ಹಿಟ್ ​ಮ್ಯಾನ್​ ಗೆ 5 ಫ್ರಾಂಚೈಸಿಗಳ ಗಾಳ! – ಸೈಲೆಂಟ್ ಆಗಿದ್ಯಾಕೆ ರೋಹಿತ್ ಶರ್ಮಾ?

ಹಿಟ್ ​ಮ್ಯಾನ್​ ಗೆ 5 ಫ್ರಾಂಚೈಸಿಗಳ ಗಾಳ! – ಸೈಲೆಂಟ್ ಆಗಿದ್ಯಾಕೆ ರೋಹಿತ್ ಶರ್ಮಾ?

ಐಪಿಎಲ್​ ಆಕ್ಷನ್ ಮಂಗಳವಾರ ನಡೀತಾ ಇದೆ.. ಎಲ್ಲರ ಫೋಕಸ್ ಈಗ ಒಬ್ಬ ಪ್ಲೇಯರ್​ ಮೇಲೆ ನೆಟ್ಟಿದೆ. ಅದು ರೋಹಿತ್ ಶರ್ಮಾ. ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿಯಿಂದ ರೋಹಿತ್​ರನ್ನ ಕೆಳಗಿಸಿದ ಬಳಿಕ ಹಿಟ್​​ಮ್ಯಾನ್ ಮುಂದಿನ ಸ್ಟೆಪ್ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಹಾರ್ದಿಕ್ ಪಾಂಡ್ಯ ಅಂಡರ್​​ನಲ್ಲಿ ರೋಹಿತ್ ಶರ್ಮಾ ಆಡ್ತಾರಾ? ಇಲ್ಲಾ ಕ್ಯಾಪ್ಟನ್ ಆಗಿ ಬೇರೆ ಫ್ರಾಂಚೈಸಿಯನ್ನ ಸೇರಿಕೊಳ್ತಾರಾ ಅನ್ನೋ ಪ್ರಶ್ನೆ ಎದ್ದಿದೆ. ಇಲ್ಲಿ ರೋಹಿತ್ ಶರ್ಮಾ ವಿಚಾರದಲ್ಲಿ ಏನು ಬೇಕಾದ್ರೂ ಆಗಬಹುದು. ಹಾಗಿದ್ರೆ ರೋಹಿತ್ ಮುಂದಿರೋ ಆಪ್ಷನ್​​ಗಳೇನು? ಹಿಟ್​ಮ್ಯಾನ್​ನನ್ನ ಯಾವೆಲ್ಲಾ ಫ್ರಾಂಚೈಸಿಗಳು ಕಂಟ್ಯಾಕ್ಟ್ ಮಾಡಿವೆ? ರೋಹಿತ್​ ಶರ್ಮಾ ರಾಯಲ್ ಚಾಲೆಂಜರ್ಸ್​ ಬೆಂಗಳೂರನ್ನ ಸೇರಿಕೊಳ್ತಾರಾ? ಸಿಎಸ್​ಕೆ ಜಾಯಿನ್ ಆಗಿ ಧೋನಿ ಪ್ಲೇಸ್​​ನ್ನ ರಿಪ್ಲೇಸ್​ ಮಾಡಬಹುದಾ? ಅಂಬಾನಿಗಳ ಬಗ್ಗೆ ರೋಹಿತ್ ಶರ್ಮಾ ಅಪ್​ಸೆಟ್ ಆಗಿದ್ದಾರಾ? ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಕ್ಯಾಮರೂನ್​ ಕಿಡ್ನಿಗೆ ಏನಾಯ್ತು? – ಆಕ್ಷನ್​ ನಲ್ಲಿ RCB ಮತ್ತೆ ಎಡವಟ್ಟು?  ​

ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್ಸಿ ಬದಾಯಿಸಿದ್ದೇ ಬದಲಾಯಿಸಿದ್ದು ಐಪಿಎಲ್​​ನಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಗಿದೆ. ರೋಹಿತ್​ ಶರ್ಮಾ ಅಭಿಮಾನಿಗಳಂತೂ ಅಕ್ಷರಶ: ರೊಚ್ಚಿಗೆದ್ದಿದ್ದಾರೆ. ಸೋಷಿಯಲ್​​ ಮೀಡಿಯಾದಲ್ಲಿ ಮುಂಬೈ ಇಂಡಿಯನ್ಸ್ ಫಾಲೋವರ್ಸ್​ಗಳ ಸಂಖ್ಯೆ ಡೌನ್ ಆಗ್ತಾನೆ ಇದೆ. ಈಗಾಗ್ಲೇ 12 ಲಕ್ಷಕ್ಕೂ ಹೆಚ್ಚು ಮಂದಿ ಮುಂಬೈ ಇಂಡಿಯನ್ಸ್​​​ನ್ನ ಅನ್​​ಫಾಲೋ ಮಾಡಿದ್ದಾರೆ. ರೋಹಿತ್ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ರಿಮೂವ್ ಮಾಡಿರೋದು ಸದ್ಯ ಎಲ್ಲಾ ರೀತಿಯಲ್ಲೂ ಮುಂಬೈ ಇಂಡಿಯನ್ಸ್​ಗೆ ಸೆಟ್ ಬ್ಯಾಕ್ ಆಗ್ತಿದೆ. ಫ್ರಾಂಚೈಸಿಯ ರೆಪ್ಯುಟೇಷನ್​​ಗೆ ಫುಲ್​​ ಡ್ಯಾಮೇಜ್ ಆಗಿದೆ. ಟೀಮ್​ನ ಪ್ಲೇಯರ್ಸ್​ಗಳಿಗೂ ಸಮಾಧಾನ ಇಲ್ಲ. ತಮ್ಮನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿರೋದು ಇಷ್ಟೆಲ್ಲಾ ಹಲ್​​ಚಲ್ ಸೃಷ್ಟಿಸಿದ್ರೂ ರೋಹಿತ್ ಶರ್ಮಾ ಮಾತ್ರ ಫುಲ್​ ಸೈಲೆಂಟ್ ಮೋಡ್​​ನಲ್ಲಿದ್ದಾರೆ. ಇದುವರೆಗೂ ಈ ಬಗ್ಗೆ ಒಂದೇ ಒಂದು ರಿಯಾಕ್ಷನ್ ಕೊಟ್ಟಿಲ್ಲ. ಸೋಷಿಯಲ್​​ ಮೀಡಿಯಾಲದಲ್ಲಿ ಪೋಸ್ಟ್ ಮಾಡಿಲ್ಲ. ಟ್ವೀಟ್ ಮಾಡಿಲ್ಲ.. ಸ್ಟೇಟ್​ಮೆಂಟ್ ಕೂಡ ಕೊಟ್ಟಿಲ್ಲ. ನೋ ರಿಪ್ಲೈ ಅಟ್​ ಆಲ್.. ಅಷ್ಟೇ ಅಲ್ಲ, ಹಾರ್ದಿಕ್ ಪಾಂಡ್ಯಾರನ್ನ ಕ್ಯಾಪ್ಟನ್​ ಆಗಿ ಅನೌನ್ಸ್ ಮಾಡಿದ ದಿನ ಮುಂಬೈ ಇಂಡಿಯನ್ಸ್​ ಸೋಷಿಯಲ್ ಮೀಡಿಯಾ ಪೇಜ್​ನಲ್ಲಿ 10 ವರ್ಷಗಳ ರೋಹಿತ್ ಶರ್ಮಾ ಕ್ಯಾಪ್ಟನ್ಸಿಗೆ ಟ್ರಿಬ್ಯೂಟ್ ಆಗಿ ಒಂದು ವಿಡಿಯೋವನ್ನ ಅಪ್ಲೋಡ್ ಮಾಡಲಾಗಿತ್ತು. ಆದ್ರೆ ಆ ವಿಡಿಯೋಗೆ ರೋಹಿತ್​ ಶರ್ಮಾ ಯಾವುದೇ ರಿಪ್ಲೈ ಕೊಟ್ಟಿಲ್ಲ. ಥ್ಯಾಂಕ್ಸ್ ಅನ್ನೋದಾಗಲಿ ಯಾವುದೇ ರೀತಿಯಲ್ಲೂ ರಿಯಾಕ್ಟ್ ಮಾಡಿಲ್ಲ. ಹಾಗಿದ್ರೆ ರೋಹಿತ್ ಶರ್ಮಾ ಮುಂದೆ ಏನು ಮಾಡಬಹುದು? ಮುಂಬೈ ಇಂಡಿಯನ್ಸ್​ಗೆ ಗುಡ್​ಬೈ ಹೇಳ್ತಾರಾ? ಅಂಬಾನಿಗಳು ಯಾವುದೇ ಸಿಂಪಥಿ ತೋರಿಸದೆ, ಫ್ಯೂಚರ್ ದೃಷ್ಟಿಯಿಂದ ಬ್ಯುಸಿನೆಸ್ ಆ್ಯಂಗಲ್​​ನಲ್ಲಿ ಯೋಚನೆ ಮಾಡಿ ರೋಹಿತ್​ರನ್ನ ಕೆಳಗಿಳಿಸಿ ಪಾಂಡ್ಯಾಗೆ ಪಟ್ಟ ಕಟ್ಟಿರೋವಾಗ ಹಿಟ್​ಮ್ಯಾನ್ ಏನು ಸುಮ್ನೆ ಕುಳಿತುಕೊಳ್ತಾರಾ? ರೋಹಿತ್ ಶರ್ಮಾ ಕೂಡ ಫ್ಯೂಚರ್​ ಬಗ್ಗೆ ಥಿಂಕ್ ಮಾಡಿಯೇ ಮಾಡ್ತಾರೆ. ರೋಹಿತ್​ ಕೂಡ ಬ್ಯುಸಿನೆಸ್ ಆ್ಯಂಗಲ್​​ನಲ್ಲಿ ಯೋಚನೆ ಮಾಡಬೇಕಾಗುತ್ತೆ. ರೋಹಿತ್ ಶರ್ಮಾರಲ್ಲಿ ಇನ್ನೂ ಕ್ಯಾಪ್ಟನ್ಸಿ ಕೆಪಾಸಿಟಿ ಇದೆ. ಅಫ್​​ಕೋಸ್ ಈಗಲೂ ಕೂಡ ಟೀಂ ಇಂಡಿಯಾದ ಕ್ಯಾಪ್ಟನ್​ ಆಗಿರೋದು ರೋಹತ್ ಶರ್ಮಾ ಅನ್ನೋದನ್ನ ಮರೆಯೋ ಹಾಗಿಲ್ಲ. ಹಾಗಿದ್ರೆ ರೋಹಿತ್​ ಫ್ರಾಂಚೈಸಿ ಚೇಂಜ್ ಮಾಡ್ತಾರಾ ಅನ್ನೋದು ಇಲ್ಲಿರುವ ಪ್ರಶ್ನೆ.

