ಇದು ಚರಿತ್ರೆ ಸೃಷ್ಟಿಸೋ ಅವತಾರ – ಆಸೀಸ್ ಸರಣಿಯಲ್ಲಿ ರೋಹಿತ್ ಶರ್ಮಾ ಬ್ರೇಕ್ ಮಾಡೋ ರೆಕಾರ್ಡ್ಸ್ ಏನೆಲ್ಲಾ?

ಕಳೆದೊಂದು ದಶಕದಿಂದ ಟೀಂ ಇಂಡಿಯಾದಲ್ಲಿ ಪವರ್ ಹಿಟ್ಟರ್ ಬ್ಯಾಟರ್ ಆಗಿರೋ ರೋಹಿತ್ ಶರ್ಮಾ 2022ರಲ್ಲಿ ಆಲ್ ಫಾರ್ಮೆಟ್ ಕ್ಯಾಪ್ಟನ್ ಆಗಿ ಸೆಲೆಕ್ಟ್ ಆಗ್ತಾರೆ. ಅಲ್ಲಿಂದ ಈಚೆಗೆ ಭಾರತದ ಪರ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಡ್ತಾನೇ ಬಂದಿದ್ದಾರೆ. ಬಟ್ ಕಳೆದ ಮೂರು ವರ್ಷಗಳಲ್ಲಿ ಫಾರ್ ದಿ ಫಸ್ಟ್ ಟೈಂ ಕ್ಯಾಪ್ಟನ್ ಅಲ್ಲದೇ ಕಣಕ್ಕಿಳೀತಿದ್ದಾರೆ. ಗಿಲ್ ಕ್ಯಾಪ್ಟನ್ಸಿಯಲ್ಲಿ ಓಪನರ್ ಆಗಿ ಅಖಾಡಕ್ಕಿಳಿಯೋ ರೋಹಿತ್ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ : ರೋಹಿತ್ ಓಪನರ್.. ಕೊಹ್ಲಿ ನಂ.3 – AUS ಬೌಲಿಂಗ್ ಸ್ಟ್ರಾಂಗ್ ಇದ್ಯಾ?
ಚರಿತ್ರೆ ಸೃಷ್ಟಿಸೋ ಅವತಾರ!
ಪರ್ತ್ ಪಂದ್ಯ ರೋಹಿತ್ ಗೆ 500 ನೇ ಅಂತರರಾಷ್ಟ್ರೀಯ ಪಂದ್ಯ
50 ಅಂತಾರಾಷ್ಟ್ರೀಯ ಶತಕಗಳ ಸಾಧನೆಗೆ 1 ಶತಕ ಬಾಕಿ
ಆಸೀಸ್ ವಿರುದ್ಧ 88 ಸಿಕ್ಸರ್, ಸಿಕ್ಸರ್ ಗಳ ಶತಕಕ್ಕೆ 12 ಸಿಕ್ಸ್ ಬಾಕಿ
ಶಾಹಿದ್ ಅಫ್ರಿದಿ ಸಿಕ್ಸ್ ದಾಖಲೆ ಮುರಿಯಲು 8 ಸಿಕ್ಸ್ ಗಳ ಅಗತ್ಯ
ಆಸೀಸ್ ನೆಲದಲ್ಲಿ 990 ರನ್ಸ್, 1000 ಏಕದಿನ ರನ್ಸ್ ಗೆ 10 ರನ್ಸ್ ಅಗತ್ಯ
ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ 3ನೇ ಭಾರತೀಯನಾಗಲು 54 ರನ್ಸ್
ಟೆಸ್ಟ್, ಏಕದಿನ, ಟಿ-20 ಸೇರಿ 19,700 ರನ್ಸ್, 20 ಸಾವಿರ ರನ್ಸ್ ಗೆ 300 ರನ್ಸ್ ಬೇಕು
ಆಸ್ಟ್ರೇಲಿಯಾ ವಿರುದ್ಧ 10 ಶತಕಗಳ ದಾಖಲಿಸಲು ಇನ್ನೊಂದು ಶತಕ ಅಗತ್ಯ
ಆರಂಭಿಕ ಬ್ಯಾಟ್ಸ್ ಮನ್ ಆಗಿ ಸೆಹ್ವಾಗ್ ದಾಖಲೆ ಮುರಿಯಲು 174 ರನ್ಸ್ ಬೇಕು
ಏಕದಿನ ಕ್ರಿಕೆಟ್ ನಲ್ಲಿ 100 ಕ್ಯಾಚ್ ಗಳ ಮೈಲುಗಲ್ಲು ತಲುಪೋಕೆ 3 ಕ್ಯಾಚ್ ಅಗತ್ಯ
ಹೀಗೆ ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ ಹತ್ತಾರು ರೆಕಾರ್ಡ್ಸ್ ಮಾಡಿದ್ದಾರೆ. ಅದ್ರಲ್ಲೂ ರೋಹಿತ್ರ ಡಬಲ್ ಸೆಂಚುರಿ ರೆಕಾರ್ಡ್ಸ್ನ ಸದ್ಯಕ್ಕಂತೂ ಯಾರಿಂದಲೂ ಬ್ರೇಕ್ ಮಾಡೋಕೆ ಆಗಲ್ಲ. ಏಕದಿನ ಮಾದರಿಯಲ್ಲಿ ರೋಹಿತ್ ಶರ್ಮಾ ಮಾತ್ರವೇ ಮೂರು ಡಬಲ್ ಸೆಂಚುರಿಗಳನ್ನ ಸಿಡಿಸಿದ್ದಾರೆ. 2013ರಲ್ಲಿ ಆಸೀಸ್ ವಿರುದ್ಧ 209 ರನ್ಸ್ ಕಲೆ ಹಾಕಿದ್ರು. ಹಾಗೇ 2014 ರಲ್ಲಿ ಶ್ರೀಲಂಕಾ ವಿರುದ್ಧದ 264 ರನ್ಗಳ ಅತ್ಯಧಿಕ ವೈಯಕ್ತಿಕ ಏಕದಿನ ಸ್ಕೋರ್ ಆಗಿದೆ. ಇನ್ನು 2017ರಲ್ಲಿ ಶ್ರೀಲಂಕಾ ವಿರುದ್ಧವೇ 207 ರನ್ ಗಳಿಸಿ ಅಜೇಯರಾಗಿ ಉಳಿದಿದ್ರು. ಸದ್ಯಕ್ಕೆ ಒಡಿಐನಲ್ಲಿ ಹಲವರು ಡಬಲ್ ಸೆಂಚುರಿ ಸಿಡಿಸಿದ್ರೂ ಕೂಡ ಒಂದು ಸಲ ಅಷ್ಟೇ ಈ ಸಾಧನೆ ಮಾಡಿದ್ದಾರೆ. ಬಟ್ ಏಕದಿನ ಮಾದರಿಯಲ್ಲಿ ರೋಹಿತ್ ಯಾವತ್ತಿದ್ರೂ ದಿ ಬೆಸ್ಟ್ ಬ್ಯಾಟ್ಸ್ಮನ್.

ನೋಡಿರಿ

