ಪತ್ನಿ ಜೊತೆ ರೋಹಿತ್ ಶರ್ಮಾ ಭರ್ಜರಿ ಡ್ಯಾನ್ಸ್ – ಮದುವೆ ಮನೆಯಲ್ಲಿ ‘ನಾಯಕ’ನ ಸಖತ್ ಸ್ಟೆಪ್ಸ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ರೋಹಿತ್ ಶರ್ಮಾ ರಜೆ ಪಡೆದಿದ್ದರು. ರೋಹಿತ್ ಶರ್ಮಾ ಟೀಮ್‌ನಿಂದ ಹೊರಗಳುದಿದ್ದು ಯಾಕೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು. ಮೊದಲ ಪಂದ್ಯದಲ್ಲಿ ರಜೆ ಪಡೆದುಕೊಂಡಿದ್ದ ರೋಹಿತ್ ಶರ್ಮಾ ಮೈದುನನ ಮದುವೆಯಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ತನ್ನ ಪತ್ನಿ ರಿತಿಕಾ ಜೊತೆ ಜಾಲಿ ಮೂಡ್‌ನಲ್ಲಿ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿಯ ಸ್ಪೂರ್ತಿಯ ಮಾತು – ಆರ್‌ಸಿಬಿ ತಂಡಕ್ಕೆ ಸಿಕ್ತು ಮೊದಲ ಗೆಲುವು
ರೋಹಿತ್ ಶರ್ಮಾ ಪತ್ನಿ ರಿತಿಕಾ ಸಹೋದರ ಕುನಾಲ್ ಸಜ್ದೇಹ್ ಅವರ ವಿವಾಹ ಕಾರ್ಯಕ್ರಮಕ್ಕಾಗಿ ರೋಹಿತ್, ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ರಜೆ ತೆಗೆದುಕೊಂಡಿದ್ದರು. ಇದೀಗ ಕುನಾಲ್ ಅವರ ಸಂಗೀತ ಸಮಾರಂಭದ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದರಲ್ಲಿ ರೋಹಿತ್ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ.
ಕಪ್ಪು ಕುರ್ತಾ ಪೈಜಾಮಾ ಧರಿಸಿರುವ ರೋಹಿತ್ ಕೊರಳಿಗೆ ಕೆಂಪು ಚುನ್ನಿ ಧರಿಸಿ ಸ್ಟೈಲಿಶ್ ಲುಕ್‌ಲ್ಲಿ ಗಮನಸೆಳೆದಿದ್ದಾರೆ. ಬಾಮೈದುನನ ಮದುವೆಯಲ್ಲಿ ರೋಹಿತ್ ಪತ್ನಿ ರಿತಿಕಾ ಜೊತೆ ವೇದಿಕೆಯ ಮೇಲೆ ಭರ್ಜರಿಯಾಗಿಯೇ ಡ್ಯಾನ್ಸ್ ಮಾಡಿದ್ದಾರೆ. ರೋಹಿತ್ ಪತ್ನಿ, ರಿತಿಕಾ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮದುವೆಯ ಪ್ರತಿ ಕ್ಷಣದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ರೋಹಿತ್ ಫುಲ್ ಫನ್ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾರ್ಚ್ 19 ರಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ರೋಹಿತ್ ಶರ್ಮಾ ತಂಡವನ್ನು ಸೇರಿಕೊಳ್ಳಲಿದ್ದಾರೆ.
Rohit Sharma’s dance at his brother-in-law’s marriage. pic.twitter.com/TTqalgeQH2
— Mufaddal Vohra (@mufaddal_vohra) March 17, 2023