ವಿರಾಟ್ ಕೊಹ್ಲಿಯಷ್ಟೇ ಫಿಟ್ ಆಗಿದ್ದಾರೆ ರೋಹಿತ್ ಶರ್ಮಾ – ಯೋ ಯೋ ಟೆಸ್ಟ್‌ನಲ್ಲಿ ರೋಹಿತ್ ಪರ್ಫಾಮೆನ್ಸ್ ಏನು?

ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಫಿಟ್ ಆಟಗಾರ. ಟೀಂ ಇಂಡಿಯಾದ ಮೋಸ್ಟ್ ಅನ್​ಫಿಟ್ ಪ್ಲೇಯರ್ ಅಂದ್ರೆ, ಫಿಟ್ನೆಸ್​​ ವಿಚಾರದಲ್ಲಿ ಯಾರು ಅಂದಾಗ ಆಲ್​ಮೋಸ್ಟ್ ಎಲ್ಲರೂ ರೋಹಿತ್​ ಶರ್ಮಾ ಅಂತಾನೆ ಅಂದುಕೊಳ್ತಾರೆ. ಯಾಕಂದ್ರೆ ರೋಹಿತ್​ ನೋಡೋಕೆ ತುಂಬಾ ದಪ್ಪಗಿದ್ದಾರೆ. ಹೊಟ್ಟೆ ಬಿಟ್ಕೊಂಡಿದ್ದಾರೆ ಅಂತಾ. ಆದರೆ, ವಿರಾಟ್ ಕೊಹ್ಲಿ ಎಷ್ಟು ಫಿಟ್ ಆಗಿದ್ದಾರೋ, ರೋಹಿತ್ ಶರ್ಮಾ ಕೂಡ ಅಷ್ಟೇ ಫಿಟ್ ಆಗಿದ್ದಾರೆ. ವಿರಾಟ್​ ಕೊಹ್ಲಿಯಷ್ಟೇ ಫಿಟ್ನೆಸ್​​ನ್ನ ಕ್ಯಾಪ್ಟನ್ ರೋಹಿತ್ ಶರ್ಮಾ ಮೇಂಟೇನ್ ಮಾಡಿದ್ದಾರಂತೆ. ಹಾಗಿದ್ರೆ ದಪ್ಪಗಿದ್ರೂ ರೋಹಿತ್ ಶರ್ಮಾ ಫಿಟ್ ಆಗಿದ್ದಾರೆ ಅಂತಾ ಯಾವ ಆಧಾರದಲ್ಲಿ ಜಡ್ಜ್ ಮಾಡಲಾಗಿದೆ? ರೋಹಿತ್ ಫಿಟ್ನೆಸ್ ಸೀಕ್ರೆಟ್ ಏನು? ಹಾಗೆಯೇ ಯೋ ಯೋ ಟೆಸ್ಟ್​​ನಲ್ಲಿ ರೋಹಿತ್ ಪರ್ಫಾಮೆನ್ಸ್ ಏನು? ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ನಾಲ್ಕು ಆಟಗಾರರು.. ಒಂದೇ ಫ್ರಾಂಚೈಸಿ – ಇವರನ್ನು ತಂಡ ಬಿಟ್ಟು ಕೊಟ್ಟಿಲ್ಲ ಯಾಕೆ ಅನ್ನೋದು ನಿಮಗೆ ಗೊತ್ತಾ?

