ಗೇಮ್ ಚೇಂಜರ್ HITಮ್ಯಾನ್ – ಆಪತ್ಬಾಂಧವನಾದ ಕನ್ನಡಿಗ KL
ಫಸ್ಟ್ ಬ್ಯಾಟಿಂಗ್ ಅಂದ್ರೆ ಕಷ್ಟನಾ?

ಗೇಮ್ ಚೇಂಜರ್ HITಮ್ಯಾನ್ – ಆಪತ್ಬಾಂಧವನಾದ ಕನ್ನಡಿಗ KLಫಸ್ಟ್ ಬ್ಯಾಟಿಂಗ್ ಅಂದ್ರೆ ಕಷ್ಟನಾ?

ಕ್ರಿಕೆಟ್​ನಲ್ಲಿ ಏಜ್​ಗಿಂತ ಎಕ್ಸ್​ಪೀರಿಯನ್ಸ್ ಎಷ್ಟು ಮ್ಯಾಟ್ರ್ ಆಗುತ್ತೆ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ರೋಹಿತ್ ಶರ್ಮಾ. ಪ್ರೆಶರ್ ಸಿಚುಯೇಷನ್​ನ ಹೇಗೆ ಹ್ಯಾಂಡಲ್ ಮಾಡ್ಬೇಕು ಅನ್ನೋದು ಚೆನ್ನಾಗೇ ಗೊತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್​ ನೆಕ್ಸ್​ಟ್ ಲೆವೆಲ್​ನಲ್ಲಿತ್ತು. ಆದ್ರೆ ಮೂರನೇ ಪಂದ್ಯದಲ್ಲಿ ಸೀನ್ ಕಂಪ್ಲೀಟ್ ಉಲ್ಟಾ. ಇಂಥಾ ಕ್ರೂಶಿಯಲ್ ಟೈಮಲ್ಲಿ ಕ್ರೀಸ್ ಕಚ್ಚಿ ನಿಂತು ಆಡಿದ ರೋಹಿತ್ ನಾನು ಜಸ್ಟ್ ಪ್ಲೇಯರ್ ಅಲ್ಲ ಗೇಮ್ ಚೇಂಜರ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ.

ಇದನ್ನೂ ಓದಿ : ಗಿಲ್ Vs ಕೊಹ್ಲಿ.. ನಂ.1 ವಾರ್ – ಬ್ಯಾಟ್ ನಲ್ಲೇ HITಮ್ಯಾನ್ ಸೇಫ್

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನ ಭಾರತ ಆಲ್ರೆಡಿ ಗೆದ್ದಾಗಿದೆ. ಮೊದಲ ಎರಡೂ ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದ ಭಾರತ ಚೇಸಿಂಗ್ ಚೂಸ್ ಮಾಡಿಕೊಂಡಿದ್ರು. ಮೂರನೇ ಮ್ಯಾಚಲ್ಲೂ ಶುಭ್​ಮನ್ ಗಿಲ್ ಅವ್ರೇ ಟಾಸ್ ಗೆದ್ರೂ ಈ ಸಲ ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿಕೊಳ್ತಾರೆ. ಆದ್ರೆ ಗಿಲ್​ರ ಈ ಆಯ್ಕೆ ಆರಂಭದಲ್ಲೇ ಬಿಗ್ ಶಾಕ್ ಕೊಡ್ತು. ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಫಸ್ಟ್ ವಿಕೆಟ್​ಗೆ 74 ರನ್​ಗಳ ಜೊತೆಯಾಟ.. ಎರಡನೇ ಪಂದ್ಯದಲ್ಲಿ 255 ರನ್​ಗಳ ಪಾಟ್ನರ್​ಶಿಪ್. ಬಟ್ ಮೂರನೇ ಮ್ಯಾಚಲ್ಲಿ 3 ರನ್​ಗೆ ಪಸ್ಟ್ ವಿಕೆಟ್, 4 ರನ್​ಗೆ 2ನೇ ವಿಕೆಟ್ ಕಳ್ಕೊಂಡಿದ್ರು. ಸೋ ಇಂಥಾ ಟೈಮಲ್ಲಿ ಆಸರೆಯಾಗಿದ್ದೇ ರೋಹಿತ್ ಶರ್ಮಾ.

ಗಾಯಕ್ವಾಡ್ ಜೊತೆ ಉತ್ತಮ ಜೊತೆಯಾಟ.. ಸೆಂಚುರಿ ಹತ್ತಿರದಲ್ಲೇ ಎಡವಟ್ಟು!

