ಟೀಮ್ ಇಂಡಿಯಾ ಗೆಲುವಿನ ರೂವಾರಿ ರೋಹಿತ್ ಶರ್ಮಾ – ಹಿಟ್‌ಮ್ಯಾನ್ ಯಾವಾಗಲೂ ಬೆಸ್ಟ್ ಕ್ಯಾಪ್ಟನ್ ..!
ರೋಹಿತ್ ಶರ್ಮಾ.. ಪರ್ಫೆಕ್ಟ್ ಕ್ಯಾಪ್ಟನ್.. ಟೀಂ ಇಂಡಿಯಾ ಎಲ್ಲಾ ಮ್ಯಾಚ್ಗಳನ್ನ ಗೆಲ್ಲುತ್ತಿದೆ.. ಸೆಮಿಫೈನಲ್ಗೆ ಎಂಟ್ರಿಯಾಗಿದೆ ಅನ್ನೋ ಒಂದೇ ಕಾರಣಕ್ಕೆ ರೋಹಿತ್ ಶರ್ಮಾರನ್ನ ಹೊಗಳುವುದಲ್ಲ. ಟೀಂ ಇಂಡಿಯಾ ಈ ಬಾರಿಯ ವರ್ಲ್ಡ್‌ಕಪ್ ಗೆದ್ದಿಲ್ಲಾ ಅಂದರೂ ಕೂಡ ರೋಹಿತ್ ಶರ್ಮಾ ಈಸ್ ದಿ ಬೆಸ್ಟ್ ಕ್ಯಾಪ್ಟನ್.
ಇದನ್ನೂ ಓದಿ: ನಿರಂತರ 8 ಪಂದ್ಯಗಳನ್ನು ಗೆದ್ದು ಬೀಗಿದ ಭಾರತ – ವರ್ಲ್ಡ್‌ಕಪ್ ಕ್ಲೀನ್‌ಸ್ವೀಪ್ ಮಾಡುತ್ತಾ ಟೀಮ್ ಇಂಡಿಯಾ?
2022ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೀರಿಸ್ ವೇಳೆಗೆ ರೋಹಿತ್ ಶರ್ಮಾ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿ ಆಯ್ಕೆಯಾಗ್ತಾರೆ. 7 ವರ್ಷಗಳ ಕಾಲ ನಾಯಕರಾಗಿದ್ದ ವಿರಾಟ್ ಕೊಹ್ಲಿಯನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ರೋಹಿತ್ ಶರ್ಮಾಗೆ ಪಟ್ಟ ಕಟ್ಟಲಾಗುತ್ತೆ. ಆಗ ಏನೆಲ್ಲಾ ಹಂಗಾಮ ಆಯ್ತು ಅನ್ನೋದು ನಿಮಗೆ ಗೊತ್ತೇ ಇದೆ. ಆಗ ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ನಿರ್ಧಾರವನ್ನ ಒಂದಷ್ಟು ಮಂದಿ ಪ್ರಶ್ನಿಸ್ತಾರೆ. ವಿರಾಟ್ ಕ್ಯಾಪ್ಟನ್ಸಿಯನ್ನ ಕಿತ್ತುಕೊಂಡಿದ್ದು ಸರಿಯಲ್ಲ ಅಂತಾರೆ. ಆದ್ರೆ ಅಂದು ಸೌರವ್ ಗಂಗೂಲಿ ಸೇರಿದಂತೆ ಬಿಸಿಸಿಐ ಮ್ಯಾನೇಜ್ಮೆಂಟ್ ತೆಗೆದುಕೊಂಡ ನಿರ್ಧಾರ ಸರಿಯಾಗಿಯೇ ಇತ್ತು. ರೋಹಿತ್ ಶರ್ಮಾ ಕೂಡ ಕಳೆದ ಹಲವು ವರ್ಷಗಳಿಂದ ಕ್ಯಾಪ್ಟನ್ಸಿ ರೇಸ್ನಲ್ಲಿದ್ರು. ತಮ್ಮಲ್ಲಿರುವ ನಾಯಕತ್ವ ಗುಣವನ್ನ ಕೂಡ ರೋಹಿತ್ ಅದಾಗ್ಲೇ ಪ್ರೂವ್ ಕೂಡ ಮಾಡಿದ್ರು. ಐಪಿಎಲ್ನಲ್ಲಿ ರೋಹಿತ್ ಕ್ಯಾಪ್ಟನ್ಸಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ 4 ಬಾರಿ ಟ್ರೋಫಿ ಗೆದ್ದಿದೆ. 2013ರಲ್ಲಿ ರಿಕ್ಕಿ ಪಾಂಟಿಂಗ್ ಬಳಿಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗ್ತಾರೆ. ಅಂದು ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ನೀಡುವಂತೆ ಸಲಹೆ ನೀಡಿದ್ದೇ ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್. ಹೀಗಾಗಿ ರೋಹಿತ್ನೊಳಗಿರೋ ನಾಯಕನನ್ನ ರಿಕ್ಕಿ ಪಾಂಟಿಂಗ್ ಅಂದೇ ಗುರುತಿಸಿದ್ರು. ಟೀಂ ಕ್ಯಾಪ್ಟನ್ ಆದ ಬಳಿಕವೂ ರೋಹಿತ್ ಅಂಡರ್ನಲ್ಲಿ ಭಾರತ ಹಲವು ಸೀರಿಸ್ಗಳನ್ನ ಗೆದ್ದಿದೆ. ಇದೀಗ ವರ್ಲ್ಡ್‌ಕಪ್ ಗೆಲ್ಲುವ ಹಂತಕ್ಕೆ ಕೂಡ ತಲುಪಿದೆ.
