HITಮ್ಯಾನ್ ಕೂರಿಸಿ ಕೆಟ್ಟ ಪಾಂಡ್ಯ – ರೋಹಿತ್ ಸಲಹೆಗೆ EGO ಅಡ್ಡಿ
ಹಾರ್ದಿಕ್ ದರ್ಪಕ್ಕೆ ಸೋತ ಮುಂಬೈ?

ಐಪಿಎಲ್ ಇತಿಹಾಸದಲ್ಲಿ ಒನ್ ಆಫ್ ದಿ ಮೋಸ್ಟ್ ಸಕ್ಸಸ್ಫುಲ್ ಟೀಂ ಅಂದ್ರೆ ಅದು ಮುಂಬೈ ಇಂಡಿಯನ್ಸ್. ಅದೆಲ್ಲಕ್ಕಿಂತ ಹೆಚ್ಚಾಗಿ ಒಂದು ತಂಡಕ್ಕೆ ಐದು ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟ ಮೊದಲ ನಾಯಕ. ಬ್ಯಾಡ್ಲಕ್ ಏನಂದ್ರೆ ಇಂಥಾ ದಿಗ್ಗಜ ಆಟಗಾರನಿಗೆ ಈಗ ಎಂಐ ತಂಡದಲ್ಲಿ ಬೆಲೆಯೇ ಇಲ್ಲದಂತಾಗಿದೆ. ಕಳೆದ ವರ್ಷ ಹೊಸ ನಾಯಕನ ಕರೆತಂದು ಬರೆ ಎಳೆದಿದ್ದ ಫ್ರಾಂಚೈಸಿ ಈಗ ಅದೇ ನಾಯಕನ ಮಾತು ಕೇಳಿ ರೋಹಿತ್ ಶರ್ಮಾರನ್ನ ಮತ್ತಷ್ಟು ಸೈಡ್ಲೈನ್ ಮಾಡಿದೆ. ತನಗೆಲ್ಲಾ ಗೊತ್ತು ಅನ್ನೋ ಹಾರ್ದಿಕ್ ಪಾಂಡ್ಯನ ಈಗೋ ಈಗ ಇಡೀ ತಂಡಕ್ಕೆ ಬೆಲೆ ತೆರುವಂತೆ ಮಾಡಿದೆ.
ಇದನ್ನೂ ಓದಿ : RCB Vs PBKS.. ಸೇಮ್ ಫೈಟ್ – ಯಾರ ಕೈಗೆ IPLನ ಚೊಚ್ಚಲ ಕಪ್?
ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಕಂಡಂತಹ ಅದ್ಭುತ ಆಲ್ ರೌಂಡರ್. ಹಾಗೇ ಐಪಿಎಲ್ನಲ್ಲೂ ಗುಜರಾತ್ ತಂಡಕ್ಕೆ ಚೊಚ್ಚಲ ಆವೃತ್ತಿಯಲ್ಲೇ ಕಪ್ ಗೆಲ್ಲಿಸಿಕೊಟ್ಟ ಕ್ಯಾಪ್ಟನ್. ಬಟ್ ಯಾವಾಗ 2024ರ ಐಪಿಎಲ್ಗೂ ಮುನ್ನ ಹಾರ್ದಿಕ್ ಪಾಂಡ್ಯ ಮುಂಬೈಗೆ ಬಂದು ನಾಯಕನಾದ್ರೋ ಅಲ್ಲಿಗೆ ಮನೆಯೊಂದು ಮೂರು ಬಾಗಿಲಿನಂತಾಗಿತ್ತು. ಬಟ್ ಈಗ ಹಿಟ್ಮ್ಯಾನ್ರನ್ನ ಸೈಡ್ಲೈನ್ ಮಾಡಿ ಹೊಡೆತದ ಮೇಲೆ ಹೊಡೆತ ತಿಂತಿದ್ದಾರೆ.
ರೋಹಿತ್ ಕೈಬಿಟ್ಟು ಕೆಟ್ಟ ಪಾಂಡ್ಯ!