ಫಸ್ಟ್ ಮ್ಯಾಚಲ್ಲಿ ಸೆಂಚುರಿ, ಸೆಕೆಂಡ್ ಮ್ಯಾಚಲ್ಲಿ ಡಬಲ್ ಸೆಂಚುರಿ ಸಿಡಿಸಿದ್ದ ನಾಯಕ ಶುಭ್​ಮನ್ ಗಿಲ್ ಈ ಪಂದ್ಯದಲ್ಲಿ 1 ರನ್​ಗೆ ಔಟ್.. ಇನ್ನು ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಔಟ್. ಪಂದ್ಯದ ಮೂರನೇ ಓವರ್​​ನಲ್ಲೇ ಜೇಡನ್ ಸೀಲ್ಸ್​​ ಬೌಲಿಂಗ್​ನಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದ್ರು. ತಂಡದ ಮೊತ್ತ 4 ಇರುವಾಗ 2 ಪ್ರಮುಖ ವಿಕೆಟ್​ಗಳೇ ಬಿದ್ದಿದ್ವು. ಇಂಥಾ ಒತ್ತಡದಲ್ಲೇ ಜವಾಬ್ದಾರಿಯಿಂದ ಆಡಿದ ರೋಹಿತ್ ಶರ್ಮಾ ತಂಡ ನಿಟ್ಟುಸಿರು ಬಿಡುವಂತೆ ಮಾಡಿದ್ರು. ಗಾಯಕ್ವಾಡ್ ಮತ್ತು ರೋಹಿತ್ ಜೊತೆಯಾಟದಲ್ಲಿ 137 ರನ್ಸ್ ಕೂಡ ಬಂತು. 85 ಬಾಲ್​ಗಳನ್ನ ಫೇಸ್ ಮಾಡಿದ ರೋಹಿತ್ 10 ಬೌಂಡರಿ, 3 ಸಿಕ್ಸರ್​ಗಳೇ ಸಮೇತ 92 ರನ್ ಗಳಿಸಿದ್ರು. ಇನ್ನೇನು ಮತ್ತೊಂದು ಶತಕ ಬರುತ್ತೆ ಅನ್ನೋ ನಿರೀಕ್ಷೆಯಲ್ಲಿ ಇರುವಾಗ್ಲೇ ಜಸ್ಟ್ 8 ರನ್​ಗಳಿಂದ ಸೆಂಚುರಿ ಮಿಸ್ ಮಾಡಿಕೊಂಡ್ರು. ಬಿಗ್ ಹಿಟ್ ಬಾರಿಸೋ ಯತ್ನದಲ್ಲಿ ಕೀಮೋ ಪೌಲ್​ಗೆ ವಿಕೆಟ್ ಒಪ್ಪಿಸಿದ್ರು. ಕೇವಲ 8 ರನ್​ಗಳಿಂದ ಸೆಂಚುರಿ ಮಿಸ್ ಮಾಡಿಕೊಂಡ್ರು. ಹಾಗೇ ಈ ಇನ್ನಿಂಗ್ಸ್ ಮೂಲಕ  ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರನಾಗಿ ಅತ್ಯಂತ ವೇಗವಾಗಿ 10,000 ರನ್‌ಗಳನ್ನು ಪೂರೈಸಿದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಹಾಗೇ ಇದು ರೋಹಿತ್ ಶರ್ಮಾ ಅವರ ಏಕದಿನ ವೃತ್ತಿಜೀವನದ 63ನೇ ಅರ್ಧಶತಕವಾಗಿದೆ. ಹೀಗೆ ತಂಡ ಸಂದಿಗ್ದ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ ರೋಹಿತ್ ಶರ್ಮಾ ತಮ್ಮ ಅನುಭವದ ವ್ಯಾಲ್ಯೂ ಏನು ಅನ್ನೋದನ್ನ ತೋರಿಸಿದ್ರು. ಕಳೆದ ಪಂದ್ಯದಲ್ಲಿ ಸೆಂಚುರಿ ಬಾರಿಸಿ ಈ ಮ್ಯಾಚಲ್ಲಿ ಸೆಂಚುರಿ ಹತ್ತಿರ ಬಂದು ತಮ್ಮಲ್ಲಿನ್ನೂ ಬ್ಯಾಟಿಂಗ್ ಸ್ಕಿಲ್ ಇದೆ ಅನ್ನೋದನ್ನ ಪ್ರೂವ್ ಮಾಡಿದ್ರು. ಏಜ್, ಫಿಟ್​ನೆಸ್, ಫಾರ್ಮ್ ಅಂತಾ ಪ್ರಶ್ನೆ ಮಾಡ್ತಿದ್ದವರಿಗೆ ತಮ್ಮ ಬ್ಯಾಟ್ ಮೂಲಕ ಉತ್ತರ ನೀಡಿದ್ದಾರೆ. ಶತಾಯ ಗತಾಯ ಏಕದಿನ ವಿಶ್ವಕಪ್​ನಲ್ಲೇ ಆಡೇ ಆಡ್ತೀನಿ ಅನ್ನೋ ಮೆಸೇಜ್ ಪಾಸ್ ಮಾಡಿದ್ದಾರೆ. ಬಟ್ ಲಾಸ್ಟ್ ಮೂಮೆಂಟ್​ನಲ್ಲಿ ಸೆಂಚುರಿ ಮಿಸ್ ಮಾಡಿಕೊಂಡ್ರಲ್ಲ ಅನ್ನೋದೇ ಎಲ್ರಿಗೂ ಬೇಸರ.

Shantha Kumari

Leave a Reply

Your email address will not be published. Required fields are marked *