ಒಟ್ಟು 5 ಫ್ರಾಂಚೈಸಿಗಳು ರೋಹಿತ್​ ಶರ್ಮಾರನ್ನ ಟಾರ್ಗೆಟ್ ಮಾಡಿದ್ರೂ ಆಶ್ಚರ್ಯ ಇಲ್ಲ. ಆ ಐದು ಟೀಮ್​ಗಳು ಯಾವೆಲ್ಲಾ? ಯಾಕೆ ರೋಹಿತ್​​ ಶರ್ಮಾರನ್ನ ತಮ್ಮ ಫ್ರಾಂಚೈಸಿಗೆ ಸೇರಿಸಿಕೊಳ್ಳಬಹುದು ಅನ್ನೋ ಮಾಹಿತಿ ಇಲ್ಲಿದೆ

ನಂ.1: ದೆಹಲಿ ಕ್ಯಾಪಿಟಲ್ಸ್

ದೆಹಲಿ ಕ್ಯಾಪಿಟಲ್ಸ್ ಇದುವರೆಗೂ ಒಂದೇ ಒಂದು ಬಾರಿ ಐಪಿಎಲ್ ಟೂರ್ನಿ ಗೆದ್ದಿಲ್ಲ. ಈಗಲೂ ಡಿಸಿಗೆ ಒಬ್ಬ ಪವರ್​​ಫುಲ್ ಕ್ಯಾಪ್ಟನ್ ಅಂತಾ ಇಲ್ಲ. ಯಾವಾಗ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮಾರನ್ನ ರಿಮೂವ್ ಮಾಡ್ತೋ ಫಸ್ಟ್​ ಅಲರ್ಟ್ ಆಗಿದ್ದೇ ದೆಹಲಿ ಕ್ಯಾಪಿಟಲ್ಸ್. ಅದಕ್ಕೆ ಕಾರಣ ಸೌರವ್ ಗಂಗೂಲಿ ಮತ್ತು ರಿಕ್ಕಿ ಪಾಂಟಿಂಗ್​. ಹೇಳಿಕೇಳಿ ಪಾಂಟಿಂಗ್​ರಿಂದಾಗಿಯೇ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿರೋದು. ಪಾಂಟಿಂಗ್​ ನೀಡಿದ ಸಲಹೆ ಮೇರೆಗೆ 2013ರಲ್ಲಿ ರೋಹಿತ್ ಶರ್ಮಾರನ್ನ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಮಾಡಲಾಗಿತ್ತು. ಈಗ ದೆಹಲಿ ಕ್ಯಾಪಿಟಲ್ಸ್ ಹೆಡ್ ಕೋಚ್ ಅಗಿರುವ ಪಾಂಟಿಂಗ್​​ ಮತ್ತೆ ರೋಹಿತ್ ಶರ್ಮಾರನ್ನ ಕ್ಯಾಪ್ಟನ್ ಆಗಿ ದೆಹಲಿ ಕ್ಯಾಪಿಟಲ್ಸ್​​ಗೆ ಸೇರಿಸಿಕೊಳ್ಳೋ ಬಗ್ಗೆ ಪ್ಲ್ಯಾನ್ ಮಾಡ್ತಿದ್ರೂ ಆಶ್ಚರ್ಯ ಇಲ್ಲ. ಇದ್ರ ಜೊತೆಗೆ ಸೌರವ್ ಗಂಗೂಲಿ ದೆಹಲಿ ಕ್ಯಾಪಿಟಲ್ಸ್​​ನ ಮೆಂಟರ್ ಆಗಿದ್ದಾರೆ.

ಈ ಹಿಂದೆ ಸೌರವ್​ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾಗಲೇ ರೋಹಿತ್ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿದ್ರು. ಸೌರವ್​ ಗಂಗೂಲಿ ಜೊತೆಗೆ ರೋಹಿತ್ ಒಳ್ಳೆಯ ಬಾಂಡ್ ಇಟ್ಕೊಂಡಿದ್ದಾರೆ. ಹೀಗಾಗಿ ಗಂಗೂಲಿ ಮತ್ತು ರಿಕ್ಕಿ ಪಾಂಟಿಂಗ್​ ಇಬ್ಬರೂ ಸೇರಿ ರೋಹಿತ್​ ಶರ್ಮಾಗೆ ಗಾಳ ಹಾಕುವ ಸಾಧ್ಯತೆ ಇದೆ.

