ODIನಲ್ಲಿ ಅತ್ಯಂತ ಹಿರಿಯ ರೋಹಿತ್ ಶರ್ಮಾ – ಮತ್ತೊಬ್ಬ ವೈಭವ್ ಎಂಟ್ರಿಗೆ 40 ವರ್ಷ ಬೇಕಂತೆ..!

ಕ್ರಿಕೆಟ್ ಲೋಕದಲ್ಲಿ ಕೆಲ ಸ್ವಾರಸ್ಯಕರ ಘಟನೆಗಳು ನಡೆಯುತ್ತದೆ. ಇದರ ಹೈಲೆಟ್ಸ್ ಇಲ್ಲಿದೆ.
ಇದನ್ನೂ ಓದಿ:TESTಗೆ ಮಾತ್ರ ಮೊಹಮ್ಮದ್ ಸಿರಾಜ್ ಸೀಮಿತ – ಬುಮ್ರಾ ಆಡದಿದ್ರಷ್ಟೇ T-20I & ODI
ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಎ ತಂಡ ಅಫ್ಘಾನಿಸ್ತಾನ ಎ ವಿರುದ್ಧ ಸೋತಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 349 ರನ್ ಕಲೆಹಾಕಿತು. ಆದರೆ ಅಫ್ಘನ್ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಮಳೆ ಬಂದ ಕಾರಣ ಅಫ್ಘನ್ ತಂಡಕ್ಕೆ 38 ಓವರ್ಗಳಲ್ಲಿ 294 ರನ್ ಗುರಿ ನೀಡಲಾಯಿತು. ಈ ಗುರಿ ಬೆನ್ನಟ್ಟಿದ ಅಫ್ಘನ್ ತಂಡ 25.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿದ್ದಾಗ ಮತ್ತೆ ಮಳೆ ಬಂತು. ನಂತರ ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ಅಂಪೈರ್ಗಳು ಅಫ್ಘಾನಿಸ್ತಾನ ತಂಡವನ್ನು ವಿಜಯಿ ಎಂದು ಘೋಷಿಸಿದರು.
ಭಾರತ ಅಂಡರ್-19 ತಂಡ ಶ್ರೀಲಂಕಾ ಪ್ರವಾಸಕ್ಕೆ ಸಜ್ಜಾಗಿದೆ. ಶ್ರೀಲಂಕಾ ಸರಣಿಗೆ ತಂಡವನ್ನು ಪ್ರಕಟಿಸಲಾಗಿದೆ. ಮಾಜಿ ನಾಯಕ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅನ್ವಯ್ ದ್ರಾವಿಡ್ ವಿನೂ ಮಕಂಡ್ ಟ್ರೋಫಿ ಅಂಡರ್ 19 ತಂಡದ ಕ್ಯಾಪ್ಟನ್ ಆಗಿ ಮಿಂಚಿದ್ದಾರೆ. ಇದೀಗ 17 ವರ್ಷದ ಅನ್ವಯ್ ದ್ರಾವಿಡ್ ಏಕದಿನ ತಂಡದಲ್ಲಿ ಮಾತ್ರ ಆಡಲಿದ್ದಾರೆ. ರೆಡ್ ಬಾಲ್ ಸರಣಿಗೆ ಅವರನ್ನು ಆಯ್ಕೆ ಮಾಡಿಲ್ಲ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿ ಜೂನ್ 13 ರಂದು ಆರಂಭವಾಗಲಿದ್ದು, ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ರೋಹಿತ್, ಮೊಹಿಂದರ್ ಅಮರನಾಥ್ ಅವರ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿಯಲಿದ್ದಾರೆ. ಏಕದಿನ ಪಂದ್ಯವನ್ನಾಡಿದ ಅತ್ಯಂತ ಹಿರಿಯ ಭಾರತೀಯ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ ಹಿಟ್‌ಮ್ಯಾನ್.
ವೈಭವ್ ಸೂರ್ಯವಂಶಿ ಬಗ್ಗೆ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಮನಬಿಚ್ಚಿ ಮಾತನಾಡಿದ್ದಾರೆ. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದ್ರಾವಿಡ್ ಸೂರ್ಯವಂಶಿಯನ್ನು ಹೊಗಳಿದ್ದಾರೆ., ‘ಎಲ್ಲರನ್ನೂ ವೈಭವ್ ಸೂರ್ಯವಂಶಿಗೆ ಹೋಲಿಸಿ ನೋಡುವುದು ಚೆನ್ನಾಗಿರಲ್ಲ. ವೈಭವ್ ಸೂರ್ಯವಂಶಿ ಒಬ್ಬ ವಿಭಿನ್ನ ಮತ್ತು ಯೂನಿಕ್ ಪ್ಲೇಯರ್. ಸಚಿನ್ 15 ವರ್ಷದವರಿದ್ದಾಗ ಆಡಿದ್ರು. 40 ವರ್ಷಗಳ ಸುದೀರ್ಘ ಅವಧಿಯ ಬಳಿಕ ಈಗ ಮತ್ತೊಬ್ಬ ವೈಭವ್ ಸೂರ್ಯವಂಶಿ ನಮಗೆ ಸಿಕ್ಕಿದ್ದಾನೆ. ಮತ್ತೊಬ್ಬ ವೈಭವ್ ಬರಲು ಇನ್ನು 40 ವರ್ಷ ಬೇಕಾಗಬಹುದು’ ಎಂದು ಹೇಳಿದ್ದಾರೆ.
ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಟ್ರೋಫಿ ಅನಾವರಣಕ್ಕೆ ಬಂದಿರುವ ಲೆಜೆಂಡರಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಕನ್ನಡದಲ್ಲಿ ಮಾತನಾಡುವುದರ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಕನ್ನಡಿಗ ರಾಹುಲ್ ದ್ರಾವಿಡ್ ಹುಟ್ಟಿದ್ದು ಮರಾಠಿ ಕುಟುಂಬದಲ್ಲಿ. ಆದರೆ, ಕನ್ನಡ ಅವರ ಅನ್ನದ ಭಾಷೆ ಅನ್ನೋದನ್ನ ಮತ್ತೊಮ್ಮೆ ನಿರೂಪಿಸಿದ್ರು. ಯಾಕೆಂದರೆ, ಇದಕ್ಕೂ ಮೊದಲು ರಾಹುಲ್ ದ್ರಾವಿಡ್ ಮೇಲೆ ಕನ್ನಡ ಮೇಲೆ ಅವರಿಗೆ ಪ್ರೀತಿಯಿಲ್ಲ ಎಂಬ ವಿವಾದ ಹುಟ್ಟಿಕೊಂಡಿತ್ತು. ಇದೀಗ ಮತ್ತೊಮ್ಮೆ ನಾನು ಕನ್ನಡಿಗ, ಕನ್ನಡದ ಕ್ರಿಕೆಟರ್ ಅನ್ನೋದನ್ನು ಸಾಬೀತುಪಡಿಸಿದ್ದಾರೆ ರಾಹುಲ್ ದ್ರಾವಿಡ್.
ಬಾಂಗ್ಲಾ ದೇಶ ಮೊಟ್ಟ ಮೊದಲ ಬಾರಿಗೆ ಆಸೀಸ್ ವಿರುದ್ಧ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ತಂಡ, ಬಾಂಗ್ಲಾದೇಶ ಪ್ರವಾಸ ಮಾಡಿದೆ. ಈಗಾಗಲೇ ಸರಣಿಯ ಎರಡು ಪಂದ್ಯಗಳು ಮುಗಿದಿದ್ದು, ಬಾಂಗ್ಲಾದೇಶದ ವಿರುದ್ಧ ಎರಡೂ ಪಂದ್ಯಗಳನ್ನು ಸೋತಿರುವ ಆಸ್ಟ್ರೇಲಿಯಾ ಏಕದಿನ ಸರಣಿ ಕಳೆದುಕೊಂಡಿದೆ. ಬಾಂಗ್ಲಾದೇಶಕ್ಕೆ ಬರುವ ಮುನ್ನ ಪಾಕಿಸ್ತಾನದಲ್ಲಿ ಏಕದಿನ ಸರಣಿಯನ್ನಾಡಿದ್ದ ಆಸೀಸ್ ಪಡೆ ಅಲ್ಲೂ ಸಹ ಏಕದಿನ ಸರಣಿಯನ್ನು ಸೋತಿತ್ತು.
ಜೂನ್ 26 ಮತ್ತು 28 ರಂದು ಭಾರತ ಮತ್ತು ಐರ್ಲೆಂಡ್ ನಡುವೆ ಎರಡು ಪಂದ್ಯಗಳ ಟಿ20 ಸರಣಿ ನಿಗದಿಯಾಗಿದೆ. ಆದರೆ, ಇತ್ತೀಚೆಗೆ ಅಲ್ಲಿ ನಡೆದ ದಂಗೆಗಳಿಂದಾಗಿ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಬಂದಿದೆ. ಹೀಗಾಗಿ ಐರ್ಲೆಂಡ್ ಕ್ರಿಕೆಟ್ ಮಂಡಳಿ ಪಂದ್ಯಗಳನ್ನು ಸ್ಥಳಾಂತರಿಸಲಿದೆ. ಹಾಗಾದಲ್ಲಿ ಪಂದ್ಯ ನಿಗದಿತ ಸಮಯಕ್ಕೆ ನಡೆಯದೇ ವಿಳಂಬ ಆಗಬಹುದು.
ಜೂನ್ 12ರಿಂದ ಜುಲೈ 5ರವರೆಗೆ ಇಂಗ್ಲೆಂಡ್‌ನಲ್ಲಿ ಮಹಿಳಾ ಟಿ20 ವಿಶ್ವಕಪ್ ನಡೆಯಲಿದೆ. ಶುಕ್ರವಾರದಿಂದ ಅಂದರೆ ಇವತ್ತಿನಿಂದ ಶುರುವಾಗಲಿರುವ ವಿಶ್ವಕಪ್‌ನಲ್ಲಿ 12 ತಂಡಗಳು ಭಾಗವಹಿಸಲಿವೆ. ಭಾರತ ಜೂನ್ 14ರಂದು ತನ್ನ ಅಭಿಯಾನ ಆರಂಭಿಸಲಿದೆ. ಭಾರತದ ಪಂದ್ಯಗಳು ಸಂಜೆ 7 ಗಂಟೆಗೆ ಆರಂಭವಾದರೆ, ಇತರೆ ಪಂದ್ಯಗಳು ರಾತ್ರಿ 11 ಗಂಟೆಗೆ ಪ್ರಸಾರವಾಗಲಿವೆ.
2027 ರ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟವಾಗಿದೆ. ಏಕದಿನ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿವೆ. ಅಕ್ಟೋಬರ್ 4 ರಿಂದ ನವೆಂಬರ್ 21ರವರೆಗೆ ನಡೆಯುವ ಈ ಟೂರ್ನಿಯಲ್ಲಿ 14 ತಂಡಗಳು ಸ್ಪರ್ಧಿಸಲಿವೆ. ಒಟ್ಟು 54 ಪಂದ್ಯಗಳು ನಡೆಯಲಿದ್ದು, ಈ ವಿಶ್ವ ಸಮರ ಸುಮಾರು ಒಂದೂವರೆ ತಿಂಗಳುಗಳ ಕಾಲ ನಡೆಯಲಿದೆ.

ನೋಡಿರಿ

