ಮಾ. ಕಾಂಗರೂಗಳಿಗೆ ಎದುರಾಳಿಗಳನ್ನ ಕೆಣಕೋದು ಸ್ಟ್ರಾಟಜಿಯೂ ಹೌದು. ಆದ್ರೆ, ಈ ಬಾರಿ ಕಾಂಗರೂಗಳನ್ನ ಕೆಣಕಲು ಹೋಗಿ ಟೀಮ್ ಇಂಡಿಯಾ ಆಟಗಾರರೇ ಜಾರಿ ಬಿದ್ದಿದ್ದಾರೆ. ಸ್ಲೆಡ್ಜಿಂಗ್ ಅಸ್ತ್ರವೂ ಯೂಸ್ ಆಗಿಲ್ಲ. ಟೀಮ್ ಇಂಡಿಯಾಕ್ಕೆ ಸ್ಲೆಡ್ಜಿಂಗ್ ಮಾಡೋ ನೆಸೆಸಿಟಿಯಿತ್ತಾ? ಟೀಮ್ ಇಂಡಿಯಾಕ್ಕೆ ಅಗ್ರೆಸಿವ್ ಅಪ್ರೋಚ್ ಮುಳುವಾಯ್ತಾ..? ರೋಹಿತ್ ಶರ್ಮಾ ತಲೆದಂಡ ಫಿಕ್ಸಾ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಫಿನಾಲೆಗೂ ಮೊದ್ಲೇ ವಿನ್ನರ್ ಫಿಕ್ಸ್..! – ರುದ್ರ ಮಾಸ್ಟರ್ಗಾಗಿ ಕಂಠಿಗೆ ಮೋಸ?
ಬ್ಯಾಟಿಂಗ್ ಸೌಂಡೇ ಮಾಡಿಲ್ಲ, ಬೌಲಿಂಗ್ ಗೆಲ್ಲಿಸಲೇ ಇಲ್ಲ.. ಫೀಲ್ಡಿಂಗ್ ಇಂಪ್ರೂಮೆಂಟ್ ಕಾಣಲೇ ಇಲ್ಲ. ಈ ಮೂರು ಟೀಮ್ ಇಂಡಿಯಾ ಆಟಗಾರರಿಗೆ ಇಂಪಾರ್ಟೆಂಟ್ ಅಂತಾ ಅನ್ನಿಸಲೇ ಇಲ್ವಾ. ಅಸಲಿಗೆ ಟೀಮ್ ಇಂಡಿಯಾ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನ ಬರೀ ಈ ಕಾರಣಕ್ಕೆ ಮಾತ್ರ ಸೋಲ್ತಾ.. ಅದೂ ಕೂಡಾ ಅಲ್ವೇ ಅಲ್ಲ.. ಕಾರಣಗಳು ಇನ್ನೂ ಬೇಕಾದಷ್ಟಿವೆ.
ಅತಿಯಾದ ಆತ್ಮವಿಶ್ವಾಸ, ಅಹಂಕಾರ, ಮೊಂಡು ಧೈರ್ಯ
ಪರ್ಥ್ ಟೆಸ್ಟ್ ಗೆದ್ದ ಮೇಲೆ ಕಾಂಗರೂಗಳನ್ನ ಬೇಟೆ ಆಡೋದು ಸುಲಭ ಅನ್ನೋ ಲೆಕ್ಕಾಚಾರವೇ ಮುಳುವಾಗಿತ್ತು. ಅತಿಯಾದ ಆತ್ಮವಿಶ್ವಾಸ, ಗೆದ್ದೇ ಗೆಲ್ತೀವಿ ಅನ್ನೋ ಅಹಂಕಾರವೇ ಸೋಲಿಗೆ ಪ್ರಮುಖ ಕಾರಣ ಎನ್ನಲಾಗ್ತಿದೆ. ಜೊತೆಗೆ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಮೊಂಡು ಧೈರ್ಯ ತೋರಿಸಿದ್ದಕ್ಕೂ ಸೋಲಿನ ಬೆಲೆ ತೆರಬೇಕಾಯ್ತು.
ರೋಹಿತ್ ಶರ್ಮಾ ಪಡೆ ಗರ್ವಭಂಗಕ್ಕೆ ಕಾರಣ ಆ 21 ಓವರ್
ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ, ಆ 21 ಓವರ್ ಕೂಡಾ ಕಾರಣ. ಮೊದಲ 21 ಓವರ್ಗಳಲ್ಲೇ, ಟೀಮ್ ಇಂಡಿಯಾದ ಹಣೆಬರಹವೇ ಬದಲಾಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ 20.1 ಓವರ್ಗಳಲ್ಲಿ ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್ ಮತ್ತು ವಿರಾಟ್ ಕೊಹ್ಲಿಯ ಪ್ರಮುಖ ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು. ಅಲ್ಲಿಗೆ ಆಸಿಸ್ ಎದುರಾಳಿಗಳ ವಿರುದ್ಧ ಮೇಲುಗೈ ಸಾಧಿಸಿತ್ತು.
