ಪಾಂಡ್ಯ ಬ್ಯಾನ್.. ರೋಹಿತ್ ಕ್ಯಾಪ್ಟನ್ – IPLಗೂ ಮೊದ್ಲೇ ಮುಂಬೈನಲ್ಲಿ ಟ್ವಿಸ್ಟ್

ರೋಹಿತ್ ಶರ್ಮಾ ಟೀಂ ಇಂಡಿಯಾದ ಲೆಜೆಂಡರಿ ಲೀಡರ್. ಭಾರತಕ್ಕೆ ಬ್ಯಾಕ್ ಟು ಬ್ಯಾಕ್ ಎರಡು ಐಸಿಸಿ ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟ ಸೂಪರ್ ಸ್ಟಾರ್. ಐಪಿಎಲ್ನಲ್ಲೂ ಇತಿಹಾಸ ಸೃಷ್ಟಿಸಿದ ನಾಯಕ. ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಆಗಿ 5 ಬಾರಿ ಟ್ರೋಫಿಗಳನ್ನ ಎತ್ತಿ ಹಿಡಿದಿದ್ದಾರೆ. ಮುಂಬೈ ಬಳಿಕ ಚೆನ್ನೈ ಕೂಡ 5 ಬಾರಿ ಕಪ್ ಗೆದ್ದಿದೆ. ಆ ವಿಚಾರ ಈಗ ಬೇಡ. ಸೋ ಹೀಗೆ ಮುಂಬೈ ತಂಡದ ಪಾಲಿಗೆ ಹಿಟ್ಮ್ಯಾನ್ ರೋಹಿತ್ ಶರ್ಮಾ ಬ್ರ್ಯಾಂಡ್ ಆಗೋದಿದ್ದಾರೆ. ಹೀಗಿದ್ರೂ ಲಾಸ್ಟ್ ಇಯರ್ ಕ್ಯಾಪ್ಟನ್ ಬದಲಾವಣೆ ಮಾಡಿ ಮುಂಬೈ ತಂಡ ಕೈ ಸುಟ್ಟಕೊಂಡಿತ್ತು. ಸೋ ಈ ಸಲನಾದ್ರೂ ಬೆಸ್ಟ್ ಪರ್ಫಾಮೆನ್ಸ್ ಕೊಡೋಣ ಅನ್ಕೊಂಡ್ರೆ ಐಪಿಎಲ್ ಆರಂಭಕ್ಕೂ ಮುನ್ನವೇ ಸಾಲು ಸಾಲು ಶಾಕ್ ಎದುರಾಗಿವೆ.
ಇದನ್ನೂ ಓದಿ : RCB ಕ್ಯಾಂಪ್ ನಲ್ಲಿ ಕೊಹ್ಲಿ ಪವರ್ – ಇಂಜುರಿ ಬೆಥೆಲ್ ಕಂಪ್ಲೀಟ್ ಫಿಟ್
ಮಾರ್ಚ್ 22ರಿಂದ 18ನೇ ಆವೃತ್ತಿಯ ಐಪಿಎಲ್ ಆರಂಭ ಆಗಲಿದೆ. ಮೊದಲ ಪಂದ್ಯದಲ್ಲೇ ಬಲಿಷ್ಠ ತಂಡಗಳಾದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಹೈವೋಲ್ಟೇಜ್ ಫೈಟ್ ನಡೆಯಲಿದೆ. ಶನಿವಾರ ಫಸ್ಟ್ ಮ್ಯಾಚ್ ನಡೆದ್ರೆ ಭಾನುವಾರ ಎರಡನೇ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಚೆಪಾಕ್ನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಕಾಳಸಂತೆಯಲ್ಲಿ ಟಿಕೆಟ್‌ಗಳು ದುಬಾರಿ ಬೆಲೆಗೆ ಮಾರಾಟವಾಗ್ತಿವೆ. ಸ್ಟ್ಯಾಂಡ್ ಟಿಕೆಟ್‌ಗಳು ಸಹ ಅದರ ಮೂಲ ಬೆಲೆಗಿಂತ 10 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿವೆ. ಕಳೆದ ಸೀಸನ್ ನಲ್ಲಿ ಕಡಿಮೆ ಬೆಲೆ 1700 ರೂಪಾಯಿಗಳಾಗಿದ್ದರೆ, ಈ ಪಂದ್ಯಕ್ಕೆ 20,600 ರೂಪಾಯಿಗೆ ತಲುಪಿದೆ.