ಹಾಗಿದ್ರೆ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾರ ಸಕ್ಸಸ್ ಸೀಕ್ರೆಟ್ ಏನು? ಯಾವ ಕಾರಣಕ್ಕಾಗಿ ರೋಹಿತ್ ಉಳಿದೆಲ್ಲಾ ಕ್ಯಾಪ್ಟನ್ಗಳಿಗಿಂತ ಡಿಫರೆಂಟ್ ಆಗಿದ್ದಾರೆ ಅನ್ನೋದೆ ಇಲ್ಲಿರುವ ಇಂಟ್ರೆಸ್ಟಿಂಗ್ ವಿಚಾರ. ಪ್ರತಿಯೊಬ್ಬ ಕ್ಯಾಪ್ಟನ್ಗೂ ಆವರದ್ದೇ ಆದ ಆಟಿಟ್ಯೂಡ್ ಇರುತ್ತೆ.. ಶೈಲಿ ಇರುತ್ತೆ.. ಸೌರವ್ ಗಂಗೂಲಿ ಕ್ಯಾಪ್ಟನ್ಸಿಯೇ ಬೇರೆಯದ್ದಾಗಿತ್ತು..ಗಂಗೂಲಿ ಬಳಿ ಅಗ್ರೆಸ್ಸಿವ್ನೆಸ್ಸಿತ್ತು.. ಧೋನಿ ಕ್ಯಾಪ್ಟನ್ಸಿಯೇ ಡಿಫರೆಂಟ್ ಸ್ಟ್ಯೈಲ್ನಲ್ಲಿತ್ತು.. ಎಲ್ಲವನ್ನೂ ಕೂಲ್ ಆಗಿಯೇ ಹ್ಯಾಂಡಲ್ ಮಾಡ್ತಿದ್ರು.. ಇನ್ನು ವಿರಾಟ್ ಕೊಹ್ಲಿಯಂತೂ ಇನ್ನಷ್ಟು ಆಗ್ರೆಸ್ಸಿವ್ ಕ್ಯಾಪ್ಟನ್ ಆಗಿದ್ರು. ಈಗ ರೋಹಿತ್ ಶರ್ಮಾ ಕೂಲ್ ಆಗಿಯೇ ಟೀಂ ಕಡೆಯಿಂದ ಅಗ್ರೆಸ್ಸಿವ್ ಕ್ರಿಕೆಟ್ ಆಡಿಸ್ತಿದ್ದಾರೆ.
