ಐಪಿಎಲ್ ಸಾರ್ವಕಾಲಿಕ ಶ್ರೇಷ್ಠ ಟೀಮ್ನಲ್ಲಿ ರೋಹಿತ್ ಶರ್ಮಾ ಇಲ್ಲ – ಅಭಿಮಾನಿಗಳಿಗೆ ಬೇಡವಾದರಾ ಹಿಟ್ಮ್ಯಾನ್
ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ವಾರಗಳು ಮಾತ್ರವೇ ಬಾಕಿಯಿದೆ. ಈ ಸಂದರ್ಭದಲ್ಲಿ ಸ್ಟಾರ್ ಸ್ಪೋರ್ಟ್ಸ್ ಆಯೋಜಿಸಿದ್ದ ವಿಶೇಷ ಸಮೀಕ್ಷೆಯಲ್ಲಿ ಕ್ರಿಕೆಟ್ ಪ್ರಿಯರು ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಕಟ್ಟಿದ್ದಾರೆ. ಆದರೆ, ಈ ಟೀಮ್ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಇಲ್ಲ ಅನ್ನೋದೇ ಅಚ್ಚರಿಯ ವಿಚಾರ.
ಇದನ್ನೂ ಓದಿ: ಡಬಲ್ ಸೆಂಚುರಿ ಹೊಡೆದರು ಸಿಗಲಿಲ್ಲ ಪಂದ್ಯಶ್ರೇಷ್ಠ ಪ್ರಶಸ್ತಿ – ಅಭಿಮಾನಿಗಳ ಹೃದಯ ಗೆದ್ದ ಯಶಸ್ವಿ ಜೈಸ್ವಾಲ್
ಐಪಿಎಲ್ ಆಲ್ಟೈಮ್ ಗ್ರೇಟೆಸ್ಟ್ ಟೀಮ್ನಲ್ಲಿ ಶ್ರೇಷ್ಠ ಆಟಗಾರರು ಇದ್ದಾರೆ. ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್, ಕ್ರೀಸ್ ಗೇಲ್, ಸುರೇಶ್ ರೈನಾ, ಎಬಿಡಿ ವಿಲಿಯರ್ಸ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಕಿರನ್ ಪೊಲ್ಲಾರ್ಡ್, ರಶೀದ್ ಖಾನ್, ಸುನಿಲ್ ನರೇನ್, ಯುಜುವೇಂದ್ರ ಚಹಾಲ್, ಲಸಿತ್ ಮಲಿಂಗಾ ಮತ್ತು ಜಸ್ಪ್ರಿತ್ ಬುಮ್ರಾ. ಓಕೆ..ಈ ಲಿಸ್ಟ್ನಲ್ಲಿ ಒಬ್ಬರ ಹೆಸರು ನಿಜಕ್ಕೂ ಮಿಸ್ ಆಗಿದೆ. ಎಕ್ಸ್ಪರ್ಟ್ಗಳು ಗೊತ್ತಿದ್ದೇ ಅವರನ್ನ ಸೆಲೆಕ್ಟ್ ಮಾಡಿಲ್ಲ. ಅದು ಮತ್ಯಾರೂ ಅಲ್ಲ ಟೀಂ ಇಂಡಿಯಾ ಕ್ಯಾಪ್ಟನ್..ಈ ಬಾರಿಯ ಟಿ20 ವರ್ಲ್ಡ್ಕಪ್ಗೂ ಕ್ಯಾಪ್ಟನ್ ಆಗಿರೋ, ಮುಂಬೈ ಇಂಡಿಯನ್ಸ್ನ್ನ ಐದು ಬಾರಿ ಗೆಲ್ಲಿಸಿದ ರೋಹಿತ್ ಶರ್ಮಾ ಹೆಸರು ಇಡೀ ಟೀಮ್ನಲ್ಲೇ ಇಲ್ಲ.
ಗ್ರೇಟೆಸ್ಟ್ ಟೀಂನಲ್ಲಿ ರೋಹಿತ್ ಹೆಸರು ಯಾಕಿಲ್ಲ?
ಐಪಿಎಲ್ ಆಲ್ಟೈಮ್ ಗ್ರೇಟೆಸ್ಟ್ ಟೀಮ್ಗೆ ರೋಹಿತ್ ಹೆಸರನ್ನೇ ಸೆಲೆಕ್ಟ್ ಮಾಡಿಲ್ಲ. ಹಾರ್ದಿಕ್ ಪಾಂಡ್ಯಾ ಇದ್ದಾರೆ, ರೋಹಿತ್ ಶರ್ಮಾ ಇಲ್ಲ. ಕ್ಯಾಪ್ಟನ್ಸಿ ಹೋಗ್ಲಿ ಬಿಡಿ. ಅಟ್ಲೀಸ್ಟ್ ಆಲ್ಟೈಮ್ ಸ್ಕ್ವಾಡ್ನಲ್ಲಾದ್ರೂ ರೋಹಿತ್ ಹೆಸರು ಇಲ್ಲಾ ಅಂದ್ರೆ. ಇದು ನಿಜಕ್ಕೂ ಶಾಕಿಂಗ್ ಅನ್ಸುತ್ತೆ. ಒಂದು ವೇಳೆ ರೋಹಿತ್ ಶರ್ಮಾರನ್ನ ಸೆಲೆಕ್ಟ್ ಮಾಡ್ತಿದ್ರೆ ಓಪನಿಂಗ್ ಪೊಸೀಶನ್ನಲ್ಲೇ ಅವರ ಹೆಸರರಿಬೇಕಿತ್ತು. ಆಗ ವಿರಾಟ್ ಕೊಹ್ಲಿಯನ್ನ 3ನೇ ಆರ್ಡರ್ಗೆ ಚೂಸ್ ಮಾಡಬಹುದಿತ್ತು. ಕ್ರೀಸ್ ಗೇಲ್ರನ್ನ ಡ್ರಾಪ್ ಮಾಡಬಹುದಿತ್ತು. ಬಟ್ ರೋಹಿತ್ ಶರ್ಮಾರನ್ನ ಆಲ್ಟೈಮ್ ಟೀಮ್ಗೇ ಪಿಕ್ ಮಾಡದೆ ಇರೋ ಎಕ್ಸ್ಪರ್ಟ್ಗಳ ಈ ನಿರ್ಧಾರ ಯಾಕೋ ಸರಿ ಇಲ್ಲ ಅನ್ಸುತ್ತೆ.