ನಿತೀಶ್ ಕುಮಾರ್ ರೆಡ್ಡಿಗೆ ಸಿಗದ ಬೆಂಬಲ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಅತಿ ಹೆಚ್ಚು ರನ್ ಗಳಿಸಿದರು. ತಮ್ಮ ವೃತ್ತಿಜೀವನದ ಎರಡನೇ ಟೆಸ್ಟ್ ಆಡಿದ ಅವರು ಎರಡೂ ಇನ್ನಿಂಗ್ಸ್ಗಳಲ್ಲಿ ತಲಾ 42 ರನ್ ಗಳಿಸಿದರು. ಆಸ್ಟ್ರೇಲಿಯಾದ ಬೌಲರ್ಗಳನ್ನು ಏಕಾಂಗಿಯಾಗಿ ಎದುರಿಸುತ್ತಿದ್ದ ಆಟಗಾರನಿಗೆ ಇನ್ನೊಂದು ಬದಿಯಲ್ಲಿ ಯಾರಿಂದಲೂ ಯಾವುದೇ ಬೆಂಬಲ ಸಿಗಲೇ ಇಲ್ಲ. ಇದು ಕೂಡಾ ಸೋಲಿಗೆ ಕಾರಣವಾಗಿದ್ದು ಸುಳ್ಳಲ್ಲ.
ಟೀಮ್ ಇಂಡಿಯಾಕ್ಕೆ ಅಗ್ರೆಸಿವ್ ಅಪ್ರೋಚ್ ಬೇಕಿತ್ತಾ..?
ಇಂಗ್ಲೆಂಡ್ ತಂಡದಂತೆ ಟೆಸ್ಟ್ ಕ್ರಿಕೆಟ್ನಲ್ಲಿ ಅಗ್ರೆಸಿವ್ ಅಪ್ರೋಚ್ ತೋರಿಸುತ್ತಿದ್ದ ಟೀಮ್ ಇಂಡಿಯಾಕ್ಕೆ, ಅಡ್ವಾಂಟೇಜ್ಗಿಂತ ಡಿಸ್ಅಡ್ವಾಂಟೇಜ್ ಜಾಸ್ತಿ. ಯಾಕಂದ್ರೆ ಇಂಗ್ಲೆಂಡ್ ಆಟಗಾರರು, ಸಮಯ, ಸಂದರ್ಭ, ಪರಿಸ್ಥಿತಿ, ಸ್ಥಳ, ಕಂಡೀಷನ್ಸ್ ನೋಡಿ ಅಗ್ರೆಸಿವ್ ಕ್ರಿಕೆಟ್ ಆಡುತ್ತಾರೆ. ಆದ್ರೆ ಟೀಮ್ ಇಂಡಿಯಾ ಎಲ್ಲಾ ಕಡೆ ಅಗ್ರೆಸಿವ್ ಅಪ್ರೋಚ್ ತೋರಿಸೋಕೆ ಹೋಗಿ ಜಾರಿ ಬೀಳ್ತಿದೆ. ಅಗ್ರೆಸಿವ್ ಕ್ರಿಕೆಟ್ ಆಡೋದು ತಪ್ಪು ಅಂತಾ ನಾವ್ ಹೇಳ್ತಿಲ್ಲ. ಆದ್ರೆ ಸ್ವಲ್ಪ ಯೋಚಿಸಿ ಆಡಿದ್ರೂ ಕೂಡಾ ಬೇಗ ಬೇಗ ಪ್ರಮುಖ ವಿಕೆಟ್ಗಳು ಉರುಳುತ್ತಿರಲಿಲ್ಲ.
ಸ್ಲೆಡ್ಜಿಂಗ್ ಮಾಡಿ ಕಾಂಗರೂಗಳನ್ನ ಕೆಣಕಿದ ಟೀಮ್ ಇಂಡಿಯಾ
ಭಾರತೀಯ ಆಟಗಾರರು ಅತಿಥೇಯ ಆಟಗಾರರನ್ನ ಸ್ಲೆಡ್ಜಿಂಗ್ ಮಾಡಿ ಪ್ರಚೋದಿಸಲು ಅದೆಷ್ಟೋ ಬಾರಿ ಟ್ರೈ ಮಾಡಿದ್ರು. ಮೊದಲು ಈ ಸ್ಟ್ಟಾಟಜಿಯನ್ನ ಆಸ್ಟ್ರೇಲಿಯಾ ಆಟಗಾರರು ಬೇರೆ ತಂಡಗಳ ವಿರುದ್ಧ ಮಾಡ್ತಿದ್ರು. ಈಗ ನಮ್ಮವರೇ ಆಸೀಸ್ ಆಟಗಾರರ ಮೇಲೆ ಸ್ಲೆಡ್ಜ್ ಮಾಡಲು ಶುರು ಮಾಡಿದ್ದಾರೆ. ಪರ್ತ್ನಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು ಜೈಸ್ವಾಲ್ ಪ್ರಚೋದಿಸಿದ್ದರು, ನೀವು ತುಂಬಾ ನಿಧಾನವಾಗಿ ಬೌಲಿಂಗ್ ಮಾಡುತ್ತೀರಾ ಎಂದು ಹೀಯಾಳಿಸಿದ್ದರು. ಅದರ ಫಲಿತಾಂಶವು ಈ ಪಂದ್ಯದಲ್ಲಿ ಕಂಡುಬಂದಿತು. ಅವರು ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ2 ವಿಕೆಟ್ ಪಡೆದರು. ಟೀಮ್ ಇಂಡಿಯಾದ ಸ್ಲೆಡ್ಜಿಂಗ್ ಗೆ ಕಾಂಗರೂಗಳೂ ಸರಿಯಾಗಿಯೇ ಪ್ರತೀಕಾರ ತೀರಿಸಿಕೊಂಡ್ರು.