ರೋಹಿತ್ ನಿಜಕ್ಕೂ ಒಬ್ಬ ಯುನೀಕ್ ಕ್ಯಾಪ್ಟನ್.. ತಾನೊಬ್ಬ ನಾಯಕ ಅನ್ನೋ ಗರ್ವ, ಗತ್ತು ರೋಹಿತ್ ಶರ್ಮಾಗೆ ಇಲ್ವೇ. ತಂಡದ ಎಲ್ಲಾ ಆಟಗಾರರ ಜೊತೆಗೂ ಒಂದೇ ರೀತಿ ಇರ್ತಾರೆ. ಟೀಂ ಅಟ್ಮಾಸ್ಪಿಯರ್ನ್ನ ತುಂಬಾ ಲೈಟ್ ಆಗಿ ಇಡ್ತಾರೆ. ಯಾರು ಕೂಡ ಒತ್ತಡಕ್ಕೊಳಗಾಗದೆ, ಸ್ಟ್ರೆಸ್ ಫ್ರೀಯಾಗಿ ಇರುವಂತೆ ನೋಡಿಕೊಳ್ತಾರೆ. ಜೊತೆಗೆ ಯಾವಾಗಲೂ ತಮ್ಮ ಟೀಂ ಮೇಟ್ಗಳನ್ನ ಬ್ಯಾಕ್ಅಪ್ ಮಾಡುತ್ತಲೇ ಇರ್ತಾರೆ. ಎರಡು ಮ್ಯಾಚ್ ಆಡಿಲ್ಲ ಅಂತಾ ಅವರನ್ನ ರೋಹಿತ್ ಟೀಂನಿಂದ ಡ್ರಾಪ್ ಮಾಡಲ್ಲ. ಯಾಱರ ಪೊಟೆನ್ಷಿಯಲ್ ಏನೇನು ಅನ್ನೋದು ರೋಹಿತ್ ಶರ್ಮಾಗೆ ಚೆನ್ನಾಗಿಯೇ ಗೊತ್ತಿದೆ. ಉದಾಹರಣೆಗೆ ಇದೇ ವರ್ಲ್ಡ್ಕಪ್ನಲ್ಲಾದ ಇನ್ಸಿಡೆಂಟ್ನ್ನೇ ತೆಗೆದುಕೊಳ್ಳೋಣ. ಶ್ರೇಯಸ್ ಅಯ್ಯರ್ ರನ್ ಗಳಿಸುವಲ್ಲಿ ಮೇಲಿಂದ ಮೇಲೆ ಫೇಲ್ ಆದ್ರೂ ರೋಹಿತ್ ಶರ್ಮಾ ಪ್ಲೇಯಿಂಗ್-11ನಿಂದ ಡ್ರಾಪ್ ಮಾಡಿಲ್ಲ. ಪದೇ ಪದೆ ಅವಕಾಶ ಕೊಡ್ತಾನೆ ಬಂದ್ರು. ಹೀಗಾಗಿ ಶ್ರೇಯಸ್ ಅಯ್ಯರ್ ಈಗ ಯಾವ ರೀತಿ ಆಡ್ತಿದ್ದಾರೆ ಅನ್ನೋದನ್ನ ನೀವೆಲ್ಲಾ ನೋಡಿದ್ದೀರಾ. ಕ್ಯಾಪ್ಟನ್ಗೆ ಯಾವಾಗಲೂ ತನ್ನ ಟೀಂ ಮೇಟ್ಗಳ ಮೇಲೆ ಟ್ರಸ್ಟ್ ಅನ್ನೋದು ತುಂಬಾನೆ ಇಂಪಾರ್ಟೆಂಟ್ ಆಗುತ್ತೆ. ರೋಹಿತ್ ಶರ್ಮಾ ತಮ್ಮ ತಂಡದ ಆಟಗಾರರ ಮೇಲಿನ ವಿಶ್ವಾಸವನ್ನ ಯಾವತ್ತೂ ಕಳೆದುಕೊಳ್ಳೋದೆ ಇಲ್ಲ. ಇದು ರೋಹಿತ್ ಕ್ಯಾಪ್ಟನ್ಸಿಯ ಇನ್ನೊಂದು ಪ್ಲಸ್ ಪಾಯಿಂಟ್.
ಆಟಗಾರರಿಗೆ ರೋಹಿತ್ ಫುಲ್ ಫ್ರೀಡಂ!