ರೋಹಿತ್​ ಶರ್ಮಾ ನೋಡೋಕೆ ಮಾತ್ರ ಸ್ವಲ್ಪ ದಪ್ಪಗಿದ್ದಾರೆ ಅನ್ನೋದನ್ನ ಬಿಟ್ರೆ, ಫಿಟ್ನೆಸ್ ವಿಚಾರ ಬಂದಾಗ ವಿರಾಟ್ ಕೊಹ್ಲಿಗೆ ಸರಿಸಮಾನರಾಗಿದ್ದಾರೆ. ಟೀಂ ಇಂಡಿಯಾದ ಸ್ಟ್ರೆಂತ್ & ಕಂಡೀಷನಿಂಗ್ ಕೋಚ್ ಅಂಕಿತ್ ಕಲಿಯಾರ್ ಹೇಳೋ ಪ್ರಕಾರ, ರೋಹಿತ್​ ಶರ್ಮಾ ನೋಡೋಕೆ ಮಾತ್ರ ಹೀಗಿದ್ದಾರೆ.. ಆದರೆ, ಪ್ರತಿ ಬಾರಿ ಕೂಡ ಯೋ ಯೋ ಟೆಸ್ಟ್​ನ್ನ ಈಸಿಯಾಗಿ ಪಾಸ್ ಆಗ್ತಾರಂತೆ. ಯೋ ಯೋ ಟೆಸ್ಟ್ ಅನ್ನೋದು ಟಫೆಸ್ಟ್ ಫಿಟ್ನೆಸ್ ಟೆಸ್ಟ್. ಸದ್ಯ ಯಾವುದೇ ಕ್ರಿಕೆಟರ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೀಬೇಕು ಅನ್ನೋದಾದ್ರೆ ಯೋಯೋ ಟೆಸ್ಟ್ ಪಾಸ್ ಆಗಲೇಬೇಕು. ಆ್ಯಕ್ಚುವಲಿ ರೋಹಿತ್ ಶರ್ಮಾಗೆ ಯೋ ಯೋ ಟೆಸ್ಟ್ ಮೂಲಕ ಫಿಟ್ನೆಸ್ ಪ್ರೂವ್ ಮಾಡಬೇಕಾದ ಅವಶ್ಯಕತೆ ಇಲ್ಲ. ಯೋ ಯೋ ಟೆಸ್ಟ್ ಪಾಸ್ ಆಗದಿದ್ರೂ ರೋಹಿತ್​​​ ಟೀಂನಲ್ಲಿ ಇರ್ತಾರೆ. ಹೇಳಿಕೇಳಿ ಟೀಂ ಇಂಡಿಯಾದ ಕ್ಯಾಪ್ಟನ್ ಬೇರೆ. ಆದ್ರೂ ಯೋ ಯೋ ಟೆಸ್ಟ್​ನ್ನ ರೋಹಿತ್ ಕಂಪಲ್ಸರಿಯಾಗಿ ಅಟೆಂಡ್ ಆಗ್ತಾರೆ. ಜೊತೆಗೆ ಟೆಸ್ಟ್ ಪಾಸ್ ಕೂಡ ಆಗ್ತಾರೆ. ರೋಹಿತ್ ವನ್​ ಆಫ್ ದಿ ಫಿಟ್ಟೆಸ್ಟ್ ಕ್ರಿಕೆಟ್ ಅಂತ ಸ್ಟ್ರೆಂತ್ & ಕಂಡೀಷನಿಂಗ್ ಕೋಚ್ ಅಂಕಿತ್ ಕಲಿಯಾರ್ ಹೇಳಿದ್ದಾರೆ.

ಇನ್ನು ಇಂಜ್ಯೂರಿ ವಿಚಾರಕ್ಕೆ ಬರೋದಾದ್ರೆ, ವಿರಾಟ್ ಕೊಹ್ಲಿ ತಮ್ಮ ಕೆರಿಯರ್​ನಲ್ಲಿ ಇದುವರೆಗೂ ಒಂದೇ ಒಂದು ಬಾರಿ ಇಂಜ್ಯೂರಿಯಿಂದಾಗಿ ಮ್ಯಾಚ್​ ಮಿಸ್ ಮಾಡಿಕೊಂಡಿಲ್ಲ. ಅತ್ತ ರೋಹಿತ್ ಶರ್ಮಾ ಕೂಡ ಅಷ್ಟೇ, ಆನ್​​ಗ್ರೌಂಡ್ ಇಂಜ್ಯೂರಿಯಿಂದಾಗಿ ಮ್ಯಾಚ್​ನಿಂದ ಔಟಾಗಿಲ್ಲ. ರೋಹಿತ್​​ಗೆ ಪ್ರಾಬ್ಲಂ ಆಗಿರೋದು ಅವರ ಶೋಲ್ಡರ್. ರೋಹಿತ್ ಶೋಲ್ಡರ್​ ಡಿಸ್​​ಲೊಕೇಟ್ ಆಗಿತ್ತು. ಆ ಪ್ರಾಬ್ಲಂ ರೋಹಿತ್​ಗೆ ಈಗಲೂ ಇದೆ. ಆದ್ರೆ ರೋಹಿತ್ ಶರ್ಮಾ ಪರ್ಫಾಮೆನ್ಸ್​ ಮೇಲೆ ಯಾವುದೇ ನೆಗೆಟಿವ್ ಎಫೆಕ್ಟ್ ಆಗಿಲ್ಲ.