ನಂ.2: ಚೆನ್ನೈ ಸೂಪರ್ ಕಿಂಗ್ಸ್

ಸಿಎಸ್​​ಕೆ ಕ್ಯಾಪ್ಟನ್ಸಿಯಲ್ಲಿ ಯಾವಾಗ ಬದಲಾವಣೆಯಾಗುತ್ತೋ ಗೊತ್ತಿಲ್ಲ. ಸದ್ಯ ಎಂಎಸ್ ಧೋನಿ ಸಿಎಸ್​ಕೆ ಕ್ಯಾಪ್ಟನ್​ ಆಗಿದ್ರೂ 2024ರ ಐಪಿಎಲ್​​ನಲ್ಲಿ ಆಡ್ತಾರಾ ಅನ್ನೋದು ಇನ್ನೂ ಗ್ಯಾರಂಟಿ ಇಲ್ಲ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಹೊಸ ಕ್ಯಾಪ್ಟನ್​ ಹುಡುಕಾಟದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್​ ಆಗಿ ರೋಹಿತ್​ ಶರ್ಮಾರನ್ನ ಕೆಳಗಿಳಿಸಿದ ದಿನ ಸಿಎಸ್​​ಕೆ ತನ್ನ ಸೋಷಿಯಲ್​ ಮೀಡಿಯಾ ಪೇಜ್​ನಲ್ಲಿ ಧೋನಿ ಜೊತೆಗಿನ ರೋಹಿತ್ ಫೋಟೋವನ್ನ ಶೇರ್​ ಮಾಡಿ..ಐಪಿಎಲ್​​ನ ಮೋಸ್ಟ್​ ಸಕ್ಸಸ್​​ಫುಲ್ ಕ್ಯಾಪ್ಟನ್ ಅಂತಾ ಪೋಸ್ಟ್ ಮಾಡಿತ್ತು. ಆ ಪೋಸ್ಟ್​ಗೆ ರೋಹಿತ್ ಶರ್ಮಾ ಪತ್ನಿ ಕೂಡ ರಿಯಾಕ್ಟ್ ಮಾಡಿದ್ರು. ಹೀಗಾಗಿ ರೋಹಿತ್​ ಶರ್ಮಾ ಸಿಎಎಸ್​ಕೆ ಜಾಯಿನ್ ಆಗೋಕೆ ಮನಸ್ಸು ಮಾಡ್ತಿದ್ದಾರಾ ಅನ್ನೋ ಸಣ್ಣ ಅನುಮಾನ ಕೂಡ ಇದೆ. ಅತ್ತ ಸಿಎಸ್​ಕೆ ಕೂಡ ರೋಹಿತ್​ ಶರ್ಮಾರನ್ನ ಕರೆಸಿಕೊಳ್ಳೋ ಪ್ಲ್ಯಾನ್​​ನಲ್ಲಿದ್ಯಾ ಅನ್ನೋ ಡೌಟ್ ಕೂಡ ಕಾಡ್ತಿದೆ. ಏನಿತಿಂಗ್ ಈಸ್ ಪಾಸಿಬಲ್.

ನಂ.3: ಸನ್​ ರೈಸರ್ಸ್ ಹೈದರಾಬಾದ್

ನಿಮಗೆ ಗೊತ್ತಿರೋದೆ.. ರೋಹಿತ್​ ಶರ್ಮಾ ತಮ್ಮ ಐಪಿಎಲ್​​ ಕೆರಿಯರ್​​ನ್ನ ಆರಂಭಿಸಿದ್ದು ಹೈದರಾಬಾದ್​ನ ಡೆಕ್ಕನ್ ಚಾರ್ಜಸ್ ಫ್ರಾಂಚೈಸಿಯಿಂದ. ರೋಹಿತ್​​ ಫಸ್ಟ್ ಐಪಿಎಲ್​ ಗೆದ್ದಿರೋದು ಕೂಡ ಡೆಕ್ಕನ್​ನಲ್ಲೇ. 2009ರ ಐಪಿಎಲ್​​ ಟೂರ್ನಿಯಲ್ಲಿ ರೋಹಿತ್ 362 ರನ್​ ಹೊಡೆದಿದ್ರು..11 ವಿಕೆಟ್ ಕೂಡ ಪಡೆದಿದ್ರು.. ಅಷ್ಟೇ ಯಾಕೆ ರೋಹಿತ್​ಗೆ ಹ್ಯಾಟ್ರಿಕ್​ ವಿಕೆಟ್ ಕೂಡ ಸಿಕ್ಕಿತ್ತು. ಬಳಿಕ ಈ ಫ್ರಾಂಚೈಸಿ ಸನ್​ರೈಸರ್ಸ್ ಹೈದರಾಬಾದ್ ಅಂತಾ ಚೇಂಜ್ ಆಗಿತ್ತು. ಇನ್ನು ರೋಹಿತ್ ಶರ್ಮಾರ ತಾಯಿ ಆಂಧ್ರಪ್ರದೇಶದವರೇ. ಹೀಗಾಗಿ ರೋಹಿತ್​ಗೆ ಒಂದು ಎಮೋಷನಲ್​ ಕನೆಕ್ಷನ್ ಕೂಡ ಇದೆ. ಹೀಗಾಗಿ ರೋಹಿತ್ ಶರ್ಮಾರನ್ನ ಮತ್ತೆ ಕರೆಸಿಕೊಂಡು ತಮ್ಮ ಲಕ್ ಬದಲಾಯಿಸಿಕೊಳ್ಳೋ ಪ್ಲ್ಯಾನ್​ನಲ್ಲಿ ಸನ್​ ರೈಸರ್ಸ್ ಹೈದರಾಬಾದ್ ಇದ್ರೂ ಇರಬಹುದು.