ಇನ್ನು ಆನ್ಫೀಲ್ಡ್ನಲ್ಲಿ ಪ್ಲೇಯರ್ಸ್ಗಳಿಗೆ ರೋಹಿತ್ ಶರ್ಮಾ ಫುಲ್ ಫ್ರೀಡಂ ಕೊಡ್ತಾರೆ. ಈಗ ಬುಮ್ರಾ ಬೌಲಿಂಗ್ ಮಾಡ್ತಿದ್ರೆ ಫೀಲ್ಡಿಂಗ್ ಪೊಸೀಶನ್ ಹೇಗಿರಬೇಕು ಅನ್ನೋದನ್ನ ರೋಹಿತ್ ಒಬ್ಬರೇ ನಿರ್ಧರಿಸೋದಿಲ್ಲ. ಬೌಲರ್ಗೆ ತನಗೆ ಬೇಕಾದಂತೆ ಫೀಲ್ಡಿಂಗ್ ಸೆಟ್ ಮಾಡೋಕೆ ಅವಕಾಶ ಕೊಡ್ತಾರೆ. ಅಷ್ಟೇ ಅಲ್ಲ, ಬ್ಯಾಟ್ಸ್ಮನ್ಗೆ ಯಾವ ಬಾಲ್ ಹಾಕಬೇಕು, ಯಾವ ಕಡೆಗೆ ಬಾಲ್ ಎಸೆಯಬೇಕು ಅನ್ನೋ ವಿಚಾರದಲ್ಲಿ ರೋಹಿತ್ ತಲೆ ಹಾಕೋದಿಲ್ಲ. ಒಂದು ವೇಳೆ ಬೌಲರ್ನ ಪ್ಲ್ಯಾನ್ ವರ್ಕೌಟ್ ಆಗಿಲ್ಲ ಅಂದ್ರೆ. ಆಗ ಮಾತ್ರ ಬೌಲರ್ ಬಳಿಗೆ ಬಂದು ರೋಹಿತ್ ಒಂದಷ್ಟು ಟಿಪ್ಸ್ ಕೊಡ್ತಾರೆ. ಈ ವಿಚಾರವನ್ನ ಮೊಹಮ್ಮದ್ ಸಿರಾಜ್, ಸ್ಪಿನ್ನರ್ಗಳಾದ ಯುಜುವೇಂದ್ರ ಚಹಾಲ್ ಮತ್ತು ಕುಲ್ದೀಪ್ ಯಾದವ್ ಇಂಟರ್ವ್ಯೂ ಒಂದರಲ್ಲಿ ಹೇಳಿದ್ರು. ಹೀಗಾಗಿ ಫೋರ್ಸೆಬಲಿ ರೋಹಿತ್ ಯಾರಿಂದಲೂ ಯಾವ ಕೆಲಸವನ್ನೂ ಮಾಡಿಸೋದಿಲ್ಲ. ಜೊತೆಗೆ ಒಬ್ಬ ಬೌಲರ್ಗೆ ಬ್ಯಾಟ್ಸ್ಮನ್ ಸರಿಯಾಗಿ ಬೆಂಡೆತ್ತಿಬಿಟ್ಟ ಅಂತಾನೆ ಇಟ್ಕೊಳ್ಳಿ..ಬೌಂಡರಿ, ಸಿಕ್ಸರ್ ಚಚ್ಚಿದ್ರೂ ಕೂಡಲೇ ಬೌಲಿಂಗ್ ಚೇಂಜ್ ಮಾಡೋದಿಲ್ಲ. ಆ ಬೌಲರ್ಗೆ ಮತ್ತಷ್ಟು ಅವಕಾಶ ನೀಡ್ತಾರೆ. ರನ್ ಹೊಡೆದ ಬ್ಯಾಟ್ಸ್ಮನ್ನನ್ನ ಔಟ್ ಮಾಡೋಕೆ ಟಾರ್ಗೆಟ್ನ್ನ ಅದೇ ಬೌಲರ್ಗೆ ನೀಡ್ತಾರೆ. ಹೀಗೆ ಪ್ಲೇಯರ್ಸ್ಗಳನ್ನ ಬ್ಯಾಕ್ಅಪ್ ಮಾಡಿ ಪುಶ್ ಮಾಡೋದು ರೋಹಿತ್ ಶರ್ಮಾ ಒಬ್ಬ ಸಕ್ಸಸ್ಫುಲ್ ಕ್ಯಾಪ್ಟನ್ ಆಗೋಕೆ ಇನ್ನೊಂದು ಮೇನ್ ರೀಸನ್.