ಇಲ್ಲಿ ಇನ್ನೊಂದು ವಿಚಾರವನ್ನ ಕೂಡ ಹೇಳಲೇಬೇಕು. ದಪ್ಪಗಿದ್ದ ಮಾತ್ರ ಆಟಗಾರರನ್ನ ಫಿಟ್ ಆಗಿ ಅಂತಾ ಹೇಳೋಕೆ ಆಗೋದಿಲ್ಲ. ಯೋ ಯೋ ಟೆಸ್ಟ್ ಪಾಸ್ ಆಗದವರು ಅನ್​​ಫಿಟ್ ಅಂತಾ ಅಂದ್ಕೊಂಡ್ರೆ ಅದು ತಪ್ಪಾಗುತ್ತೆ. ಯೋ ಯೋ ಟೆಸ್ಟ್ ಅನ್ನೋದು ಫಿಟ್ನೆಸ್​​ನ್ನ ಅಳೆಯೋ ಒಂದು ಪ್ಯಾರಾಮೀಟರ್​ ಆಷ್ಟೇ. ಯೋ ಯೋ ಟೆಸ್ಟ್ ಪಾಸ್ ಆದ್ರೆ ಆತನ ಫಿಟ್ನೆಸ್ ಸ್ಟ್ಯಾಂಡರ್ಡ್ ಟಾಪ್ ಕ್ಲಾಸ್ ಆಗಿದೆ ಅಂತಾ ಅರ್ಥ.

ಇನ್ನು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಫಿಟ್ನೆಸ್ ವಿಚಾರವಾಗಿ ಹೋಲಿಕೆ ಮಾಡುವುದರಲ್ಲಿ ಯಾವುದೇ ಅರ್ಥ ಇಲ್ಲ. ರೋಹಿತ್​ ಫಿಟ್​ ಆಗಿಲ್ಲ ಅಂತಾ ಕೊಹ್ಲಿ ಫ್ಯಾನ್ಸ್ ಟಾರ್ಗೆಟ್ ಮಾಡೋ ಅವಶ್ಯಕತೆ ಇದೆ. ಎಲ್ಲರ ಬಾಡಿ ನೇಚರ್​ ಒಂದೇ ರೀತಿ ಇರೋದಿಲ್ಲ. ಜೀನ್​ನಿಂದಾಗಿಯೇ ಕೆಲವರು ದೇಹ ದಪ್ಪಗಿರುತ್ತೆ. ಇನ್ನೂ ಕೆಲವರು ಸ್ಲಿಮ್ ಆಗಿರ್ತಾರೆ. ಹೀಗಾಗಿ ಸ್ಲಿಮ್ ಆಗಿದ್ದ ಮಾತ್ರಕ್ಕೆ ಆತ ಫಿಟ್ ಅಂತಾನೂ ಹೇಳೋಕಾಗಲ್ಲ.. ದಪ್ಪಗಿದ್ದ ಮಾತ್ರಕ್ಕೆ ಆತ ಅನ್​ಫಿಟ್ ಅಂತಾನೂ ಹೇಳೋಕಾಗಲ್ಲ.. ಇನ್ನು ಕೇವಲ ಫಿಸಿಕಲಿ ಫಿಟ್ ಆಗಿದ್ರಷ್ಟೇ ಸಾಕಾಗೋದಿಲ್ಲ. ಮೆಂಟಲಿ ಕೂಡ ಸ್ಟ್ರಾಂಗ್ ಆಗಿರಬೇಕಾಗುತ್ತೆ. ರೋಹಿತ್​ ಶರ್ಮಾ ಮೆಂಟಲಿ ತುಂಬಾನೆ ಸ್ಟ್ರಾಂಗ್ ಪರ್ಸನ್. ಸೋ ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾಗಿರೋ ವಿಚಾರ ಇಷ್ಟೇ. ರೋಹಿತ್​ ಶರ್ಮಾ ಫಿಟ್ನೆಸ್ ಮೇಂಟೇನ್ ಮಾಡಿಲ್ಲ.. ಫ್ಯಾಟ್ ಬಾಯ್.. ಅನ್​ಫಿಟ್ ಕ್ರಿಕೆಟರ್ ಅಂತಾ ಯಾರಾದ್ರೂ ಅಂದುಕೊಂಡಿದ್ರೆ, ಜೊತೆಗೆ ಟ್ರೋಲ್ ಮಾಡೋರು ರೋಹಿತ್​​ ಫಿಟ್ನೆಸ್ ಸೀಕ್ರೆಟ್ ಏನು ಅನ್ನೋದನ್ನ ಇನ್ನಾದ್ರೂ ಅರ್ಥಮಾಡಿಕೊಳ್ಳಬೇಕು.

 

Sulekha