ನಂ.4: ಕೊಲ್ಕತ್ತಾ ನೈಟ್ ರೈಡರ್ಸ್

2014ರ ಬಳಿಕ ಶಾರುಖ್ ಖಾನ್ ಒಡೆತನದ ಕೊಲ್ಕತ್ತಾ ನೈಟ್ ರೈಡರ್ಸ್ ಇದುವರೆಗೂ ಐಪಿಎಲ್​​ ಟ್ರೋಫಿ ಗೆದ್ದಿಲ್ಲ. ಗೌತಮ್​ ಗಂಭೀರ್ ಕ್ಯಾಪ್ಟನ್ಸಿಯಲ್ಲೇ ಕೆಕೆಆರ್​​ ಎರಡು ಬಾರಿ ಚಾಂಪಿಯನ್ ಆಗಿತ್ತು. ಅದೇ ಕೊನೆ.. ಆಮೇಲೆ ಯಾರೇ ಕ್ಯಾಪ್ಟನ್ ಆದ್ರೂ ಟೂರ್ನಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಹೀಗಾಗಿ ಗೌತಮ್​ ಗಂಭೀರ್​ರನ್ನ ಈಗ ಕೆಕೆಆರ್ ಮೆಂಟರ್​ ಆಗಿ ಟೀಮ್​ಗೆ ಕರೆಸಿಕೊಂಡಿದೆ. ಆದ್ರೀಗ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮಾರನ್ನ ಕೆಳಗೆ ಇಳಿಸಿರೋದ್ರಿಂದ ಕೆಕೆಆರ್​ ಕೂಡ ರೋಹಿತ್ ಮೇಲೆ ಒಂದು ಕಣ್ಣಿಟ್ಟಿರೋ ಸಾಧ್ಯತೆ ಇದೆ. ಇದ್ರ ಜೊತೆಗೆ ಗೌತಮ್​ ಗಂಭೀರ್ ಮತ್ತು ರೋಹಿತ್ ಶರ್ಮಾ ಇಬ್ಬರು ಒಳ್ಳೆಯ ಫ್ರೆಂಡ್ಸ್. ಗಂಭೀರ್ ಅಂತೂ ಯಾವಾಗಲೂ ರೋಹಿತ್​ ಶರ್ಮಾರನ್ನ ಹೊಗಳ್ತಾನೆ ಇರ್ತಾರೆ. ಹೀಗಾಗಿ ರೋಹಿತ್​ ಶರ್ಮಾರನ್ನ ಕ್ಯಾಪ್ಟನ್ಸ ಆಗಿ ಕೆಕೆಆರ್​ಗೆ ಸೇರಿಸಿಕೊಳ್ಳೋಕೆ ಗಂಭೀರ್ ಮತ್ತು ಶಾರುಖ್ ಪ್ಲ್ಯಾನ್ ಮಾಡಿದ್ರೂ ಆಶ್ಚರ್ಯ ಇಲ್ಲ.