ಕಳೆದ ಬಾರಿ ಕಳಪೆ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್ ಈ ಬಾರಿ ಧಮಾಕೇಧಾರ್ ಪರ್ಫಾಮೆನ್ಸ್ ಕೊಡೋ ಉದ್ದೇಶದಲ್ಲಿದೆ. ಆದ್ರೆ ಐಪಿಎಲ್ ಆರಂಭಕ್ಕೂ ಮುನ್ನವೇ ಎಂಐಗೆ ಡಬಲ್ ಶಾಕ್ ಎದುರಾಗಿದೆ. ಮೊದಲ ಪಂದ್ಯದಿಂದ ನಾಯಕ ಹಾರ್ದಿಕ್ ಪಾಂಡ್ಯರೇ ಹೊರಗುಳಿಯಬೇಕಾಗಿದೆ. ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ನಿಗದಿತ ಸಮಯದೊಳಗೆ 20 ಓವರ್ಗಳನ್ನು ಪೂರ್ಣಗೊಳಿಸಿರಲಿಲ್ಲ. ಐಪಿಎಲ್ 2024 ರಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಮುಂಬೈ ಇಂಡಿಯನ್ಸ್ ತಂಡವು ಮೂರು ಪಂದ್ಯಗಳಲ್ಲಿ ಸ್ಲೋ ಓವರ್ ತಪ್ಪು ಮಾಡಿತ್ತು. ಹೀಗಾಗಿ ನಾಯಕ ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರೂ. ದಂಡ ಹಾಗೂ ಒಂದು ಪಂದ್ಯದ ನಿಷೇಧ ಹೇರಲಾಗಿದೆ. ಒಂದೇ ಸೀಸನ್ನಲ್ಲಿ ಮೂರು ಬಾರಿ ಇದೇ ತಪ್ಪು ಮಾಡಿದ ನಾಯಕ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾರೆ. ಹೀಗಾಗಿ ಮಾರ್ಚ್ 23 ರಂದು ನಡೆಯಲಿರುವ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳುವುದಿಲ್ಲ.
ಹಾರ್ದಿಕ್ ಪಾಂಡ್ಯ ಫಸ್ಟ್ ಮ್ಯಾಚ್ನಿಂದ ಹೊರಗುಳಿಯೋ ಕಾರಣ ರೋಹಿತ್ ಶರ್ಮಾ ಅವ್ರೇ ಮೊದಲ ಪಂದ್ಯವನ್ನ ಮುನ್ನಡೆಸೋ ಸಾಧ್ಯತೆ ಇದೆ. ಆದ್ರೆ ಈ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಕ್ಯಾಪ್ಟನ್ಸಿಯಿಂದ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರನ್ನು ಕಿಕೌಟ್ ಮಾಡಿತ್ತು. ಇದು ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ರೋಹಿತ್ ಕ್ಯಾಪ್ಟನ್ ಆಗ್ತಾರಾ ಅನ್ನೋ ಅನುಮಾನ ಇದೆ. ಕಳೆದ ಬಾರಿ ಆಗಿದ್ದ ಅವಮಾನದ ನೋವನ್ನ ಮರೆತು ಆಡ್ತಾರಾ ಅನ್ನೋ ಪ್ರಶ್ನೆಗಳೂ ಇವೆ. ಕಳೆದ ಬಾರಿ ಪಾಂಡ್ಯರನ್ನ ಕ್ಯಾಪ್ಟನ್ ಮಾಡಿದ್ದಕ್ಕೆ ಐದು ಬಾರಿಯ ಚಾಂಪಿಯನ್ ಇವರೇನಾ ಎಂಬಷ್ಟರ ಮಟ್ಟಿಗೆ ಅವರ ಪ್ರದರ್ಶನ ಕಳಪೆಯಾಗಿತ್ತು. ಆಡಿದ 14 ಪಂದ್ಯಗಳಲ್ಲಿ 10ರಲ್ಲಿ ಸೋತು 10ನೇ ಸ್ಥಾನಿಯಾಗಿ ಟೂರ್ನಿಯನ್ನು ಮುಗಿಸಿತ್ತು.