ಎಷ್ಟೇ ರನ್ಸ್ ಹೊಡೆದ್ರೂ ನೀವು ಅದನ್ನ ಡಿಫೆನ್ಸ್ ಮಾಡಿಕೊಳ್ಬೇಕು
ರೋಹಿತ್ ಶರ್ಮಾರನ್ನ ಕೇವಲ ಬ್ಯಾಟಿಂಗ್ಗಷ್ಟೇ ಬಳಸಿಕೊಳ್ತಿದೆ
ರೋಹಿತ್ ಬರೀ ಆಟಗಾರನಷ್ಟೇ ಅಲ್ಲದೆ ಅಪ್ರತಿಮ ನಾಯಕ
ಎರಡು ಐಸಿಸಿ ಟ್ರೋಫಿಗಳ ಹಿಂದೆ ರೋಹಿತ್ ನಾಯಕತ್ವವೇ ವರ್ಕ್
ವೀಕ್ನೆಸ್ ತಿಳ್ಕೊಂಡು ಅದಕ್ಕೆ ತಕ್ಕಂತೆ ತಮ್ಮ ತಂಡದ ಬೌಲರ್
ದಶಕದ ಕಾಲ ಟೀಂ ಇಂಡಿಯಾ ಪರ ಹಾಗೇ ಐಪಿಎಲ್ ನಲ್ಲಿ ಆಟ
ಮುಂಬೈಗೆ ಐದೈದು ಕಪ್ ಗೆಲ್ಲಿಸಿಕೊಡೋದಂದ್ರೆ ಸಾಮಾನ್ಯದ ಮಾತಲ್ಲ
ರೋಹಿತ್ ಎಕ್ಸ್ ಪೀರಿಯನ್ಸ್ಗೆ ಬೆಲೆ ಕೊಟ್ಟಿದ್ರೆ ಖಂಡಿತ ಗೆಲ್ಲೋ ಚಾನ್ಸಸ್
ದರ್ಪ ತೋರಿಸೋ ಪಾಂಡ್ಯ ಅವ್ರ ಸಜೇಷನ್ಸ್ಗೆ ಬೆಲೆನೇ ಕೊಡ್ತಿರಲಿಲ್ಲ
ಇಲ್ಲಿ ಇನ್ನೊಂದು ಹೇಳ್ಳೇಬೇಕು. ಪಾಂಡ್ಯ ಟೀಂ ಗೇಮ್ ಮೇಲೆ ನಂಬಿಕೆ ಇಡೋದಕ್ಕಿಂತ ವೈಯಕ್ತಿಕವಾಗಿ ಕೆಲ ಆಟಗಾರರ ಮೇಲೆ ತುಂಬಾ ಹೋಪ್ಸ್ ಇಟ್ಟುಕೊಂಡಿದ್ರು. ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಇದ್ರೆ ಗೆಲುವು ಫಿಕ್ಸ್ ಅನ್ನೋದು ಅದ್ರ ತಲೆಯಲ್ಲಿ ಕೂತು ಬಿಟ್ಟಿದೆ. ಅದ್ರಲ್ಲೂ ಬೂಮ್ರಾ ಮೇಲೆಯೇ ಹೆಚ್ಚು ಡಿಪೆಂಡ್ ಆಗಿರೋದು ಸರಿಯಾಗೇ ಎಫೆಕ್ಟ್ ತಟ್ಟುವಂತೆ ಮಾಡಿದೆ. ಇದೆಷ್ಟೇ ಅಲ್ದೇ ಐಪಿಎಲ್ ಇತಿಹಾಸದಲ್ಲೇ ಮುಂಬೈ ತಂಡ 200+ ಸ್ಕೋರ್ನ ಡಿಫೆನ್ಸ್ ಮಾಡಿಕೊಳ್ಳುವಲ್ಲಿ ಎಡವಿದೆ. ಡೆತ್ ಓವರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಮೇಲೆ ಸಿಕ್ಕಾಪಟ್ಟೆ ಡಿಪೆಂಡ್ ಆಗಿದ್ರು. ಬಟ್ ಪಂಜಾಬ್ ವಿರುದ್ಧದ ಮ್ಯಾಚಲ್ಲಿ ಬುಮ್ರಾ ಕೂಡ ದುಬಾರಿಯಾದ್ರು. ಅಲ್ದೇ ಅಶ್ವನಿ ಕುಮಾರ್ ಮತ್ತು ರೀಸ್ ಟಾಪ್ಲಿ ದುಬಾರಿಯಾದ್ರು. ಟೂರ್ನಿಯ ಆರಂಭದಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಅಶ್ವನಿ 19 ನೇ ಓವರ್‌ನಲ್ಲಿ 26 ರನ್‌ಗಳನ್ನ ಬಿಟ್ಟುಕೊಟ್ರು. ಇದೆಲ್ಲವೂ ಕೂಡ ಮುಂಬೈಗೆ ದೊಡ್ಡ ಹೊಡೆತ ನೀಡಿದೆ.

ನೋಡಿರಿ