ನಂ.5: ರಾಯಲ್ ಚಾಲೆಂಜರ್ಸ್ ಬೆಂಗಳೂರು

ರೋಹಿತ್​ ಶರ್ಮಾ ಮತ್ತು ವಿರಾಟ್ ಕೊಹ್ಲಿ.. ಟೀಂ ಇಂಡಿಯಾದ ಇಬ್ಬರೂ ಸ್ಟಾರ್ ಕ್ರಿಕೆಟರ್ಸ್​ ಒಂದೇ ಫ್ರಾಂಚೈಸಿಯಲ್ಲಿ ಆಡಿದ್ರೆ ಹೇಗಿರಬಹುದು. ಈಗ ಅಭಿಮಾನಿಗಳು ಕೂಡ ಆಗ್ರಹಿಸ್ತಿರೋದು ಇದನ್ನೇ. ಆರ್​​ಸಿಬಿ ಫಾಲೋವರ್ಸ್​ಗಳು ಸಾಕಷ್ಟು ಸಂಖ್ಯೆಯಲ್ಲಿ ರೋಹಿತ್ ಶರ್ಮಾ ರಾಯಲ್ ಚಾಲೆಂಜರ್ಸ್​ ಸೇರಿಕೊಳ್ಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ಸ್ ಮಾಡ್ತಾ ಇದ್ದಾರೆ. ಪೋಸ್ಟ್​​ಗಳು ಹರಿದಾಡ್ತಾ ಇವೆ. ಸದ್ಯ ಇಂಡಿಯನ್​ ಕ್ರಿಕೆಟ್​ನಲ್ಲಿ ಹೈಯೆಸ್ಟ್ ಫ್ಯಾನ್ ಫಾಲೋವಿಂಗ್ ಇರೋದು ಅಂದ್ರೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ. ಒಂದು ವೇಳೆ ರೋಹಿತ್ ಕೂಡ ಆರ್​ಸಿಬಿ ಜಾಯಿನ್ ಆದ್ರೂ ಅಂದ್ರೆ ಟ್ರೋಫಿ ಗೆಲ್ತಾರೋ, ಬಿಡ್ತಾರೋ ಫ್ರಾಂಚೈಸಿಯ ಮಾರ್ಕೆಟ್ ವ್ಯಾಲ್ಯೂ ಮಾತ್ರ ಇನ್ನೊಂದು ಲೆವೆಲ್​ಗೆ ರೀಚ್ ಆಗುತ್ತೆ. ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್​ ವಿಚಾರದಲ್ಲಿ ಆರ್​ಸಿಬಿಗೆ ಯಾರೂ ಕಾಂಪಿಟೀಟರ್​ಗಳೇ ಇರೋದಿಲ್ಲ. ಜೊತೆಗೆ 30 ವರ್ಷ ಮೇಲ್ಪಟ್ಟವರ ಮೇಲೆ ಇನ್​ವೆಸ್ಟ್​ಮೆಂಟ್ ಮಾಡೋಕೂ ಆರ್​ಸಿಬಿ ಹಿಂದೆ ಮುಂದೆ ನೋಡಲ್ಲ. ಯಾಕಂದ್ರೆ ಈಗ ಆರ್​ಸಿಬಿ ಕ್ಯಾಪ್ಟನ್ ಆಗಿರೋ ಫಾಫ್ ಡುಪ್ಲೆಸಿಸ್​​ಗೆ 39 ವರ್ಷವಾಗಿದೆ. ಹೀಗಾಗಿ ರೋಹಿತ್​ರನ್ನ ಟೀಂಗೆ ಸೇರಿಸಕೊಂಡು ಫಸ್ಟ್ ಐಪಿಎಲ್​​ ಟೈಟಲ್​ ಗೆಲ್ಲೋ ಲೆಕ್ಕಾಚಾರದಲ್ಲಿ ಆರ್​ಸಿಬಿ ಇದ್ಯಾ ಗೊತ್ತಿಲ್ಲ. ಅಭಿಮಾನಿಗಳಂತೂ ಇದಕ್ಕೆ ಆಗ್ರಹಿಸ್ತಾ ಇದ್ದಾರೆ.