ಮುಂಬೈ ಟೀಂ ಹೇಳಿ ಕೇಳಿ ಸ್ಟಾರ್ ಪ್ಲೇಯರ್ಸೇ ಇರೋ ತಂಡ. ಅದ್ರಲ್ಲೂ ಟೀಂ ಇಂಡಿಯಾ ಕ್ಯಾಪ್ಟನ್ಗಳೆಲ್ಲಾ ಅಲ್ಲೇ ಇದ್ದಾರೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡದ ಕ್ಯಾಪ್ಟನ್ಗಳು ಬರೋಬ್ಬ ನಾಯಕನ ಕೆಳಗೆ ಆಡಲು ಸಜ್ಜಾಗಿದ್ದಾರೆ. ಇಲ್ಲಿ ಟೀಮ್ ಇಂಡಿಯಾ ಟೆಸ್ಟ್ ಹಾಗೂ ಏಕದಿನ ತಂಡಗಳ ನಾಯಕರಾಗಿರುವ ರೋಹಿತ್ ಶರ್ಮಾ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಎರಡನೇ ಸೀಸನ್ ಆಡಲಿದ್ದಾರೆ. ಕಳೆದ ಬಾರಿ ಹಿಟ್ಮ್ಯಾನ್ ಬದಲಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪಾಂಡ್ಯಗೆ ಕ್ಯಾಪ್ಟನ್ ಪಟ್ಟ ನೀಡಿತ್ತು. ಇನ್ನು ಟೀಮ್ ಇಂಡಿಯಾ ಟಿ20 ತಂಡದ ನಾಯಕರಾಗಿರುವ ಸೂರ್ಯಕುಮಾರ್ ಯಾದವ್ ಕೂಡ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ. ಭಾರತ ಟಿ20 ತಂಡದ ಕ್ಯಾಪ್ಟನ್ ಆದ ಬಳಿಕ ಇದೇ ಮೊದಲ ಬಾರಿಗೆ ಐಪಿಎಲ್ ಆಡಲು ಸಜ್ಜಾಗಿರುವ ಸೂರ್ಯ ಕೂಡ ಹಾರ್ದಿಕ್ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವುದು ವಿಶೇಷ. ಹಾಗೆಯೇ ಭಾರತ ಟೆಸ್ಟ್ ತಂಡದ ಉಪನಾಯಕ ಜಸ್ಪ್ರೀತ್ ಬುಮ್ರಾ ಈ ಬಾರಿ ಕೂಡ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುತ್ತಿದ್ದು, ಅವರು ಸಹ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಲು ಸಜ್ಜಾಗಿದ್ದಾರೆ. ಟೀಮ್ ಇಂಡಿಯಾದ ಕ್ಯಾಪ್ಟನ್ ಪಟ್ಟದಲ್ಲಿರುವ ಇಬ್ಬರು ಆಟಗಾರರು ಹಾಗೂ ಒಬ್ಬ ಉಪನಾಯಕ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ನಾಯಕನಲ್ಲದ ಆಟಗಾರನ ಕ್ಯಾಪ್ಟನ್ಸಿ ಅಡಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲೇ ಮೊದಲು ಎಂಬುದು ವಿಶೇಷ.