ಇನ್ನು ರೋಹಿತ್ ಶರ್ಮಾ ಫ್ರೀಡಂ ನೀಡೋ ವಿಚಾರದಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಫ್ಯಾಕ್ಟ್ನ್ನ ಹೇಳಲೇಬೇಕು. ನೀವು ಕೂಡ ಗಮನಿಸಿರ್ತೀರಾ.. ಎಲ್ಬಿಡಬ್ಲ್ಯು ಆದಾಗ ಅಥವಾ ಡಿಆರ್ಎಸ್ ಕಾಲ್ ತೆಗೆದುಕೊಳ್ಳುವಂಥಾ ಸಂದರ್ಭದಲ್ಲಿ ಆ ಡಿಸೀಶನ್ ಕೂಡ ಪ್ಲೇಯರ್ಸ್ಗಳೇ ಬಿಟ್ಟಿದ್ದಾರೆ. ಎಸ್ಪೆಷಲಿ ಬೌಲರ್ ಮತ್ತು ವಿಕೆಟ್ ಕೀಪರ್ಗೆ. ಅಫ್ಕೋಸ್ ಬೌಲರ್ಗೆ ಮತ್ತು ವಿಕೆಟ್ ಕೀಪರ್ಗೆ ಎಲ್ಬಿಡಬ್ಲ್ಯು ಹೌದಾ.. ಅಲ್ವಾ ಅನ್ನೋ ಬಗ್ಗೆ ಹೆಚ್ಚು ಕ್ಲಾರಿಟಿ ಸಿಗುತ್ತೆ. ಶ್ರೀಲಂಕಾ ವಿರುದ್ಧದ ಮ್ಯಾಚ್ನಲ್ಲಿ ಕೆಎಲ್ ರಾಹುಲ್ ಎರಡು ಬಾರಿ ಡಿಆರ್ಎಸ್ ಕಾಲ್ ತಗೊಂಡಿದ್ರು. ಅವೆರಡೂ ಕೂಡ ಔಟ್ ಆಗಿತ್ತು. ದಕ್ಷಿಣ ಆಫ್ರಿಕಾ ಮ್ಯಾಚ್ನಲ್ಲೂ ಅಷ್ಟೇ ಕೆಎಲ್ ರಾಹುಲ್ ಡಿಆರ್ಎಸ್ಗೆ ಒತ್ತಾಯಿಸ್ತಿದ್ರು. ಈಗ ಬೌಲರ್ಸ್ ಮತ್ತು ಕೀಪರ್ ರಾಹುಲ್ ಎಲ್ಬಿಡಬ್ಲ್ಯು ಆದ ಕೂಡಲೇ ಡಿಆರ್ಎಸ್ಗೆ ಸಿಗ್ನಲ್ ಮಾಡ್ತಿದ್ದಾರೆ. ಈ ಬಗ್ಗೆ ರೋಹಿತ್ ಶರ್ಮಾ ಕೂಡ ಮಾತನಾಡಿದ್ದು, ಡಿಆರ್ಎಸ್ಗೆ ಬೌಲರ್ ಮತ್ತು ಕೀಪರ್ ನನಗೆ ಕ್ಲ್ಯಾರಿಟಿ ನೀಡಬೇಕು. ನಿರ್ಧಾರ ಅವರದ್ದೇ ಎಂದಿದ್ದಾರೆ. ಈ ರೇಂಜಿಗೆ ರೋಹಿತ್ ಶರ್ಮಾ ತಮ್ಮ ಆಟಗಾರರಿಗೆ ಸ್ವಾತಂತ್ರ್ಯ ನೀಡುತ್ತಿದ್ದಾರೆ.
ರೋಹಿತ್ ಶರ್ಮಾ ಒಬ್ಬ ಅದ್ಭೂತ ರಣತಂತ್ರಗಾರ. ಯಾವುದೇ ಮ್ಯಾಚ್ ಆಗಲಿ ರೋಹಿತ್ ಕಂಪ್ಲೀಟ್ ಪ್ಲ್ಯಾನಿಂಗ್ ನಡೆಸ್ತಾರೆ. ತಮ್ಮದೇ ಸ್ಟ್ರ್ಯಾಟಜಿಗಳ ಹೆಣೀತಾರೆ. ಇದನ್ನ ರೋಹಿತ್ ಕಲಿತಿರೋದು ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ ಮತ್ತು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲ ಜಯವರ್ಧನೆ ಅವರಿಂದ. ಮುಂಬೈ ಇಂಡಿಯನ್ಸ್ ಪರ ಆಡೋವಾಗ ಪಾಂಟಿಂಗ್ ಮತ್ತು ಜಯವರ್ಧನೆಯಿಂದ ರೋಹಿತ್ ಸಾಕಷ್ಟು ಟಿಪ್ಸ್ಗಳನ್ನ ಪಡೆದುಕೊಂಡಿದ್ದಾರೆ. ಇವೆಲ್ಲವೂ ರೋಹಿತ್ಗೆ ಕ್ಯಾಪ್ಟನ್ಸಿಯಲ್ಲಿ ಅಡ್ವಾಂಟೇಜ್ ಆಗಿದೆ.