ಕ್ಯಾಪ್ಟನ್ ರೋಹಿತ್ ಶರ್ಮಾ ಕಿಕ್ ಔಟ್ ಫಿಕ್ಸ್
ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಸರಣಿ ಸೋತರೆ, ಟೆಸ್ಟ್ ತಂಡದಿಂದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸುವುದು ಖಚಿತ. ಏಕೆಂದರೆ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವನ್ನು ಮುಂದಿಟ್ಟುಕೊಂಡು ಹಿಟ್ಮ್ಯಾನ್ ಅವರನ್ನು ಟೆಸ್ಟ್ನಲ್ಲಿ ನಾಯಕರಾಗಿ ಈವರೆಗೆ ಮುಂದುವರೆಸಲಾಗಿದೆ. ಅತ್ತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಪ್ರವೇಶಿಸುವಲ್ಲಿ ಟೀಮ್ ಇಂಡಿಯಾ ವಿಫಲವಾದರೆ ರೋಹಿತ್ ಶರ್ಮಾ ತಲೆದಂಡ ಗ್ಯಾರಂಟಿ. ಟೆಸ್ಟ್ ಕ್ರಿಕೆಟ್ನಲ್ಲಿ ಹಿಟ್ ಮ್ಯಾನ್ ಬ್ಯಾಟ್ ಸೌಂಡ್ ಮಾಡ್ತಿಲ್ಲ. ನಾಯಕನಾಗಿ ಟೀಮ್ ಗೆಲ್ಲಿಸೋಕೆ ಸಾಧ್ಯವಾಗ್ತಿಲ್ಲ. ಮುಂದಿನ ವರ್ಷ ಹಿಟ್ಮ್ಯಾನ್ 38ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ಇದೆಲ್ಲಾ ವಿಚಾರ ಮುಂದಿಟ್ಟುಕೊಂಡು ಶೀಘ್ರದಲ್ಲೇ ರೋಹಿತ್ ಶರ್ಮಾ ಅವ್ರಿಗೆ ಗೇಟ್ಪಾಸ್ ಸಿಗೋ ಸಾಧ್ಯತೆಗಳೇ ಹೆಚ್ಚಾಗಿದೆ.
ಇನ್ನೊಂದೆಡೆ ಟೀಮ್ ಇಂಡಿಯಾದಲ್ಲಿ ಉತ್ಸಾಹಕ್ಕೆ ಕೊರತೆಯಿಲ್ಲ. ಆಟಗಾರರ ಮಧ್ಯೆ ಕೋಆರ್ಡಿನಿಟಿಗೂ ತೊಂದರೆಯಿಲ್ಲ. ಒನ್ ಟೀಮ್ ಒನ್ ಫ್ಯಾಮಿಲಿ ಅನ್ನೋ ರೀತಿಯೇ ಎದುರಾಳಿ ತಂಡದ ವಿರುದ್ಧ ಸೆಣಸಾಡೋ ಸಾಮರ್ಥ್ಯ ನಮ್ಮ ತಂಡದ್ದು. ಆದ್ರೂ ಕೂಡಾ ಮತ್ತೊಮ್ಮೆ ಹೀನಾಯ ಸೋಲಿಗೆ ಶರಣಾಗಿದೆ ಟೀಮ್ ಇಂಡಿಯಾ. ಸೋಲು ಹೊಸತಲ್ಲ. ಗೆಲುವು ಪಡೆಯೋ ಛಲ ಬಿಟ್ಟುಕೊಡುವುದೂ ಇಲ್ಲ. ಮುಂದಿನ ಪಂದ್ಯಕ್ಕೆ ಟೀಮ್ ಇಂಡಿಯಾ ರೆಡಿಯಾಗಿದೆ. ಸೋಲಿಗೆ ಸೇಡು ತೀರಿಸಿಕೊಳ್ಳೋ ತವಕದಲ್ಲಿದೆ.