ಹೀಗೆ ಒಟ್ಟು 5 ಫ್ರಾಂಚೈಸಿಗಳು.. ದೆಹಲಿ ಕ್ಯಾಪಿಟಲ್ಸ್.. ಚೆನ್ನೈ ಸೂಪರ್ ಕಿಂಗ್ಸ್.. ರಾಯಲ್​ ಚಾಲೆಂಜರ್ಸ್​ ಬೆಂಗಳೂರು.. ಸನ್​ರೈಸರ್ಸ್ ಹೈದರಾಬಾದ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್​ ರೋಹಿತ್​ ಶರ್ಮಾ ಮೇಲೆ ಒಂದು ಕಣ್ಣಿಟ್ಟಿರೋದಂತೂ ನಿಜ. ಆದ್ರೆ ಇಲ್ಲಿ ಇನ್ನೊಂದು ಮೇನ್ ಪಾಯಿಂಟ್ ಬಗ್ಗೆ ನಿಮಗೆ ನೀವು ತಿಳಿದುಕೊಳ್ಳಲೇಬೇಕು. ಒಂದು ವೇಳೆ ರೋಹಿತ್​ ಶರ್ಮಾ ಮುಂಬೈ ಇಂಡಿಯನ್ಸ್​ ಬಿಟ್ಟು ಬೇರೆ ಫ್ರಾಂಚೈಸಿ ಸೇರಿಕೊಳ್ಳೋಕೆ ಬಯಸಿದ್ರು ಅಂದ ಕೂಡಲೇ ರೋಹಿತ್​​ಗೆ ಮುಂಬೈ ಇಂಡಿಯನ್ಸ್​ನಿಂದ ಹೊರ ಬರೋಕೆ ಆಗಲ್ಲ. ರೋಹಿತ್ ಫ್ರಾಂಚೈಸಿ ಬಿಡಬೇಕು ಅನ್ನೋದಾದ್ರೆ ಮುಂಬೈ ಇಂಡಿಯನ್ಸ್​ ಮ್ಯಾನೇಜ್ಮೆಂಟ್ ಗ್ರೀನ್​ ಸಿಗ್ನಲ್ ಕೊಡಲೇಬೇಕು. ಆಗ ಮಾತ್ರ ಟ್ರೇಡಿಂಗ್ ನಡೆಯೋಕೆ ಸಾಧ್ಯ. ಈಗ ಗುಜರಾತ್ ಟೈಟಾನ್ಸ್​ ಟ್ರೇಡ್​ ಡೀಲ್​​ಗೆ ಒಪ್ಪಿಕೊಂಡ ಕಾರಣ ಹಾರ್ದಿಕ್​ ಪಾಂಡ್ಯಗೆ ಮುಂಬೈ ಇಂಡಿಯನ್ಸ್​ಗೆ ಬರೋಕೆ ಸಾಧ್ಯವಾಯ್ತು. ಹೀಗಾಗಿ ರೋಹಿತ್ ಶರ್ಮಾರನ್ನ ಮುಂಬೈ ಇಂಡಿಯನ್ಸ್ ಬಿಟ್ಟು ಕೊಡುತ್ತಾ? ಇಲ್ಲಾ ಕನ್ವಿನ್ಸ್ ಮಾಡುತ್ತಾ ಗೊತ್ತಿಲ್ಲ.

ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಇದೆ. ತಮ್ಮನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದ ಮೇಲೆ ರೋಹಿತ್ ಶರ್ಮಾ ಕಂಪ್ಲೀಟ್ ಅಪ್​ಸೆಟ್ ಆಗಿರೋದಂತೂ ಸುಳ್ಳಲ್ಲ. ಕ್ಯಾಪ್ಟನ್ಸಿಯಿಂದ ರಿಮೋವಲ್ ಆದ ಮರುದಿನವೇ ರೋಹಿತ್ ಅಂಬಾನಿಗಳ ಪ್ರೋಗ್ರಾಂ ಒಂದಕ್ಕೆ ಅಟೆಂಡ್ ಆಗಿದ್ರು. ಅಲ್ಲಿ ರೋಹಿತ್ ಮತ್ತು ರಿತಿಕಾ ಇಬ್ಬರೂ ತುಂಬಾ ಅಪ್​​ಸೆಟ್ ಆಗಿಯೇ ಕುಳಿತಿದ್ರು.

Shwetha M